'ಅಮೃತಧಾರೆ'ಯ ಸುಧಾಗೆ ಮದ್ವೆಯಾಗಿದೆಯಾ ? ನಟಿ ಕೊಟ್ಟ ಉತ್ತರವೇನು ?
ಅಮೃತಧಾರೆ ಧಾರಾವಾಹಿಯಲ್ಲಿ ನಟಿ ಮೇಘಾ ಶೆಣೈ ಅವರು ಸುಧಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸುಧಾ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ, ಮೇಘ ಶೆಣೈ ಅವರಿಗೆ ಇದು ಮೊದಲ ಧಾರಾವಾಹಿ ಅಲ್ಲ. ಯಾಕೆಂದರೆ ಅವರು ಕಳೆದ 11 ವರ್ಷಗಳಿಂದ ಕಿರುತೆರೆಯಲ್ಲಿ ಇದ್ದಾರೆ. ಅಲ್ಲದೇ ಅಮೃತಧಾರೆ ಅವರ 14ನೇ ಧಾರಾವಾಹಿ ಎಂಬುದನ್ನೂ ಹೇಳಿದ್ದಾರೆ. ನಿನ್ನೆ ಶೂಟಿಂಗ್ ಇಲ್ಲದೇ ಫ್ರೀಯಾಗಿದ್ದ ನಟಿ ಮೇಘಾ ಶೆಣೈ ಅವರು ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಬನ್ನಿ ಅಭಿಮಾನಿಗಳು ಯಾವ ಪ್ರಶ್ನೆಗಳನ್ನು ಕೇಳಿದರು ಎಂಬುದನ್ನು ತಿಳಿಯೋಣ.
ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ನಟಿ
ಅಭಿಮಾನಿಯೊಬ್ಬರು ನಿಮಗೆ ಮದುವೆಯಾಗಿದೆಯಾ ಎಂದ ಕೇಳಿದ್ದು, ಅದಕ್ಕೆ ಮೇಘಾ ಅವರು ಇಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ಶೂಟಿಂಗ್ ನಲ್ಲಿ ಯಾರು ಫೇವರಿಟ್ ಎಂದಿದ್ದಕ್ಕೆ ನಟಿ ಚಿತ್ರಕಲಾ ಬಿರಾದರ್ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಶೂಟಿಂಗ್ ನಲ್ಲಿ ಹೆಚ್ಚುಕಾಲ ಬಾಲಕಿ ಪ್ರಣವಿ ಅಕ್ಷಯ್ ಜೊತೆಗೆ ಸಮಯ ಕಳೆಯುವುದಾಗಿ ತಿಳಿಸಿದ್ದಾರೆ. ತಮ್ಮ ಸೀರಿಯಲ್ ತಂಡ ಫ್ಯಾಮಿಲಿ ರೀತಿ ಇದ್ದು, ನಟಿಸಲು ಖುಷಿಯಾಗುತ್ತದೆ ಎಂದಿದ್ದಾರೆ. ಇನ್ನು ನಟ ರಾಜೇಶ್ ಅವರು ನ್ಯಾಚುರಲ್ ಆಗಿ ನಟಿಸುತ್ತಾರೆ ಅಂತ ಹೇಳಿದ್ದು, ಛಾಯಾ ಸಿಂಗ್ ಅವರು ಬಹಳ ಸಿಂಪಲ್ ಎಂದು ಹೇಳಿದ್ದು, ಮೇಘಾ ಶೆಣೈ ಅವರು ಅಮೃತಧಾರೆ ತಂಡದ ಭಾಗವಾಗಿರುವುದಕ್ಕೆ ಸಂತಸವನ್ನು ಹಂಚಿಕೊಂಡಿದ್ದಾರೆ.

ಆರು ವಾಹಿನಿಗಳಲ್ಲೂ ಕಾಣಿಸಿಕೊಂಡಿರುವ ನಟಿ
ನಟಿ ಮೇಘಾ ಶೆಣೈ ಅವರು ಕೊಂಕಣಿ ಹುಡುಗಿಯಾಗಿದ್ದು, ತವರೂರು ಮಂಗಳೂರು ಸದ್ಯ ನೆಲೆಸಿರುವುದು ಬೆಂಗಳೂರಿನಲ್ಲಿ. ಮೇಘ ಶೆಣೈ ಅವರು ಮೊದಲು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು ಉದಯ ಟಿವಿಯಲ್ಲಿ ಪ್ರಸಾರವಾದ ಸುಂದರಿ ಧಾರಾವಾಹಿ ಮೂಲಕ. ಇದು ಮಾತ್ರವೇ ಅಲ್ಲದೇ, ನಟಿ ಮೇಘಾ ಅವರು ಕಾವೇರಿ, ಮಹಾದೇವಿ, ರಕ್ಷಾ ಬಂಧನ, ಆರತಿಗೊಬ್ಬ ಕೀರ್ತಿಗೊಬ್ಬ, ಜೀವ ಹೂವಾಗಿದೆ ಸೇರಿದಂತೆ ಉದಯ ಟಿವಿ, ಕಲರ್ಸ್ ಕನ್ನಡ, ಸಿರಿ ಕನ್ನಡ, ಜೀ ಕನ್ನಡ, ಕಲ್ಕಿ, ಕಸ್ತೂರಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದಾರಂತೆ ಈ ಬಗ್ಗೆಯೂ ಮೇಘಾ ಅವರು ಹೇಳಿದ್ದಾರೆ.
ಪಾಸಿಟಿವ್ ಪಾತ್ರದಲ್ಲಿ ಮುಂದುವರೆಯುತ್ತಾರಾ ಶಣೈ
ಹೆಚ್ಚು ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಮೇಘಾ ಶೆಣೈ ಅವರು ಬ್ರಾಹ್ಮಿನ್ಸ್ ಕೆಫೆ ಧಾರಾವಾಹಿಯಲ್ಲಿ ನಾಯಕಿ ಕರುಣಾ ಆಗಿ ಅಭಿನಯಿಸಿ ವೀಕ್ಷಕರ ಮನ ಸೆಳೆದಿದ್ದರು. ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ನಟಿ ಮೇಘಾ ಶೆಣೈ ಅವರು ಖಳನಾಯಕಿಯಾಗಿ ಬಂದು ಈಗ ಪಾಸಿಟಿವ್ ಪಾತ್ರದಲ್ಲಿ ಮುಂದುವರೆದಿದ್ದಾರೆ. ಸುಧಾ ಅವರ ಪಾತ್ರ ಹೀಗೆ ಇರುತ್ತಾ ಅಥವಾ ಮುಂದಿನ ದಿನಗಳಲ್ಲಿ ಮತ್ತೆ ಬದಲಾವಣೆಯನ್ನು ಕಾಣುತ್ತಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಂಡ ಮೇಘಾ ಶಣೈ
ಇನ್ನು ನಟಿ ಮೇಘಾ ಶೆಣೈ ಅವರು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಫುಲ್ ಆಕ್ಟೀವ್ ಆಗಿದ್ದಾರೆ. ಫಾಲೋವರ್ಸ್ ಸಂಖ್ಯೆ ಬೆಳೆಯುತ್ತಿದ್ದು, ಹದನೈದು ದಿನಗಳ ಹಿಂದೆ 17 ಸಾವಿರ ಫಾಲೋವರ್ಸ್ ಗಳು ಇದ್ದರು. ಆದರೆ ಈಗ ಈ ಸಂಖ್ಯೆ 19.5 ಸಾವಿರಕ್ಕೆ ಹೆಚ್ಚಾಗಿದೆ. ಇದುವರೆಗೂ 195 ಪೋಸ್ಟ್ ಗಳನ್ನು ನಟಿ ಮೇಘಾ ಅವರು ಅಪ್ ಲೋಡ್ ಮಾಡಿದ್ದಾರೆ. ಇನ್ನು ಧಾರಾವಾಹಿಯಲ್ಲಿ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಟಿ ಮೇಘಾ ಅವರು ಮಾಡ್ರನ್ ಲುಕ್ ನಲ್ಲೂ ಸೂಪರ್ ಆಗಿಯೇ ಕಾಣುತ್ತಾರೆ. ಇದನ್ನು ತಿಳಿಯಬೇಕೆಂದರೆ ಎಲ್ಲರೂ ಒಮ್ಮೆ ಮೇಘಾ ಶಣೈ ಅವರ ಸೋಶಿಯಲ್ ಮೀಡಿಯಾ ಖಾತೆಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ.


Click it and Unblock the Notifications











