ವರ್ಷ ಆಗಿ ಬಂದ ನಟಿ 'ಸ್ವಾತಿ' ಈಗ ಅಪರ್ಣಾ ಪಾತ್ರದಲ್ಲಿ ಮಿಂಚಿಂಗ್
ಅಮೃತಧಾರೆ ಧಾರಾವಾಹಿಯಲ್ಲಿ ಅಪರ್ಣಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸ್ವಾತಿ ಅವರು ಮೊದಲು ಚಿರಪರಿಚಿತರಾಗಿದ್ದು ಅಮೃತವರ್ಷಿಣಿ ಧಾರಾವಾಹಿ ಮೂಲಕ. ಇದಾದ ಬಳಿಕ ಕೆಲ ಧಾರಾವಾಹಿಗಳಲ್ಲಿ ನಟಿಸಿದ ಸ್ವಾತಿ ಅವರು ಹಲವು ವರ್ಷಗಳ ಕಾಲ ಕಿರುತೆರೆಯಿಂದ ಮಾಯವಾಗಿದ್ದರು. ಇದೀಗ ಮತ್ತೆ ಕಿರುತೆರೆಗೆ ಆಗಮಿಸಿದ್ದಾರೆ. ಅಮೃತ ಹೆಸರಿನ ಧಾರಾವಾಹಿಯಲ್ಲಿ ವಿಲನ್ ಪಾತ್ರದ ಮೂಲಕ ಹಿಟ್ ಆದ ನಟಿ ಸ್ವಾತಿ ಅವರು ಈಗ ಮತ್ತೆ ಅಮೃತ ಹೆಸರಿನ ಮತ್ತೊಂದು ಹೆಸರಿನ ಧಾರಾವಾಹಿ ಮೂಲಕ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆಕಸ್ಮಿಕವಾಗಿ ನಟಿಯಾದ ಸ್ವಾತಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹಲವು ವರ್ಷಗಳ ಹಿಂದೆ ಮೂಡಿ ಬಂದ ಅಮೃತವರ್ಷಿಣಿ ಸೀರಿಯಲ್ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮುನ್ನ ಸ್ವಾತಿ ಅವರು ನಿರೂಪಕಿಯಾಗಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು. ಸ್ನೇಹಿತರ ಸಹಾಯದಿಂದ ಅಮೃತವರ್ಷಿಣಿ ಧಾರಾವಾಹಿಯಲ್ಲಿ ಚಾನ್ಸ್ ಪಡೆದರು. ನಟನೆಯ ಗಂಧ ಗಾಳಿ ತಿಳಿದಿರದ ಸ್ವಾತಿ ಅಮೃತವರ್ಷಣಿ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿ ವೀಕ್ಷಕರ ಮನಸ್ಸನ್ನು ಗೆದ್ದಿದ್ದರು.

ಹಲವು ಧಾರಾವಾಹಿಗಳಲ್ಲಿ ನಟನೆ
ಇದಾದ ಬಳಿಕ ನಟಿ ಸ್ವಾತಿ ಅವರು ಮನೆಯೊಂದು ಮೂರು ಬಾಗಿಲು, ಕ್ಲಾಸ್ ಮೇಟ್ಸ್ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದರು. ಬಳಿಕ ಬ್ರೇಕ್ ಪಡೆದ ಸ್ವಾತಿ ಅವರು ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಛಾಪು ಮೂಡಿಸಿದರು. ಒರು ಊರುಲೋ ಒರು ರಾಜಕುಮಾರಿ ಎಂಬ ತಮಿಳು ಧಾರಾವಾಹಿಯಲ್ಲಿ ನಟಿಸಿದ್ದರು. ಇದು ಜೀ ತಮಿಳು ವಾಹಿನಿಯಲ್ಲಿ ಪ್ರಸಾರವಾಗಿತ್ತು. ಬಳಿಕ ಕನ್ಯಾದಾನಂ ಎಂಬ ತೆಲುಗು ಧಾರಾವಾಹಿಯೂ ಜೆಮಿನಿ ಟಿವಿಯಲ್ಲಿ ಪ್ರಸಾರ ಕಂಡಿತ್ತು. ಬಳಿಕ ಮೊದಲುಂ ಕಾದಲುಂ ಎಂಬ ತಮಿಳು ಧಾರಾವಾಹಿ ವಿಜಯ ವಾಹಿನಿಯಲ್ಲಿ ಮೂಡಿ ಬಂದಿತ್ತು. ಸದ್ಯ ಸ್ವಾತಿ ಕನ್ನಡಕ್ಕೆ ವಾಪಸ್ ಬಂದಿದ್ದಾರೆ.

ಬೆಂಗಳೂರಿನಲ್ಲೇ ಬೆಳೆದ ಹುಡುಗಿ
ನಟಿ ಸ್ವಾತಿ ಅವರು ಪೂರ್ತಿ ಹೆಸರು ಸ್ವಾತಿ ರಾಯಲ. ಇವರ ತಂದೆ ಮೂಲತಃ ಆಂಧ್ರಪ್ರದೇಶದವರು. ಆದರೆ. ಸ್ವಾತಿ ಅವರು ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ಎಂಬಿಎ ವ್ಯಾಸಂಗ ಮಾಡಿರುವ ಸ್ವಾತಿ ಅವರು ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದಾರೆ. ಓದುತ್ತಿರುವಾಗಲೇ ಪಾರ್ಟ್ ಟೈಂ ಕೆಲಸ ಮಾಡಿದ ಸ್ವಾತಿ ಅವರು ನಿರೂಪಕಿಯಾಗಿದ್ದಾರೆ. ಬಳಿಕ ಕಿರುತೆರೆಗೆ ನಟಿಯಾಗಿ ಎಂಟ್ರಿ ಕೊಟ್ಟರು. ಇನ್ನು ಸ್ವಾತಿ ಅವರ ಲವ್ ಸ್ಟೋರಿ ಬಹಳ ಇಂಟರೆಸ್ಟಿಂಗ್ ಆಗಿದೆ. ಇವರ ಲವರ್ ಕೂಡ ಮುದ್ದು ಮನಸೇ ಧಾರಾವಾಹಿಯಲ್ಲಿ ನಟಿಸಿದವರೇ ಅಂತೆ.

ಬಹಳ ಕಾಲದ ಸ್ನೇಹಿತನೇ ಸ್ವಾತಿ ಪತಿ
ಪಕ್ಕದ ಮನೆಯ ಹುಡುಗ ಅನಿಲ್ ಎಂಬುವರನ್ನು ಸ್ವಾತಿ ಅವರು ಪ್ರೀತಿಸುತ್ತಿದ್ದರೂ. ಅದೂ ಕೂಡ 9ನೇ ಕ್ಲಾಸ್ನಲ್ಲೇ. ಅಲ್ಲಿಂದಲೇ ಶುರುವಾದ ಇವರ ಪ್ರೀತಿಗೆ ಸ್ವಾತಿ ಅವರ ಮನೆಯಲ್ಲಿ ವಿರೋಧವಿತ್ತಂತೆ. ಆದರೆ, ಸ್ವಾತಿ ಅವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರಂತೆ. ಸ್ವಾತಿ ಅವರು ಡಿಗ್ರಿಯಲ್ಲಿರುವಾಗ ಅವರಿಗೆ ಕ್ಯೂಬರ್ಕಿಲೋಸಿಸ್ ಮೆನಾಜಿಟಿಸ್ ಎಂಬ ಕಾಯಿಲೆ ಶುರುವಾಯಿತಂತೆ. ಇದರಿಂದ ಸ್ವಾತಿ ಅವರಿಗೆ ಕಿವುಡು ಇಲ್ಲವೇ ಕುರುಡು ಆಗಬಹುದು ಎಂದು ವೈದ್ಯರು ಹೇಳಿದ್ದರಂತೆ. ಆದರೆ, ಪ್ರಿಯಕರ ಅನಿಲ್ ಸಹಾಯದೀಮದ ಸ್ವಾತಿ ಅವರು ಪವಾಡದಂತೆ ಬದುಕಿ ಬಂದರಂತೆ. ಬಳಿಕ ಇಬ್ಬರೂ ಮದುವೆಯಾಗಿದ್ದು, ಇವರಿಬ್ಬರಿಗೆ ಪುಟಾಣಿ ಹೆಣ್ಣು ಮಗುವಿದೆಯಂತೆ.


Click it and Unblock the Notifications











