ಕನಸು ನನಸಾಗಿಸಿಕೊಂಡ ತನಿಷಾ ಕುಪ್ಪಂಡ, ಬಿಗ್‌ ಬಾಸ್‌ ಚೆಲುವೆ ಈಗ ಲ್ಯಾಂಡ್ ರೋವರ್ ಕಾರಿನ ಒಡತಿ..!

By ಪ್ರಿಯಾ ದೊರೆ

ಬಿಗ್ ಬಾಸ್ ಮೂಲಕ ಚಿರಪರಿತರಾದ ನಟಿ ತನಿಷಾ ಕುಪ್ಪಂಡ ಅವರು ಕೆಲವೇ ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರೂ ಕೂಡ, ಸುದ್ದಿಯಾಗಿದ್ದು ಹೆಚ್ಚು. ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ ತನಿಷಾ ಅವರು ಬೆಂಕಿ ಅಂತಲೇ ಜನಪ್ರಿಯತೆ ಗಳಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೇರವಾಗಿ ಮಾತನಾಡುತ್ತಾ, ಜಗಳ ಮಾಡುತ್ತಾ ಎಲ್ಲರಿಗೂ ಚಿರಪರಿಚಿತರಾದರು. ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ತಮ್ಮದೇ ಬಿಸಿನೆಸ್ ಹೊಂದಿದ್ದ ತನಿಷಾ ಅವರು ಇದೀಗ ಮತ್ತೊಂದು ಬಿಸಿನೆಸ್ ಶುರು ಮಾಡಿದ್ದು, ಸಕ್ಸಸ್ ಫುಲ್ ಲೈಫ್ ಲೀಡ್ ಮಾಡುತ್ತಿದ್ದಾರೆ.

ಹೊಸ ಕಾರು ಖರೀದಿಸಿದ ನಟಿ

ಈ ಸಕ್ಸಸ್ ಎಂಜಾಯ್ ಮಾಡುತ್ತಿರುವ ತನಿಷಾ ಕುಪ್ಪಂಡ ಅವರು ತಮ್ಮ ಕನಸೊಂದನ್ನು ನನಸು ಮಾಡಿಕೊಂಡು ಸಂತಸ ಪಡುತ್ತಿದ್ದಾರೆ. ಇಂದು ತನಿಷಾ ಅವರು ಶೋ ರೂಂಗೆ ಹೋಗಿ ಲ್ಯಾಂಡ್ ರೋವರ್ ಡಿಸ್ಕವರಿ ಕಾರನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಅಪ್ ಲೋಡ್ ಮಾಡಿದ್ದಾರೆ. ಈ ಹೊಸ ಕಾರಿನ ಬೆಲೆ ಬರೋಬ್ಬರು 1 ಕೋಟಿ ರೂಪಾಯಿ. ಬಿಸಿನೆಸ್ ಜೊತೆಗೆ ನಟಿಸುತ್ತಾ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಸ್ಥಾನದಲ್ಲಿಟ್ಟುಕೊಂಡಿರುವ ನಟಿ ತನಿಷಾ ಅವರು ಇಂದು ಲ್ಯಾಂಡ್ ರೋವರ್ ಕಾರನ್ನು ಖರೀದಿ ಮಾಡಿ ಖುಷಿ ಪಟ್ಟಿದ್ದಾರೆ. ಕನಸು ನನಸಾದ ಸಮಯ, ಸಂತೋಷ ಹೃದಯ ತುಂಬಿದ ಸಮಯ, ಮನಸು ಕುಣಿದಾಡಿದ ಸಮಯ, ನಿಮ್ಮೆಲ್ಲರ ಪ್ರೀತಿ ಆಶೀರ್ವಾದಕ್ಕೆ ಈ ಜೀವ ವಿಸ್ಮಯ ಎಂದು ಬರೆದುಕೊಂಡಿದ್ದಾರೆ.

written-update-on-actress-tanisha-kuppanda

ನಟನೆ ಜೊತೆಗೆ ಬಿಸಿನೆಸ್

ದಂಡುಪಾಳ್ಯ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ತನಿಷಾ ಕುಪ್ಪಂಡ ಅವರು ಬಳಿಕ ಬಾಡಿಗಾರ್ಡ್, ಉಂಡೆನಾಮ, ಪೆಂಟಗನ್ ಹಾಗೂ ಪೆನ್ ಡ್ರೈವ್ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಪೆಂಟಗನ್ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿ ತನಿಷಾ ಕುಪ್ಪಂಡ ಅವರು ಸುದ್ದಿಯಾಗಿದ್ದರು. ಇನ್ನು ಮಂಗಳ ಗೌರಿ ಮದುವೆ, ಇಂತಿ ನಿಮ್ಮ ಆಶಾ, ಸತ್ಯ ಶಿವಂ ಸುಂದರಂ, ವಾರಸು ದಾರ, ಸರಯೂ, ಸಾಕ್ಷಿ, ಪ್ರೀತಿ ಎಂದರೇನು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ನಟಿ

ಕಳೆದ ವರ್ಷ ನಟಿ ತನಿಷಾ ಕುಪ್ಪಂಡ ಅವರು ಕನ್ನಡ ಬಿಗ್ ಬಾಸ್ ಸೀಸನ್ 10 ರಲ್ಲಿ ಭಾಗವಹಿಸಿದ್ದರು. 14 ವಾರಗಳು ಈ ಮನೆಯಲ್ಲಿ ಎಲ್ಲರನ್ನು ರಂಜಿಸಿದ್ದರು. ತಮ್ಮ ನೇರ ಮಾತುಗಳಿಂದಲೇ ವೀಕ್ಷಕರ ಮನ ಗೆದ್ದಿದ್ದರು. ಮಿಡ್ ನೈಟ್ ನಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದರು. ಇನ್ನು ತನಿಷಾ ಅವರು ತಮ್ಮದೇ ಆದ ಬಿಸಿನೆಸ್ ಅನ್ನು ಹೊಂದಿದ್ದಾರೆ. ಅಪ್ಪುಸ್ 93 ಕಿಚ್ಚನ್ ಎಂಬ ರೆಸ್ಟೋರೆಂಟ್ ನ ಆರ್ ಆರ್ ನಗರದಲ್ಲಿ ಹೊಂದಿರುವ ನಟಿ ತನಿಷಾ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಅವರು ಮತ್ತೊಂದು ಬಿಸಿನೆಸ್ ಆರಂಭಿಸಿದ್ದಾರೆ.

ಸಕ್ಸಸ್‌ ಫುಲ್‌ ಮಹಿಳಾ ಉದ್ಯಮಿಯಾಗಿರುವ ತನಿಷಾ

ಬೆಂಗಳೂರಿನಲ್ಲಿ ಸಿಲ್ವರ್ ಜ್ಯುವೆಲರಿ ಶಾಪ್ ಆರಂಭ ಮಾಡಿರುವ ತನಿಷಾ ಅವರು ಇದೇ ವರ್ಷ ಮಾರ್ಚ್‌ ತಿಂಗಳಿನಲ್ಲಿ ವಿಜಯನಗರದಲ್ಲಿ ಕುಪ್ಪಂಡಾಸ್‌ ಎಂಬ ಅಂಗಡಿಯನ್ನು ಅದ್ಧೂರಿಯಾಗಿ ಪ್ರಾರಂಭಿಸಿದರು. ಇದರಿಂದ ಅತೀ ಹೆಚ್ಚು ಲಾಭ ಪಡೆದ ನಟಿ ಇತ್ತೀಚೆಗಷ್ಟೇ ಬಸವೇಶ್ವರನಗರದಲ್ಲಿ ಶುರು ಮಾಡಿದ್ದಾರೆ. ಈ ಮೂಲಕ ಮಹಿಳಾ ಉದ್ಯಮಿಗಳ ಸಾಲಿಗೆ ಸೇರಿಕೊಂಡಿದ್ದಾರೆ. ಜ್ಯುವೆಲರಿ ಶಾಪ್ ಮುಂದೆ ತನ್ನದೇ ದೊಡ್ಡ ದೊಡ್ಡ ಬ್ಯಾನರ್‌ಗಳು ನಿಲ್ಲಬೇಕು ಅಂತ ಆಸೆ ಪಟ್ಟಿದ್ದರಂತೆ. ಇದು ತನಿಷಾ ಕುಪ್ಪಂಡಗೆ ಸಾಧ್ಯ ಆಗಿರಲಿಲ್ಲವಂತೆ. ಈಗ ಅವರದ್ದೇ ಜ್ಯುವೆಲರಿ ಶಾಪ್‌ ಮುಂದೆ ಆ ಬ್ಯಾನರ್‌ ನಿಂತಿದ್ದು ಆಸೆ ಈಡೇರಿದೆ ಎಂದು ಸಂತಸ ಪಟ್ಟಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X