BBK 11 Grand Finale ; ಟಾಪ್ 3 ಫೈನಲಿಸ್ಟ್ ಗಳಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ , ಯಾರಿಗೆ ಸಿಗುತ್ತೆ ಕಪ್..?
120 ದಿನಗಳ ಬಿಗ್ ಬಾಸ್ ಸೀಸನ್ 11 ಫಿನಾಲೆ ತಲುಪಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಈ ಬಿಗ್ ಬಾಸ್ ಸೀಸನ್ 11 ಕೂಡ ಮುಕ್ತಾಯಗೊಳ್ಳಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಫಿನಾಲೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈಗಾಗಲೇ ವೇದಿಕೆ ಮೇಲೆ ಹತ್ತುವ ಇಬ್ಬರು ಫೈನಲಿಸ್ಟ್ ಗಳು ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಭವ್ಯ ನಿನ್ನೆಯೇ ಎಲಿಮಿನೇಟ್ ಆಗಿ ಹೊರಬಂದಿದ್ದು, ಇದೀಗ ಉಗ್ರಂ ಮಂಜು ಎಲಿಮಿನೇಟ್ ಆಗಿದ್ದಾರೆ. ಇನ್ನು ನಾಲ್ಕು ಮಂದಿ ಬಿಗ್ ಬಾಸ್ ಮನೆಯಲ್ಲಿ ನೆಲೆಸಿದ್ದು, ವೇದಿಕೆ ಮೇಲೆ ಯಾರು ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಮಂಜು ಕೈ ತಪ್ಪಿದ ಕಪ್..!
ಇದರೊಟ್ಟಿಗೆ ವೀಕ್ಷಕರೆಲ್ಲಾ ಉಗ್ರಂ ಮಂಜು ಅವರು ಗೆಲ್ಲುತ್ತಾರೆ. ಮಂಜು ಕೈಗೆ ಕಪ್ಪು ಸಿಗುವುದು ಪಕ್ಕಾ ಎಂದು ಗೆಸ್ ಮಾಡಿದ್ದರು. ವಿಪರ್ಯಾಸವೆಂದರೆ ಮಂಜು ಅವರು ಟಾಪ್ 5 ಕಂಟೆಸ್ಟೆಂಟ್ ಆಗಿ ಎಲಿಮಿನೇಟ್ ಆಗಿದ್ದಾರೆ. ಕಿಚ್ಚ ಸುದೀಪ್ ಅವರು ಆಫರ್ ಕೊಟ್ಟರೂ ಒಲ್ಲೆ ಎಂದ ಮಂಜು ಎಲಿಮಿನೇಟ್ ಆಗಿ ಎಲ್ಲರಿಗೂ ಶಾಕ್ ಕೊಟ್ಟರು. ಮನೆಗೆ ಬಂದ ದಿನದಿಂದಲೂ ತಮ್ಮದೇ ರೀತಿಯಲ್ಲಿ ಆಟವಾಡಿ, ಕೊನೆ ಕೊನೆಗೆ ಹಿಂದೆ ಬಿದ್ದ ಮಂಜು ಅವರು, ಕಷ್ಟವೋ ಸುಖವೋ ಟಾಪ್ 5 ಫೈನಲಿಸ್ಟ್ ಸ್ಥಾನಕ್ಕೆ ಬಂದು ತಲುಪಿದ್ದರು. ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಬಂದಿದ್ದ ಮಂಜು ಅವರು ಎಲಿಮಿನೇಟ್ ಆಗಿದ್ದು, ಹಲವರಿಗೆ ಬೇಸರವನ್ನು ತಂದಿದೆ.

ಮುದ್ದು ಆಮೆಗೆ ಸಿಗದ ಗೆಲುವು..!
ಇನ್ನು ಸುದೀಪ್ ಅವರು ಹಣದ ಆಫರ್ ಕೊಟ್ಟಾಗ ಮನೆಯಲ್ಲಿದ್ದ ಐವರೂ ಕೂಡ ಬೇಡ ಎಂದು ಹೇಳಿದ್ದರು. ಹಣ ಇವತ್ತು ಇರುತ್ತೆ. ನಾಳೆ ಹೋಗುತ್ತೆ. ಆದರೆ, ಗೆಲುವು, ಜನರ ಪ್ರೀತಿ ಬಹಳ ಮುಖ್ಯ ಎಂದು ಐವರೂ ಹೇಳಿದ್ದಾರೆ. ಆದರೆ, ಮಂಜು ಎಲಿಮಿನೇಟ್ ಆದ ಬಳಿಕ ನಟಿ ಮೋಕ್ಷಿತಾ ಪೈ ಅವರ ಸರದಿಯಾಗಿತ್ತು. ಟಾಪ್ ನಾಲ್ನೇ ಸ್ಥಾನಕ್ಕೆ ಬಂದು ತಲುಪಿದ ನಟಿ ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಆಮೆಯಂತೆಯೇ ಇದ್ದರು. ಆಮೆ-ಮೊಲದ ಕಥೆ ಪ್ರತಿಯೊಬ್ಬರಿಗೂ ಗೊತ್ತಿದ್ದರೂ, ಮೋಕ್ಷಿತಾ ಎಂಬ ಆಮೆಯನ್ನು ಮನೆಯವರೆಲ್ಲಾ ನೆಗಲೆಕ್ಟ್ ಮಾಡಿದ್ದರು. ಆದರೆ, ನಿಧಾನವೇ ಪ್ರಧಾನ ಎಂದು ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ವ್ಯಕ್ತಿತ್ವದ ಆಟವನ್ನು ಅದ್ಭುತವಾಗಿಯೇ ಆಡಿದ್ದರು. ಬಿಗ್ ಬಾಸ್ ಮತ್ತು ಸುದೀಪ್ ಅವರ ಬಾಯಲ್ಲೇ ತಮ್ಮ ವ್ಯಕ್ತಿತ್ವದ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಿಸಿಕೊಂಡಿದ್ದರು. ಕೊನೆಗೆ ಮೋಕ್ಷಿತಾ ಅವರು ಕೂಡ ಮನೆಯಿಂದ ಹೊರಗೆ ನಡೆದಿದ್ದಾಗಿದೆ.
ಟಾಪ್ 3 ಫೈನಲಿಸ್ಟ್ ಸ್ಥಾನ ತಲುಪಿದವರಾರು..?
ಇನ್ನು ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಬಂದ ಇಬ್ಬರು ಕಂಟೆಸ್ಟೆಂಟ್ ಗಳು ಟಾಪ್ 3 ಫಿನಾಲಿಸ್ಟ್ ಗಳಾಗಿ ಎಲ್ಲರಿಗೂ ಶಾಕ್ ಆಗುವಂತೆ ಮಾಡಿದ್ದಾರೆ. ಹಾಗಾದರೆ ಈ ಬಾರಿಯ ವಿನ್ನರ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟವರೇ ಇರಬಹುದಾ ಎಂದು ಗೆಸ್ ಮಾಡಲು ವೀಕ್ಷಕರು ಪ್ರಾರಂಭಿಸಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನದಿಂದಲೂ ತ್ರಿವಿಕ್ರಮ್ ಫಿನಾಲಿಸ್ಟ್ ಎಂದೇ ಎಲ್ಲರೂ ಭಾವಿಸಿದ್ದರು. ಅದರಂತೆಯೇ ಇಂದು ತ್ರಿವಿಕ್ರಮ್ ವೇದಿಕೆ ಹತ್ತಲು ಇನ್ನೊಂದೇ ಒಂದು ಹೆಜ್ಜೆ ಬಾಕಿ ಇದೆ. ಇಂಡಸ್ಟ್ರಿಯಲ್ಲಿ ಕಷ್ಟ ಸಕ್ಸಸ್ ಕಾಣಲು ಪಡುತ್ತಿರುವ ವಿಕ್ರಮ್ ಕೈಗೆ ಕಪ್ ಸಿಗಲಿ ಎಂದು ಹಲವರು ಬಯಸಿದ್ದಾರೆ.


Click it and Unblock the Notifications











