ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾ ಎಲ್ಲೆಲ್ಲೂ ಈ ಚೆಲುವೆಯದ್ದೇ ಹವಾ..!
ನಟಿ ಶ್ರೀಭವ್ಯ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ಅದೇ ಅಮೃತಾಂಜನ್ ನಟಿ ಎಂದರೆ ಎಲ್ಲರ ಮುಖದಲ್ಲೂ ಸ್ಮೈಲ್ ಬರುವುದಂತೂ ಪಕ್ಕಾ. ಯಾಕೆಂದರೆ ಅಮೃತಾಂಜನ್ ಎಂಬ ಕಾಮಿಡಿ ಶಾರ್ಟ್ ಮೂವಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶ್ರೀಭವ್ಯ ಅಂದಿನಿಂದ ಇಂದಿನವರೆಗೂ ಎಲ್ಲರನ್ನೂ ನಗಿಸುತ್ತಿದ್ದಾರೆ.
ಇಷ್ಟು ದಿನ ಶ್ರೀಭವ್ಯ ಅವರನ್ನು ಅಮೃತಾಂಜನ್ ಶಾರ್ಟ್ ಮೂವಿ ಹೆಸರಿನ ಜೊತೆಗೆ ಕರೆದು ಗುರುತಿಸಲಾಗುತ್ತಿತ್ತು. ಆದರೆ ಇನ್ಮುಂದೆ ಮಜಾಟಾಕೀಸ್ ಶ್ರೀಭವ್ಯ ಎಂದು ಬದಲಾದರೂ ಆಶ್ಚರ್ಯವಿಲ್ಲ.ಯಾಕೆಂದರೆ ಶ್ರೀಭವ್ಯ ಅವರು ಸದ್ಯ ಮಜಾಟಾಕೀಸ್ ಮೂಲಕ ಎಲ್ಲರನ್ನು ನಗಿಸಲು ಮುಂದಾಗಿದ್ದಾರೆ. ಇಷ್ಟು ಕಾಲ ಯೂಟ್ಯೂಬ್ ನಲ್ಲಿ ಸಾಕಷ್ಟು ಕಾಮಿಡಿ ಜಾನರ್ ಹೊಂದಿರುವ ವೀಡಿಯೋಗಳ ಮೂಲಕ ಎಲ್ಲರನ್ನು ನಗಿಸುತ್ತಿದ್ದರು.

ಚಿಕ್ಕಮಗಳೂರಿನ ಬೆಡಗಿಯ ಬಣ್ಣದ ಪಯಣ
ಮೂಲತಃ ಚಿಕ್ಕಮಗಳೂರಿನ ಚೆಲುವೆ ಆಗಿರುವ ಶ್ರೀಭವ್ಯ ಅವರಿಗೆ ಶಾಲೆಯಲ್ಲಿ ಓದುವಾಗಲೇ ಸಿನಿಮಾಗಳಲ್ಲಿ ನಟಿಸುವ ಆಫರ್ ಗಳು ಬರುತ್ತಿದ್ದವಂತೆ. ಆದರೆ, ಓದಬೇಕೆಂದು ಅವನ್ನೆಲ್ಲಾ ರಿಜೆಕ್ಟ್ ಮಾಡಿದ್ದರು. ಸದ್ಯ ಬೆಂಗಳೂರಿನಲ್ಲೇ ನೆಲೆಸಿರುವ ಶ್ರೀಭವ್ಯ ಅವರು ಅಮೃತಾಂಜನ್ ಎಂಬ ಶಾರ್ಟ್ ಮೂವೀ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಈ ಮೂಲಕ ಎಲ್ಲರ ಮೊಗದಲ್ಲೂ ಮಂದಹಾಸವನ್ನು ಮೂಡಿಸಿದ್ದರು. ಅಲ್ಲಿಂದ ಶ್ರೀಭವ್ಯ ಅವರು ನಟನೆಯನ್ನು ಪ್ರಾರಂಭಿಸಿದವರು ಇಂದಿಗೂ ಹಿಂದೆ ತಿರುಗಿ ನೋಡಲಿಲ್ಲ. ಒಂದಾದ ಮೇಲೆ ಒಂದರಂತೆ ಸಿರೀಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಯೂಟ್ಯೂಬ್ ಸಿರೀಸ್ ಮೂಲಕವೇ ಚಿರಪರಿಚಿತೆ
ಯೂಟ್ಯಬ್ ನಲ್ಲಿ ಜೆಆರ್ ಎಂ ಸ್ಟುಡಿಯೋ, ಸಿನಿಮಾ ಸೈಕಲ್, ಹೇಶಿಕಾ ಎಂಟರ್ ಟೈನರ್ಸ್, ಕಾಫಿ ಡಬ್ಬಿ, ಸಕತ್ ಎಂಟರ್ ಟೈನರ್ಸ್ ಗಳಲ್ಲಿ ಪಲ್ಪಿ ಪರಮೇಶ್ವರಿ ರೂಲ್ಸ್, ಲೋ ಬಜೆಟ್ ಗೃಹಪ್ರವೇಶ, ಟಾಕ್ಸಿಕ್ ವೈಫ್, ಬಂಪರ್ ಆಫರ್, ಸನ್ ಆಫ್ ಪೆಡಿಗ್ರಿ ಪಾಪಣ್ಣ, ವಾಟರ್ ಮೇಲನ್, ಡೇಟಿಂಗ್ ವಿತ್ ಕೊರೋನಾ ಎಂಬ ಕಾಮಿಡಿ ಜಾನರ್ ಇರುವ ಸಿರೀಸ್ ಗಲಲ್ಲಿ ನಟಿಸಿದ್ದಾರೆ. ಇವನ್ನು ಹೊರತು ಪಡಿಸಿ ನಟಿ ಶ್ರೀಭವ್ಯ ಅವರು ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ.
ನಗಿಸುವುದು ಬಹಳ ಕಷ್ಟ ಎನ್ನುವ ನಟಿ
ಕನ್ನಡತಿ, ಶ್ರೀರಸ್ತು ಶುಭಮಸ್ತು ಸೇರಿದಂತೆ ನಾಲ್ಕೈದು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಎಲ್ಲಾವುದರಲ್ಲೂ ಹೆಚ್ಚಾಗಿ ನೆಗೆಟಿವ್ ರೋಲ್ ನಲ್ಲೇ ಕಾಣಿಸಿಕೊಂಡಿದ್ದು, ಶ್ರೀಭವ್ಯ ಅವರಿಗೆ ನಗಿಸುವುದು ಎಂದರೆ ಬಹಳ ಇಷ್ಟವಂತೆ. ಆದರೆ, ನಗಿಸುವುದು ಅಷ್ಟು ಸುಲಭದ ವಿಚಾರವೂ ಅಲ್ಲ ಎಂಬುದು ಶ್ರೀಭವ್ಯ ಅವರ ಅಭಿಪ್ರಾಯ. ಇನ್ನು ಕಿರುತೆರೆ, ಯೂಟ್ಯೂಬ್ ಜೊತೆಗೆ ಸಿನಿಮಾಗಳ ಮೂಲಕವೂ ಅಭಿಮಾನಿಗಳನ್ನು ತಲುಪಿದ್ದಾರೆ. ಜಾಬ್ ಮಾರ್ಲೆ, ಸ್ವಾಮಿ ಮತ್ತು ಫ್ರೆಂಡ್ಸ್, ಕಪ್ಪು ಬಿಳುಪು, ತ್ರಿಬ್ಬಲ್ ರೈಡಿಂಗ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅಮೃತಾಂಜನ್ ಸಿನಿಮಾ ತಂಡದ ಜೊತೆಗೆ ಮತ್ತೊಂದು ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಫೀನಿಕ್ಸ್ ಮತ್ತು ಫ್ಯಾಮಿಲಿ ಮ್ಯಾನ್ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರಂತೆ.
ಯೂಟ್ಯೂಬ್, ಸಿನಿಮಾ, ಧಾರಾವಾಹಿಗಳಲ್ಲಿ ಬ್ಯುಸಿ
ಇದೆಲ್ಲದರ ಜೊತೆಗೆ ಈಗ ಮಜಾ ಟಾಕೀಸ್ ತಂಡವನ್ನು ಸೇರಿರುವ ಶ್ರೀಭವ್ಯ ಅವರು, ಸ್ಕ್ರಿಪ್ಟ್ ಓದಿ ಡೈಲಾಗ್ ಹೇಳುತ್ತಾ ಕಾಮಿಡಿ ಮಾಡುವುದಕ್ಕೂ ಆನ್ ಸ್ಪಾಟ್ ನಗಿಸುವಂತೆ ಮಾತನಾಡುವುದಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಯೂಟ್ಯೂಬ್, ಸಿನಿಮಾ, ಧಾರಾವಾಹಿಗಳ ಮೂಲಕ ಎಲ್ಲಾ ಬಗೆಯ ಅಭಿಮಾನಿಗಳನ್ನು ತಲುಪುವುದೇ ನನ್ನ ಉದ್ದೇಶ ಎಂದು ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು ಎಂದು ಹೇಳಿಕೊಂಡಿದ್ದು, ಅವರ ಆಸೆ ಆದಷ್ಟು ಬೇಗ ನೆರವೇರಲಿ ಎಂದು ಶುಭ ಕೊರೋಣ.


Click it and Unblock the Notifications











