BBK 11; ಶಿಶಿರ್ ಮಾಡಿದ ತ್ಯಾಗಕ್ಕಿಲ್ಲ ಬೆಲೆ : ಆಫರ್ ಕೊಟ್ಟು ಜಗಳ ತಂದಿಟ್ಟರಾ ಬಿಗ್ ಬಾಸ್..?
ಬಿಗ್ ಬಾಸ್ ಈ ಬಾರಿ ಮನೆಯ ಸದಸ್ಯರನ್ನು ಜೋಡಿ ಮಾಡಿ ಆಡಿಸುತ್ತಿದೆ. ವಿರುದ್ಧ ಆಲೋಚನೆಯವರು ಎಂದು ಹೇಳಿ ಜೋಡಿಗಳನ್ನು ಆರಿಸಲಾಗಿದೆ.ಇದರಿಂದ ಮನೆಯಲ್ಲಿ ಕೆಲವೊಂದು ಮುನಿಸುಗಳು ಇದ್ದು, ಮತ್ತು ಕೆಲವರು ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಎಲ್ಲರೂ ಒಮ್ಮತದಿಂದ ಪ್ರತೀ ವಿಚಾರಕ್ಕೂ ಸುರೇಶ್ ನನ್ನು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಈಗ ಜೋಡಿಯಾಗಿರುವಾಗಲೂ ಸುರೇಶ್ ನನ್ನು ನಾಮಿನೇಟ್ ಮಾಡಬೇಕು ಎಂಬ ಕಾರಣಕ್ಕೆ, ಕಾರಣವಿಲ್ಲದಿದ್ದರೂ ಅನಿವಾರ್ಯವಾಗಿ ಅನುಷಾಳನ್ನು ನಾಮಿನೇಟ್ ಮಾಡಿದ್ದಾರೆ.
ಡೇಂಜರ್ ಝೋನ್ ನಲ್ಲಿ ಸ್ಫರ್ಧಿಗಳು
ಇತ್ತ ಅನುಷಾ ಕೂಡ ತಾನು ನಾಮಿನೇಟ್ ಆಗಿರುವುದಕ್ಕೆ ಧರ್ಮನ ಮೇಲೆ ಕೂಗಾಡಿದ್ದಾಳೆ. ಕಳೆದ ಆರೇಳು ವರ್ಷಗಳಿಂದ ಸ್ನೇಹಿತರಾಗಿದ್ದ ಈ ಜೋಡಿ ಈಗ ಜಗಳ ಮಾಡುತ್ತಿದ್ದಾರೆ. ಮನೆಯವರೆಲ್ಲಾ ಧರ್ಮ ಮತ್ತು ಅನುಷಾ ದೂರಾಗಲು ಐಶ್ವರ್ಯ ಕಾರಣವಾದಳು ಎಂಬಂತೆ ಬಿಂಬಿಸುತ್ತಿದ್ದಾರೆ. ಇದರಿಂದ ಬೇಸತ್ತ ಐಶ್ವರ್ಯ ಕೂಡ ಕಣ್ಣೀರು ಹಾಕಿದ್ದಾರೆ. ಅನುಷಾ ಧರ್ಮನ ಜೊತೆಗೆ ಮಾತನಾಡುವುದನ್ನು ಕಂಪ್ಲೀಟ್ ಆಗಿ ಅವಾಯ್ಡ್ ಮಾಡಿದ್ದಾಳೆ. ಇನ್ನು ಮಂಜು, ಮೋಕ್ಷಿತಾ ಹಾಗೂ ಗೌತಮಿ ಗುಂಪು ಕೂಡ ಈಗ ಬೇರೆಯಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸದ್ಯ ಆರು ಜೋಡಿಗಳಿದ್ದಾರೆ. ತ್ರಿವಿಕ್ರಮ್ ಕ್ಯಾಪ್ಟನ್ ಆಗಿದ್ದು, ಚೈತ್ರಾ ಮತ್ತು ಐಶ್ವರ್ಯ ಹೊರತು ಪಡಿಸಿ ಮತ್ತೆಲ್ಲರೂ ನಾಮಿನೇಟ್ ಆಗಿದ್ದಾರೆ. ಶಿಶಿರ್, ಧರ್ಮಾ, ಧನರಾಜ್, ಮೋಕ್ಷಿತಾ, ಮಂಜು, ಭವ್ಯ, ಗೌತಮಿ, ಹನುಮಂತ, ಗೋಲ್ಡ್ ಸುರೇಶ್, ಅನುಷಾ ನಾಮಿನೇಟ್ ಆಗಿದ್ದು, ಎಲ್ಲರೂ ಡೇಂಜರ್ ಝೋನ್ ನಲ್ಲಿ ಇದ್ದಾರೆ.

ಬಿಗ್ ಬಾಸ್ ನೀಡಿದ ಆಫರ್
ಹೀಗಾಗಿ ಈಗ ಬಿಗ್ ಬಾಸ್ ಮನೆಯ ಕೆಲ ಸದಸ್ಯರಿಗೆ ಆಫರ್ ಒಂದನ್ನು ನೀಡಿದ್ದಾರೆ. ನಿಮ್ಮ ಜೋಡಿಯನ್ನು ಬದಲಿಸುವ ಅವಕಾಶವಿದ್ದು, ತ್ರಿವಿಕ್ರಮ್ ನನ್ನು ರಿಪ್ಲೇಸ್ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಅನುಷಾ ಸೇರಿದಂತೆ ಮನೆಯ ಎಲ್ಲಾ ಮಹಿಳಾ ಸದಸ್ಯರಿಗೂ ಬಿಗ್ ಬಾಸ್ ಈ ಆಫರ್ ಅನ್ನು ನೀಡಿದ್ದಾರೆ. ಪ್ರೊಮೋದಲ್ಲಿ ಚೈತ್ರಾ ಕುಂದಾಪುರ ಮಾತ್ರ ನಾನು ಶಿಶಿರ್ ಬದಲು ತ್ರಿವಿಕ್ರಮ್ ನನ್ನು ಜೋಡಿಯಾಗಿ ಪಡೆಯಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಮನೆಯಲ್ಲೂ ಈ ವಿಚಾರಕ್ಕೆ ದೊಡ್ಡ ಜಗಳವೇ ಆಗಿದೆ.
ನಾಮಿನೇಟ್ ಆದ ಶಿಶಿರ್
ಶಿಶಿರ್ ನಾಮಿನೇಷನ್ ವಿಚಾರ ಬಂದಾಗ ಚೈತ್ರಾಳಿಗೆ ಈ ಮನೆಯಲ್ಲಿ ಇರುವುದು ಬಹಳ ಮುಖ್ಯ ಎಂದು ತಿಳಿದು ತಾನೇ ನಾಮಿನೇಟ್ ಆಗಿ ತ್ಯಾಗ ಮಾಡಿದ್ದ. ಚೈತ್ರಾ ಕೂಡ ತನಗೆ ಈ ಮನೆಯಲ್ಲಿ ಇರುವುದು ಬಹಳ ಮುಖ್ಯ. ತನ್ನ ತಾಯಿ ತಲೆ ಎತ್ತಿ ಓಡಾಡಬೇಕೆಂದರೆ ನಾನು ನನ್ನನ್ನು ಪ್ರೂವ್ ಮಾಡಿಕೊಳ್ಳಬೇಕು ಎನ್ನುತ್ತಾರೆ. ಹೀಗಾಗಿ ಶಿಶಿರ್ ಚೈತ್ರಾಳಿಗಾಗಿ ತ್ಯಾಗ ಮಾಡುತ್ತಾರೆ. ಆಗ ಕಣ್ಣಿರು ಹಾಕಿದ ಚೈತ್ರಾ ಈಗ ಅದೆಲ್ಲವನ್ನೂ ಮರೆತು ಶಿಶಿರ್ ಬೇಡ ಎಂದಿರುವುದು ನೋವುಂಟು ಮಾಡಿದೆ.
ಸಂಕಷ್ಟಕ್ಕೆ ಸಿಲುಕಿದ ಶಿಶಿರ್
ಶಿಶಿರ್ ಈ ಮಾತಿಗೆ ಕೋಪ ಮಾಡಿಕೊಡಿದ್ದು, ಚೈತ್ರಾ ವಿರುದ್ಧ ಕೂಗಾಡಿದ್ದಾನೆ. 12 ವರ್ಷ ನಾನು ಮಾಡಿಕೊಂಡು ಬಂದದ್ದೆಲ್ಲಾ ವ್ಯರ್ಥ. ನಾನಲ್ಲ ಕಲಾವಿದ ಇವರು ನಟನೆ ಮುಂದೆ ನಮ್ಮದೇನು ಅಲ್ಲ ಎಂದು ಚೈತ್ರಾಳ ನಾಟಕಕ್ಕೆ ಬೆರಗಾಗಿದ್ದಾರೆ. ಚೈತ್ರಾ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಭರದಲ್ಲಿ ಪ್ರತಿ ಬಾರಿಯೂ ಮಾತು ಬದಲಾಯಿಸುತ್ತಾರೆ. ಇದರಿಂದ ಈಗ ಶಿಶಿರ್ ಸಂಕಟದಲ್ಲಿ ಸಿಲುಕಿದ್ದಾರೆ. ಕೃತಜ್ಞತೆ ಇಲ್ಲದ ಚೈತ್ರಾ ಡಬಲ್ ಗೇಮ್ ಆಡಿದ್ದು, ಶಿಶಿರ್ ಉಳಿಯುವಿಕೆಯ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರಿದೆ. ಜೋಡಿಗಳ ಆಟದಲ್ಲಿ ಈಗ ಮುಂದೇನಾಗಬಹುದು ಎಂಬ ಕುತೂಹಲ ಮೂಡಿದೆ.


Click it and Unblock the Notifications











