ಪತಿಯ ಬ್ರೈನ್ ವಾಶ್ ಮಾಡಿ ಮದುವೆಯಾದ ಸ್ವಾತಿಯ ದಾಂಪತ್ಯ ಬದುಕು ಹೇಗಿದೆ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಅಪರ್ಣಾ ಆನಂದ್ ಜೊತೆಗೆ ಅದ್ಭುತವಾಗಿ ನಟಿಸಿದ್ದು, ಆಗಾಗ ಪತಿರಾಯನನ್ನು ಗೋಳಾಡಿಸುವುದು ಎಕ್ಕರಿಗೂ ಖುಷಿ ಕೊಡುತ್ತಿದೆ. ಆನಂದ್ ಯಾವ ಹುಡುಗಿಯ ಜೊತೆಗೆ ನಗು ನಗುತಾ ಮಾತನಾಡಿದರೂ ಕೂಡ ಸಹಿಸದ ಅಪರ್ಣಾ, ತನ್ನ ಪತಿಗೆ ಹುಡುಗಿಯರ ಮೇಲೆ ಆಸೆ ಎಂದು ಭಾವಿಸಿದವಳಂತೆಯೇ ಕಿರುಚಾಡುತ್ತಾಳೆ. ಆನಂದ್ ನ ಒಂದು ದಿನವೂ ಬಿಟ್ಟಿರಲು ಬಯಸದ ಅಪರ್ಣಾಳಿಗೆ ತನ್ನ ಪತಿ ಎಷ್ಟು ಒಳ್ಳೆಯ ವ್ಯಕ್ತಿ ಎಂಬುದು ಗೊತ್ತಿದೆ. ಹಾಗಿದ್ದರೂ ಕೂಡ ಹುಡುಗಿಯರ ವಿಚಾರದಲ್ಲಿ ಗಂಡನನ್ನು ನಂಬಲು ಅಪರ್ಣಾ ನಂಬುವುದೇ ಇಲ್ಲ.


ನಿಜ ಜೀವನದಲ್ಲೂ ಕಾಮಿಡಿ ದಂಪತಿಗಳು

ಧಾರಾವಾಹಿಯಲ್ಲಿ ಸಿಂಪಲ್ ಪಾತ್ರದ ಮೂಲಕವೇ ವೀಕ್ಷಕರನ್ನು ನಗಿಸುವ ಅಪರ್ಣಾ ಅಲಿಯಾಸ್ ನಟಿ ಸ್ವಾತಿ ರಾಯಲಾ ಅವರು ನಿಜ ಜೀವನದಲ್ಲೂ ಹೀಗೇನಾ ಎಂಬ ಪ್ರಶ್ನೆ ಎಲ್ಲರಿಗೂ ಮೂಡುವುದು ಸಹಜವೇ. ಆದರೆ, ಸ್ವಾತಿ ಅವರ ದಾಂಪತ್ಯ ಜೀವನವೂ ಕಾಮಿಡಿಯಾಗಿಯೇ ಇದ್ದು, ಪತಿ-ಪತ್ನಿ ಇಬ್ಬರೂ ಅನ್ಯೋನವಾಗಿದ್ದಾರೆ. ಸ್ವಾತಿ ಮತ್ತು ಅವರ ಪತಿ ಸಂದರ್ಶನ ನೀಡಿದ್ದು, ಅದರಲ್ಲಿ ಇಬ್ಬರೂ ಕಾಮಿಡಿಯಾಗಿಯೇ ತಮ್ಮ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಸ್ವಾತಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಚಿಕ್ಕ ವಯಸ್ಸಿನಲ್ಲೇ ಚಿಗುರಿದ ಪ್ರೀತಿಗೆ ದಾಂಫತ್ಯ ಬಂಧವನ್ನು ಬೆಸೆದು ಖುಷಿಯ ಜೀವನ ನಡೆಸುತ್ತಿದ್ದಾರೆ.

Written Update on actress swathi royala-Nov 22

ಹಾಗೆ ಹುಟ್ಟಿದ ಪ್ರೀತಿ ಜೊತೆಗೆ ಸ್ವಾತಿ ಬದುಕು

ನಟಿ ಸ್ವಾತಿ ಅವರು ಪಕ್ಕದ ಮನೆಯ ಹುಡುಗ ಅನಿಲ್ ಎಂಬುವರನ್ನು ಪ್ರೀತಿಸುತ್ತಿದ್ದರು. ಅದೂ ಕೂಡ 9ನೇ ಕ್ಲಾಸ್ನಲ್ಲೇ ಲವ್ ಶುರುವಾಗಿದ್ದಂತೆ. ಅಲ್ಲಿಂದಲೇ ಶುರುವಾದ ಇವರ ಪ್ರೀತಿಗೆ ಸ್ವಾತಿ ಅವರ ಮನೆಯಲ್ಲಿ ವಿರೋಧವಿತ್ತಂತೆ. ಆದರೆ, ಸ್ವಾತಿ ಅವರಿಗೆ ಬ್ರೈನ್ ಇನ್ ಫೆಕ್ಷನ್ ಆದಾಗ ಅನಿಲ್ ಮತ್ತು ಅವರ ತಾಯಿ ಸ್ವಾತಿ ಅವರನ್ನು ಕೇರ್ ಮಾಡಿದ್ದನ್ನು ನೋಡಿ, ಮದುವೆಗೆ ಒಪ್ಪಿದರು ಎಂದು ಹೇಳಿದ್ದಾರೆ. ಅದರಲ್ಲೂ ಅನಿಲ್ ಅವರ ತಾಯಿ ತಮ್ಮ ಒಡವೆಗಳನ್ನು ಅಡವಿಟ್ಟು ಸ್ವಾತಿ ಚಿಕಿತ್ಸೆಗೆ ಸಹಾಯ ಮಾಡಿದ್ದು, ಇವರ ಪತಿ ಇಂಟಿರಿಯರ್ ಡಿಸೈನರ್ ಆಗಿದ್ದು, ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದಿದ್ದಾರೆ. ಅನಿಲ್ ಅವರಿಗೆ ನಟನೆ ಇಷ್ಟವಿದ್ದಿದ್ದರಿಂದ ಓ ಮುದ್ದು ಮನಸೇ ಧಾರಾವಾಹಿಯಲ್ಲಿ ನಟಿಸಿದ್ದಾರಂತೆ.

ಪತ್ನಿ ಬಗ್ಗೆ ಪತಿ ಹೇಳಿದ್ದೇನು..?

ಇವರ ಪತಿ ತಮ್ಮ ಬ್ರೈನ್ ವಾಶ್ ಮಾಡಿ ನನ್ನನ್ನು ಮದುವೆಯಾದಳು ಎಂದು ತಮಾಷೆ ಮಾಡಿದ್ದು, ಸ್ವಾತಿ ಅವರು ಮೊದ ಮೊದಲು ನನ್ನ ಸ್ನೇಹಿತರು ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಎಂದು ಹೇಳುತ್ತಾರೆ ಎಂದೆಲ್ಲಾ ಹೇಳುತ್ತಿದ್ದರಂತೆ. ಹೀಗೆ ತಲೆ ಕೆಡಿಸಿ ಪ್ರಪೋಸ್ ಮಾಡಿ ಮದುವೆಯಾದಳು ಎಂದು ಸಂದರ್ಶನದಲ್ಲಿ ಕಾಮಿಡಿ ಮಾಡಿದ್ದಾರೆ. ಇನ್ನು ಸ್ವಾತಿ ಅವರು 2012ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದ ಸ್ವಾತಿ ಅವರನ್ನು ಈಗಲೂ ಜನರು ವರ್ಷ ಪಾತ್ರದ ಮೂಲಕವೇ ಗುರುತಿಸುತ್ತಾರೆ. ಸುಮಾರು 1700ಸಂಚಿಕೆ ಪ್ರಸಾರವಾದ ಅಮೃತವರ್ಷಿಣಿ ಧಾರಾವಾಹಿಯು ಸ್ವಾತಿ ಅವರಿಗೆ ಒಳ್ಳೆಯ ಬ್ರೇಕ್ ಕೊಟ್ಟಿತ್ತು.

ಪರಭಾಷೆಯಲ್ಲೂ ನಟಿಸಿರುವ ನಟಿ

ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ನಟಿ ಸ್ವಾತಿ ಅವರು ನಟಿಸಿದ್ದಾರೆ. ಒರು ಊರುಲೋ ಒರು ರಾಜಕುಮಾರಿ, ಕನ್ಯಾದಾನಂ ಹಾಗೂ ಮೊದಲುಂ ಕಾದಲುಂ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಹೋದರಿಯ ವಿದ್ಯಾಭ್ಯಾಸಕ್ಕೂ ಸ್ವಾತಿ ಅವರು ಸಹಾಯ ಮಾಡಿದ್ದು, ಈಗ ಅವರ ತಂಗಿ ವಿದೇಶದಲ್ಲಿ ನೆಲೆಸಿದ್ದಾರಂತೆ. ಈ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಎಂದು ಹೇಳುತ್ತಾರೆ. ಇನ್ನು ಸ್ವಾತಿ ಅವರಿಗೆ ಅವರ ಅತ್ತೆ ಬಹಳ ಸಪೋರ್ಟ್ ಮಾಡುತ್ತಾರಂತೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X