ಮದುವೆಯ ಬಗ್ಗೆ ಮಾತನಾಡಿದ ಬಿಗ್ ಬಾಸ್ ಮನೆ ಮಗಳು ಐಶ್ವರ್ಯ ಸಿಂಧೋಗಿ..!

By ಪ್ರಿಯಾ ದೊರೆ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಕರುನಾಡಿನ ಜನತೆಯ ಮನ ಗೆದ್ದ ನಟಿ ಐಶ್ವರ್ಯ ಅವರು ಇದೀಗ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯನ್ನು ತವರು ಮನೆ ಎಂದು ಭಾವಿಸಿದ ಐಶ್ವರ್ಯ ಅವರು ಇದೇ ಮೊದಲ ಬಾರಿಗೆ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಐಶ್ವರ್ಯ ಅವರ ಮೇಲೆ ಅಭಿಮಾನಿಗಳ ಕಾಳಜಿ ಹೆಚ್ಚಾಗಿದೆ. ಪೋಷಕರಿಲ್ಲದೇ ಒಂಟಿಯಾಗಿರುವ ಐಶ್ವರ್ಯ ಅವರಿಗೆ ಇಡೀ ಕರುನಾಡೇ ಜೊತೆಗಿದೆ ಎಂದು ಹೇಳಿದೆ.

ಭಾವಿ ಪತಿ ಹೇಗಿರಬೇಕು.

ಬಿಗ್ ಬಾಸ್ ಮನೆಯಿಂದ ಬಂದಾಗಿನಿಂದ ಐಶ್ವರ್ಯ ಅವರು ಸಾಕಷ್ಟು ಸಂದರ್ಶನಗಳನ್ನು ನೀಡಿದ್ದು, ಅವರ ಮದುವೆಯ ಬಗ್ಗೆಯೂ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದಕ್ಕೆ ಮೊದಲ ಬಾರಿಗೆ ಉತ್ತರಿಸಿರುವ ನಟಿ ಐಶ್ವರ್ಯ ಸಿಂಧೋಗಿ ಅವರು ಸದ್ಯಕ್ಕಂತೂ ಮದುವೆಯಾಗುವ ಯೋಚನೆ ಇಲ್ಲ. ಆದರೆ, ಒಳ್ಳೆಯ ಗುಣಗಳಿರುವ ಹುಡುಗ ಹಾಗೂ ತನ್ನನ್ನು ಕಾಳಜಿ ಮಾಡುವವ ಸಿಗಬೇಕು. ಅಲ್ಲದೇ, ಗೌರವ ಕೊಡುವವನಾಗಿರಬೇಕು. ಅಂತಹ ಹುಡುಗ ಸಿಕ್ಕರೆ ಮದುವೆಯಾಗುವೆ ಎಂದು ಹೇಳಿದ್ದಾರೆ.

written update on Aishwarya Shindogi Marriage Plans

ಬಿಗ್ ಬಾಸ್ ಮನೆ ಮಗಳು ಐಶ್ವರ್ಯ

ಇನ್ನು ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸಿದ್ದ ಐಶ್ವರ್ಯ ಸಿಂಧೋಗಿ ಅವರು ಕರುನಾಡಿನ ಜನರ ಮನ ಗೆದ್ದಿದ್ದಾರೆ. ಐಶ್ವರ್ಯಾ 90 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ಬಿಗ್ ಬಾಸ್ ಕಳೆದ ಹನ್ನೊಂದು ಸೀಸನ್ ಗಳಲ್ಲಿ ಇದೇ ಮೊದಲ ಬಾರಿಗೆ ಮನೆಯಿಂದ ಹೊರ ಬಂದ ಸ್ಪರ್ಧಿ ಒಬ್ಬರಿಗೆ ಭಾವನಾತ್ಮಕ ವಿದಾಯವನ್ನು ಹೇಳಿದ್ದರು. ಮೊದಲ ಬಾರಿಗೆ ಸ್ಫರ್ಧಿಯಾಗಿ ಬಂದ ಐಶ್ವರ್ಯ ಅವರನ್ನು ಮಗಳು ಎಂದು ಕರೆದ ಬಿಗ್ ಬಾಸ್ ಪತ್ರದ ಮೂಲಕ ಎಲಿಮಿನೇಟ್ ಮಾಡಿದ್ದರು. ಪ್ರೀತಿಯ ಐಶ್ವರ್ಯಾ, 13 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಜೀವಿಸಿದ್ದು ಖುಷಿ ಹೌದು. ಆದರೆ, ನಗು, ದುಃಖ, ಕೋಪ, ತುಂಟಾಟ ಹೀಗೆ ಎಲ್ಲಾ ಭಾವನೆಗೂ ಸಾಕ್ಷಿಯಾದ ಮನೆಯಿಂದ ನಿಮ್ಮನ್ನು ಕಳುಹಿಸಿಕೊಡಲು ತುಸು ಬೇಸರವಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. ಆಗ ಐಶ್ವರ್ಯ ಅವರು ಇದು ನನ್ನ ತವರು ಮನೆ ಎಂದು ಹೇಳಿದ್ದರು.


ಸಿನಿಮಾ ಮೂಲಕ ನಟನೆಗೆ ಎಂಟ್ರಿ

ನಟಿ ಐಶ್ವರ್ಯ ಸಿಂಧೋಗಿ ಅವರು ಕೇವಲ ಧಾರಾವಾಹಿಗಳಲ್ಲಿ ಮಾತ್ರವಲ್ಲದೇ, ಸಿನಿಮಾಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಐಶ್ವರ್ಯ ಸಿಂಧೋಗಿ ಅವರು ನಟನೆಗೆ ಬಂದಿದ್ದು, ಸೃಜನ್ ಲೋಕೇಶ್ ಅವರ ನಟನೆಯ ಸಿನಿಮಾ ಸಪ್ನೋಂಕಿ ರಾಣಿ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ಇದಾದ ಬಳಿಕ ಸಿಂಹಾದ್ರಿ, ಮಟಾಷ್, ಸಂಯುಕ್ತ 2, ಡಾರ್ಕ್ ಕಾಮಿಡಿ, ಯಾರು ಯಾರು ನೀ ಯಾರು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.


ಸಿನಿಮಾ, ಧಾರಾವಾಹಿಗಳಲ್ಲಿ ಬ್ಯುಸಿ

ಸಿನಿಮಾ ಲೋಕದಿಂದ ಐಶ್ವರ್ಯ ಅವರು ಕಿರುತೆರೆಗೆ ಎಂಟ್ರಿಕೊಟ್ಟಿದ್ದು. ಮಂಗಳಗೌರಿ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ನಾಗಿಣಿ-2 ಧಾರಾವಾಹಿಯಲ್ಲಿ ನಟಿಸಿ ಚಿರಪರಿಚಿತರಾದರು. ಬಳಿಕ ನಮ್ಮ ಲಚ್ಚಿ ಧಾರಾವಾಹಿಯಲ್ಲಿಯೂ ನಟಿಸಿದರು. ಸದ್ಯ ಶಾಂಭವಿ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಡಿಫರೆಂಟ್ ಉಡುಗೆಗಳಲ್ಲಿ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಐಶ್ವರ್ಯ ಸಿಂಧೋಗಿ ಅವರು ಶಾಲಾ ಕಾಲೇಜು ದಿನಗಳಿಂದಲೂ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರು. ರಾಜ್ಯಮಟ್ಟದ ಹಾಕಿ ಆಟಗಾರ್ತಿಯಾಗಿದ್ದರು. ಡಿಫರೆಂಟ್ ಆಗಿ ಕಾಸ್ಟ್ಯೂಮ್ ಗಳಲ್ಲಿ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಕಾಶ್ಮಿರಿ ಸ್ಟೈಲ್ ನಿಂದ ಹಿಡಿದು ದೇವಿ ಅವತಾರದಲ್ಲೂ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

More from Filmibeat

Read more about: filmibeat original tv bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X