ತೆಲುಗು ಚಿತ್ರರಂಗದ ಪಾಲಾದ ಮತ್ತೊಬ್ಬ ಕನ್ನಡದ ನಾಯಕಿ...!

By ಪ್ರಿಯಾ ದೊರೆ

ಬದುಕಿನಲ್ಲಿ ಕಂಡ ಕನಸು ನನಸು ಮಾಡಿಕೊಳ್ಳಲು ಸಾಕಷ್ಟು ಪರಿಶ್ರಮವಿರಬೇಕು. ಜೊತೆಗೆ ಎಷ್ಟೇ ಕಷ್ಟಗಳು ಬಂದರೂ ಕುಗ್ಗದೇ ಎದುರಿಸುವ ಧೈರ್ಯವಿರಬೇಕು.ಕಷ್ಟಗಳು ಕಳೆಯುವ ಹೊತ್ತಿಗೆ ಗೆಲುವು ತಾನಾಗಿಯೇ ಹಿಂಬಾಲಿಸುತ್ತದೆ. ಒಮ್ಮೆ ಗೆದ್ದ ಮೇಲೆ ಮೇಲಿಂದ ಮೇಲೆ ಸಾಧನೆಗಳ ಸರಮಾಲೆಯನ್ನೇ ಪೋಣಿಸಿಕೊಳ್ಳವಷ್ಟು ಗೆಲ್ಲಬಹುದು.ಇದಕ್ಕೆ ನಿದರ್ಶನ ಎಂದರೆ ನಟಿ ತನ್ವಿಯಾ ಬಾಲರಾಜ್. ಒಂದು ಸಮಯದಲ್ಲಿ ಕಷ್ಟಪಡುತ್ತಿದ್ದ ತನ್ವಿಯಾ ಇಂದು ಪರಭಾಷೆಯಲ್ಲೂ ಬೇಡಿಕೆಯ ನಟಿಯಾಗಿದ್ದಾರೆ.

ಕಷ್ಟದ ಬದುಕಿನಲ್ಲಿ ನರಳಿದ್ದ ನಟಿ

ಹೌದು, ನಟಿ ತನ್ವಿಯಾ ಬಾಲರಾಜ್ ಎಂದರೆ ಎಲ್ಲರಿಗೂ ಗುರುತು ಸಿಗಲಿಕ್ಕಿಲ್ಲ. ಅದೇ ಆರಾಧನಾ ಎಂದರೆ ಎಲ್ಲರೂ ತಿರುಗಿ ನೋಡುತ್ತಾರೆ. ಕಳೆದ ವರ್ಷವಷ್ಟೇ ಮುಕ್ತಾಯಗೊಂಡ ಅಂತರಪಟ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದ ಆರಾಧನಾಳೇ ತನ್ವಿಯಾ ಬಾಲರಾಜ್. ಮಂಡ್ಯದ ಹುಡುಗಿಯಾಗಿರುವ ತನ್ವಿಯಾ ಅವರು ಮಿಡಲ್ ಕ್ಲಾಸ್ ಕುಟುಂಬದಿಂದ ಬಂದವರು. ಬಿಕಾಂ ಓದಿರುವ ತನ್ವಿಯಾ ಅವರಿಗೆ ನಟಿಯಾಗುವ ಆಸೆ ಇತ್ತಂತೆ. ಇವರ ತಂದೆ ಕಂಟ್ರ್ಯಾಕ್ಟರ್ ಆಗಿಯೂ, ತಾಯಿ ಹೂವು ಮಾರುತ್ತಲೂ ಬದುಕು ನಡೆಸುತ್ತಿದ್ದರಂತೆ. ನಟಿಯಾಗುವ ಕನಸನ್ನು ನನಸು ಮಾಡಿಕೊಳ್ಳುವ ಮುನ್ನ ಡ್ಯಾನ್ಸರ್ ಆಗಿದ್ದ ತನ್ವಿಯಾ ಅವರು ಕಲರ್ಸ್ ವಾಹಿನಿಯ ಕಾರ್ಯಕ್ರಮಗಳಿಗೆ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದರು.

written update on Actress Thanviya balaraj

ಒಲಿದು ಬಂದ ಅದೃಷ್ಟ

ಅದೊಂದು ದಿನ ಅಚಾನಕ್ ಆಗಿ ಗಿಣಿರಾಮ ಸೀರಿಯಲ್ ಸಂತೆಯ ಕಾರ್ಯಕ್ರಮಕ್ಕಾಗಿ ಡ್ಯಾನ್ಸ್ ಹೇಳಿಕೊಡುವಾಗ ಅದೃಷ್ಟದ ಬಾಗಿಲು ತೆರೆದಿತ್ತು. ಅಂತರಪಟ ಧಾರಾವಾಹಿಯ ಆಡಿಷನ್ ಗೆ ಬರುವಂತೆ ಕರೆಯೋಲೆ ಸಿಕ್ಕಿತ್ತು. ಅವಕಾಶವನ್ನು ಕೈ ಬಿಡದ ನಟಿ ತನ್ವಿಯಾ ಅವರು ಆಡಿಷನ್ ಕೊಟ್ಟು ಧಾರಾವಾಹಿಯ ನಾಯಕಿಯಾಗಿ ಸೆಲೆಕ್ಟ್ ಆಗಿಯೇ ಬಿಟ್ಟಿದ್ದರು. ಧಾರಾವಾಹಿ ಪ್ರಸಾರವಾದಾಗ ತನ್ವಿಯಾ ಅವರ ನಟನೆಯನ್ನು ಮೆಚ್ಚಿದ ವೀಕ್ಷಕರು ಬಾಚಿ ತಬ್ಬಿದ್ದರು. ಇಂದಿಗೂ ಕನ್ನಡಿಗರು ಆರಾಧನಾ ಪಾತ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆಗಾಗ ಕಲರ್ಸ್ ವಾಹಿನಿಯ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಅಂತರಪಟ ಪಾರ್ಟ್-2 ಧಾರಾವಾಹಿಯನ್ನು ನಿರ್ದೇಶಿಸುವಂತೆ ಕೇಳುತ್ತಲೇ ಇರುತ್ತಾರೆ.


ತೆಲುಗು ಅಂಗಳದಲ್ಲಿ ನಟಿ ತನ್ವಿಯಾ ಬಾಲರಾಜ್

ಆದರೆ, ನಟಿ ತನ್ವಿಯಾ ಅವರು ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೌದು, ನಟಿ ತನ್ವಿಯಾ ಬಾಲರಾಜ್ ಅವರಿಗೆ ತೆಲುಗಿನ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಎನ್ನೆಲ್ಲೋ ವೆಚ್ಚಿನ ಹೃದಯಂ ಎಂಬ ತೆಲುಗು ಧಾರಾವಾಹಿಯಲ್ಲಿ ನಟಿ ತನ್ವಿಯಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಗೆ ನಟ ಚಂದು ಗೌಡ ಅವರು ನಾಯಕನಾಗಿ ನಟಿಸಿದ್ದಾರೆ. ನಾಯಕನಿಗೆ ವಯಸ್ಸಾಗಿದ್ದರೂ ಬುದ್ಧಿ ಮಾತ್ರ ಮಗುವಿನಂತೆ ಇದ್ದು, ಚಿಕ್ಕವರ ಜೊತೆಗೆ ಯೂನಿಫಾರ್ಮ್ ಧರಿಸಿ ಶಾಲೆಗೆ ತೆರಳುತ್ತಾನೆ. ಕಷ್ಟದ ಬದುಕು ನಡೆಸುತ್ತಿರುವ ನಾಯಕಿಗೆ ಹಣದ ಅವಶ್ಯಕತೆ ಇದ್ದು ನಾಯಕನನ್ನು ಮದುವೆಯಾಗುವ ಸಂದರ್ಭ ಒದಗಿ ಬಂದಿದೆ. ಜೊತೆಗೆ ನಾಯಕಿಯೇ ನಾಯಕನ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ನಾಯಕ ಬದುಕನ್ನು ಹಸನಾಗಿಸುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ. ಈ ಧಾರಾವಾಹಿಯು ಮುಂದಿನ ಸೋಮವಾರದಿಂದ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ.


ಸಾಧನೆಯ ಹಾದಿಯಲ್ಲಿ ತನ್ವಿಯಾ

ಇನ್ನು ನಟಿ ತನ್ವಿಯಾ ಅವರು ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ನೆಲೆಸಲು ಕಷ್ಟಪಡಬೇಕಿತ್ತು. ಚಿಕ್ಕ ಅಕ್ಕನ ಮನೆಯಲ್ಲಿ ನೆಲೆಸಿದ್ದಾಗ ಭಾವ ನಿತ್ಯ ಬೈಯುತ್ತಿದ್ದರಂತೆ. ಒಮ್ಮೆ ಬೈಗುಳ ಕೇಳಲಾರದೇ ಮಧ್ಯರಾತ್ರಿಯೇ ಮನೆ ಬಿಟ್ಟು ಬಂದಿದ್ದರಂತೆ. ಮನೆಯಲ್ಲಿ ತನ್ವಿಯಾ ಅವರು ಡ್ಯಾನ್ಸ್ ಮಾಡುವುದನ್ನು ಇಷ್ಟಪಡುತ್ತಿರಲಿಲ್ಲವಂತೆ. ಮಧ್ಯರಾತ್ರಿ ಮನೆಗೆ ಬರುವುದಕ್ಕೆ ಬೈಗುಳ ಸಿಗುತ್ತಿತ್ತಂತೆ. ಆದರೆ ಈಗ ನಟಿ ತನ್ವಿಯಾ ಅವರು ಜನಿಸಿದ ಊರು ಬಿಟ್ಟು ದೂರದ ಊರಿನಲ್ಲೂ ತಮ್ಮ ನಟನಾ ಗಂಧವನ್ನು ಸೂಸಿದ್ದು, ಸದ್ಯ ದೊಡ್ಡ ಅಕ್ಕನ ಮನೆಯಲ್ಲಿ ನೆಲೆಸಿದ್ದಾರಂತೆ. ಕಷ್ಟದಲ್ಲಿದ್ದ ತನ್ವಿಯಾ ಅವರಿಗೆ ಗೆಲುವಿನ ಬಾಗಿಲು ತೆರೆದುಕೊಂಡಿದೆ. ಇನ್ನೇನಿದ್ದರೂ ಸಾಧನೆಯ ಮಾಲೆಯನ್ನು ಧರಿಸಿಕೊಳ್ಳುವುದಷ್ಟೇ ಬಾಕಿ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X