Sukrutha Nag ; ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸಿದ ಸುಕೃತಾ ನಾಗ್..!

By ಪ್ರಿಯಾ ದೊರೆ

ನಟಿ ಸುಕೃತಾ ನಾಗ್ ಅವರು ತಮ್ಮ ಮೂಲ ಹೆಸರಿಗಿಂತಲೂ ಧಾರಾವಾಹಿಗಳಲ್ಲಿ ನಟಿಸಿದ ಪಾತ್ರಗಳ ಮೂಲಕವೇ ಹೆಚ್ಚು ಫೇಮಸ್ ಆಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಂಜಲಿಯಾಗಿಯೂ, ಲಕ್ಷಣ ಸೀರಿಯಲ್ ನಲ್ಲಿ ಶ್ವೇತಾ ಆಗಿಯೂ ನಟಿಸಿದ್ದ ಸುಕೃತಾ ಅವರು ತಮ್ಮ ಪಾತ್ರದ ಮೂಲಕವೇ ಅಭಿಮಾನಿಗಳಿಗೆ ಚಿರಪರಿಚಿತರಾಗಿದ್ದಾರೆ. ಈ ಗೊಂಬೆಯನ್ನು ಯಾರೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಬಬ್ಲಿ ಬಬ್ಲಿ ಆಗಿ ಎಲ್ಲರಿಗೂ ಇಷ್ಟವಾಗಿದ್ದ ಸುಕೃತಾ ಅವರು ಇದೀಗ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ.

ನಟಿ ಸುಕೃತಾ ನಾಗ್ ಸೀರಿಯಲ್ ಜರ್ನಿ

ಸುಕೃತಾ ನಾಗ್ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತವಾದ ನಟಿ. ಆದರೆ, ಸುಕೃತಾ ಅವರು ಇದಕ್ಕೂ ಮುನ್ನ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಇದು ಹೆಚ್ಚು ಜನರಿಗೆ ತಿಳಿಯದ ವಿಚಾರ. ಮೆಗಾ ಧಾರಾವಾಹಿ ಕಾದಂಬರಿಯಲ್ಲಿ ಸುಕೃತಾ ನಾಗ್ ಅವರು ಬಾಲ ನಟಿಯಾಗಿ ನಟಿಸಿದ್ದರು. ಇದರೊಂದಿಗೆ ಬರೋಬ್ಬರಿ 25 ಟಿವಿ ಶೋಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ. ಇನ್ನು ಸುಕೃತಾ ನಾಗ್ ಅವರಿಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಚಿಕ್ಕ ವಯಸ್ಸಿನಲ್ಲಿ ಡ್ಯಾನ್ಸ್ ಕ್ಲಾಸ್ ಗೆ ಹೋಗುವಾಗ ಅಲ್ಲಿಗೆ ಬಂದವರೊಬ್ಬರು ಸುಕೃತಾ ಅವರ ತಾಯಿ ಬಳಿ ನಟನೆಯ ಆಫರ್ ಕೊಟ್ಟರಂತೆ. ಅಲ್ಲಿಂದ ನಟನೆ ಆರಂಭಿಸಿದ ಸುಕೃತಾ ಅವರು ಇಂದಿಗೂ ಕಿರುತೆರೆಯಲ್ಲಿ ಮಿಂಚುತ್ತಲೇ ಇದ್ದಾರೆ.

written update on actress sukrutha nag youtube channel

ವೆಸ್ಟರ್ನ್ ಡ್ಯಾನ್ಸರ್ ಸುಕೃತಾ ನಾಗ್

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿಯ ನಾದಿನಿ ಪಾತ್ರದಲ್ಲಿ ನಟಿಸಿದ್ದರು. ಅತ್ತಿಗೆಗೆ ಹೆಚ್ಚು ಸಪೋರ್ಟ್ ಮಾಡಿದ್ದ ಅಂಜಲಿ ಕೆಲ ತಪ್ಪುಗಳನ್ನೂ ಮಾಡಿದ್ದಳು. ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ಮೇಲೆ ಸುಕೃತಾ ನಾಗ್ ಅವರು ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ವೆಸ್ಟರ್ನ್ ಡ್ಯಾನ್ಸರ್ ಆಗಿರುವ ಸುಕೃತಾ ಅವರು ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸುಕೃತಾ ನಾಗ್ ಅವರು ಭಾಗವಹಿಸಿದ್ದರು. ಇದಾದ ಬಳಿಕ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಸುಕೃತಾ ನಾಗ್ ನಟನೆಯ ಪಾರ್ಟ್ನರ್ ಎಂಬ ಸಿನಿಮಾ ರಿಲೀಸ್ ಆಗಿತ್ತು. ನಂತರ ಲಕ್ಷಣ ಧಾರಾವಾಹಿಯಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದರು. ಬಿಳಿ ಗೊಂಬೆ ಸುಕೃತಾ ನಾಗ್ ವಿಲನ್ ಪಾತ್ರವನ್ನು ಕೂಡ ಅದ್ಭುತವಾಗಿ ನಟಿಸಿದ್ದರು. ಸುಕೃತಾ ಅವರ ವಿಲನ್ ಪಾತ್ರ ಶ್ವೇತಾಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

ಹೊಸ ಯೂಟ್ಯೂಬ್ ಚಾನೆಲ್

ಸುಕೃತಾ ನಾಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ರೀಲ್ಸ್ ಗಳನ್ನು ಮಾಡಿ ಹಾಕುತ್ತಿರುತ್ತಾರೆ. ಲಕ್ಷಣ ಧಾರಾವಾಹಿಯಲ್ಲಿ ನಟಿಸುವಾಗಲೇ ಸುಕೃತಾ ನಾಗ್ ಅವರು ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದರು. ಅದರಲ್ಲಿನ ವೀಡಿಯೋಗಳಿಗೆ ಲಕ್ಷಾಂತರ ವ್ಯೂವ್ಸ್ ಮತ್ತು ಲೈಕ್ಸ್ ಗಳು ಕೂಡ ಬಂದಿದ್ದವು. ಆದರೆ, ಅದೀಗ ಯೂಟ್ಯೂಬ್ ನಿಂದ ಕಾಣೆಯಾಗಿದ್ದು, ಇದೀಗ ಮತ್ತೆ ಹೊಸ ಚಾನೆಲ್ ನ ತೆರೆದಿದ್ದಾರೆ. ಇದರಲ್ಲಿ ತಮ್ಮ ಫುಡ್ ಟೂರ್, ಶೂಟಿಂಗ್ ಬ್ಯಾಗ್, ಸ್ಟ್ರೀಟ್ ಶಾಪಿಂಗ್, ಶೂ ಕಲೆಕ್ಷನ್ಸ್ ಸೇರಿದಂತೆ ಹಲವು ವಿಚಾರದ ಬಗ್ಗೆ ವೀಡಿಯೋ ಮಾಡುವುದಾಗಿ ಹೇಳಿದ್ದಾರೆ. ಈ ಹೊಸ ಚಾನೆಲ್ ನಲ್ಲಿ ತಮ್ಮ ಒರ್ಸನಲ್ ವಿಚಾರಗಳನ್ನೂ ತಿಳಿಸುತ್ತಾರಂತೆ.

written update on actress sukrutha nag youtube channel

ತಮ್ಮ ಬಗ್ಗೆ ಮಾಹಿತಿ ನೀಡುತ್ತಾರಂತೆ ನಟಿ

ಇನ್ನು ನಟಿ ಸುಕೃತಾ ನಾಗ್ ಅವರಿಗೆ ನಿದ್ದೆ ಮಾಡುವುದೆಂದರೆ ಬಹಳ ಇಷ್ಟವಂತೆ. ಶೂಟಿಂಗ್ ನಲ್ಲಿ ಬಿಡುವು ಸಿಕ್ಕರೂ ನಿದ್ದೆ ಮಾಡುತ್ತಾರಂತೆ. ಟೀ ಕುಡಿಯುವ ಅಭ್ಯಾಸವಿರುವ ಸುಕೃತಾ ಅವರಿಗೆ ಮಸಾಲೆ ಟೀನೇ ಬೇಕಂತೆ. ಉಪ್ಸಾರು ಮುದ್ದೆ ಇಷ್ಟ ಪಡುವ ಸುಕೃತಾ ಅವರು ನಾನ್ ವೆಜ್ ನಲ್ಲಿ ಬಿರಿಯಾನಿ ಕಬಾಬ್ ಎಂದರೆ ಪ್ರಾಣವಂತೆ. ಇನ್ನು ಸುಕೃತಾ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆಂದರೆ ಈಗಲೇ ಅವರ ಯೂಟ್ಯೂಬ್ ಚಾನೆಲ್ ಚೆಕ್ ಮಾಡಿ.

More from Filmibeat

English summary
actress sukrutha nag new youtube channel got many views.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X