ಬಹುಮುಖ ಪ್ರತಿಭೆ ನಟಿ ತನ್ವಿ ರಾವ್ ಮುಡಿಗೆ ಮತ್ತೊಂದು ಪ್ರಶಸ್ತಿ

By ಪ್ರಿಯಾ ದೊರೆ

ಬಹುಮುಖ ಪ್ರತಿಭೆಯಾಗಿರುವ ನಟಿ ತನ್ವಿ ರಾವ್ ತಮ್ಮ ಸಾಧನೆಯ ಮೂಲಕವೇ ಆಗಾಗ ಸುದ್ದಿಯಾಗ್ತಾನೇ ಇರುತ್ತಾರೆ.ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ತನ್ವಿ, ಇಷ್ಟು ದಿನ ವೈಷ್ಣವ್ ಲವರ್ ಆಗಿದ್ದರು. ಆದರೆ ಈಗ ನೆಗೆಟಿವ್ ಶೇಡ್ ನತ್ತ ವಾಲಿದ್ದಾರೆ.

ವೈಷ್ಣವ್ ಹಾಗೂ ಲಕ್ಷ್ಮೀ ಜೋಡಿಯನ್ನು ಒಪ್ಪದ ಕೀರ್ತಿ ಈಗ ನನ್ನ ವೈಷ್ಣವ್ ನ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮಿಬ್ಬರ ನಡುವೆ ಬಂದವರನ್ನು ಕೊಲೆ ಮಾಡಲು ಹೆದರಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.

Written Update on actress tanvi rao

ಅವಾರ್ಡ್ ಪಡೆದ ನಟಿ ತನ್ವಿ

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತನ್ವಿ ರಾವ್ ಅವರ ಕೀರ್ತಿ ಪಾತ್ರ ಬಹಳ ವಿಭಿನ್ನವಾಗಿದೆ. ಪ್ರೀತಿಯಿಂದ ಮೋಸ ಹೋಗಿ ಈಗ ಸ್ಯಾಡಿಸ್ಟ್ ಆಗುತ್ತಿರುವ ಕೀರ್ತಿ ಪಾತ್ರದಲ್ಲಿ ಎಲ್ಲಾ ಭಾವನೆಗಳೂ ಸೇರಿಕೊಂಡಿವೆ. ಒಬ್ಬರೇ ಇದೆಲ್ಲವನ್ನು ನಟಿಸಿ ತೋರಿಸುವ ಮೂಲಕ ತನ್ವಿ ಅವರು ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದಾಗ ಕೆಲವರು ಮದುವೆಯಾದವನ ಹಿಂದೆ ಬೀಳಬೇಡಿ ಎಂದು ಸಲಹೆ ಕೊಟ್ಟು, ಅವರ ಅಂದವನ್ನು ಹಾಡಿ ಹೊಗಳಿದ್ದರು. ಇದೀಗ ತನ್ವಿ ರಾವ್ ಅವರಿಗೆ ಅವಾರ್ಡ್ ಒಂದು ಸಿಕ್ಕಿದೆ. ಅಲಾಯ್ಸಿಯನ್ ಅಲುಮಿನಿ ಅವಾರ್ಡ್ ಅನ್ನು ತನ್ವಿ ಅವರು ಪಡೆದುಕೊಂಡಿದ್ದಾರೆ. ಕಲಾ ಕ್ಷೇತ್ರದಲ್ಲಿನ ತನ್ವಿ ಅವರ ಸಾಧನೆಯನ್ನು ಕಂಡು ಸೇಂಟ್ ಅಲೋಯ್ಸಿಯನ್ ಇನ್ಸ್ ಟಿಟ್ಯೂಚನ್ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಕನ್ನಡ ಕಿರುತೆರೆ ಮೂಲಕ ನಟನೆ ಆರಂಭ

ಉದಯ ಟಿವಿಯಲ್ಲಿ ಆಕೃತಿ ಎಂಬ ಧಾರಾವಾಹಿ ಪ್ರಸಾರವಾಗಿತ್ತು. ಇದು ಒಂಟಿ ಮನೆಯಲ್ಲಿರುವ ದೆವ್ವದ ಕಥೆಯನ್ನು ಆಧರಿಸಿತ್ತು. ಈ ಧಾರಾವಾಹಿಯಲ್ಲಿ ತನ್ವಿ ರಾವ್ ಅವರು ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಹಾಗಂತ ತನ್ವಿ ನಟಿಸಿದ ಮೊದಲ ಸೀರಿಯಲ್ ಆಕೃತಿಯಾಗಿದ್ದರೂ, ತನ್ವಿ ಅವರು ಮೊದಲು ಕ್ಯಾಮರಾವನ್ನು ಎದುರಿಸಿದ್ದು, ಬಾಲಿವುಡ್ ಸಿನಿಮಾ ಮೂಲಕ. ಹೌದು.. ತನ್ವಿ ರಾವ್ ಅವರು ಮೊದಲಿಗೆ ನಟಿಸಿದ್ದು, ಬಾಲಿವುಡ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ನಟನೆಯ ಗುಲಾಬ್ ಗ್ಯಾಂಗ್ ಚಿತ್ರದಲ್ಲಿ ನಟಿಸಿದ್ದರು.

ಕನ್ನಡದ ಸಿನಿಮಾದಲ್ಲೂ ನಟನೆ

ಇದಾದ ಬಳಿಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ತನ್ವಿ ರಂಗ್ ಬಿ ರಂಗಿ ಚಿತ್ರಕ್ಕೆ ಬಣ್ಣ ಹಚ್ಚಿದರು. ಇನ್ನೂ ಕೆಲ ಸಿನಿಮಾಗಳು ಕೈಯಲ್ಲಿದ್ದು, ಅಧಿಕೃತವಾಗಿ ಘೋಷಣೆಯಾಗಬೇಕಿದೆ. ತನ್ವಿ ರಾವ್ ಅವರು ಆಕೃತಿ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಸ್ಟಾರ್ ಸುವರ್ಣವಾಹಿನಿಯಲ್ಲಿ ಮೂಡಿ ಬಂದ ರಾಧೆ ಶ್ಯಾಮ ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿ ಮುಗಿಯುತ್ತಿದ್ದಂತೆ ತಮಿಳಿನ ಜಮೀಲ ಎಂಬ ಸೀರಿಯಲ್ ನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ನಟಿಸಿದ್ದು, ಸಿಂಗರ್ ಆಗಿ ಕಾಣಿಸಿಕೊಂಡಿದ್ದಾರೆ.

Written Update on actress tanvi rao

ವಿವಿಧ ನೃತ್ಯ ಕಲಾವಿದೆ ತನ್ವಿ ರಾವ್

ಇಷ್ಟೇ ಅಲ್ಲದೇ, ಹಿಂದಿಯ ಗುಲ್ಮೊಹರ್ ಸಿನಿಮಾದಲ್ಲೂ ದೀಪಿಕಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತನ್ವಿ ರಾವ್ ಭರತನಾಟ್ಯ ಕಲಾವಿದೆಯಾಗಿದ್ದು, ಅದಾಗಲೇ 6ಕ್ಕಿಂತ ಹೆಚ್ಚು ಅಂತರಾಷ್ಟೀಯ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ. ಭರತನಾಟ್ಯ ಜೊತೆಗೆ ತನ್ವಿ ರಾವ್ ಅವರು ಕಥಕ್, ಒಡಿಸಾ ಹಾಗೂ ಸೆಮಿ ಕ್ಸಾಸಿಕಲ್ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ. ಅಪೂರ್ವ ಬಾಲಪ್ರತಿಭೆ ಪ್ರಶಸ್ತಿ ಪಡೆದಿದ್ದ ತನ್ವಿ ರಾಜ್ಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

More from Filmibeat

English summary
bhagyalakshmi serial actress tanvi rao got new award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X