Thanvi Balaraj ; ಆರಾಧನಾ ಪಾತ್ರವನ್ನು ಎಂದಿಗೂ ಮರೆಯಲಾರೆ ಎಂದ ನಟಿ ತನ್ವಿ ಬಾಲರಾಜ್

By ಪ್ರಿಯಾ ದೊರೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ 2024 ರ ಬಿಗ್ ಬಾಸ್ ಸೀಸನ್ 11 ಶುರುವಾಗಲು ಇನ್ನು ಎರಡೇ ದಿನ ಬಾಕಿ ಇದೆ. ಬಿಗ್ ಬಾಸ್ ನೋಡಲು ವೀಕ್ಷಕರು ಕೂಡ ಕಾತುರರಾಗಿದ್ದಾರೆ. ಈ ಬಾರಿಯ ಬಿಗ್ ಬಾಸ್ ಡಿಫರೆಂಟ್ ಆಗಿದ್ದು, ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ಮೇಲೆ ನಡೆಸಲಾಗುತ್ತಿದೆ. ಹಲವು ವಿಶೇಷತೆಗಳೀಂದ ಕೂಡಿರುವ ಈ ಸಲದ ಬಿಗ್ ಬಾಸ್ ಕುತೂಹಲ ಮೂಡಿಸಿರುವುದಂತೂ ನಿಜ. ಇನ್ನು ಬಿಗ್ ಬಾಸ್ ಪ್ರಾರಂಭವಾಗಬೇಕೆಂದರೆ, ವಾಹಿನಿಯಲ್ಲಿ ಸ್ಲಾಟ್ ಖಾಲಿ ಕೂಡ ಇರಬೇಕು. ಈಗಾಗಲೇ ಸೀರಿಯಲ್ ಗಳು ಸಾಲು ಸಾಲಾಗಿ ಪ್ರಸಾರವಾಗುತ್ತಿವೆ.

ಮುಕ್ತಾಯಗೊಂಡ ಧಾರಾವಾಹಿಗಳು

ಹಾಗಾಗಿ ಕೆಲ ಧಾರಾವಾಹಿಗಳು ಬಿಗ್ ಬಾಸ್ ಗೆ ದಾರಿ ಮಾಡಿಕೊಡಲು ಅರ್ಧಕ್ಕೆ ಮುಕ್ತಾಯಗೊಳ್ಳುತ್ತಿದೆ. ಏನೂ ಕಥೆಯೇ ಇಲ್ಲ ಎಂದು ಪ್ರತೀ ವಾರ ಕಮೆಂಟ್ ಪಡೆಯುತ್ತಿದ್ದ ನನ್ನ ದೇವ್ರು ಧಾರಾವಾಹಿಯನ್ನು ನಿಲ್ಲಿಸಲು ವಾಹಿನಿ ಮುಂದಾಗಿದೆ. ಇನ್ನು ಕೆಂಡಸಂಪಿಗೆ ಧಾರಾವಾಹಿ ಅದಾಗಲೇ ಕೊನೆಯ ಹಂತವನ್ನು ತಲುಪಿದ್ದು, ಸೀರಿಯಲ್ ಮುಕ್ತಾಯವಾಗುವುದರೊಂದಿಗೆ ಬಿಗ್ ಬಾಸ್ ಪ್ರಸಾರಕ್ಕೆ ಸ್ಲಾಟ್ ಬಿಟ್ಟು ಕೊಟ್ಟಿದೆ. ಇದರೊಂದಿಗೆ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಅಂತರಪಟ ಧಾರಾವಾಹಿಯೂ ಕೂಡ ಮುಕ್ತಾಯಗೊಳ್ಳುತ್ತಿದೆ. ಧಾರಾವಾಹಿಯ ಕೊನೆಯ ದಿನದ ಶೂಟಿಂಗ್ ಮುಗಿಸಿ, ಎಲ್ಲರೂ ಫೋಟೋ ಕ್ಲಿಕ್ಕಿಸಿಕೊಂಡು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಧಾರಾವಾಹಿ ತಂಡದವರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

Written update on Antharapata serial heroine thanvi balaraj

ಸುಖಾಂತ್ಯ ಕಂಡ ಅಂತರಪಟ ಧಾರಾವಾಹಿ

ಇನ್ನು ಇಂದು ಅಂತರಪಟ ಕೊನೆಯ ಸಂಚಿಕೆ ಪ್ರಸಾರವಾಗಿದೆ. ಸುಶಾಂತ್ ಗೆ ತನ್ನ ಅಕ್ಕ ಅಮಲಾಳ ಬಂಡವಾಳ ಗೊತ್ತಾಗಿದೆ. ಪ್ರೀತಿ, ಸಂಬಂಧಗಳಿಗಿಂತಲೂ ಹಣ ಆಸ್ತಿಯೇ ಮುಖ್ಯ ಎಂದರೆ ನನಗೆ ಅದ್ಯಾವುದೂ ಬೇಡ ಎಂದು ಸುಶಾಂತ್ ಮನೆ ಬಿಟ್ಟು ಹೊರಟಿದ್ದಾನೆ. ಸತ್ಯ ಅರ್ಥ ಮಾಡಿಕೊಂಡ ಅಮಲಾ ತಮ್ಮನ ಕಾಲು ಹಿಡಿದು ಕ್ಷಮೆ ಕೇಳುತ್ತಾಳೆ. ಅಂತರಪಟ ಧಾರಾವಾಹಿ ಸುಖಾಂತ್ಯವನ್ನು ಕಂಡಿದ್ದು, ಧಾರಾವಾಹಿ ತಂಡವನ್ನು ನಾಯಕಿ ನಟಿ ತನ್ವಿ ಬಾಲರಾಜ್ ಮಿಸ್ ಮಾಡಿಕೊಳ್ಳುತ್ತಿದ್ದಾಳೆ. ಈ ಧಾರಾವಾಹಿಯಲ್ಲಿ ನೇಹಗೌಡ ಅವರ ಪತಿ ಚಂದನ್ ಸುಶಾಂತ್ ಪಾತ್ರದಲ್ಲಿ ನಟಿಸಿದ್ದರು.

ನಾಯಕಿ ತನ್ವಿ ಬಾಲರಾಜ್ ಬೇಸರ

ಧಾರಾವಾಹಿಯಲ್ಲಿ ಆರಾಧನಾ ಎಂಬ ಪಾತ್ರಧಾರಿಯು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇವರ ನಿಜವಾದ ಹೆಸರು ತನ್ವಿ ಬಾಲರಾಜ್. ತನ್ವಿ ಬಾಲರಾಜ್ ಅವರಿಗೆ ನಟಿಯಾಗುವ ಆಸೆ ಮೊದಲಿನಿಂದಲೂ ಇತ್ತು. ಇದಕ್ಕೆ ಸಹಾಯ ಮಾಡಿದ್ದೆ ಸೋಶಿಯಲ್ ಮೀಡಿಯಾ ಖಾತೆ. ರೀಲ್ಸ್ ಮೂಲಕ ಫೇಮಸ್ ಆಗಿದ್ದ ನಟಿ ತನ್ವಿ ಅವರು ಅಂತರಪಟ ಧಾರಾವಾಹಿ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು. ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಮಂಡ್ಯ ಹುಡುಗಿ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಅಭಿಮಾನಿಗಳ ಸಂಖ್ಯೆಗೇನು ಕಡಿಮೆಯಂತೂ ಇರಲಿಲ್ಲ.

Written update on Antharapata serial heroine thanvi balaraj

ಶೂಟಿಂಗ್ ಮಿಸ್ ಮಾಡಿಕೊಳ್ಳುತ್ತಿರುವ ತಂಡ

ಇನ್ನು ನಟಿ ತನ್ವಿ ಬಾಲರಾಜ್ ಅವರು ಮೊದಲ ಬಾರಿಗೆ ಕ್ಯಾಮರಾ ಫೇಸ್ ಮಾಡಿದ್ದು, ಅಂತರಪಟ ಧಾರಾವಾಹಿಗಿಗೆ. ಆಗ ನಡುಕ, ಆತಂಕದೊಂದಿಗೆ ಕ್ಯಾಮರಾ ಫೇಸ್ ಮಾಡಿದ್ದವರು. ಈಗ ನಟನೆ ಬಗ್ಗೆ ಸಾಕಷ್ಟು ಕಲಿತಿದ್ದು, ಎಂದಿಗೂ ನಾನು ಆರಾಧನಾ ಪಾತ್ರವನ್ನು ಮರೆಯುವುದಿಲ್ಲ ಎಂದು ಹೇಳಿದ್ದಾಳೆ. ಇನ್ ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿರುವ ತನ್ವಿ ಬಾಲರಾಜ್ ಅವರು, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಂತರಪಟ ಧಾರಾವಾಹಿಯಿಂದ ಅವರು ಬಹಳಷ್ಟು ಕಲಿತಿದ್ದು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ. ಇನ್ನು ನಿರ್ದೇಶಕಿ ಕೂಡ ಧಾರಾವಾಹಿ ಮುಕ್ತಾಯಗೊಂಡಿದ್ದಕ್ಕೆ ಬೇಸರಗೊಂಡಿದ್ದಾರೆ. ಧಾರಾವಾಹಿ ತಂಡವೂ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X