BBK 11 ; ನಾನು ಪಾತ್ರೆ ತೊಳೆಯಲ್ಲ, ತೊಳೆದ್ರೆ ನಾನು ಗಂಡಸೇ ಅಲ್ಲ- ಚೈತ್ರಾಗೆ ರಜತ್ ಸವಾಲು!

By ಪ್ರಿಯಾ ದೊರೆ

ಬಿಗ್ ಬಾಸ್ ನಿನ್ನೆಯ ಸಂಚಿಕೆಯಲ್ಲಿ ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್, ಅವರನ್ನು ಕರೆಸಿದ್ದರು. ಇವರಿಂದ ನಾಮಿನೇಷನ್ ಆಟಗಳನ್ನು ಆಡಿಸಿದ್ದರು.ಇವರ ಎದುರಿಗೂ ನಾಮಿನೇಷನ್ ಗೆ ವಾದ-ವಿವಾದಗಳು ನಡೆದವು. ಧನರಾಜ್, ಶಿಶಿರ್ ನಡುವೆ ಸಾಕಷ್ಟು ಮಾತು-ಕತೆಗಳು ನಡೆದವು. ಆದರೆ, ತನಿಷಾ ಎಲ್ಲರನ್ನೂ ಸಮಾಧಾನಗೊಳಿಸಲು ಯತ್ನಿಸಿದರು. ಇನ್ನು ಮೋಕ್ಷಿತಾ ನಾಮಿನೇಷನ್ ಮಾಡಿದಾಗ ಯಾರೂ ವಾದವೇ ಮಾಡಲಿಲ್ಲ. ಮೋಕ್ಷಿತಾ ಸದ್ಯ ಕೂಡ ಯಾರ ಮಾತನ್ನು ಕೇಳಲು ತಯಾರಿರಲಿಲ್ಲ.

ಮನೆಗೆ ಬಂದ ನಮ್ರತಾ, ಕಾರ್ತಿಕ್ ಮಹೇಶ್

ತನಿಷಾ ಮನೆಗೆ ಬಂದು ಮೋಕ್ಷಿತಾ ಮತ್ತು ಮಂಜು ನಡುವಿನ ಮುನಿಸನ್ನು ಸರಿ ಮಾಡಲು ಪ್ರಯತ್ನಿಸಿದರು. ತನಿಷಾ ಮಾತುಗಳಿಗೆ ಕರಗಿದ ಮಂಜು ಮೋಕ್ಷಿತಾ ಬಳಿ ಕ್ಷಮೆ ಕೇಳಿದ. ಕೋಪದಲ್ಲಿ ಆಡಿದ ಮಾತಿಗಳಿಗೆ ಕ್ಷಮೆ ಇರಲಿ, ನೀನು ಯಾವತ್ತಿದ್ದರೂ ನನ್ನ ತಂಗಿ ಎಂದು ತಬ್ಬಿಕೊಂಡು ಕಣ್ಣಾಲಿಗಳನ್ನು ಒದ್ದೆ ಮಾಡಿಕೊಳ್ಳುತ್ತಾನೆ. ಆದರೆ, ಮೋಕ್ಷಿತಾ ಮತ್ತೆ ಒಂದಾಗುವ ಮನಸ್ಸು ಮಾಡಲಿಲ್ಲ. ಇನ್ನು ಇಂದು ಮನೆಗೆ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ಎಂಟ್ರಿ ಕೊಟ್ಟಿದ್ದಾರೆ. ಇವರಿಬ್ಬರೂ ಕೂಡ ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಹನುಮಂತು ಮತ್ತು ಧನರಾಜ್ ಇಬ್ಬರೂ ರಜತ್ ನನ್ನು ನಾಮಿನೇಟ್ ಮಾಡಿದ್ದಾರೆ.

Written Update on Bigboss season 11 on today s episode

ಧನರಾಜ್ ಜೊತೆಗೆ ರಜತ್ ಕಿತ್ತಾಟ

ರಜತ್ ಇಬ್ಬರ ಮಾತನ್ನೂ ಒಪ್ಪುವುದಿಲ್ಲ. ಇಬ್ಬರ ಜೊತೆಗೂ ವಾದ ಮಾಡುತ್ತಾನೆ. ಹನುಮಂತು ಮಾತು ಮುಂದುವರಿಸದೇ, ನನಗೆ ಅನಿಸಿದ್ದನ್ನು ನಾನು ಹೇಳಿದ್ದೇನೆ ಎಂದು ಸುಮ್ಮನಾಗುತ್ತಾನೆ. ಆದರೆ, ಧನರಾಜ್ ರಜತ್ ಮಾತಿಗೆ ಮಾತು ಕೊಟ್ಟು ಕೆಲ ಸಮಯ ವಾದ-ವಿವಾದ ಮಾಡುತ್ತಾರೆ. ರಜತ್ ಧನರಾಜ್ ಅನ್ನು ನೀನು ಮಗು ಇದ್ದ ಹಾಗೆ ಎಂದು ವ್ಯಂಗ್ಯ ಮಾಡುತ್ತಾನೆ. ರಜತ್ ಮಾತಿಗೆ ಸುಮ್ಮನಾಗದ ಧನರಾಜ್ ರಜತ್ ಬಳಿ ಹೋಗಿ ಮಗುವಿನಂತೆ ಆಡಲು ಮುಂದಾಗುತ್ತಾನೆ. ಆಗ ರಜತ್ ಮತ್ತು ಧನರಾಜ್ ಇಬ್ಬರೂ ಗುದ್ದಾಡಲು ಮುಂದಾಗಿದ್ದು, ಮಂಜು ಮತ್ತು ಗೌತಮಿ ಬಿಡಿಸಲು ಯತ್ನಿಸುತ್ತಾರೆ.


ಪಾತ್ರೆ ತೊಳೆಯಲು ಚಾಲೆಂಜ್

ಇನ್ನು ಮನೆಯ ಕೆಲಸ ಮಾಡುವುದರಲ್ಲಿ ರಜತ್ ಸೋಂಬೇರಿ ಎಂದು ಈಗಾಗಲೇ ಸಾಕಷ್ಟು ಬಾರಿ ಎಲ್ಲರೂ ಹೇಳಿದ್ದಾರೆ. ಈಗ ಚೈತ್ರಾ ಜೊತೆಗೆ ಪಾತ್ರೆ ತೊಳೆಯುವ ವಿಚಾರಕ್ಕೆ ರಜತ್ ಜಗಳಕ್ಕೆ ಬಿದ್ದಿದ್ದಾನೆ. ಬೆಳಗ್ಗೆ ನಾನು ಪಾತ್ರೆ ತೊಳೆದಿದ್ದೇನೆ. ಚಿತ್ರಾನ್ನ ಮಾಡಲು ಸಹಾಯ ಮಾಡಿದ್ದೇನೆ. ಹಾಗಾಗಿ ಈಗ ನಾನು ಪಾತ್ರೆ ತೊಳೆಯುವುದಿಲ್ಲ ಎಂದು ರಜತ್ ಹೇಳಿದ್ದು, ಚೈತ್ರಾ ಈಗ ಪಾತ್ರೆ ನೀನೇ ತೊಳೆಯಬೇಕು ಎಂದು ಹಠ ಮಾಡಿದ್ದಾಳೆ. ರಜತ್ ನಾನು ನಿನ್ನ ಮೇಲಿನ ಚಾಲೇಂಜ್ ಗೆ ಪಾತ್ರೆ ತೊಳೆಯುವುದಿಲ್ಲ. ಹಾಗೇನಾದರೂ ನಾನು ಪಾತ್ರೆ ತೊಳೆದರೆ, ಗಂಡಸೇ ಅಲ್ಲ ಎಂದು ಚಾಲೇಂಜ್ ಮಾಡಿದ್ದಾನೆ. ರಜತ್ ತಾನು ಮಾಡಿದ ಚಾಲೇಂಜ್ ನಲ್ಲಿ ತಾನೇ ಸೋಲುತ್ತಾನಾ ಇಲ್ಲವೇ ಚೈತ್ರಾಳನ್ನು ಸೋಲಿಸುತ್ತಾನಾ ಕಾದು ನೋಡಬೇಕಿದೆ.


ಹೊಸ ಆಟ ಕೊಟ್ಟ ಬಿಗ್ ಬಾಸ್

ಇನ್ನು ಬಿಗೆ ಬಾಸ್ ಹೊಸ ಟಾಸ್ಕ್ ಅನ್ನು ನೀಡಿದ್ದಾರೆ. ಅದರ ಪ್ರಕಾರ ಮನೆಯ ಸದಸ್ಯರಲ್ಲಿ ತಮಗೆ ಬೇಕಾದವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಗೌತಮಿ ಸ್ನೇಹ ಮುರಿದುಕೊಂಡು ಒಬ್ಬರೇ ಇರುವುದು, ಕುಗ್ಗಿಸಿದರು ಎಂದು ಒದ್ದಾಡುವುದಕ್ಕಿಂತ ಜೊತೆಗಿದ್ದು ಆಡುವುದು ಲೇಸು ಎಂದು ಮೋಕ್ಷಿತಾರನ್ನು ಆರಿಸಿಕೊಂಡಿದ್ದಾಳೆ. ಆದರೆ, ಮೋಕ್ಷಿತಾ ಗೌತಮಿ ಆಯ್ಕೆಯನ್ನು ತಿರಸ್ಕರಿಸಿದ್ದಾಳೆ. ಬಿಗ್ ಬಾಸ್ ಮೋಕ್ಷಿತಾ, ಗೌತಮಿ ಮತ್ತು ಮಂಜು ಮೂವರನ್ನು ಒಂದು ಮಾಡಲು ಸಾಕಷ್ಟು ಪ್ರಯತ್ನ ಪಡುತ್ತಿದ್ದು, ಮೋಕ್ಷಿತಾ ತಮ್ಮ ನಿರ್ಧಾರದಲ್ಲಿ ಧೃಡವಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X