Bigg Boss 11 ; ಬಿಗ್ ಬಾಸ್ ಎಂಬ ಕಾಡಿನಲ್ಲಿ ಧನರಾಜ್ ಆಚಾರ್ ಜಿಂಕೆ ಮರಿ...!

By ಪ್ರಿಯಾ ದೊರೆ

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೇ ಆಟ ಜೋರಾಗಿದೆ. ಕಿತ್ತಾಟ, ಜಗಳ, ಗೊಂದಲ ಎಲ್ಲವೂ ಶುರುವಾಗಿದೆ. ನರಕದಲ್ಲಿ ಏಳೇ ಜನರಿದ್ದರೂ ಒಗ್ಗಟ್ಟಾಗಿರಲು ಯತ್ನಿಸಿದ್ದಾರೆ. ಆದರೆ ಸ್ವರ್ಗದಲ್ಲಿ ಎಲ್ಲಾ ಇದ್ದರೂ ಕೂಡ ಒಬ್ಬರ ಅಭಿಪ್ರಾಯ ಬೇರೆ ಬೇರೆಯಾಗಿದೆ. ತಮ್ಮ ತಮ್ಮಲ್ಲೇ ವೈಮನಸ್ಸು ಹೊಂದಿದ್ದು, ಬಿಗ್ ಬಾಸ್ ಕೊಟ್ಟ ಲಕ್ಷುರಿ ಬಜೆಟ್ ಕಳೆದುಕೊಂಡಿದ್ದಾರೆ. ಬಿಗ್ ಬಾಸ್ ಟಾಸ್ಕ್, ನಾಮಿನೇಷನ್ ಎಲ್ಲವೂ ಶುರುವಾಗಿದ್ದು, ಮೊದಲ ವಾರದ ಮೊದಲ ದಿನವೇ ಚೈತ್ರಾ ಕುಂದಾಪುರ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಕಾಡಲ್ಲಿ ಜಿಂಕೆ ಮರಿ

ಇನ್ನು ಬಿಗ್ ಬಾಸ್ ಮನೆಗೆ ಧನರಾಜ್ ಆಚಾರ್ ಅವರು ಆಗಮಿಸಿದ್ದು, ಮೊದಲ ದಿನ ಸೈಲೆಂಟ್ ಆಗಿದ್ದನ್ನು ಕಂಡು ಬಿಗ್ ಬಾಸ್ ಕೆಲಸವೊಂದನ್ನು ನೀಡಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಧನರಾಜ್ ಮತ್ತು ಭವ್ಯ ಗೌಡ ಎಲ್ಲರ ಬಗ್ಗೆ ಕಮೆಂಟ್ ಮಾಡುತ್ತಿದ್ದರು. ಜಗಳ ಶುರುವಾಗುತ್ತಿದ್ದಂತೆ ಸೈಲೆಂಟ್ ಆದರು. ಇದನ್ನು ಕಂಡು ಬಿಗ್ ಬಾಸ್ ಧನರಾಜ್ ಅವರನ್ನು ಕನ್ಫೆಷನ್ ರೂಮಿಗೆ ಕರೆದು, ಕಾಮಿಡಿ ಮಾಡ್ಕೊಂಡು ಇರಿ, ಬಿಗ್ ಬಾಸ್ ಎಂಬ ಕಾಡಿನಲ್ಲಿ ನೀವು ಜಿಂಕೆ ಮರಿ ಇದ್ದಂತೆ. ಎಲ್ಲರನ್ನು ನಗಿಸಬೇಕು ಎಂದಿದ್ದಾರೆ. ಬಿಗ್ ಬಾಸ್ ಮತ್ತು ಧನರಾಜ್ ಅವರ ಮಾತುಗಳನ್ನು ಕೇಳಿದ ವೀಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ.

Written Update on Bigboss season 11 contestant dhanraj achar

ರಿಯಾಲಿಟಿ ಶೋ ಮೂಲಕ ಫೇಮಸ್

ಅಷ್ಟಕ್ಕೂ ಧನರಾಜ್ ಅವರು ರಿಯಾಲಿಟಿ ಶೋಗೆ ಹೊಸಬರೇನೂ ಅಲ್ಲ. ಅದರಲ್ಲೂ ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರವಾಗುತ್ತಿದ್ದ ಗಿಚ್ಚ ಗಿಲಿ ಗಿಲಿ ಕಾಮಿಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ತಮ್ಮ ಸಾಫ್ಟ್ ಭಾಷೆಯ ಮೂಲಕವೇ ಜನರ ಮನಸ್ಸನ್ನು ಗೆದ್ದಿದ್ದರು. ಇದಕ್ಕೂ ಮುನ್ನ ಧನರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ರೀಲ್ಸ್ ಗಳನ್ನು ಮಾಡುತ್ತಿದ್ದರು. ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮದೇ ಆದ ವ್ಲಾಗ್ ಕೂಡ ಹೊಂದಿದ್ದಾರೆ. ಕಳೆದ ಒಂದು ವರ್ಷದಿಂದ ಧನರಾಜ್ ಅವರು ಕುಟುಂಬದ ಜೊತೆಗೆ, ಕೆಲ ಕಾಮಿಡಿ ವ್ಲಾಗ್ ಗಳನ್ನು ಮಾಡಿದ್ದು, ಇದುವರೆಗೂ 86 ವೀಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾರೆ.

ಕಾಮಿಡಿ ಮಾಡುವ ಧನರಾಜ್ ಆಚಾರ್

ಫ್ಯಾಮಿಲಿ ಜೊತೆಗೆ ಸೇರಿಕೊಂಡು ಸಾಕಷ್ಟು ಕಾಮಿಡಿ ವೀಡಿಯೋಗಳನ್ನು ಮಾಡಿರುವ ಧನರಾಜ್ ಅವರು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಇನ್ನು ಅಬ್ಬಬ್ಬಾ ಎಂಬ ಸಿನಿಮಾದಲ್ಲಿಯೂ ಧನರಾಜ್ ಅವರು ನಟಿಸಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವಿನ ತಂದೆಯಾಗಿರುವ ಧನರಾಜ್ ಅವರು, ಮಗಳು ಹುಟ್ಟಿದ ದಿನವೇ ಬಿಗ್ ಬಾಸ್ ಫೋನ್ ಬಂತು. ಆದರೆ, ಮಗಳನ್ನು ಬಿಟ್ಟು ಮೂರು ತಿಂಗಳು ಇರಲು ಸಾಧ್ಯವಿಲ್ಲ. ಹಾಗಾಗಿ ಆಫರ್ ಕೈ ಬಿಡಬೇಕೆಂದಿದ್ದೆ. ಆದರೆ, ಮಗಳೇ ತಂದ ಭಾಗ್ಯ ಇದು ಎಂದು ಭಾವಿಸಿರುವ ಧನರಾಜ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಎಷ್ಟು ದಿನ ಉಳಿಯಬಹುದು ಧನರಾಜ್

ಬೇರೆ ಕಂಟೆಸ್ಟೆಂಟ್ ಗಳಿಗೆ ಹೋಲಿಸಿಕೊಂಡರೆ ಬಹಳ ಮೃದುವಾಗಿರುವ ಧನರಾಜ್ ಅವರು, ತಮ್ಮ ಕಾಮಿಡಿ ಮೂಲಕ ಎಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎಂಬ ಕುತೂಹಲವಂತೂ ಇದ್ದೇ ಇದೆ. ಅದರೊಂದಿಗೆ ಟಾಸ್ಕ್ ಗಳಲ್ಲಿ ಧನರಾಜ್ ಅವರು ಹೇಗೆ ಆಡುತ್ತಾರೆ..? ಮನೆಯಲ್ಲಿರುವ ಇತರೆ ಸದಸ್ಯರ ಮನಸ್ಸನ್ನು ಗೆಲ್ಲುತ್ತಾರಾ..? ಎಂಬೆಲ್ಲಾ ಪ್ರಶ್ನೆಗಳು ಕೂಡ ಮೂಡಿದ್ದು, ವೀಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X