Nandini Gowda ; ಶ್ರೀಗೌರಿ ಧಾರಾವಾಹಿಯಲ್ಲಿ ನಟಿಸಿ ಮನ ಮೆಚ್ಚಿದ ಅಮ್ಮ ಅನುಬಂಧ ಅವಾರ್ಡ್ ಪಡೆದ ನಂದಿನಿ ಗೌಡ..!

By ಪ್ರಿಯಾ ದೊರೆ

ಈ ವರ್ಷದ ಆರಂಭದಲ್ಲಿ ಕಲರ್ಸ್ ಕನ್ನಡ ವಾಹಿನಿ ಶ್ರೀಗೌರಿ ಧಾರಾವಾಹಿಯನ್ನು ಪ್ರಾರಂಭಿಸಿತು. ಧಾರಾವಾಹಿ ಶುರುವಾದ ಕೆಲವೇ ದಿನಗಳಲ್ಲಿ ಪಾತ್ರಗಳು ವೀಕ್ಷಕರ ಮನ ಗೆದ್ದಿದ್ದವು. ನಟಿ ನಂದಿನಿ ಗೌಡ ಅವರು ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ವಯಸ್ಸಿಗೂ ಮೀರಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದು, ನಾಟಿ ವೈದ್ಯೆಯಾಗಿ ಊರ ಜನರ ಆರೋಗ್ಯ ಕಾಪಾಡುತ್ತಾ ಮಗನ ಬಾಳು ಹಸನಾಗಲಿ ಎಂದು ಒದ್ದಾಡುವ ಮಂಗಳಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ ಸಾಫ್ಟ್ ಪಾತ್ರಗಳಿಗೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಮಾಡಿದ ನಂದಿನಿ ಗೌಡ ಅವರು ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

ಮನೆ ಮೆಚ್ಚಿದ ಅಮ್ಮ ಅವಾರ್ಡ್

ಕಲರ್ಸ್ ಕನ್ನಡ ವಾಹಿನಿ ಅನುಬಂಧ ಅವಾರ್ಡ್ 2024 ನಡೆಯುತ್ತಿದ್ದು, ಮನೆ ಮೆಚ್ಚಿದ ಅಮ್ಮನ ಪಾತ್ರಕ್ಕೆ ನಾಲ್ವರು ಆಯ್ಕೆ ಆಗಿದ್ದರು. ಭಾಗ್ಯಲಕ್ಷ್ಮೀ ಧಾರಾವಾಹಿಯಿಂದ ಕುಸುಮ, ಭಾಗ್ಯ ಮತ್ತು ಶ್ರೀಗೌರಿ ಧಾರಾವಾಹಿ ಮೂಲಕ ಮಂಗಳಮ್ಮ ಹಾಗೂ ರಾಮಾಚಾರಿ ಮೂಲಕ ಜಾನಕಿಯನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಮಂಗಳಮ್ಮ ಹಾಗೂ ಜಾನಕಿಗೆ ಅವಾರ್ಡ್ ದೊರೆತಿದೆ. ಮಂಗಳಮ್ಮನ ಪಾತ್ರವನ್ನು ಜನ ಎಷ್ಟು ಇಷ್ಟಪಟ್ಟಿದ್ದಾರೆ ಎಂಬುದು ಇದರ ಮೂಲಕ ತಿಳಿದು ಬಂದಿದೆ.

Written Update on actress nandini gowda

ಎರಡೂವರೆ ದಶಕದಿಂದಲೂ ನಟನೆ

ಇನ್ನು ನಟಿ ನಂದಿನಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟೀವ್ ಆಗೇನೂ ಇಲ್ಲ. ಆದರೆ, ಜನರ ಕಣ್ಣಿನಿಂದ ಅಂತೂ ದೂರ ಸರಿದಿಲ್ಲ. ಒಳ್ಳೊಳ್ಳೆಯ ಪಾತ್ರಗಳ ಮೂಲಕ ಕರುನಾಡಿನ ಜನ ಮನದಲ್ಲಿ ನೆಲೆಸಿದ ನಟಿ ನಂದಿನಿ ಗೌಡ ಅವರು. ನಟಿ ನಂದಿನಿ ಗೌಡ ಅವರು ಮೊಬೈಲ್, ಇಂಟರ್ ನೆಟ್, ಒಟಿಟಿಗಳು ಇಲ್ಲದ ಆ ಕಾಲದಲ್ಲೇ ಲಕ್ಷಾಂತರ ಕರುನಾಡಿಗರ ಸಂಜೆಯ ಸಮಯವನ್ನು ತಮ್ಮ ಪಾಲಾಗಿಸಿಕೊಂಡವರು. ನಂದಿನಿ ಗೌಡ ಅವರು ಹುಟ್ಟಿದಾಗಿನಿಂದಲೂ ಬೆಂಗಳೂರಿನಲ್ಲೇ ಬೆಳೆದವರು. ನಂದಿನಿ ಗೌಡ ಅವರು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಇಂಜಿನೀಯರಿಂಗ್ ವ್ಯಾಸಂಗ ಮಾಡಿದ್ದಾರೆ. ಆದರೆ, ಕೆಲಸಕ್ಕೆ ಹೋಗಿದ್ದಕ್ಕಿಂತಲೂ ಕ್ಯಾಮರಾ ಮುಂದೆ ನಟಿಸಿದ್ದೇ ಹೆಚ್ಚು. ನಟಿಯಾಗಬೇಕು ಎಂದು ಬಯಸದೇ ಹೋದರೂ ನಂದಿನಿ ಅವರನ್ನು ಕ್ಯಾಮರಾ ಹುಡುಕಿಕೊಂಡು ಬಂದಿತ್ತು ಎಂದರೆ ತಪ್ಪಾಗುವುದಿಲ್ಲ.

ಬಯಸದೇ ಬಂದ ಭಾಗ್ಯ

ಓದುವ ದಿನಗಳಲ್ಲೇ ತಂದೆಯ ಸ್ನೇಹಿತರ ಕಡೆಯಿಂದ ಧಾರಾವಾಹಿಯೊಂದಕ್ಕೆ ನಟಿಸುವ ಅವಕಾಶ ನಂದಿನಿ ಅರಿಗೆ ತಾನಾಗಿಯೇ ಒಲಿದು ಬಂದಿತ್ತು. ದೂರದರ್ಶನದ ಧಾರಾವಾಹಿಯಲ್ಲಿ ಮೊದಲು ನಟಿಸಿದರು. ಬಳಿಕ ಪ್ರೇಮ ಪ್ರೇಮ ಪ್ರೇಮ ಎಂಬ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿ ಬೇಡ ಎನ್ನಲು ಹೋಗಿ ನಟಿಸಿ ಬಂದಿದ್ದರು. ಹೀಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಂದಿನಿ ಗೌಡ ಅವರು ಕ್ಷಣ ಕ್ಷಣ, ಇತಿಹಾಸ, ಸಾಧನೆ, ಅರ್ಧ ಸತ್ಯ ಧಾರಾವಾಹಿಗಳಲ್ಲಿ ತಮ್ಮ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು. ನಂದಿನಿ ಅವರು ಟಿಎನ್ ಸೀತಾರಾಮ್ ಅವರ ಗರಡಿಯಲ್ಲಿ ಪಳಗಿದ ನಂದಿನಿ ಅವರು ಮಿಂಚು, ಮುಕ್ತ ಮುಕ್ತ ಧಾರಾವಾಹಿಗಳಲ್ಲಿ ನಟಿಸಿ ಜನರ ಮನದಲ್ಲಿ ನೆಲೆಸಿದರು.

Written Update on actress nandini gowda

ಎಲ್ಲಾ ಬಗೆಯ ಧಾರಾವಾಹಿಗಳಲ್ಲೂ ನಟನೆ

ಮಾಯಾಮೃಗ, ಮಂಥನಾ, ಮುಕ್ತ ಮುಕ್ತ, ಮಿಂಚು, ಮನ್ವಂತರ, ದಿಬ್ಬಣ, ಅನಾವರಣ ದಂತಹ ಎಲ್ಲಾ ಕಾಲಕ್ಕೂ ನೋಡಬೇಕೆನ್ನಿದುವ ಧಾರಾವಾಹಿಗಳಲ್ಲಿ ನಟಿಸಿದರು. ಇವನ್ನು ಹೊರತುಪಡಿಸಿ ಮೂಡಲ ಮನೆ, ನಂದಗೋಕುಲ, ಕಸ್ತೂರಿ ನಿವಾಸ, ಮರಳಿ ಮನಸಾಗಿದೆ, ಲಕ್ಷ್ಮೀ ಬಾರಮ್ಮ ಸೇರಿದಂತೆ ಹತ್ತು ಹಲವು ಧಾರಾವಾಹಿಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ಹೀಗೆ ಹಲವು ಪಾತ್ರಗಳನ್ನು ನಿಭಾಯಿಸಿ ಈಗ ಮಂಗಳಮ್ಮನ ರೂಪದಲ್ಲಿ ಜನರನ್ನು ರಂಜಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X