BBK 11 ; ನಿನ್ನದು ಹತ್ತು ರೂಪಾಯಿ ಆಕ್ಟಿಂಗ್, ಉಗ್ರಂ ಮಂಜು ವಿರುದ್ಧ ಭವ್ಯಾ ಕೊತಕೊತ..!
ಬಿಗ್ ಬಾಸ್ ಈ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಕೊಂಚ ಟ್ವಿಸ್ಟ್ ಇಟ್ಟಿದ್ದು ಇದರಿಂದಾಗಿ ಮನೆಯಲ್ಲಿ ಇಬ್ಬರು ಸದಸ್ಯರನ್ನು ಹೊರುಪಡಿಸಿ ಉಳಿದವರೆಲ್ಲಾ ನಾಮಿನೇಟ್ ಆಗಿದ್ದಾರೆ. ನಾಮಿನೇಷನ್ ನಲ್ಲಿಯೂ ಕೂಡ ಎಲ್ಲರೂ ಸಿಲ್ಲಿ ಸಿಲ್ಲಿ ಕಾರಣಗಳು ಮತ್ತು ಹಳೆಯ ರೀಸನ್ ಗಳನ್ನೇ ನೀಡಿದ್ದು, ನಾಮಿನೇಟ್ ಮಾಡಲೇಬೇಕು ಎಂದು ಮಾಡಿದ್ದಾರೆ. ತಮಗೆ ತಾವುಗಳೇ ಗುಂಪನ್ನು ಮಾಡಿಕೊಂಡು ತಮ್ಮ ವಿರುದ್ಧ ಗುಂಪಿನಲ್ಲಿರುವವರನ್ನು ನಾಮಿನೇಟ್ ಮಾಡಿ ಖುಷಿ ಪಟ್ಟಿದ್ದಾರೆ. ಆದರೆ, ಹನುಮಂತುಗೆ ಹೆಚ್ಚುವರಿ ಜವಾಬ್ದಾರಿಯನ್ನು ಕೊಟ್ಟ ಕಾರಣ ಮನೆಯವರೆಲ್ಲಾ ನಾಮಿನೇಟ್ ಆಗಿದ್ದಾರೆ.
ವೈಲೆಂಟ್ ಆಗಿರುವ ಸದಸ್ಯರು
ತ್ರಿವಿಕ್ರಮ್ ಮತ್ತು ಗೌತಮಿ ಮಾತ್ರ ನಾಮಿನೇಷನ್ ನಿಂದ ದೂರ ಉಳಿದಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಮಾನಸ, ಸುರೇಶ್, ಚೈತ್ರಾ, ಭವ್ಯ ಎಲ್ಲರೂ ಹನುಮಂತು ಭಾರೀ ಕಿಲಾಡಿ ವ್ಯಕ್ತಿ. ಅವನು ನಾವು ತಿಳಿದುಕೊಂಡಂತೆ ಅಲ್ಲ ಎಂದಿದ್ದಾರೆ. ಹನುಮಂತು ತನಗೆ ಅನ್ನಿಸಿದಂತೆ ಪ್ರಾಮಾಣಿಕವಾದ ಕಾರಣಗಳನ್ನು ಕೊಟ್ಟರೂ ಕೂಡ ಎಲ್ಲರೂ ವಾದ ಮಾಡುತ್ತಾರಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ. ಇನ್ನು ಇದನ್ನೆಲ್ಲಾ ಹೊರತು ಪಡಿಸಿ ಮನೆಯವರಲ್ಲಿನ ಮುನಿಸು ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಸೈಲೆಂಟ್ ಆಗಿದ್ದ ಮೋಕ್ಷಿತಾ ಕೂಡ ವೈಲೆಂಟ್ ಆಗಿದ್ದಾರೆ. ಪಾಸಿಟಿವ್ ಎಂದು ನಗುನಗುತ್ತಲೇ ಎಲ್ಲವನ್ನೂ ಸ್ವೀಕರಿಸುತ್ತಿದ್ದ ಗೌತಮಿ ಕೂಡ ಈಗ ಗರಂ ಆಗಿದ್ದಾರೆ. ಮನೆಯಲ್ಲಿನ ಸದಸ್ಯರೆಲ್ಲರೂ ಪ್ರತಿಯೊಂದು ವಿಚಾರವನ್ನೂ ವ್ಯೆಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದು, ವೈರತ್ವವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಮಂಜು ಆಟಕ್ಕೆ ಬೀಳುತ್ತಾ ಬ್ರೇಕ್
ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಬೇಕಂತಲೇ ಗೌತಮಿ, ಮೋಕ್ಷಿತಾ ಹಾಗೂ ಉಗ್ರಂ ಮಂಜುನ ಟಾರ್ಗೆಟ್ ಮಾಡುತ್ತಿದ್ದಾರೆ. ಮೊದಲು ಈ ಮೂವರನ್ನು ಮನೆಯಿಂದ ಹೊರಗೆ ಹಾಕಬೇಕು ಎಂದುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಪ್ರತಿ ಬಾರಿ ನಾಮಿನೇಷನ್ ಬಂದಾಗ, ಆಟ ಬಂದಾಗ ಪ್ರತಿಯೊಂದರಲ್ಲೂ ಈ ಮೂವರನ್ನು ಹಿಂದಿಕ್ಕಬೇಕು ಎಂದು ಯತ್ನಿಸುತ್ತಿರುತ್ತಾರೆ. ಇನ್ನು ಉಗ್ರಂ ಮಂಜು ಮಾತುಗಳನ್ನು ಮನೆಯಲ್ಲಿ ಯಾರೂ ಒಪ್ಪಲು ತಯಾರಿಲ್ಲ. ಈಗಾಗಲೇ ಮೋಕ್ಷಿತಾ ವಿಚಾರದಲ್ಲಿ ತ್ರಿವಿಕ್ರಮ್ ಆಡಿದ ಮಾತುಗಳನ್ನು ಮೋಕ್ಷಿತಾ ಬಳಿ ಮಂಜು ಹೇಳಿದ್ದಕ್ಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟಾಸ್ಕ್ ಉಸ್ತುವಾರಿಯಾದ ಮಂಜು
ಇಂದಿನ ಟಾಸ್ಕ್ ನಲ್ಲಿ ಬಿಗ್ ಬಾಸ್ ನಾಲ್ಕು ಜನರ ಒಂದು ಗುಂಪನ್ನು ಮಾಡಿದ್ದು, ಅದರ ಪ್ರಕಾರ ತಾವು ನೋಡಿದ ಚಿತ್ರವನ್ನು ನಾಲ್ಕು ಭಾಗವಾಗಿ ಒಬ್ಬೊಬ್ಬರು ಒಂದೊಂದು ಭಾಗವನ್ನು ಬಿಡಿಸಬೇಕು. ನಾಲ್ಕೂ ಭಾಗವನ್ನು ಜೋಡಿಸಿದಾಗ ಚಿತ್ರ ಯಾವುದೆಂದು ಗುರುತಿಸುವಂತಿರಬೇಕು. ಇದರ ಉಸ್ತುವಾರಿ ಮಂಜು ಕೈಸೇರಿದೆ. ಗೌತಮಿ ಗುಂಪು ಆಟದಲ್ಲಿ ಗೆದ್ದಿದ್ದಾರೆ ಎಂದು ಮಂಜು ಹೇಳಿದ್ದು ಭವ್ಯ ಟೀಮ್ ಸೋತಿದೆ ಎಂದು ಹೇಳುತ್ತಾರೆ. ಇದರಿಂದ ಕೋಪಗೊಂಡ ಭವ್ಯ ಮಂಜು ಜೊತೆಗೆ ಜಗಳಕ್ಕೆ ಇಳಿದಿದ್ದಾರೆ. ಮಂಜು ಗುಣದ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಮಂಜು ಕೂಡ ರೊಚ್ಚಿಗೆದ್ದಿದ್ದಾರೆ
ಮಂಜು ವಿರುದ್ಧ ಸಿಡಿದ ಭವ್ಯ
ನನ್ನ ಗುಣದ ಬಗ್ಗೆ ಮಾತನಾಡಲು ನೀನ್ಯಾರು ಎಂದು ಮಂಜು ಪ್ರಶ್ನೆ ಮಾಡಿದ್ದಾರೆ. ಭವ್ಯ ತನ್ನ ಕೋಪವನ್ನೆಲ್ಲಾ ಹೊರ ಹಾಕಿದ್ದು, ಹತ್ತು ರೂಪಾಯಿ ಆಕ್ಟಿಂಗ್ ಎಂದು ಹೀಯಾಳಿಸಿದ್ದಾರೆ. ಇಬ್ಬರ ನಡುವೆಯೂ ಹೀಗೆ ಬಿಗ್ ಫೈಟ್ ಆಗಿದೆ. ಇಷ್ಟು ದಿನ ಮನೆಯಲ್ಲಿ ಸೈಲೆಂಟ್ ಆಗಿದ್ದವರೆಲ್ಲಾ ಈಗ ವೈಲೆಂಟ್ ಆಗಿ ಜಗಳಕ್ಕೆ ಇಳಿಯುತ್ತಿದ್ದಾರೆ. ಗೌತಮಿ, ಧನರಾಜ್, ಭವ್ಯ, ಮೋಕ್ಷಿತಾ ಎಲ್ಲರೂ ಜಗಳ ಮಾಡುತ್ತಿದ್ದಾರೆ. ಇನ್ನು ಮಂಜು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ವಿಚಾರಗಳನ್ನು ರವಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸುರೇಶ್, ತ್ರಿವಿಕ್ರಮ್, ಭವ್ಯ ಎಲ್ಲರೂ ಮಂಜು ವಿರುದ್ಧ ಸಿಡಿದೆದ್ದಿದ್ದಾರೆ.


Click it and Unblock the Notifications











