ಪ್ರೀತಿಯಲ್ಲಿ ಬಿದ್ದಿದ್ದಾರಾ ಅನುಪಮಾ ಗೌಡ..? ನನ್ನ ಸೀರೆಯ ಬಣ್ಣ ನಿನ್ನ ಹೃದಯವನ್ನು ಹೋಲುತ್ತದೆ ಎಂದಿದ್ದು ಯಾರಿಗೆ..?
ಈ ನವರಾತ್ರಿ ನಟಿ ಅನುಪಮಾ ಗೌಡ ಅವರ ಕನಸನ್ನು ನನಸು ಮಾಡಿದೆ. ಹಲವು ದಿನಗಳಿಂದ ಅನುಪಮಾ ಅವರು ಕಂಡಿದ್ದ ಕನಸೇ ನಮ್ಮನೆ. ಕಳೆದ ಎರಡು ದಿನಗಳ ಹಿಂದೆ ನಟಿ ಅನುಪಮಾ ಗೌಡ ಅವರು ತಮ್ಮ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದರು. ಕಿರುತೆರೆ ಕಲಾವಿದರನ್ನು ಆಹ್ವಾನಿಸಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದರು. ಇನ್ನೂ ನಿಮಗೆ ಗೊತ್ತು.. ಸ್ವಂತ ಮನೆ ಮಾಡಬೇಕು ಎಂಬ ಕನಸು ಪ್ರತಿಯೊಬ್ಬ ವ್ಯಕ್ತಿಗೂ ಇರುತ್ತದೆ. ಆದರೆ, ಸ್ವಂತ ಮನೆಗೆ ಪ್ರವೇಶ ಮಾಡುವವರ ಸಂಖ್ಯೆ ಕಡಿಮೆಯೇ. ಯಾಕೆಂದರೆ ಸ್ವಂತ ಮನೆ ಮಾಡಿಕೊಳ್ಳುವುದು ಅಷ್ಟು ಸುಲಭವಂತೂ ಅಲ್ಲ.
ಜೀವನ ಪೂರ್ತಿ ದುಡಿದರೂ ಎಷ್ಟೋ ಜನರಿಗೆ ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ಸ್ವಂತ ಮನೆ ಎಂಬುದೋ ಎಷ್ಟೋ ಜನರ ಪಾಲಿಗೆ ಕೈಗೆಟುಕದ ನಕ್ಷತ್ರವಿದ್ದಂತೆಯೇ. ಅಂತಹ ಮಹಾ ದೊಡ್ಡ ಕನಸನ್ನು ಈಗ ನಟಿ ಅನುಪಮಾ ಗೌಡ ಅವರು ನನಸು ಮಾಡಿಕೊಂಡಿದ್ದಾರೆ. ಗೃಹಪ್ರವೇಶಕ್ಕೆ ಗೆಳತಿ, ಗೆಳೆಯರು ಆಗಮಿಸಿ ಶುಭ ಕೋರಿದರು. ನಟಿ ಇಶಿತಾ ಗೌಡ, ನಮ್ತಾ ಗೌಡ, ನೇಹಾ ಗೌಡ, ಕಾವ್ಯಾ ಗೌಡ, ಚಂದನಾ ರಾಮಕೃಷ್ಣ, ಪ್ರಿಯಾಂಕ ಸೇರಿದಂತೆ ಹಲವರು ಆಗಮಿಸಿದ್ದರು. ಸೇರನ್ನು ಒದ್ದು, ಮನೆಯೊಳಗೆ ಪ್ರವೇಶಿಸಿದ ಅನುಪಮಾ ಗೌಡ ಅವರು ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ. ತಮ್ಮ ಮನೆಗೆ ನಮ್ಮನೆ ಎಂದು ಹೆಸರಿಟ್ಟಿದ್ದು, ಫೋಟೋಗಳನ್ನು ತೆಗೆಸಿಕೊಂಡು ಎಂಜಾಯ್ ಮಾಡಿದ್ದಾರೆ.

ಇನ್ನೂ ಇತ್ತೀಚೆಗಷ್ಟೇ ನಟಿ ಅನುಪಮಾ ಗೌಡ ಅವರು ಅಗಲಿದ ತಮ್ಮ ತಂದೆಯ ಟ್ಯಾಟೂ ಅನ್ನು ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದರು. ನಿರೂಪಣೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಅನುಪಮಾ ಗೌಡ ಅವರು ಕಿರುತೆರೆಗೆ ಬಂದ ದಶಕವೇ ಕಳೆದಿದ್ದು, ಇದೀಗ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇನ್ನು ನಟಿ ಅನುಪಮಾ ಅವರು ವಿಜಯದಶಮಿ ಹಿನ್ನೆಲೆ ಸೀರೆಯುಟ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಫೊಟೋ ಜೊತೆಗೆ ಸಾಲೊಂದನ್ನು ಬರೆದಿದ್ದು, ಅಭಿಮಾನಿಗಳಲ್ಲಿ ಪ್ರಶ್ನೆಯೊಂದನ್ನು ಹುಟ್ಟು ಹಾಕಿದೆ.
ಮೈ ಸಾರಿ ಕಲರ್ ಮ್ಯಾಚಸ್ ವಿತ್ ಯೂವರ್ ಹಾರ್ಟ್ ಎಂದು ಬರೆದಿದ್ದು, ಯಾರ ಹೃದಯದ ಬಣ್ಣಕ್ಕೆ ತಮ್ಮ ಸೀರೆಯ ವರ್ಣವನ್ನು ಹೋಲುಸುತ್ತಿದ್ದಾರೆ ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ. ನಟಿ ಅನುಪಮಾ ಗೌಡ ಅವರು ಕನಸು ನನಸು ಮಾಡಿಕೊಂಡ ಬೆನ್ನಲ್ಲೆ ಲೈಫ್ ಬಡ್ತಿ ಪಡೆಯಲು ಮುಂದಾಗಿದ್ದಾರಾ ಎಂಬ ಅನುಮಾನ ಶುರುವಾಗಿದೆ. ರಾಜಾ ರಾಣಿ ಶೋ ಮಾಡುವಾಗಲೆಲ್ಲಾ ತಮ್ಮ ಮದುವೆಯ ಬಗ್ಗೆ ಹೆಚ್ಚು ಮಾತನಾಡುವ ಅನುಪಮಾ ಅವರು ತಮ್ಮ ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ಕನಸನ್ನು ಕಂಡಿದ್ದಾರೆ. ಆದರೆ, ಯಾವಾಗ ಮದುವೆಯಾಗುತ್ತೇನೆ ಎಂಬ ಮಾತು ಮಾತ್ರ ಎಂದಿಗೂ ಆಡಿಲ್ಲ.
ನಟಿ ತಾರಾ, ಸೃಜನ್ ಲೋಕೇಶ್ ಅವರಂತೂ ಅನುಪಮಾ ಗೌಡ ಅವರ ಕಾಲೆಳೆಯುತ್ತಿರುತ್ತಾರೆ. ಪ್ರೀತಿ ಬಗ್ಗೆ ಸಾಕಷ್ಟು ಪಾಠವನ್ನು ಕೂಡ ಮಾಡುತ್ತಿರುತ್ತಾರೆ. ಇನ್ನು ನಟಿ ಅನುಪಮಾ ಗೌಡ ಅವರು ಮನೆ ಖರೀದಿಸಿದ್ದಕ್ಕೆ ಎಲ್ಲರೂ ವಿಶ್ ಮಾಡಿ ಕಮೆಂಟ್ ಮಾಡುತ್ತಲೇ ಇದ್ದಾರೆ. ಈಗ ಅಪ್ ಲೋಡ್ ಮಾಡಿರುವ ಫೋಟೋಗೆ ಹ್ಯಾಶ್ ಟ್ಯಾಗ್ ನಲ್ಲಿ ನಮ್ಮನೆ ಹಾಕಿದ್ದು ಗೃಹಪ್ರವೇಶದ ಮೊದಲ ದಿನ ಎಂದು ಕೂಡ ಬರೆದುಕೊಂಡಿದ್ದಾರೆ. ಆದರೆ, ಇದಕ್ಕೂ ಮುನ್ನ ಬರೆದ ಸಾಲುಗಳು ವ್ಯಕ್ತಿಗಾ ಅಥವಾ ಅವರ ಹೊಸ ಮನೆಯ ಗೋಡೆಯ ಬಣ್ಣಕ್ಕಾ ಎಂಬುದು ಇನ್ನೂ ಯಾರಿಗೂ ಸ್ಪಷ್ಟವಾಗಿ ಉತ್ತರ ಸಿಕ್ಕಿಲ್ಲ. ಹಾಗಾಗಿ ಹಲವರು ಆದಷ್ಟು ಬೇಗ ನಿಮ್ಮ ಹೊಸ ಮನೆಯ ವ್ಲಾಗ್ ಅಪ್ ಲೋಡ್ ಮಾಡಿ ಎಂದು ಕೇಳಿಕೊಂಡಿದ್ದಾರೆ.


Click it and Unblock the Notifications











