Sushma Nanaiah ; ಮಗನ ಮೇಲಿನ ವ್ಯಾಮೋಹ ಹೆಚ್ಚಿಸಿಕೊಂಡು ಪೇಚಿಗೆ ಸಿಕ್ಕಿರುವ ಕಾವೇರಿ ರಿಯಲ್ ಲೈಫ್..!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀಬಾರಮ್ಮ ಧಾರಾವಾಹಿಯಲ್ಲಿ ಸೊಸೆಯನ್ನು ಮಟ್ಟ ಹಾಕಲು ಹೋಗಿ ಈಗ ಕಾವೇರಿಯೇ ಸಿಕ್ಕಿ ಬೀಳುವ ಪರಿಸ್ಥಿತಿಗೆ ಬಂದಿದ್ದಾಳೆ. ಮಗನ ಮೇಲಿನ ಅತೀಯಾದ ಪ್ರೀತಿ, ವ್ಯಾಮೋಹ ಕಾವೇರಿಯನ್ನು ದಾರಿ ತಪ್ಪುವಂತೆ ಮಾಡಿದೆ. ಆದರೆ ನಿಜ ಜೀವನದಲ್ಲಿ ಕಾವೇರಿ ಲೈಫ್ ಹೇಗಿದೆ ಗೊತ್ತಾ..? ಹೌದು, ಕಾವೇರಿಯ ನಿಜವಾದ ಹೆಸರು ಸುಷ್ಮಾ ನಾಣಯ್ಯ. ಮೂಲತಃ ಕೂರ್ಗಿನವರಾಗಿರುವ ಸುಷ್ಮಾ ಅವರು ದಾವಣಗೆರೆ, ಧಾರವಾಡ, ಬೆಂಗಳೂರು, ಮೈಸೂರಿನಲ್ಲಿ ಓದಿ ಬೆಳದಿದ್ದಾರೆ.
ಕೆಲಸ ಬಿಟ್ಟು ನಟನೆಗೆ ಬಂದ ಸುಷ್ಮಾ
ಇದಕ್ಕೆ ಕಾರಣ ಅವರ ತಂದೆ-ತಾಯಿಯ ಕೆಲಸ, ಪೋಷಕರಿಗೆ ಆಗಾಗ ವರ್ಗಾವಣೆ ಆಗುತ್ತಿದ್ದ ಕಾರಣ ಸುಷ್ಮಾ ಅವರು ಓದು ಕೂಡ ತಂದೆ-ತಾಯಿ ಕೆಲಸವಿದ್ದ ಕಡೆಗೆ ವರ್ಗಾವಣೆಯಾಗುತ್ತಿತ್ತು. ಸುಷ್ಮಾ ಅವರಿಗೆ ಈಗಲೂ ಧಾರಾವಾಡ ಅಲ್ಲಿಯ ಭಾಷೆ ಎಂದರೆ ಬಹಳ ಇಷ್ಟವಂತೆ. ಸುಷ್ಮಾ ಅವರೂ ಧಾರಾವಾಡದ ಕನ್ನಡವನ್ನು ಕಲಿತಿದ್ದಾರೆ. ಇನ್ನು ಸುಷ್ಮಾ ಅವರು ಮೈಕ್ರೋ ಬಯಾಲಜಿಯಲ್ಲಿ ಎಂ ಎಸ್ ಸಿ ಪದವಿ ಪಡೆದಿದ್ದಾರೆ. ಸೈಂಟಿಸ್ಟ್ ಆಗಿ ಕೆಲಕಾಲ ಕೆಲಸವನ್ನೂ ನಿರ್ವಹಿಸಿದ್ದಾರೆ. ಆದರೆ, ಸುಷ್ಮಾ ಅವರ ಮನಸ್ಸು ಸದಾ ನಟನೆಯತ್ತ ಸೆಳೆಯುತ್ತಿದ್ದ ಕಾರಣ ಕೆಲಸ ಬಿಟ್ಟು ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

ಬಹಳ ಕಾಲದ ಗೆಳೆಯನ ಜೊತೆಗೆ ಮದುವೆ
ಸುಷ್ಮಾ ನಾಣಯ್ಯ ಅವರು ಧಾರವಾಡದ ಶಾಲೆಯಲ್ಲಿ ಓದುವಾಗಲೇ ಪ್ರತೀಕ್ ಮೋರೆ ಎಂಬುವರ ಪರಿಚಯವಾಗಿತ್ತಂತೆ. ಸುಷ್ಮಾ ಅವರು 8ನೇ ಕ್ಲಾಸ್ ನಲ್ಲಿದ್ದಾಗ ಪ್ರತೀಕ್ ಅವರು 9ನೇ ಕ್ಲಾಸ್ನಲ್ಲಿದ್ದರಂತಯೆ. ಇಬ್ಬರಿಗೂ ಅವಾಗಿನಿಂದಲೇ ಸ್ನೇಹವಿತ್ತಂತೆ. ಕಾಂಟ್ಯಾಕ್ಟ್ ನಲ್ಲಿದ್ದ ಇವರು ನಂತರದ ದಿನಗಳಲ್ಲಿ ಪ್ರೀತಿ ಮಾಡಿ ಲೈಫ್ ನಲ್ಲಿ ಸೆಟಲ್ ಆದ ಬಳಿಕ ಮನೆಯಲ್ಲಿ ವಿಷಯ ತಿಳಿಸಿದರಂತೆ. ಸುಷ್ಮಾ ಅವರು ಕೂರ್ಗಿ ಆಗಿದ್ದರೂ ಪ್ರತೀಕ್, ಮರಾಠದವರಾದರೂ ಇಬ್ಬರ ಮನೆಯಲ್ಲೂ ವಿರೋಧವಿಲ್ಲದೇ 2013ರಲ್ಲಿ ಅರೇಂಜ್ ಮ್ಯಾರೇಜ್ ಮಾಡಿಕೊಂಡರಂತೆ. ಇನ್ನು ಸುಷ್ಮಾ ಅವರು ಬಣ್ಣದ ಲೋಕಕ್ಕೆ ಆಗಮಿಸಲು ಪ್ರತೀಕ್ ಅವರ ಸಹಕಾರವೇ ಕಾರಣವಂತೆ.
ಪತಿ ಸಹಾಯದಿಂದ ನಟನೆ ಆರಂಭ
ಚಿಕ್ಕ ವಯಸ್ಸಿನಿಂದಲೂ ಸಂಗೀತ, ನೃತ್ಯ, ರಂಗಭೂಮಿ, ಮೇಕಪ್ ಬಗ್ಗೆ ಸುಷ್ಮಾ ಅವರು ಹೆಚ್ಚು ಆಸಕ್ತಿಯನ್ನು ಹೊಂದಿದ್ದರಂತೆ. ಹೀಗಾಗಿ ರಂಗಭೂಮಿಗೆ ಆಗಮಿಸಿದ ಸುಷ್ಮಾ ಅವರು ಮೊದಲು ಕಾವ್ಯಾ ಕಸ್ತೂರಿ ಧಾರಾವಾಹಿಯಲ್ಲಿ ನಟಿಸಿದರಂತೆ. ಇದಾದ ಬಳಿಕ ʼಅಶ್ವಿನಿ ನಕ್ಷತ್ರ', 'ಗುಂಡ್ಯಾನ ಹೆಂಡತಿ', 'ಗಾಳಿಪಟ', 'ಭಾಗ್ಯವತಿ', 'ಮಹಾಭಾರತ', 'ರಥಸಪ್ತಮಿ', 'ದೀಪವು ನಿನ್ನದೇ', 'ಕಾರ್ತಿಕ ದೀಪ' ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದರು. ಬಳಿಕ ಕುಟುಂಬಕ್ಕಾಗಿ ಆರು ವರ್ಷಗಳ ಕಾಲ ಬ್ರೇಕ್ ಪಡೆದರು. ಈ ಸಮಯದಲ್ಲಿ ಕಿರುತರೆಯಿಂದ ದೂರವಿದ್ದರೂ ಕೂಡ ರಂಗಭೂಮಿ ನಂಟು ಹಾಗೆ ಉಳಿಸಿಕೊಂಡಿದ್ದರಂತೆ. ಈ ನಡುವೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಸುಷ್ಮಾ ಅವರು ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ಪುನಃ ಕಿರುತೆರೆಗೆ ಆಗಮಿಸಿದರು.
ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ ನಟಿ
ತಾಯಿ ಕಾವೇರಿ ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಮೇಕಪ್ ಆರ್ಟಿಸ್ಟ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮನೆ, ಮಗಳು, ಧಾರಾವಾಹಿ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಸುಷ್ಮಾ ಅವರಿಗೆ ತಮ್ಮ ಪತಿಯ ಸಪೋರ್ಟ್ ಹೆಚ್ಚಿದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಪೋಷಕ ಪಾತ್ರದ ಮೂಲಕ ಕಿರುತೆರೆಗೆ ಸುಷ್ಮಾ ನಾಣಯ್ಯ ಅವರು ಮರಳಿದ್ದರೂ ತಮ್ಮ ನಟನೆಯ ಮೂಲಕ ಮತ್ತೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.


Click it and Unblock the Notifications











