Shalini S Rao ; ಮಿಡ್ ನೈಟ್ ನಲ್ಲಿ ರಸ್ತೆ ಮಧ್ಯೆ ನಿಂತು ಟೀ ಹೀರಿದ ನಟಿ ಶಾಲಿನಿ ಎಸ್ ರಾವ್..!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಊರ್ಮಿಳಾ ಆಗಿ ನಟಿಸುತ್ತಿದ್ದ ನಟಿ ಶಾಲಿನಿ ಎಸ್ ರಾವ್ ಅವರು ಸದ್ಯ ಮಿಡ್ ನೈಟ್ ನಲ್ಲಿ ಟೀ ಕುಡಿಯುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಸತ್ಯ ಧಾರಾವಾಹಿ ಮುಗಿದ ಬಳಿಕ ಸೀರಿಯಲ್ ಪಾತ್ರಧಾರಿಗಳೆಲ್ಲರೂ ಬ್ಯುಸಿಯಾಗಿದ್ದಾರೆ. ಹಾಗೆಯೇ ನಟಿ ಶಾಲಿನಿ ಅವರು ಕೂಡ ಮಧ್ಯರಾತ್ರಿಯಲ್ಲಿ ರಸ್ತೆ ನಡುವೆ ನಿಂತು ಟೀ ಸವಿದಿದ್ದಾರೆ. ಹೆಚ್ಚು ಸೋಶಿಯಲ್ ಮೀಡಿಯಾ ಅಕೌಂಟ್ ಬಳಸದಿದ್ದರೂ ನಟಿ ಶಾಲಿನಿ ಅವರು ಆಗಾಗ ಕೆಲ ಸುಂದರವಾದ ಹಾಡುಗಳಿಗೆ ರೀಲ್ಸ್ ಮಾಡುತ್ತಿರುತ್ತಾರೆ.

ಬಾಲ ನಟಿಯಾಗಿ ಬಣ್ಣ ಹಚ್ಚಿದ್ದ ಶಾಲಿನಿ

ಶಾಲಿನಿ ಅವರು ಹೊಸ ನಟಿ ಎಂದು ಹಲವರು ತಿಳಿದಿದ್ದಾರೆ. ಆದರೆ, ಇವರು ಕಳೆದ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿದ್ದಾರೆ. ಊರ್ಮಿಳಾ, ಬ್ರಾಹ್ಮಿನ್ಸ್ ಕೆಫೆಯಲ್ಲಿ ಯಶೋಧಾ ಆಗಿ ನಟಿಸಿದ್ದಾರೆ. ಅಷ್ಟಕ್ಕೂ ಶಾಲಿನಿ ಎಸ್ ರಾವ್ ಅವರು ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲೇ. ಫ್ಯಾಶನ್ ಡಿಸೈನರ್ ಆಗಿರುವ ಶಾಲಿನಿ ಅವರು ಮೊದಲು ಬಣ್ಣ ಹಚ್ಚಿದ್ದು ದೂರದರ್ಶನದಲ್ಲಿ ಮೂಡಿ ಬಂದ ಥ್ಯಾಂಕ್ಯೂ ಸರು ಎಂಬ ಧಾರಾವಾಹಿಗೆ. ಇದರಲ್ಲಿ ತಾರಾ ಅವರ ಮಗಳ ಪಾತ್ರದಲ್ಲಿ ಶಾಲಿನಿ ಅವರು ನಟಿಸಿದ್ದರಂತೆ. ಆಗ ಶಾಲಿನಿ ಅವರು ಐದನೇ ತರಗತಿಯಲ್ಲಿ ಓದುತ್ತಿದ್ದರಂತೆ. ಶಾಲಿನಿ ಕಿರುತೆರೆಗೆ ಬರಲು ಇವರ ತಾಯಿ ಕಾರಣವಂತೆ. ಡ್ಯಾನ್ಸ್, ಸಂಗೀತ ಎಲ್ಲದರಲ್ಲೂ ಮುಂದಿದ್ದ ಶಾಲಿನಿ ಅವರನ್ನು ತಮ್ಮ ತಾಯಿ ಬಣ್ಣದ ಲೋಕಕ್ಕೆ ಕರೆದುಕೊಂಡು ಬಂದರಂತೆ.

Written update on actress shalini s rao


ಮೆಗಾ ಧಾರಾವಾಹಿಯಲ್ಲಿ ನಟನೆ

ಶಾಲಿನಿ ಅವರು ಏಳನೇ ತರಗತಿಗೆ ಬಂದಾಗ ವಠಾರ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದು ಮೆಗಾ ಧಾರಾವಾಹಿ ಎಂಬುದು ಎಲ್ಲರಿಗೂ ತಿಳಿದಿದೆ. ಶಾಲಿನಿ ಅವರು 10ನೇ ತರಗತಿ ಮುಗಿಯುವವರೆಗೂ ವಠಾರ ಧಾರಾವಾಹಿ ಮೂಡಿ ಬಂದಿತ್ತಂತೆ. ವಠಾರಾ, ಕಸ್ತೂರಿ, ಸುಕನ್ಯ, ಆಕಾಂಕ್ಷಾ, ನೀ ನಡೆದ ದಾರಿಯಲ್ಲಿ, ಪುಣ್ಯಕೋಟಿ, ಮನೆಯೊಂದು ಮೂರು ಬಾಗಿಲು, ಮಹಾತಾಯಿ, ಒಲವೇ ಜೀವನ ಸೇರಿದಂತೆ 30ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಶಾಲಿನಿ ಅವಎಉ ನಟಿಸಿದ್ದಾರೆ. ಸತತವಾಗಿ ಹತ್ತು ವರ್ಷಕ್ಕೂ ಅಧಿಕ ಕಾಲ ಧಾರಾವಾಹಿಗಳಲ್ಲಿ ನಟಿಸಿದ ಶಾಲಿನಿ ಬಳಿಕ ಬಹಳ ದೊಡ್ಡ ಬ್ರೇಕ್ ಪಡೆದುಕೊಂಡರು.

ಕಮ್ ಬ್ಯಾಕ್ ಮಾಡಿದ ನಟಿ

ಮಮತೆಯ ಕರೆಯೋಲೆ ಎಂಬ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದ ಶಾಲಿನಿ ಅವರು ಸತ್ಯ ಧಾರಾವಾಹಿಯ ಊರ್ಮಿಳಾ ಮೂಲಕ ಚಿರಪರಿಚಿತರಾದರು. ಇನ್ನು ಬ್ರಾಹ್ಮಿನ್ಸ್ ಕೆಫೆ ಎಂಬ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಸಿರಿ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಮೂಡಿ ಬಂದಿತ್ತು. ಇದರಲ್ಲಿ ಶಾಲಿನಿ ಅವರು ಯಶೋಧಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಲೆನಾಡು ಪ್ರದೇಶವನ್ನು ಹೆಚ್ಚು ಇಷ್ಟಪಡುವ ಶಾಲಿನಿ ಅವರಿಗೆ ನೆಗೆಟಿವ್ ರೋಲ್ ನಲ್ಲಿ ನಟಿಸುವ ಆಸೆ ಇದೆಯಂತೆ. ಆದರೆ, ಎಲ್ಲರೂ ಪಾಸಿಟಿವ್ ಪಅತ್ರವನ್ನು ಕೊಡುತ್ತಾರೆ ಎಂಬ ಬೇಸರ ಇದೆ. ಇದರ ಜೊತೆಗೆ ಶಾಲಿನಿ ಅವರಿಗೆ ಸಿನಿಮಾಗಳಲ್ಲೂ ನಟಿಸುವ ಒಲವಿದೆ ಎಂದು ಹೇಳಿಕೊಂಡಿದ್ದಾರೆ.

written-update-on-actress-shalini-s-rao

ಡಿಸೈನರ್ ಆಗಿರುವ ಶಾಲಿನಿ

ಶಾಲಿನಿ ಅವರು ಕಲಾವಿದೆ ಆಗಿರದಿದ್ದರೆ, ತಮ್ಮದೇ ಆದ ಬೂಟಿಕ್ ತೆರೆಯುವ ಆಸೆ ಇತ್ತಂತೆ. ಈಗಲೂ ಕೂಡ ಶಾಲಿನಿ ಅವರು ತಮ್ಮ ಬ್ಲೌಸ್ ಗಳನ್ನು ತಾವೇ ಸ್ಟಿಚ್ ಮಾಡಿಕೊಳ್ಳುತ್ತಾರೆ. ಡಿಸೈನರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರಂತೆ. ಸೋಶಿಯಲ್ ಮೀಡಿಯಾದಲ್ಲಿ ಸತ್ಯ ಧಾರಾವಾಹಿ ಸಹಕಲಾವಿದರೊಂದಿಗೆ ಆಗಾಗ ರೀಲ್ಸ್ ಮಾಡುತ್ತಿದ್ದರು. ಅದು ಬಿಟ್ಟರೆ, ಶಾಲಿನಿ ಅವರು ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಸದ್ಯ ಸತ್ಯ ಧಾರಾವಾಹಿ ಮುಗಿದ ಬಳಿಕ ಮತ್ತೊಂದು ಹೊಸ ಪ್ರಾಜೆಕ್ಟ್ ಗಾಗಿ ಕಾಯುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X