Rashmitha chengappa ; ಜಂಟಿಯಾಗಲು ಸಜ್ಜಾದ ರಶ್ಮಿತಾ ಚೆಂಗಪ್ಪ : ಹುಡುಗ ಯಾರು, ಮದುವೆ ಯಾವಾಗ..?
ಈಗಾಗಲೇ ಹಲವು ಧಾರಾವಾಹಿಗಳಲ್ಲಿ ವಿಲನ್ ಆಗಿ ನಟಿಸಿರುವ ನಟಿ ರಶ್ಮಿತಾ ಚೆಂಗಪ್ಪ ಈಗ ಮಿಂಗಲ್ ಆಗಲು ಹೊರಟಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿತಾ ಚೆಂಗಪ್ಪ ಅವರು ಸದ್ಯ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ವೃಂದಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ನೆಗೆಟಿವ್ ರೋಲ್ ಆಗಿದೆ. ಈ ಹಿಂದೆ ಈ ಪಾತ್ರದಲ್ಲಿ ನಟಿ ಸುಕೃತಾನಾಗ್ ಅವರು ನಟಿಸಿದ್ದರು. ಇದೀಗ ಈ ಪಾತ್ರವನ್ನು ನಟಿ ರಶ್ಮಿತಾ ಚೆಂಗಪ್ಪ ಅವರು ನಿರ್ವಹಿಸುತ್ತಿದ್ದಾರೆ. ಇನ್ನು ನಟನೆಯಲ್ಲಿರುವಾಗಲೇ ಈಗ ಮದುವೆಯಾಗಲು ಮುಂದಾಗಿದ್ದಾರೆ.
ಮದುವೆಯ ಸಂಭ್ರಮದಲ್ಲಿ ರಶ್ಮಿತಾ
ನಟಿ ರಶ್ಮಿತಾ ಅವರು ತಮ್ಮ ಮದುವೆಯ ಬಗ್ಗೆ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸುದರ್ಶನ್ ಭಂಡಾರಿ ಎಂಬುವರೊಂದಿಗೆ ನಟಿ ರಶ್ಮಿತಾ ಅವರು ಇದೇ ನವೆಂಬರ್ 3ನೇ ತಾರೀಕಿನಂದು ಸಪ್ತಪದಿ ತುಳಿಯಲಿದ್ದಾರೆ. ಎಲ್ಲರಿಗೂ ಮದುವೆಯ ದಿನಾಂಕವನ್ನು ನೆನಪಿಟ್ಟುಕೊಳ್ಳಿ ಎಂದು ಹೇಳಿದ್ದಾರೆ. ರಶ್ಮಿತಾ ಅವರ ಮದುವೆಯ ಸುದ್ದಿ ಕೇಳಿ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಇನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಮಹಾರಾಣಿ ಧಾರಾವಾಹಿ ಮೂಲಕ ನಟಿ ರಶ್ಮಿತಾ ಕಿರುತೆರೆಗೆ ಎಂಟ್ರಿ ಕೊಟ್ಟರು. ಆದರೆ ಇದಕ್ಕೂ ಮುನ್ನ ನಟಿ ರಶ್ಮಿತಾ ಅವರು ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ. ತುಳು ಮತ್ತು ಕನ್ನಡ ಎರಡೂ ಸಿನಿಮಾ ರಂಗದಲ್ಲಿ ರಶ್ಮಿತಾ ಅವರು ನಟಿಸಿದ್ದಾರೆ.

ಸಿನಿಮಾಗಳಲ್ಲೂ ನಟಿಸಿರುವ ನಟಿ
ನಟಿ ರಶ್ಮಿತಾ ಅವರು ಏರಾ ಉಲ್ಲೇರ್ ಗೆ (ಯಾರೋ ಇದ್ದಾರೆ) ಎಂಬ ತುಳು ಸಿನಿಮಾದಲ್ಲಿ ನಟಿಸಿದ್ದು, ಇದು ಹಾಸ್ಯ ಮತ್ತು ಸಸ್ಪೆನ್ಸ್ ಸಿನಿಮಾ. ಇದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಂಬಳಬೆಟ್ಟು ಭಟ್ರನ ಮಗಲ್ ಎಂಬ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ. ಕನ್ನಡದ ಫಸ್ಟ್ ನೈಟ್ ಎಂಬ ಸಿನಿಮಾದಲ್ಲೂ ನಟಿ ರಶ್ಮಿತಾ ಅವರು ನಟಿಸಿದ್ದಾರೆ. ಇದನ್ನು ಹೊರತು ಪಡಿಸಿ ನಟಿ ರಶ್ಮಿತಾ ಅವರು ಗಟ್ಟಿಮೇಳ, ಮತ್ತೆ ವಸಂತ, ಯಾರಿವಳು, ಮೂರುಗಂಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೆಲ್ಲಾ ಧಾರಾವಾಹಿಯಲ್ಲೂ ನೆಗೆಟಿವ್ ರೋಲ್ ನಲ್ಲಿ ಅಭಿನಯಿಸಿದ್ದಾರೆ.
ನಾಯಕಿಯಾಗಿಯೂ ನಟಿಸಿರುವ ರಶ್ಮಿತಾ
ಇನ್ನು ಕಥೆಯೊಂದು ಶುರುವಾಗಿದೆ ಧಾರಾವಾಹಿಯಲ್ಲಿ ಚರಿತಾ ಎಂಬ ಅತಿಥಿ ಪಾತ್ರಕ್ಕೆ ರಶ್ಮಿತಾ ಅವರು ಬಣ್ಣ ಹಚ್ಚಿದ್ದರು. ಬಳಿಕ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಊರ್ಮಿಳಾ ಎಂಬ ಧಾರಾವಾಹಿಗೆ ನಾಯಕಿಯಾಗಿ ನಟಿಸಿದರು. ಇದರಲ್ಲಿ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿ ಬಳಿಕ ನಟಿ ರಶ್ಮಿತಾ ಚೆಂಗಪ್ಪ ಅವರು ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡ ಸಿರಿ ಕನ್ನಡ ಸೂಪರ್ ಮಾಮ್ ಎಂಬ ರಿಯಾಲಿಟಿ ಶೋ ನಲ್ಲಿ ನಿರೂಪಕಿಯಾಗಿ ಜನರನ್ನು ರಂಜಿಸಿದ್ದರು.
ನೆಗೆಟಿವ್ ರೋಲ್ ಮೂಲಕವೇ ಚಿರಪರಿಚಿತ
ನಟಿ ರಶ್ಮಿತಾ ಅವರು ಈಗಾಗಲೇ ಕಳೆದ 8 ವರ್ಷದಿಂದ ಬಣ್ಣದ ಲೋಕದಲ್ಲಿದ್ದಾರೆ. ನಾಯಕಿ ಪಾತ್ರಕ್ಕಿಂತಲೂ ಇವರನ್ನು ನೆಗೆಟಿವ್ ರೋಲ್ ನಲ್ಲಿ ವೀಕ್ಷಕರು ಮೆಚ್ಚಿಕೊಂಡಿದ್ದೇ ಹೆಚ್ಚು. ನಟಿ ರಶ್ಮಿತಾ ಅವರು ಮಾಡ್ರನ್ ಉಡುಗೆಗೂ ಸೈ, ಟ್ರೆಡಿಷನಲ್ ತೊಡುಗೆಯಲ್ಲೂ ಸೂಪರ್ ಆಗಿ ಕಾಣುತ್ತಾರೆ. ಆದರೆ, ನಟಿ ರಶ್ಮಿತಾ ಅವರು ಹೆಚ್ಚಾಗಿ ಕುರ್ತಾ ಮತ್ತು ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ವೆಸ್ಟರ್ನ್ ತೊಡುಗೆಯಲ್ಲಿ ಕಡಿಮೆ ಧರಿಸುವ ಇವರು, ಆಗಾಗ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಸದ್ಯ ಮದುವೆಯ ಗುಂಗಿನಲ್ಲಿರುವ ನಟಿ ರಶ್ಮಿತಾ ಅವರಿಗೆ ತಮ್ಮ ಹೊಸ ಜೀವನಕ್ಕೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್ .


Click it and Unblock the Notifications











