Vaishnavi Gowda ಸ್ಕೂಲ್ ಗರ್ಲ್ ಲುಕ್ ನಲ್ಲಿ ಮುದ್ದಾಗಿ ಕಾಣುತ್ತಿರುವ ನಟಿ ವೈಷ್ಣವಿ ಗೌಡ

By ಪ್ರಿಯಾ ದೊರೆ

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಚಿರಪರಿಚಿತಳಾದ ನಟಿ ವೈಷ್ಣವಿ ಗೌಡ ಅವರು ಇಂದು ಸೀತಾ ಆಗಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ನಟಿ ವೈಷ್ಣವಿ ಗೌಡ ಅವರು ಭರತನಾಟ್ಯಂ, ಕುಚುಪುಡಿ, ಬೆಲ್ಲಿ ಡ್ಯಾನ್ಸ್ ಕೂಡ ಕರಗತ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವೈಷ್ಣವಿ ಗೌಡ ಹಾಡನ್ನು ಕೂಡ ಹಾಡುತ್ತಾರೆ.ಸದಾ ಅಭಿಮಾನಿಗಳನ್ನು ರಂಜಿಸಲು ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ಒಂದು ಮಾಡುತ್ತಲೇ ಇರುತ್ತಾರೆ. ಒಂದೊಂದು ಬಾರಿ ಒಂದೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಸ್ಕೂಲ್ ಗರ್ಲ್ ಲುಕ್ ನಲ್ಲಿ ವೈಶೂ

ಇದೀಗ ನಟಿ ವೈಷ್ಣವಿ ಗೌಡ ಅವರು ಸ್ಕೂಲ್ ಯೂನಿಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯೂನಿಫಾರ್ಮ್ ಧರಿಸಿ ಶಾಲೆಯ ದಿನಗಳೇ ಬೆಸ್ಟ್ ಎಂದಿರುವ ವೈಷ್ಣವಿ ಅವರು ಮುದ್ದಾಗಿ ಕಾಣುತ್ತಿದ್ದಾರೆ. ನೀಲಿ ಮತ್ತು ಬಿಳಿ ಬಣ್ಣದ ಟೈ, ಸ್ಕರ್ಟ್ ಧರಿಸಿ, ಎರಡು ಜುಟ್ಟು ಕಟ್ಟಿಕೊಂಡು ಕ್ಯೂಟ್ ಕ್ಯೂಟ್ ಆಗಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಇದರ ಫೋಟೋಗಳನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದು, ವೈಷ್ಣವಿ ಅವರು ಮುದ್ದಾದ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಮುದ್ದಾದ ಗೊಂಬೆ, ಕ್ಯೂಟ್ ಸ್ಕೂಲ್ ಗರ್ಲ್ ಎಂದೆಲ್ಲಾ ಕಮೆಂಟ್ ಗಳನ್ನು ಮಾಡಿದ್ದಾರೆ.

written update on actress vaishnavi gowda

ಅಭಿಮಾನಿಗಳೊಂದಿಗೆ ಸಂಪರ್ಕ

ನಟಿ ವೈಷ್ಣವಿ ಗೌಡ ಅವರ ಅಭಿಮಾನಿಗಳ ಬಳಗ ಬಹಳ ದೊಡ್ಡದಾಗಿದೆ. ಇನ್ ಸ್ಟಾಗ್ರಾಂ ಪೇಜ್ ನಲ್ಲಿ 1.4 ಮಿಲಿಯನ್ ಫಾಲೋವರ್ಸ್ ಗಳನ್ನು ವೈಷ್ಣವಿ ಗೌಡ ಅವರು ಹೊಂದಿದ್ದಾರೆ. ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುವ ವೈಷ್ಣವಿ ಗೌಡ ಅವರು, ಆಗಾಗ ಐಕಾನಿಕ್ ಲುಕ್ ಗಳನ್ನು ರಿಕ್ರಿಯೇಟ್ ಮಾಡಿ, ವೀಡಿಯೋ ಅಪ್ ಲೋಡ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಾಡು ಹೇಳುವುದು, ಕಥೆ ಹೇಳಿ ನಗಿಸುವುದು, ಪ್ರಶ್ನೆಗಳನ್ನು ಕೇಲಿ ತಲೆಗೆ ಹುಳ ಬಿಡುವ ಕೆಲಸವನ್ನು ಮಾಡುತ್ತಿರುತ್ತಾರೆ. ಪೋಲಿ ಮಾತುಗಳನ್ನಾಡುತ್ತಾ, ವೈಷ್ಣವಿ ಹೀಗೂ ಮಾತನಾಡುತ್ತಾರಾ ಎಂದು ವೀಕ್ಷಕರನ್ನು ಅಚ್ಚರಿಗೊಳಿಸಿದ್ದೂ ಇದೆ.

ವೈಷ್ಣವಿ ಅವರ ಬಣ್ಣದ ಪಯಣ

ದೇವಿ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ವೈಷ್ಣವಿ ಗೌಡ ಅವರು ಪುನರ್ ವಿವಾಹ ಹಾಗೂ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇನ್ನು ರಿಯಾಲಿಟಿ ಶೋಗಳಾದ ಕುಣಿಯೋಣು ಬಾರಾ ಹಾಗೂ ಬಿಗ್ ಬಾಸ್ ಸೀಸನ್ 8ಲ್ಲಿ ಭಾಗವಿಸಿದ್ದಾರೆ. ಸದ್ಯ ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಪಾತ್ರದ ಮೂಲಕ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ. ಗಿರಗಿಟ್ಲೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ವೈಷ್ಣವಿ ಭಲೇ ಹುಚ್ಚ, ಬಹುಕೃತ ವೇಷಂ ಎಂಬ ಸಿನಿಮಾಗಳಲ್ಲೂ ನಟಿಸಿದ್ದಾರೆ.

written update on actress vaishnavi gowda

ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ

ವೈಷ್ಣವಿ ಗೌಡ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದು, ತಮ್ಮ ಡೈಲಿ ರೋಟಿನ್, ವರ್ಕೌಟ್, ಯೋಗ, ಅಡುಗೆ, ಶಾಪಿಂಗ್ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇನ್ನು ನಟಿ ವೈಷ್ಣವಿ ಅವರು ಬಳಸುವ ಮೇಕಪ್, ಸ್ಟೈಲ್, ಕಾಸ್ಟ್ಯೂಮ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೇವರನ್ನು ನಂಬುವ ವೈಷ್ಣವಿ ಅವರು ಆಗಾಗ ವ್ರತ ಹಾಗೂ ಉಪವಾಸ ಮಾಡುತ್ತಾರೆ. ಇನ್ನು ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ತಾಯಿ ಪಾತ್ರದಲ್ಲಿ ಮಿಂಚುತ್ತಿದ್ದು, ಮಗಳಿಗಾಗಿ ತಾಯಿ ಏನೆಲ್ಲಾ ಕಷ್ಟ ಪಡಬೇಕಾಗುತ್ತದೆ. ಹಣಕ್ಕೋಸ್ಕರ ಬಾಡಿಗೆ ತಾಯಿ ಆಗಿ, ಕೊನೆಗೆ ಆ ಮಗುವನ್ನು ಸಾಕುವ ಹೊಣೆ ಹೊತ್ತ ಸೀತಾ ಸಮಾಜವನ್ನು ಹೇಗೆ ಎದುರಿಸಿ ನಿಲ್ಲುತ್ತಾಳೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥೆ. ಇದರೊಂದಿಗೆ ಈಗಾಗಲೇ ಮಗಳಿರುವ ಸೀತಾಳನ್ನು ಒಪ್ಪಿ ಮದುವೆಯಾಗುವ ರಾಮ್ ಪ್ರೇಮ ಕಥೆಯೂ ಬೆರತುಕೊಂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X