ಮಾಲ್ಡೀವ್ಸ್ ನಲ್ಲಿ ಗೀತಾ ಧಾರಾವಾಹಿಯ ಭಾನುಮತಿ, ಶರ್ಮಿತಾ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ..!
ಕಿರುತೆರೆ ನಟಿಯರು ಬಣ್ಣದ ಲೋಕಕ್ಕೆ ಕಾಲಿಟ್ಟಾಗ ಬಹಳ ಸಿಂಪಲ್ಲಾಗಿ ಬರುತ್ತಾರೆ. ಬರಬರುತ್ತಾ ಕಂಪ್ಲೀಟ್ ಮಾಡೆಲ್ ಆಗಿ ಬದಲಾಗುತ್ತಾರೆ. ಕೆಲ ನಟಿಯರು ಕನ್ನಡ ಧಾರಾವಾಹಿಯನ್ನು ತೊರೆದು ಪರಭಾಷೆಗೆ ಹೋಗಿ ಸೆಟಲ್ ಆಗುತ್ತಾರೆ. ಮತ್ತೆ ಕೆಲವರು ಸಿನಿಮಾಗಳಲ್ಲಿ ಬ್ಯುಸಿಯಾಗಿ ಬಿಡುತ್ತಾರೆ.ಅಪರೂಪದಲ್ಲಿ ಅಪರೂಪಕ್ಕೆ ಎಲ್ಲೋ ಒಬ್ಬೊಬ್ಬರು ಮಾತ್ರ ತಮ್ಮ ಪರ್ಸನಲ್ ಲೈಫ್ ಗೆ ಹೆಚ್ಚು ಒತ್ತು ಕೊಡುವುದರಿಂದ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿ ಬಿಡುತ್ತಾರೆ.
ಹಾಟ್ ಲುಕ್ ನಲ್ಲಿ ನಟಿಯರು
ಇತ್ತೀಚೆಗೆ ನಟಿ ಜ್ಯೋತಿ ರೈ, ಶ್ವೇತಾಪ್ರಸಾದ್, ಶೋಭಾ ಶೆಟ್ಟಿ, ದಿಶಾ ಮದನ್ ಹೀಗೆ ಸಾಲು ಸಾಲು ನಟಿಯರು ಕಿರುತೆರೆಯಲ್ಲಿ ನಟಿಸುತ್ತಾ ಫುಲ್ ಹಾಟ್ ಆಗಿ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ. ಕಿರುತೆರೆಯ ಧಾರಾವಾಹಿಗಳಲ್ಲಿ ಸೀರೆಯುಟ್ಟು ಸಿಂಪಲ್ಲಾಗಿ ಕಾಣಿಸುತ್ತಿದ್ದ ಈ ನಟಿಯರು ಈಗ ಮಾಡೆಲ್ ನಂತೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಇನ್ನು ಕನ್ನಡ ಕಿರುತೆರೆಯಲ್ಲಿ ಮುದ್ದಾಗಿ ಕಾಣುವ ಸ್ಟೈಲಿಷ್ ವಿಲನ್ ಶರ್ಮಿತಾ ಗೌಡ ಕೂಡ ಈಗ ಹಾಟ್ ಆಗಿ ಫೋಟೋ ಅಪ್ ಲೋಡ್ ಮಾಡಿದ್ದಾರೆ. ನಟಿ ಶರ್ಮಿತಾ ಗೌಡ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳ ದಿಲ್ ಖುಷ್ ಆಗಿದೆ.

ತೆಲುಗು ಅಂಗಳದಲ್ಲಿ ಬ್ಯುಸಿಯಾಗಿರುವ ನಟಿ
ಚಿಕ್ಕಮಗಳೂರಿನ ಬೆಡಗಿ ನಟಿ ಶರ್ಮಿತಾ ಗೌಡ ಅವರು ತಮ್ಮ ನೆಗೆಟಿವ್ ರೋಲ್ ಮೂಲಕವೇ ಜನಪ್ರಿಯರಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ ಗೀತಾ ಧಾರಾವಾಹಿಯಲ್ಲಿ ಮಲತಾಯಿ ಭಾನುಮತಿ ಪಾತ್ರದಲ್ಲಿ ಮಿಂಚಿದ್ದರು. ಗೀತಾ ಧಾರಾವಾಹಿಯು ಮುಕ್ತಾಯಗೊಂಡ ಬಳಿಕ ಫುಲ್ ಟೈಮ್ ತೆಲುಗು ಕಿರುತೆರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತೆಲುಗಿನ ಬ್ರಹ್ಮಮುಡಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮಮುಡಿ ಧಾರಾವಾಹಿಯಲ್ಲಿ ಶರ್ಮಿತಾ ಗೌಡ ಅವರು ರುದ್ರಾಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮದ್ಯೆ ಲಕ್ಷ್ಮೀಬಾರಮ್ಮ ಸೀರಿಯಲ್ ನಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಇದರಲ್ಲಿ ಕಾವೇರಿಯ ಸ್ನೇಹಿತೆಯಾಗಿ ಬಂದು ಸಹಾಯಕ್ಕೆ ನಿಂತಿದ್ದರು
ನಟಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಫ್ಯಾನ್ಸ್
ಇನ್ನು ಶರ್ಮಿತಾ ಗೌಡ ತೆಲುಗು ಅಂಗಳದಲ್ಲಿ ಬ್ಯುಸಿಯಾಗಿದ್ದರೂ, ಶೂಟಿಂಗ್ ಸೆಟ್ ನಲ್ಲಿ ಫ್ರೀ ಇದ್ದಾಗೆಲ್ಲಾ ರೀಲ್ಸ್ ಮಾಡುತ್ತಿರುತ್ತಾರೆ. ಅಲ್ಲಿನ ಸಹ ಕಲಾವಿದರೊಂದಿಗೆ ರೀಲ್ಸ್ ಮಾಡಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಇನ್ನು ಶರ್ಮಿತಾ ಗೌಡ ಅವರ ಡ್ರೆಸ್ಸಿಂಗ್ ಸೆನ್ಸ್ ಅನೇಕರಿಗೆ ಇಷ್ಟವಾಗಿದೆ. ಸೀರೆಯಲ್ಲೇ ನಟಿಸಿದರೂ, ಸ್ಟೈಲಿಷ್ ಆಗಿ ಉಡುತ್ತಾರೆ. ಕನ್ನಡ ಅಭಿಮಾನಿಗಳು ಸದ್ಯ ಶರ್ಮಿತಾ ಅವರ ನಟನೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಿತ್ಯ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿ ಸಮಾಧಾನ ಪಟ್ಟುಕೊಳ್ಳುವಂತಾಗಿದೆ. ಆದಷ್ಟು ಬೇಗ ಶರ್ಮಿತಾ ಅವರಿಗೆ ಕನ್ನಡದ ಧಾರಾವಾಹಿಯಲ್ಲಿ ನಟಿಸಲು ಮತ್ತೆ ಅವಕಾಶ ಸಿಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಬೀಚ್ ಎದುರು ಶರ್ಮಿತಾ ಹಾಟ್ ಲುಕ್
ಇದೆಲ್ಲದರ ನಡುವೆ ಶರ್ಮಿತಾ ಗೌಡ ಅವರು ಬಿಡುವು ಸಿಕ್ಕಾಗ ಪ್ರವಾಸ ಮಾಡುತ್ತಿರುತ್ತಾರೆ. ಈ ಬಾರಿ ಮಾಲ್ಡೀವ್ಸ್ ಗೆ ಹೋಗಿರುವ ನಟಿ ಶರ್ಮಿತಾ ಅವರು ತಮ್ಮ ಹೊಸ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ಶರ್ಮಿತಾ ಅವರು ಮಾಲ್ಡೀವ್ಸ್ ನಲ್ಲಿ ಬೀಚ್ ಎದುರ ಸ್ವಿಮ್ ಸ್ಯೂಟ್ ಧರಿಸಿದ್ದು ಬ್ಯಾಕ್ ಪೋಸ್ ನಲ್ಲಿ ತೆಗೆಸಿಕೊಂಡ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಶರ್ಮಿತಾ ಅವರ ಹಾಟ್ ಲುಕ್ ಗೆ ಫಿದಾ ಆಗಿದ್ದಾರೆ.


Click it and Unblock the Notifications











