BBK 11 ; ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಲಾಯರ್ ಜಗದೀಶ್ ಬಗ್ಗೆ ಹಂಸಾ ಹೇಳಿದ್ದೇನು..?
ಬಿಗ್ ಬಾಸ್ ಸ್ಫರ್ಧಿ ಹಂಸಾ ಅವರು ಮನೆಯಿಂದ ಹೊರ ಬಂದು ಎರಡು ದಿನ ಕಳೆದಿದೆ. ಸದ್ಯ ನಟಿ ಹಂಸಾ ಅವರು ಕಲರ್ಸ್ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಮಾತನಾಡಿದ್ದಾರೆ. ಬಿಗ್ ಬಾಸ್ ಸೀಸನ್ 11 ರಲ್ಲಿ ನಟಿ ಹಂಸಾ ಅವರು ಕೂಡ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಟ್ಟಿದ್ದರು. ಹಂಸಾ ಅವರು ಮನೆಗೆ ಎಂಟ್ರಿ ಕೊಟ್ಟಾಗಲೇ ಹಲವರು ಹೆಚ್ಚು ದಿನ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ ಎಂದು ಗೆಸ್ ಮಾಡಿದ್ದರು.
ಬಿಗ್ ಬಾಸ್ ಕಂಟೆಸ್ಟೆಂಟ್ ಆದ ಮಾನಸಾ ಅವರು ಹಂಸಾ ಏಳೆಂಟು ವಾರ ಬಿಗ್ ಬಾಸ್ ಮನೆಯಲ್ಲಿ ಇರಬಹುದು ಎಂದು ಊಹಿಸಿದ್ದರು. ಹಂಸಾ ಅವರು ಅಲ್ಲಿಂದಲೇ ಸ್ಟ್ರಾಂಗ್ ಆಗಲು ಯತ್ನಿಸಿದ್ದರು.
ಬಿಗ್ ಬಾಸ್ ಮನೆಯಲ್ಲಿ ಎಡವಿದ ಹಂಸಾ
ಮನೆಗೆ ಎಂಟ್ರಿ ಕೊಟ್ಟ ಬಳಿಕ ಹಂಸಾ ಅವರು ಕೆಲ ದಿನಗಳ ಕಾಲ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. ಮನೆಯ ಗಲಾಟೆಯನ್ನು ನೋಡಿ ಬೇಸರ ಮಾಡಿಕೊಂಡರು. ಬಳಿಕ ನಿಧಾನವಾಗಿ ಆಟವಾಡಲು ಶುರು ಮಾಡಿದರು. ಜಗದೀಶ್ ಅವರ ಜೊತೆಗೆ ಸ್ನೇಹ ಬೆಳೆಸಿದರು. ಮೊದಲ ವಾರದ ಕ್ಯಾಪ್ಟೆನ್ಸಿ ಆಟದಲ್ಲಿ ರಂಜಿತ್ ಗೆ ಮಾತು ಕೊಟ್ಟು ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿದರು. ನರಕ ವಾಸಿಗಳಿಗೆ ಒಳ್ಳೆಯ ಊಟ ಕೊಡಿಸಿದರು. ಉಸ್ತುವಾರಿ ತೆಗೆದುಕೊಳ್ಳುವಲ್ಲಿ ಹಂಸಾ ಅವರು ಎಡವಿದ್ದು ನಿಜ. ಆದರೆ, ತಮ್ಮ ತಪ್ಪನ್ನು ತಾವು ನೇರವಾಗಿ ಎಲ್ಲರ ಎದುರು ಮುಜುಗರವಿಲ್ಲದಂತೆ ಒಪ್ಪಿಕೊಂಡರು. ಜಗದೀಶ್ ಅವರೊಂದಿಗೆ ಬಹಳ ಸ್ನೇಹದಿಂದ ಕಾಲ ಕಳೆದರು.

ತನ್ನನ್ನು ಕಾರ್ನರ್ ಮಾಡಿದ ಸ್ಫರ್ಧಿಗಳು
ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಂಸಾ ಅವರು ಎಡವಿದ್ದಕ್ಕೆ ಮನೆಯವರೆಲ್ಲಾ ಬೈಯ್ಯಲು ಶುರು ಮಾಡಿದರು. ಹಂಸಾ ಅವರು ಎಲ್ಲರ ಎದುರು ಡೌನ್ ಆದಾಗ ಜಗದೀಶ್ ಅವರು ಹೆಗಲು ಕೊಟ್ಟು ಸಾಂತ್ವಾನ ಹೇಳಿದರು. ಹಂಸಾ ಅವರಿಗೆ ಧೈರ್ಯ ತುಂಬಿದರು. ಇತರೆ ಕಂಟೆಸ್ಟೆಂಟ್ ಗಳೆಲ್ಲರೂ ಹಂಸಾ ಅವರನ್ನು ಕಾರ್ನರ್ ಮಾಡಲು ಶುರು ಮಾಡಿದರು. ಹಳಸಾ ಅವರನ್ನು ಮನೆಯಿಂದ ಆದಷ್ಟು ಬೇಗ ಹೊರಗೆ ಕಳಿಸಬೇಕು ಎಂದು ಲೆಕ್ಕಾಚಾರ ಹಾಕಿದರು ಅಂತ ಸ್ವತಂ ಹಂಸಾ ಅವರೇ ಹೇಳಿದ್ದಾರೆ. ನಾನು ಇನ್ನಷ್ಟು ದಿನಗಳ ಕಾಲ ಸರಿಯಾಗಿ ಆಡಿದ್ದರೆ, ಮತ್ತಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಿದ್ದೆ. ನನಗೆ ತಾಳ್ಮೆ ಇಲ್ಲ ಎಂದುಕೊಂಡಿದ್ದೆ. ಆದರೆ, ನನಗೆ ತಾಳ್ಮೆ ಇದೆ ಎಂಬುದು ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದ ಮೇಲೆ ಅರ್ಥವಾಗಿದೆ.
ಜಗದೀಶ್ ಬಗ್ಗೆ ಮಾತನಾಡಿದ ಹಂಸಾ
ಮೊಬೈಲ್ ಇಲ್ಲದೇ, ಗಡಿಯಾರವಿಲ್ಲದೇ, ಯಾವುದೇ ಸಂಪರ್ಕ ಹೊರ ಜಗತ್ತಿನ ವಿಚಾರ ಗೊತ್ತಿಲ್ಲದೇ ಬಿಗ್ ಬಾಸ್ ಮನೆಯಲ್ಲಿ ಇದ್ದೆವು. ಇದೆಲ್ಲವೂ ನನಗೆ ಒಳ್ಳೆಯ ಅನುಭವ ಎಂದು ಹೇಳಿದ್ದಾರೆ. ಇನ್ನು ಜಗದೀಶ್ ಅವರ ಬಗ್ಗೆ ಮಾತನಾಡಿದ ಹಂಸಾ ಅವರು ಜಗದೀಶ್ ಒಬ್ಬರು ಒಳ್ಳೆಯ ಗೆಳೆಯ. ನಾವಿಬ್ಬರೂ ಒಟ್ಟಿಗೆ ಎಂಟರ್ ಟೈನ್ಮೆಂಟ್ ಮಾಡಿದ್ದೇವೆ. ಅದನ್ನು ಜನ ಇಷ್ಟೊಂದು ಇಷ್ಟಪಟ್ಟಿದ್ದಾರೆ ಎಂಬುದು ನನಗೆ ಗೊತ್ತೇ ಇರಲಿಲ್ಲ. ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಬಳಿಕ ಗೊತ್ತಾಯ್ತು ಎಂದಿದ್ದಾರೆ.
ಜಗದೀಶ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿ
ಸಣ್ಣ-ಪುಟ್ಟ ಅಪಾರ್ಥಗಳಿಂದ ನಾವು ಜಗಳ ಆಡಬೇಕಾಯ್ತು. ನನಗೆ ಜಗದೀಶ್ ಅವರ ಜೊತೆಗೆ ಮಾತನಾಡಲು ಅಲ್ಲಿ ಅವಕಾಶ ಸಿಗಲಿಲ್ಲ. ಈಗ ಅವರ ಮನೆಗೆ ಹೋಗಿ ಮಾತನಾಡಿಸುತ್ತೇನೆ. ನನ್ನ ಯಾಕೆ ಹಾಗೆಲ್ಲಾ ಕರೆದರು ಎಂದು ಕೇಳುತ್ತೇನೆ. ಇನ್ನು ಜಗದೀಶ್ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋದರೆ ಚೆನ್ನಾಗಿರುತ್ತೆ. ಜಗದೀಶ್ ಅವರು ವಿನ್ನರ್ ಆಗುವುದು ಪಕ್ಕಾ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿಸಿಕೊಂಡ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.


Click it and Unblock the Notifications











