Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
ಕಿರುತೆರೆ ನಟಿ ಸ್ವಾತಿ ಅವರು ಸದ್ಯ ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.ಅಪರ್ಣಾ ಪಾತ್ರದಲ್ಲಿ ಪತಿಯನ್ನು ಅನುಮಾನಿಸುತ್ತಾ ಅಲ್ಲಲ್ಲಿ ಕಾಮಿಡಿ ಮಾಡುತ್ತಿರುತ್ತಾರೆ. ಭೂಮಿಕಾಳಿಗೆ ಗಂಡನನ್ನು ಹೇಗೆಲ್ಲಾ ಹಿಡಿದಿಟ್ಟುಕೊಳ್ಳಬೇಕು ಎಂದು ಹೇಳಿಕೊಡುತ್ತಿರುತ್ತಾರೆ. ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದಾಗ ಸ್ವಾತಿ ಅವರಿಗೆ ಸಿಕ್ಕ ನೇಮ್, ಫೇಮ್ ಇದರಲ್ಲೇನು ಅಷ್ಟಾಗಿ ಸಿಕ್ಕಿಲ್ಲವಾದರೂ ಪೋಷಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಅಪರ್ಣಾಳ ಸ್ವಾತಿ ಬದುಕು
ಅಮೃತಧಾರೆ ಧಾರಾವಾಹಿಯಲ್ಲಿ ಅಪರ್ಣಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸ್ವಾತಿ ರಾಯಲಾ ಅವರನ್ನು ಈಗಲೂ ಜನರು ವರ್ಷ ಪಾತ್ರದ ಮೂಲಕವೇ ಗುರುತಿಸುತ್ತಾರೆ. ಈ ಬಗ್ಗೆ ಸ್ವತಃ ಸ್ವಾತಿ ಅವರೇ ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದು ಸಂತಸವನ್ನು ತೋರ್ಪಡಿಸಿದ್ದಾರೆ. ಸ್ವಾತಿ ಅವರ ತಂದೆ ಬಿಸಿನೆಸ್ ಮ್ಯಾನ್, ತಾಯಿ ಟೀಚರ್. ಹಾಗಿದ್ದರೂ ಮನೆಯಲ್ಲಿ ತೀರಾ ಕಷ್ಟವಿತ್ತಂತೆ. ಎಂಬಿಎ ಓದಿರುವ ಸ್ವಾತಿ ಅವರು ಬಿಪಿಒದಲ್ಲಿ ಕೆಲಸ ಮಾಡಿಕೊಂಡೇ ನಿರೂಪಕಿಯಾಗಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು. ಹೀಗೆ ಬಣ್ಣದ ಲೋಕದ ನಂಟು ಸೆಳೆದ ಪರಿಣಾಮ ಆಡಿಷನ್ ಗಳಲ್ಲಿ ಭಾಗಿಯಾಗಿ ನಟಿಯಾಗಿ ಬಡ್ತಿ ಪಡೆದರು.

ಹೆಸರು, ಹಣ, ಕೀರ್ತಿ ತಂದು ಕೊಟ್ಟ ಅಮೃತವರ್ಷಿಣಿ
ನಟನೆಯ ಗಂಧ-ಗಾಳಿ ತಿಳಿಯದ ಸ್ವಾತಿ ಅವರಿಗೆ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸುವಾಗ ಹಿರಿಯ ನಟಿ ಹೇಮಾ ಚೌಧರಿ ಕೂಡ ನಟಿಸುತ್ತಿದ್ದರು. ಇವರೇ ಸ್ವಾತಿ ಮತ್ತು ರಜಿನಿಗೆ ನಟನೆಯ ಬಗ್ಗೆ ತಿಳಿ ಹೇಳುತ್ತಿದ್ದರಂತೆ. ಸುಮಾರು 1700ಸಂಚಿಕೆ ಪ್ರಸಾರವಾದ ಅಮೃತವರ್ಷಿಣಿ ಧಾರಾವಾಹಿ ವರ್ಷ ಅವರಿಗೆ ಒಳ್ಳೆಯ ಬ್ರೇಕ್ ಕೊಟ್ಟಿತ್ತು. ಈಗಿನ ರೀತಿ ಸೋಶಿಯಲ್ ಮೀಡಿಯಾ ಇದ್ದಿದ್ದರೆ ಇನ್ನಷ್ಟು ಫೇಮಸ್ ಆಗಿರುತ್ತಿದ್ದೆವು ಎಂದು ಸ್ವಾತಿ ಅವರು ಹೇಳುತ್ತಾರೆ. ಇದಾದ ಬಳಿಕ ತೆಲುಗು ಹಾಗೂ ತಮಿಳು ನಟಿಸಿದರು. ಒರು ಊರುಲೋ ಒರು ರಾಜಕುಮಾರಿ, ಕನ್ಯಾದಾನಂ ಹಾಗೂ ಮೊದಲುಂ ಕಾದಲುಂ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ತನಗೋಸ್ಕರ ಮಿಡಿದ ಅನಿಲ್
ಸ್ವಾತಿ ಅವರ ಲವ್ ಸ್ಟೋರಿ ಬಹಳ ಇಂಟರೆಸ್ಟಿಂಗ್ ಆಗಿದೆ. ಇವರ ಲವರ್ ಕೂಡ ಓ ಮುದ್ದು ಮನಸೇ ಧಾರಾವಾಹಿಯಲ್ಲಿ ನಟಿಸಿದ್ದಾರಂತೆ. ಈ ಬಗ್ಗೆ ಸ್ವಾತಿ ಅವರೇ ಹೇಳಿಕೊಂಡಿದ್ದಾರೆ. ನಟಿ ಸ್ವಾತಿ ಅವರು ಪಕ್ಕದ ಮನೆಯ ಹುಡುಗ ಅನಿಲ್ ಎಂಬುವರನ್ನು ಪ್ರೀತಿಸುತ್ತಿದ್ದರು. ಅದೂ ಕೂಡ 9ನೇ ಕ್ಲಾಸ್ನಲ್ಲೇ ಲವ್ ಶುರುವಾಗಿದ್ದಂತೆ. ಅಲ್ಲಿಂದಲೇ ಶುರುವಾದ ಇವರ ಪ್ರೀತಿಗೆ ಸ್ವಾತಿ ಅವರ ಮನೆಯಲ್ಲಿ ವಿರೋಧವಿತ್ತಂತೆ. ಆದರೆ, ಸ್ವಾತಿ ಅವರಿಗೆ ಬ್ರೈನ್ ಇನ್ ಫೆಕ್ಷನ್ ಆದಾಗ ಅನಿಲ್ ಕೇರ್ ಮಾಡಿದ್ದನ್ನು ನೋಡಿ, ಮದುವೆಗೆ ಒಪ್ಪಿದರಂತೆ. ಅದರಲ್ಲೂ ಅನಿಲ್ ಅವರ ತಾಯಿ ತಮ್ಮ ಒಡವೆಗಳನ್ನು ಅಡವಿಟ್ಟು ಸ್ವಾತಿ ಚಿಕಿತ್ಸೆಗೆ ಸಹಾಯ ಮಅಡಿದ್ದರಂತೆ. ಇವರ ಪತಿ ಇಂಟಿರಿಯರ್ ಡಿಸೈನರ್ ಆಗಿದ್ದು, ಈಗಲೂ ನಟಿಸುತ್ತಾರಂತೆ.

ತಂಗಿ ವಿದ್ಯಾಭ್ಯಾಸಕ್ಕೆ ಸಹಾಯ
ಇನ್ನು ಮನೆಯಲ್ಲಿ ಕಷ್ಟ ಇದ್ದ ಕಾರಣ, ಸ್ವಾತಿ ಅವರೇ ತಮ್ಮ ಸಹೋದರಿಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರಂತೆ. ಅದರಿಂದಲೇ ಅವರ ತಂಗಿ ಈಗ ವಿದೇಶದಲ್ಲಿ ನೆಲೆಸಿದ್ದಾರಂತೆ. ಈ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಎಂದು ಹೇಳುತ್ತಾರೆ. ಇನ್ನು ಅತ್ತೆಯ ಜೊತೆಗೆ ಇರುವ ಸ್ವಾತಿ ಅವರಿಗೆ ತುಂಬಾ ಸಪೋರ್ಟ್ ಮಾಡುತ್ತಾರಂತೆ. ಸದ್ಯ ಇನ್ನೂ ಇವರ ತಾಯಿ ಟೀಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ತಂದೆ ತುಂಬಾ ಬೋಲ್ಡ್ ಆಗಿದ್ದಾರಂತೆ. ಎಲ್ಲಿ ಬೇಕಾದರೂ ಯಾರ ಮುಂದೆ ಬೇಕಾದರೂ ಡ್ಯಾನ್ಸ್ ಮಾಡುತ್ತಾರಂತೆ.


Click it and Unblock the Notifications











