ಕೆರಿಯರ್ ಹುಡುಕಾಟದಲ್ಲಿದ್ದ ರಜನಿ ಪ್ರವೀಣ್‌ರನ್ನು ಕೈಬೀಸಿ ಕರೆದಿದ್ದು ಕಿರುತೆರೆ
ಕಿರುತೆರೆಗಳಿಗೆ ಹಾಗೂ ಸಿನಿಮಾ ರಂಗಕ್ಕೆ ಹೆಚ್ಚಿನ ಜನರು ಆಸೆ ಕನಸುಗಳನ್ನು ಹೊತ್ತು ಬರುತ್ತಾರೆ. ಅಪರೂಪದಲ್ಲಿ ಅಪರೂಪದವರು ಮಾತ್ರವೇ ಆಕಸ್ಮಿಕವಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ.
ಕೆರಿಯರ್ ಹುಡುಕಾಟದಲ್ಲಿದ್ದ ನಟಿಯೊಬ್ಬರು ನಟನೆಯನ್ನು ಆರಿಸಿಕೊಂಡು, ಯಾವುದೇ ಗುರಿ ಅಥವಾ ನಿರೀಕ್ಷೆ ಇಲ್ಲದೇ, ಇಂದು ನೆಗೆಟಿವ್ ಶೇಡ್ ಗಳಿಂದಲೇ ಜನಪ್ರರಿಯತೆ ಪಡೆದಿರುವವರೇ ರಜನಿ ಪ್ರವೀಣ್.
ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಬಯಸಿ, ಟೀಚರ್ ಆದ ರಜನಿ ಪ್ರವೀಣ್ ಅವರು ಕೊನೆಗೆ ಕಿರುತೆರೆಯಲ್ಲಿ ವಿಲನ್ ಪಾತ್ರಗಳಲ್ಲಿ ಮಿಂಚಲು ಶುರು ಮಾಡಿದ್ದಾರೆ.

ಯಾರಿದು ರಜನಿ ಪ್ರವೀಣ್ ಗೊತ್ತಾಗ್ತಿಲ್ಲವಲ್ಲ ಎಂದು ತಲೆ ಕೆಡಿಸಿಕೊಂಡಿದ್ದೀರಾ.. ಅವರೇ ಕಣ್ರಿ ದಿನ ಸಂಜೆ ಟಿವಿ ಮುಂದೆ ಕೂಡ ಸುಪ್ರೀತಾ ಎಂದು ಶಾಪ ಹಾಕುತ್ತೀರಲ್ಲ ಅವರೇ ರಜನಿ ಪ್ರವೀಣ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿರುವ ಸುಪ್ರೀತಾ ಅವರ ನಿಜವಾದ ಹೆಸರು ರಜನಿ ಪ್ರವೀಣ್. ರಜನಿ ಪ್ರವೀಣ್ ಅವರು ತಾನು ನಟಿಯಾಗಬೇಕು ಎಂಬ ಆಸೆಯನ್ನು ಎಂದೂ ಹೊಂದಿದವರಲ್ಲ. ಆದರೂ ಕೆರಿಯರ್ ಹುಡುಕಾಟದಲ್ಲಿದ್ದಾಗ ಕಂಡಿದ್ದು ನಟನೆ.
ಉಷಾ ಭಂಡಾರಿ ಅವರ ನಟನಾ ಶಾಲೆಗೆ ಸೇರಿಕೊಂಡು ಕಾಂಟ್ಯಾಂಕ್ಟ್ ಬೆಳೆಸಿಕೊಂಡ ರಜನಿ ಪ್ರವೀಣ್ ಅವರು ರಂಗಭೂಮಿ ಮೂಲಕ ಆಡಿಷನ್ ಗಳನ್ನು ನೀಡಿ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಇವರ ನಟನೆಯ ಮೊದಲ ಧಾರಾವಾಹಿ ಹರ ಹರ ಮಹಾದೇವ. ಈ ಧಾರಾವಾಹಿಗಾಗಿ ಎಂದೂ ಒಬ್ಬರೇ ಮನೆಯಿಂದ ಆಚೆ ಹೋಗದ ರಜನಿ ಅವರು ಮುಂಬೈಗೆ ಶೂಟಿಂಗ್ ಗೆಂದು ಹೋಗಿದ್ದರಂತೆ. ಅಲ್ಲಿಂದ ಇಲ್ಲಿಯವರೆಗೂ ನಟನೆಯ ಜೊತೆ ಜೊತೆಗೆ ತಮ್ಮ ಜೀವನವನ್ನೂ ಮುಂದುವರಿಸಿದ್ದಾರೆ.

ರಜನಿ ಪ್ರವೀಣ್ ಅವರ ಮನೆಯಲ್ಲಿ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಅಂತೆ. ಓದುವಾಗ ಯಾವುದೇ ಚಟುವಟಿಕೆಗಳಲ್ಲೂ ಭಾಗಿಯಾಗದ ರಜನಿ ಅವರು ಓದು ಬಿಟ್ಟರೆ ಸ್ಪೋರ್ಟ್ಸ್ ನಲ್ಲಿ ಇದ್ದದ್ದಷ್ಟೇ ಅಂತೆ. ಆರ್ಥೊಡಕ್ಸ್ ಫ್ಯಾಮಿಲಿ ಆಗಿದ್ದರಿಂದ ರಜನಿ ಅವರು ಬೇರೆ ದಾರಿ ಇಲ್ಲದೇ, ಟೀಚಿಂಗ್ ಜಾಬ್ ಅನ್ನು ಒಪ್ಪಿಕೊಳ್ಳಬೇಕಾಯ್ತಂತೆ. ಟೀಚಿಂಗ್ ನಲ್ಲಿ ಸರ್ಕಾರಿ ಕೆಲಸ ಪಡೆದು ನೆಮ್ಮದಿಯಾಗಿರುವುದಷ್ಟೇ ಆಲೋಚನೆ ಇದ್ದಿದ್ದಂತೆ. ಆದರೆ, ರಜನಿ ಅವರು ಚಿಕ್ಕ ವಯಸ್ಸಿನಿಂದಲೂ ಟಾಮ್ ಬಾಯ್ ರೀತಿ ಇರುತ್ತಿದ್ದರಂತೆ. ಮದುವೆಯಾದ ಬಳಿಕ ರಜನಿ ಅವರ ಪತಿ ತುಂಬಾ ಸಪೋರ್ಟ್ ಮಾಡಿದ್ದು, ಈಗ ನಟನೆಗೂ ಸಹಕರಿಸುತ್ತಾರಂತೆ. ರಜನಿ ಅವರಿಗೂ ಸುಮ್ಮನೆ ಕೂಡುವುದು ಇಷ್ಟವಿಲ್ಲವಂತೆ ಹಾಗಾಗಿ ಶೂಟಿಂಗ್ ಇದ್ದರೆ, ಖುಷಿ ಆಗುತ್ತದೆ ಎಂದು ಹೇಳುತ್ತಾರೆ.
ಇನ್ನು ವಿನು ಬಳಂಜ ಅವರು ರಜನಿ ಅವರಿಗೆ ನಿಮಗೆ ನೆಗೆಟಿವ್ ಶೇಡ್ ಸೂಟ್ ಆಗುತ್ತೆ ಎಂದು ಹೇಳಿದ್ದರಿಂದ ಇಂದಿನವರೆಗೂ ರಜನಿ ಅರು ನೆಗೆಟಿವ್ ಶೇಡ್ ನಲ್ಲಿ ನಟಿಸುತ್ತಿದ್ದಾರಂತೆ. ಹರ ಹರ ಮಹಾದೇವ್, ಮಹಾದೇವಿ, ರಾಜಿ, ಅಮ್ಮನ್ ಸೇರಿದಂತೆ ಒಟ್ಟು 7 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಅಮ್ಮನ್ ಧಾರಾವಾಹಿ ತಮಿಳಿನದ್ದು, ಮಹಾದೇವಿ ಅಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು, ಇದೊಂದೆ ಪಾಸಿಟಿವ್ ರೋಲ್ ಆಗಿತ್ತಂತೆ. ಇನ್ನು ಇವರಿಗೆ ಮದುವೆಯಾಗಿ 10 ವರ್ಷವಾಗಿದ್ದ, 8-9 ವರ್ಷದ ಮಗನಿದ್ದಾನೆ. ಪ್ರೆಗ್ನೆನ್ಸಿಯಲ್ಲಿ 120ಕೇಜಿ ಇದ್ದ ರಜನಿ ಅವರು ವರ್ಕೌಟ್ ಮಾಡಿ ಈಗ ಸ್ಲಿಮ್ ಲುಕ್ ಗೆ ಬಂದರಂತೆ. ರಜನಿ ಅವರಿಗೆ ವರ್ಕೌಟ್ ಮಾಡುವುದು, ಬಾಡಿ ಫಿಟ್ ಆಗಿರುವುದು, ತಮ್ಮ ಆರೋಗ್ಯಕ್ಕಾಗಿ ಡಯಟ್ ಮಾಡುವುದು ಎಂದರೆ ಇಷ್ಟವಂತೆ.


Click it and Unblock the Notifications











