ಹಣೆಗೆ ಕುಂಕುಮ, ಕೊರಳಿನಲ್ಲಿ ಹಾರ ; ಕ್ರಿಸ್ಮಸ್, ನ್ಯೂ ಇಯರ್ ಸೆಲೆಬ್ರೇಷನ್ ಮಾಡದೇ ಶರ್ಮಿತಾ ಗೌಡ ಹೋಗಿದ್ದು ಎಲ್ಲಿಗೆ..?
ನಟಿ ಶರ್ಮಿತಾ ಗೌಡ ಅವರು ತೆಲುಗಿನ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ಶೂಟಿಂಗ್ ಜೊತೆಗೆ ಹೆಚ್ಚು ಫಿಟ್ನೆಸ್ ಕಡೆಗೂ ಗಮನ ಕೊಡುತ್ತಿರುತ್ತಾರೆ. ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸಿ ಕನ್ನಡದಲ್ಲಿ ಹೆಚ್ಚು ಅಭಿಮಾನಿಗಳನ್ನು ಪಡೆದ ನಟಿ ಶರ್ಮಿತಾ ಅವರು ಈಗ ತೆಲುಗಿನ ಅಭಿಮಾಗಳನ್ನು ಕೂಡ ಸಂಪಾದಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಶರ್ಮಿತಾ ಗೌಡ ಅವರು ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಕಾಮಿಡಿ ವೀಡಿಯೋಗಳನ್ನು ಕೂಡ ಅಪ್ ಲೋಡ್ ಮಾಡುತ್ತಿರುತ್ತಾರೆ.
ಪ್ರವಾಸದಲ್ಲಿ ನಟ-ನಟಿಯರು
ನಟ-ನಟಿಯರು ಶೂಟಿಂಗ್ ಹೊರತು ಪಡಿಸಿ, ಸಮಯ ಸಿಕ್ಕಾಗಲೆಲ್ಲಾ ತಮ್ಮ ಕುಟುಂಬದ ಜೊತೆಗೆ ಪ್ರವಾಸ ಕೈಗೊಳ್ಳುವುದು ಸರ್ವೇ ಸಾಮಾನ್ಯ. ಮೊದಲೆಲ್ಲಾ, ಚಿಕ್ಕಮಗಳೂರು, ಊಟಿ, ಕೇರಳ ಎಂದು ಪ್ರವಾಸ ಮಾಡುತ್ತಿದ್ದ ನಟ-ನಟಿಯರು ಈಗ ಹೆಚ್ಚಾಗಿ ಬೇರೆ ದೇಶಗಳಿಗೆ ತೆರಳುವುದು ಹೆಚ್ಚಾಗಿದೆ. ಬಾಲಿ, ದುಬೈ, ಪ್ಯಾರಿಸ್, ಥೈಲ್ಯಾಂಡ್, ಮಾಲ್ಡೀವ್ಸ್ ಹೀಗೆ ಬೇರೆ ಬೇರೆ ದೇಶಗಳಿಗೆ ಪ್ರವಾಸ ತೆರಳುತ್ತಾರೆ. ನಟಿ ಶರ್ಮಿತಾ ಗೌಡ ಅವರು ಕೂಡ ವಿಯಟ್ನಂ, ಮಾಲ್ಡೀವ್ಸ್, ಖಝಕಿಸ್ತಾನ್ ಸೇರಿದಂತೆ ಹಲವು ಕಡೆಗಳಲ್ಲಿ ಟ್ರಾವೆಲ್ ಮಾಡಿದ್ದಾರೆ. ಭಾರತದ ಹಲವು ಪ್ರದೇಶಗಳಿಗೂ ಕೂಡ ಶರ್ಮಿತಾ ಅವರು ಪ್ರವಾಸ ಮಾಡಿದ್ಧಾರೆ.

ಕುಟುಂಬದ ಜೊತೆಗೆ ಕಾಶಿಯಲ್ಲಿ ನಟಿ
ಕಳೆದ ತಿಂಗಳಷ್ಟೇ ನಟಿ ಶರ್ಮಿತಾ ಗೌಡ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬವನ್ನು ಈ ಬಾರಿ ಶರ್ಮಿತಾ ಅವರು ಭಾರತದ ಹೊರಗೆ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬವನ್ನು ಖಝಕಿಸ್ತಾನದಲ್ಲಿ ವಿಶೇಷವಾಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಪ್ರವಾಸದ ಫೋಟೋ ಹಾಗೂ ವೀಡಿಯೋಗಳನ್ನು ನಟಿ ಶರ್ಮಿತಾ ಗೌಡ ಅವರು ಶೇರ್ ಮಾಡಿಕೊಂಡಿದ್ದರು. ಇನ್ನು ಈ ತಿಂಗಳು ಎಲ್ಲಾ ನಟ-ನಟಿಯರಿಗೂ ವಿಶೇಷವೇ ಏಕೆಂದರೆ, ಇದು ವರ್ಷದ ಕೊನೆಯ ತಿಂಗಳಾಗಿದೆ. ಜೊತೆಗೆ ಕ್ರಿಸ್ ಮಸ್ ಸೆಲಬ್ರೇಷನ್ ಬೇರೆ ಎಲ್ಲೆಡೆ ಜೋರಾಗಿದೆ. ಇಂತಹ ಸಂದರ್ಭದಲ್ಲಿ ನಟಿ ಶರ್ಮಿತಾ ಗೌಡ ಅವರು ಶಿವಭಕ್ತೆಯಾಗಿದ್ದಾರೆ. ಎಲ್ಲರೂ ಕ್ರಿಸ್ ಮಸ್ ಸೆಲಬ್ರೇಷನ್ ನಲ್ಲಿ ಬ್ಯುಸಿಯಾಗಿದ್ದರೆ, ನಟಿ ಶರ್ಮಿತಾ ಅವರು ಶಿವನ ಆರಾಧಕಿಯಾಗಿದ್ದಾರೆ.
ಶಿವ ಭಕ್ತೆಯಾದ ನಟಿ ಶರ್ಮಿತಾ
ಹೌದು ನಟಿ ಶರ್ಮಿತಾ ಗೌಡ ಅವರು ಈ ತಿಂಗಳು ಕುಟುಂಬದ ಜೊತೆ ಸೇರಿ ನಾರ್ತ್ ಇಂಡಿಯಾ ಟ್ರಿಪ್ ನಲ್ಲಿದ್ದಾರೆ. ಕಾಶೀ ವಿಶ್ವನಾಥನ ದರ್ಶನ ಪಡೆದಿರುವ ನಟಿ ಶರ್ಮಿತಾ ಅವರು ಶಿವ ಭಕ್ತೆಯಾಗಿದ್ದಾರೆ. ಅಲ್ಲದೇ, ಕಾಶಿ ವಿಶ್ವಾನಾಥನ ಜೊತೆಗೆ ಗಂಗಾರತಿಯನ್ನು ಕಂಡು ಪುನೀತರಾಗಿದ್ದಾರೆ. ಈ ಬಗ್ಗೆ ನಟಿ ಶರ್ಮಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗಂಗಾರತಿಯನ್ನು ವಿವರಿಸಿದ್ದು, ನಂಬಿಕೆ, ಭಕ್ತಿಯ ಪರವಶರಾಗಿದ್ದಾರೆ. ಕುಟುಂಬದೊಂದಿಗೆ ಫೋಟೋ ತೆಗೆಸಿಕೊಂಡಿದ್ದು ಸಂಭ್ರಮಿಸಿದ್ದಾರೆ.
ಸ್ಟೈಲಿಷ್ ವಿಲನ್ ಶರ್ಮಿತಾ ಬಣ್ಣದ ಪಯಣ
ಇನ್ನು ನಟಿ ಶರ್ಮಿತಾ ಗೌಡ ಅವರು ಕಿರುತೆರೆಯಲ್ಲಿ ಮುದ್ದಾಗಿ ಕಾಣುವ ಸ್ಟೈಲಿಷ್ ವಿಲನ್. ಚಿಕ್ಕಮಗಳೂರಿನ ಬೆಡಗಿ ನಟಿ ಶರ್ಮಿತಾ ಗೌಡ ಅವರು ತಮ್ಮ ನೆಗೆಟಿವ್ ರೋಲ್ ಮೂಲಕವೇ ಜನಪ್ರಿಯರಾಗಿದ್ದಾರೆ. ಗೀತಾ ಧಾರಾವಾಹಿಯಲ್ಲಿ ಮಲತಾಯಿ ಭಾನುಮತಿ ಪಾತ್ರದಲ್ಲಿ ಮಿಂಚಿದ್ದರು. ಸದ್ಯ ತೆಲುಗು ಕಿರುತೆರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಬ್ರಹ್ಮಮುಡಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನು ಕನ್ನಡದ ಲಕ್ಷ್ಮೀಬಾರಮ್ಮ ಧಾರಾವಾಹಿಯಲ್ಲಿ ಶರ್ಮಿತಾ ಅವರು ಆಗಾಗ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಮೂಲಕವೇ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ. ಶರ್ಮಿತಾ ಗೌಡ ಅವರ ಡ್ರೆಸ್ಸಿಂಗ್ ಸೆನ್ಸ್ ಅನೇಕರಿಗೆ ಇಷ್ಟವಾಗಿದೆ. ಸೀರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಂಡರೂ, ಸ್ಟೈಲಿಷ್ ಆಗಿ ಉಡುತ್ತಾರೆ. ಕನ್ನಡ ಅಭಿಮಾನಿಗಳು ಸದ್ಯ ಶರ್ಮಿತಾ ಅವರ ನಟನೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











