Sharmitha Gowda ; ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡ ನಟಿ ಶರ್ಮಿತಾ ಗೌಡ..!
ಚಿಕ್ಕಮಗಳೂರಿನ ಕುವರಿ ಸ್ಟೈಲಿಶ್ ವಿಲನ್ ಎನಿಸಿಕೊಂಡಿರುವ ನಟಿ ಶರ್ಮಿತಾ ಗೌಡ ಅವರು ಶಾರ್ಟ್ ಬ್ರೇಕ್ ಮುಗಿಸಿಕೊಂಡು ವಾಪಸ್ ಆಗಿದ್ದಾರೆ. ನೆಗೆಟಿವ್ ರೋಲ್ ನಲ್ಲಿ ಮಿಂಚಿದ್ದ ನಟಿ ಈಗ ಗೆಸ್ಟ್ ಆಗಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ ಗೀತಾ ಧಾರಾವಾಹಿಯಲ್ಲಿ ಮಲತಾಯಿ ಭಾನುಮತಿ ಪಾತ್ರದಲ್ಲಿ ಶರ್ಮಿತಾ ಅವರು ನಟಿಸಿದ್ದರು. ಗೀತಾ ಧಾರಾವಾಹಿಯು ಮುಕ್ತಾಯಗೊಂಡ ಬಳಿಕ ಫುಲ್ ಟೈಮ್ ತೆಲುಗು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದ ಶರ್ಮಿತಾ ಅವರು ಈಗ ಕಾವೇರಿಯ ಸಹಾಯಕ್ಕೆ ಆಗಮಿಸಿದ್ದಾರೆ.
ಗೆಸ್ಟ್ ರೋಲ್ ನಲ್ಲಿ ನಟಿ ಶರ್ಮಿತಾ
ಗೀತಾ ಧಾರಾವಾಹಿಯಲ್ಲಿ ಶರ್ಮಿತಾ ಅವರು ಖಳ ನಾಯಕಿಯಾಗಿದ್ದರೂ ಕೂಡ ತಮ್ಮದೇ ಆದ ಟ್ರೆಂಡ್ ಸೆಟ್ ಮಾಡಿದ್ದರು. ಮಾರ್ಡನ್ ವಿಲನ್ ಆಗಿ ಸ್ಟೈಲಿಷ್ ಲುಕ್ ನಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಗೀತಾ ಧಾರಾವಾಹಿಲ್ಲಿ ಮಲ ತಾಯಿ ಆಗಿ ಮಗನನ್ನು ಅತಿಯಾಗಿ ಮುದ್ದಿಸುತ್ತಾ ಒಳಗೊಳಗೆ ಧ್ವೇಷ ಸಾಧಿಸುವ ಭಾನುಮತಿ ಪಾತ್ರದಲ್ಲಿ ಶರ್ಮಿತಾ ಪ್ರೇಕ್ಷಕರನ್ನು ರಂಜಿಸಿದ್ದರು. ಒಂದೆಡೆ ಪ್ರೀತಿ, ಮತ್ತೊಮ್ಮೆ ಸಿಡುಕು, ಕಿಡಿಕಾರುವ ಕಣ್ಣೋಟದಿಂದಲೇ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡಿದ್ದವರು ಶರ್ಮಿತಾ ಗೌಡ. ಇದೀಗ ಇದೇ ರೀತಿಯ ಪಾತ್ರವನ್ನು ನಿರ್ವಹಿಸುತ್ತಿರುವ ಕಾವೇರಿಗೆ ಸಪೋರ್ಟ್ ಮಾಡಲು ಗೆಸ್ಟ್ ಆಗಿ ಬಂದಿದ್ದಾರೆ.

ಕಾವೇರಿ ಸಹಾಯಕ್ಕೆ ಬಂದ ಸ್ನೇಹಿತೆ
ನಟಿ ಶರ್ಮಿತಾ ಗೌಡ ಅವರು ಮತ್ತೆ ಭಾನುಮತಿ ಪಾತ್ರದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಗೆ ಪಾದಾರ್ಪಣೆ ಮಾಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತನ್ನ ಮಗನ ಮೇಲಿನ ಪ್ರೀತಿಗೆ ಕೀರ್ತಿ ಮತ್ತು ಲಕ್ಷ್ಮೀ ಬಾಳಲ್ಲಿ ಆಟವಾಡಿದ್ದಾಳೆ. ಈಗ ಬೀಸುತ್ತಿರುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿದ್ದು, ಇದೇ ಸಂದರ್ಭದಲ್ಲಿ ಕಾವೇರಿ ಸ್ನೇಹಿತೆಯಾಗಿದ್ದ ಭಾನುಮತಿ ಆಗಮಿಸಿದ್ದಾಳೆ. ನಿನ್ನ ಜೊತೆಗೆ ನಾನಿದ್ದೀನಿ ಹೆದರಬೇಡ ಎಂದು ಭಾನುಮತಿ ಕಾವೇರಿಗೆ ಧೈರ್ಯ ತುಂಬಿದ್ದಾಳೆ. ಸದ್ಯ ಇಬ್ಬರೂ ಸೇರಿಕೊಂಡು ಧಾರಾವಾಹಿಯಲ್ಲಿ ಯಾವ ರೀತಿ ಟ್ವಿಸ್ಟ್ ತರುತ್ತಾರೋ ಎಂದು ವೀಕ್ಷಕರು ಕುತೂಹಲಗೊಂಡಿದ್ದಾರೆ.
ತೆಲುಗಿನಲ್ಲಿ ರುದ್ರಾಣಿ ಪಾತ್ರದಲ್ಲಿ ಮಿಂಚಿಂಗ್
ಇನ್ನು ಭಾನುಮತಿ ಗೀತಾ ಧಾರಾವಾಹಿಯಲ್ಲಿ ಖಳನಾಯಕಿಯಾಗಿದ್ದಳು. ಗೀತಾ ಧಾರಾವಾಹಿ ಮುಕ್ತಾಯಗೊಂಡಾಗಿನಿಂದ ಕಿರುತೆರೆಯಿಂದ ದೂರವೇ ಉಳಿದಿದ್ದರು. ನಟಿ ಶರ್ಮಿತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಅಷ್ಟೇ ಅಲ್ಲದೇ, ತೆಲುಗು ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ತೆಲುಗಿನ ಬ್ರಹ್ಮಮುಡಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮಮುಡಿ ಧಾರಾವಾಹಿಯಲ್ಲಿ ಶರ್ಮಿತಾ ಗೌಡ ಅವರು ರುದ್ರಾಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶರ್ಮಿತಾ ಅವರು ಆಗಾಗ ಸೀರಿಯಲ್ ಸೆಟ್ ನಲ್ಲಿ ರೀಲ್ಸ್ ಮಾಡಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಶರ್ಮಿತಾ ಗೌಡ ಅವರ ಡ್ರೆಸ್ಸಿಂಗ್ ಸೆನ್ಸ್ ಅನೇಕರಿಗೆ ಇಷ್ಟವಾಗಿದೆ.

ಫ್ಯಾಷನ್ ಲುಕ್ ಗೆ ಅಭಿಮಾನಿಗಳು ಫಿದಾ
ಕೇವಲ ಧಾರಾವಾಹಿಯಷ್ಟೇ ಅಲ್ಲದೆ ಶರ್ಮಿತಾ ಅವರು ರಿಯಲ್ ಲೈಫ್ನಲ್ಲೂ ಫ್ಯಾಷನ್ ಕಡೆಗೆ ಹೆಚ್ಚು ಗಮನ ನೀಡುತ್ತಾರೆ. ಸದಾ ಆಕ್ಟೀವ್ ಆಗಿರುವ ಶರ್ಮಿತಾ ಅವರ ಸ್ಟೈಲಿಷ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶರ್ಮಿತಾ ಗೌಡ ಅವರು ವಿಲನ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ಖಳನಾಯಕಿ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಶರ್ಮಿತಾ ಅವರು ಮತ್ತೆ ಹೊಸ ಧಾರಾವಾಹಿಯಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿ ಎಂದು ಬಯಸಿದ್ದಾರೆ.


Click it and Unblock the Notifications











