BBK 11 ; ಯಮುನಾ ಶ್ರೀನಿಧಿ ಅವರ ಎಲಿಮಿನೇಶನ್ ಎಷ್ಟು ಸರಿ..? ಹೀಗೊಂದು ಪ್ರಶ್ನೆ ಹುಟ್ಟು ಹಾಕಿದ ನೆಟ್ಟಿಗರು..!
ಬಿಗ್ ಬಾಸ್ ಸೀಸನ್ 11 ರಲ್ಲಿ ಭಾಗವಹಿಸಿ, ಎರಡನೇ ಕಂಟೆಸ್ಟೆಂಟ್ ಆಗಿ ಮನೆಗೆ ಎಂಟ್ರಿ ಕೊಟ್ಟಿದ್ದ ನಟಿ ಯಮುನಾ ಶ್ರೀನಿಧಿ ಅವರು ಮೊದಲು ಎಲಿಮಿನೇಟ್ ಆಗಿ ಒಂದೇ ವಾರಕ್ಕೆ ಹೊರ ಬಂದಿದ್ದಾರೆ. ನಟಿ ಯಮುನಾ ಶ್ರೀನಿಧಿ ಅವರ ಎಲಿಮಿನೇಶನ್ ನ ನೆಟ್ಟಿಗರು ಒಪ್ಪಿಕೊಂಡಿಲ್ಲ. ಮೊದಲ ವಾರವೇ ನಟಿ ಯಮುನಾ ಅವರು ಹೊರ ಬರಬಾರದಿತ್ತು. ನಟಿ ಯಮುನಾ ಶ್ರೀನಿಧಿ ಅವರು ಒಳ್ಳೆಯ ಆಟಗಾರ್ತಿ. ಬಿಗ್ ಬಾಸ್ ಮನೆಗೆ ಕರೆಕ್ಟ್ ಆದ ಕಂಟೆಸ್ಟೆಂಟ್ ಎಂಬುದು ಹಲವು ನೆಟ್ಟಿಗರ ಮಾತುಗಳು. ಹೀಗಾಗಿ ಯುಮುನಾ ಅವರು ಔಟ್ ಆಗಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಯಮುನಾ ಎಲಿಮಿನೇಟ್
ಯಮುನಾ ಶ್ರೀನಿಧಿ ಅವರು ಮೊದಲ ವಾರವೇ ಎಲಿಮಿನೇಟ್ ಆಗಬಾರದಿತ್ತು. ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಎಲ್ಲಾ ಕ್ವಾಲಿಟೀಸ್ ಇತ್ತು. ಬಿಗ್ ಬಾಸ್ ಮನೆಯಲ್ಲಿ ಬೋರಿಂಗ್ ಆಗಿದ್ದವರು ಹಾಗೂ ವೇಸ್ಟ್ ಆಗಿರುವವರು ಇನ್ನಷ್ಟು ಮಂದಿ ಇದ್ದಾರೆ. ಅವರನ್ನು ಎಲಿಮಿನೇಟ್ ಮಾಡಬಹುಯದಿತ್ತು. ಆದರೆ, ನಟಿ ಯಮುನಾ ಅವರು ಔಟ್ ಆಗಿದ್ದು ಸರಿಯಿಲ್ಲ. ಅವರ ದುರಾದೃಷ್ಟವೆಂಬಂತೆ ಮನೆಯಿಂದ ಒಂದೇ ವಾರಕ್ಕೆ ಹೊರ ಬಂದಿದ್ದಾರೆ ಎಂದು ನೆಟ್ಟಿಗರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಇನ್ನೂ ಕೆಲವರು, ಕಮೆಂಟ್ ಬಾಕ್ಸ್ ಗಳಲ್ಲಿ ನಿಜವಾಗಲೂ ಎಲಿಮಿನೇಟ್ ಆಗಿದ್ದೀರಾ..? ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೂ ಕೆಲವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಯಮುನಾ ಅವರು ಮತ್ತೆ ಬಿಗ್ ಬಾಸ್ ಮನೆಗೆ ಬರಲಿ ಎಂದು ಬಯಸಿದ್ದಾರೆ.

ಬೇಸರ ವ್ಯಕ್ತಪಡಿಸಿದ ನೆಟ್ಟಿಗರು
ನಟಿ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆಗಿ ಒಂದು ವಾರ ಕಳೆದರೂ ಕೂಡ ಅವರ ಅಭಿಮಾನಿಗಳು ಇನ್ನೂ ಬೇಸರ ಪಟ್ಟುಕೊಂಡಿದ್ದಾರೆ. ಟ್ರೋಲ್ ಫೇಜ್ ಗಳು ಕೂಡ ಯಮುನಾ ಅವರು ಒಂದೇ ವಾರಕ್ಕೆ ಎಲಿಮಿನೇಟ್ ಆಗಿದ್ದಕ್ಕೆ ಶಾಕ್ ಆದಂತಹ ಪೋಸ್ಟ್ ಗಳನ್ನು ಹಾಕುತ್ತಿವೆ. ಸಿಕ್ಕಂತಾ ಒಂದೇ ವಾರದಲ್ಲಿ ಯಮುನಾ ಅವರು ಉತ್ತಮ ಪ್ರದರ್ಶನ ಕೊಟ್ಟರು. ಯಮುನಾ ಅವರ ಎಲಿಮಿನೇಷನ್ ಶಾಕಿಂಗ್ ಆಗಿದೆ ಎಂದು ಟ್ರೋಲ್ ಪೇಜ್ ಗಳಲ್ಲಿ ಪೋಸ್ಟರ್ ಹರಿದಾಡುತ್ತಿವೆ. ಇನ್ನು ವೋಟ್ ಮಾಡೋಣ ಎಂದು ಹೋದರೆ ಅಷ್ಟರಲ್ಲಿ ಯಮುನಾ ಅವರು ಎಲಿಮೆನೇಟ್ ಆಗಿದ್ದರು ಎಂದು ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ.
ಬೆಸ್ಟ್ ಆಟಗಾರ್ತಿ ಎಂದ ಅಭಿಮಾನಿಗಳು
ಯಮುನಾ ಅವರು ಎಲಿಮಿನೇಟ್ ಆಗಿದ್ದನ್ನು ಹೆಚ್ಚು ಜನ ಒಪ್ಪಿಕೊಂಡಿಲ್ಲ. ಆದರೆ, ಯಮುನಾ ಅವರು ಎಲಿಮಿನೇಟ್ ಆಗಿರುವುದಂತೂ ಸತ್ಯ. ಇನ್ನು ನಟಿ ಯಮುನಾ ಶೀನಿಧಿ ಸದ್ಯ ಕನ್ನಡ ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಟಿ. ವಯಸ್ಸಿಗೂ ಮೀರಿದ ಪಾತ್ರಗಳಲ್ಲಿ ಯಮುನಾ ಶ್ರೀನಿಧಿ ಕಾಣಿಸಿಕೊಳ್ಳುತ್ತಿರುತ್ತಾರೆ. ಭರತನಾಟ್ಯ ಕಲಾವಿದೆ ಆಗಿರುವ ಯಮುನಾ ಅವರು ತಮ್ಮ ಬಿಡುವಿನ ವೇಳೆಯಲ್ಲಿ ನಟನೆಯಲ್ಲಿ ಭಾಗವಹಿಸುವ ಇವರು, ಸದಾ ಸಮಾಜ ಸೇವೆಯಲ್ಲಿ ಮುಂದಿರುತ್ತಾರೆ.

ಅಭಿಮಾನಿಗಳ ಮನದಲ್ಲಿ ಉಳಿದ ನಟಿ
ಇನ್ನು ನಟಿ ಯಮುನಾ ಶ್ರೀನಿಧಿ ಅವರು ಅಮೆರಿಕದಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. 12 ವರ್ಷಗಳ ಕಾಲ ಅಮೆರಿಕಾದಲ್ಲಿ ಇದ್ದು, ಭರತನಾಟ್ಯ ಹೇಳಿಕೊಟ್ಟಿದ್ದರು. ಬಳಿಕ ಭಾರತಕ್ಕೆ ಬಂದ ಯಮುನಾ ಅವರು ಆನ್ ಲೈನ್ ನಲ್ಲಿ ಇಂದಿಗೂ ಅಮೆರಿಕಾ ವಿದ್ಯಾರ್ಥಿಗಳಿಗೆ ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಇದರೊಂದಿಗೆ ನಟನೆ, ರಂಗಭೂಮಿ ಸೇರಿದಂತೆ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಬಿಗ್ ಬಾಸ್ ಮನೆಯಿಂದ ಯಮುನಾ ಅವರು ಔಟ್ ಆಗಿದ್ದರೂ ಕೂಡ ಅಭಿಮಾನಿಗಳ ಮನದಲ್ಲಿ ಉಳಿದುಕೊಂಡಿದ್ದಾರೆ.


Click it and Unblock the Notifications











