Shalini S Rao ; ಊರ್ಮಿಳಾ ಪಾತ್ರದ ಮೂಲಕ ಮಿಂಚಿದ ನಟಿಯ ರಾಣಿ ಅವತಾರ..!

By ಪ್ರಿಯಾ ದೊರೆ

ಮುಗ್ಧೆ ಊರ್ಮಿಳಾ ಪಾತ್ರದಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದ ನಟಿ ಈಗ ರಾಣಿ ಅವತಾರದಲ್ಲಿ ಇನ್ನಷ್ಟು ಜನರ ಮನ ಗೆಲ್ಲಲು ಮುಂದಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಿದೆ. ಈ ಧಾರಾವಾಹಿಯಲ್ಲಿ ರಾಣಿ ಪಾತ್ರದ ಮೂಲಕ ನಟಿ ಶಾಲಿನಿ ಎಸ್ ರಾವ್ ಅವರು ಕಾಣಿಸಿಕೊಂಡಿದ್ದಾರೆ.ಸತ್ಯ ಧಾರಾವಾಹಿ ಮುಗಿದ ಬಳಿಕ ನಟಿ ಶಾಲಿನಿ ಎಸ್ ರಾವ್ ಅವರು ಕಲರ್ಸ್ ವಾಹಿನಿಗೆ ಎಂಟ್ರಿ ಕೊಟ್ಟಿದ್ದಾರೆ. ಯಾವ ಧಾರಾವಾಹಿ ಅದು ಎಂದು ತಿಳಿಯಲು ಮುಂದೆ ಓದಿ.


ನೂರು ಜನ್ಮಕೂ ಧಾರಾವಾಹಿಯಲ್ಲಿ ನಟನೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ 23ರಿಂದ ನೂರು ಜನ್ಮಕೂ ಧಾರಾವಾಹಿ ಪ್ರಾರಂಭವಾಗಿದೆ. ಈ ಧಾರಾವಾಹಿಯಲ್ಲಿ ನಟಿ ಶಾಲಿನಿ ಎಸ್ ರಾವ್ ಅವರು ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಶಾಲಿನಿ ಅವರು ಧಾರಾವಾಹಿಯಲ್ಲಿ ನಾಯಕಿ ಮೈತ್ರಿಯ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಯ ಕಥೆ ಕೊಂಚ ಡಿಫರೆಂಟ್ ಆಗಿದ್ದು, ಟ್ರಯಾಂಗಲ್ ಲವ್ ಸ್ಟೋರಿಯಾಗಿದೆ. ಮೈತ್ರಿ ಮತ್ತು ಚಿರು ಪ್ರೀತಿಸುತ್ತಿದ್ದು, ಕಾಮಿನಿ ಕೂಡ ಚಿರು ಜೊತೆಗೆ ಮದುವೆಯಾಗಬೇಕು ಎಂದು ಕನಸು ಕಂಡಿದ್ದಾಳೆ. ಆದರೆ, ಚಿರು ತನ್ನ ಪಾಲಿಗೆ ಸಿಗುವುದಿಲ್ಲ ಎಂಬ ಸತ್ಯ ತಿಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡು ಆತ್ಮವಾಗಿ ಬದಲಾಗಲಿದ್ದು, ಚಿರು ಮತ್ತು ಮೈತ್ರಿಯ ಬದುಕಲ್ಲಿ ಏನೆಲ್ಲಾ ಸಮಸ್ಯೆ ತಂದೊಡ್ಡಬಹುದು ಎಂಬುದೇ ಧಾರಾವಾಹಿಯ ಕಥೆಯಾಗಿದೆ.

Written update on actress shalini s rao new serial


ದಶಕಗಳಿಂದ ನಟಿಸುತ್ತಿರುವ ಶಾಲಿನಿ

ಇನ್ನು ನಟಿ ಶಾಲಿನಿ ಅವರು ಕಳೆದ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿದ್ದಾರೆ. ಸತ್ಯ ಧಾರಾವಾಹಿಯಲ್ಲಿಊರ್ಮಿಳಾ ಆಗಿಯೂ, ಬ್ರಾಹ್ಮಿನ್ಸ್ ಕೆಫೆಯಲ್ಲಿ ಯಶೋಧಾ ಆಗಿ ನಟಿಸಿದ್ದಾರೆ. ಶಾಲಿನಿ ಎಸ್ ರಾವ್ ಅವರು ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲೇ. ಫ್ಯಾಶನ್ ಡಿಸೈನರ್ ಆಗಿರುವ ಶಾಲಿನಿ ಅವರು ಮೊದಲು ಬಣ್ಣ ಹಚ್ಚಿದ್ದು ದೂರದರ್ಶನದಲ್ಲಿ ಮೂಡಿ ಬಂದ ಥ್ಯಾಂಕ್ಯೂ ಸರು ಎಂಬ ಧಾರಾವಾಹಿಗೆ. ಇದರಲ್ಲಿ ತಾರಾ ಅವರ ಮಗಳ ಪಾತ್ರದಲ್ಲಿ ನಟಿಸಿದ್ದರು. ಆಗ ಶಾಲಿನಿ ಅವರು ಐದನೇ ತರಗತಿಯಲ್ಲಿ ಓದುತ್ತಿದ್ದರಂತೆ.

ಮೆಗಾ ಧಾರಾವಾಹಿಗಳಲ್ಲಿ ನಟನೆ

ಶಾಲಿನಿ ಅವರು ಏಳನೇ ತರಗತಿಗೆ ಬಂದಾಗ ವಠಾರ ಎಂಬ ಮೆಗಾ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಕಸ್ತೂರಿ, ಸುಕನ್ಯ, ಆಕಾಂಕ್ಷಾ, ನೀ ನಡೆದ ದಾರಿಯಲ್ಲಿ, ಪುಣ್ಯಕೋಟಿ, ಮನೆಯೊಂದು ಮೂರು ಬಾಗಿಲು, ಮಹಾತಾಯಿ, ಒಲವೇ ಜೀವನ ಸೇರಿದಂತೆ 30ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಶಾಲಿನಿ ಅವರು ನಟಿಸಿದ್ದಾರೆ. ಸತತವಾಗಿ ಹತ್ತು ವರ್ಷಕ್ಕೂ ಅಧಿಕ ಕಾಲ ಧಾರಾವಾಹಿಗಳಲ್ಲಿ ನಟಿಸಿದ ಶಾಲಿನಿ ಬಳಿಕ ಬಹಳ ದೊಡ್ಡ ಬ್ರೇಕ್ ಪಡೆದುಕೊಂಡರು. ಮಮತೆಯ ಕರೆಯೋಲೆ ಎಂಬ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದ ಶಾಲಿನಿ ಅವರು ಸತ್ಯ ಧಾರಾವಾಹಿಯ ಊರ್ಮಿಳಾ ಮೂಲಕ ಚಿರಪರಿಚಿತರಾದರು.

ನೆಗೆಟಿವ್ ರೋಲ್ ಎಂದರೆ ಇಷ್ಟ

ಮಲೆನಾಡು ಪ್ರದೇಶವನ್ನು ಹೆಚ್ಚು ಇಷ್ಟಪಡುವ ಶಾಲಿನಿ ಅವರಿಗೆ ನೆಗೆಟಿವ್ ರೋಲ್ ನಲ್ಲಿ ನಟಿಸುವ ಆಸೆ ಇದೆಯಂತೆ. ಆದರೆ, ಎಲ್ಲರೂ ಪಾಸಿಟಿವ್ ಪಾತ್ರವನ್ನು ಕೊಡುತ್ತಾರೆ ಎಂಬ ಬೇಸರ ಇದೆಯಂತೆ. ಶಾಲಿನಿ ಅವರು ಕಲಾವಿದೆ ಆಗಿರದಿದ್ದರೆ, ತಮ್ಮದೇ ಆದ ಬೂಟಿಕ್ ತೆರೆಯುವ ಆಸೆ ಇತ್ತಂತೆ. ಈಗಲೂ ಕೂಡ ಶಾಲಿನಿ ಅವರು ತಮ್ಮ ಬ್ಲೌಸ್ ಗಳನ್ನು ತಾವೇ ಸ್ಟಿಚ್ ಮಾಡಿಕೊಳ್ಳುತ್ತಾರೆ. ಡಿಸೈನರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರಂತೆ. ಸೋಶಿಯಲ್ ಮೀಡಿಯಾದಲ್ಲಿ ಸಹ ಕಲಾವಿದರೊಂದಿಗೆ ಆಗಾಗ ರೀಲ್ಸ್ ಮಾಡುತ್ತಿರುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X