BBK 11 ; ಮತ್ತೊಮ್ಮೆ ಕ್ಯಾಪ್ಟನ್ ಆಗಿ ಮನೆಯವರ ಕೆಂಗಣ್ಣಿಗೆ ಗುರಿಯಾದ ಹನುಮಂತ..?

By ಪ್ರಿಯಾ ದೊರೆ

ಬಿಗ್ ಬಾಸ್ ನಲ್ಲಿ ಈಗ ಐದನೇ ವಾರ ಹನುಮಂತು ಕ್ಯಾಪ್ಟನ್ ಆಗಿದ್ದಾನೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದ ಹನುಮಂತು ಮೊದಲು ಎರಡು ದಿನ ಸಿಕ್ಕ ಕ್ಯಾಪ್ಟನ್ ಅವಕಾಶವನ್ನು ಒಲ್ಲೆ ಎನ್ನುತ್ತಲೇ ತಮ್ಮ ಕೈಲಾದ ರೀತಿಯಲ್ಲಿ ನಿರ್ವಹಿಸಿದ್ದರು. ತದ ನಂತರ ತ್ರಿವಿಕ್ರಮ್ ಹಾಗೂ ಐಶ್ವರ್ಯ ಡಬಲ್ ಕ್ಯಾಪ್ಟೆನ್ಸ್ ಆಗಿ ಕಳೆದ ವಾರ ಮನೆಯನ್ನು ನಿರ್ವಹಿಸಿದ್ದರು. ಇದೀಗ ನಿನ್ನೆ ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಹನುಮಂತು ವಿನ್ ಆಗಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಎರಡು ಗುಂಪಾಗಿದೆ. ಇದರಲ್ಲಿ ಎರಡೂ ಗುಂಪು ಕೂಡ ಎದುರಾಳಿ ಗುಂಪಿನಲ್ಲಿ ಯಾರೂ ಕ್ಯಾಪ್ಟನ್ ಆಗಬಾರದು ಎಂದು ಪ್ಲಾನ್ ಮಾಡಿದ್ದರು. ಆದರೆ ಅದು ಉಲ್ಟಾ ಆಗಿದೆ.

ಧನರಾಜ್-ಹನುಮಂತು ಸ್ನೇಹ

ಹನುಮಂತು ಮನೆಗೆ ವೈಲ್ಡ್ ಕಾರ್ಡ್ ಮೂಲಕ ಬಂದಾಗಿನಿಂದಲೂ ಅವನಿಗೆ ಸಹಾಯ ಮಾಡಲೆಂದು ಧನರಾಜ್ ಮತ್ತು ಗೋಲ್ಡ್ ಸುರೇಶ್ ಒಟ್ಟಿಗಿದ್ದರು. ಗೋಲ್ಡ್ ಸುರೇಶ್ ಹೆಚ್ಚು ಮಾತನಾಡದಿದ್ದರೂ ಕೂಡ, ಧನರಾಜ್ ಮತ್ತು ಹನುಮಂತು ಸ್ನೇಹಾ ದಿನ ದಿನಕ್ಕೂ ಗಟ್ಟಿಯಾಗುತ್ತಿತ್ತು. ಧನರಾಜ್ ಅವರಿಗೆ ಆಟವಾಡಲು, ಮನೆಯಲ್ಲಿ ಸ್ಟ್ರಾಂಗ್ ಆಗಿ ಇರಲು ಹನುಮಂತು ಬಹಳಷ್ಟು ಧೈರ್ಯ ಹೇಳುತ್ತಿದ್ದ. ಇದರಿಂದ ಧನರಾಜ್ ಕೂಡ ಮನೆಯಲ್ಲಿ ಸ್ವಲ್ಪ ಆಕ್ಟೀವ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನೊಬ್ಬರ ವಿರುದ್ಧ ಧನಿ ಎತ್ತುತ್ತಿದ್ದರು. ಧನರಾಜ್ ಕುಗ್ಗಿದಾಗ ಹನುಮಂತು ಹೆಗಲಾಗುತ್ತಿದ್ದ. ಇನ್ನು ಹನುಮಂತುಗೆ ಈ ಮನೆ ನನಗೆ ಸೆಟ್ ಆಗೊಲ್ಲ ಹೊರಗೆ ಹೋಗುತ್ತೀನಿ ಎಂದಾಗೆಲ್ಲಾ ಧನರಾಜ್ ಮನೆಯವರನ್ನು ಹೇಗೆ ಗಮನಿಸಿ, ಹೇಗೆ ಆಡಬೇಕು ಎಂದು ಟಿಪ್ಸ್ ಕೊಡುತ್ತಿದ್ದರು.

Written Update on Bigboss season 11 hanumanthu captain

ನೇರ ಮಾತನಾಡುವ ಹನುಮಂತು

ಹೀಗೆ ನಿಧಾನವಾಗಿ ಮನೆಯಲ್ಲಿ ಎಲ್ಲವನ್ನೂ ಗಮನಿಸಿದ ಹನುಮಂತು ಯಾರ ಗುಂಪಿಗೂ ಸೇರದೆಯೇ ತನ್ನದೇ ಸ್ಥಾನವನ್ನು ತಾನು ನಿರ್ಮಿಸಿಕೊಂಡ. ಮೊದಮೊದಲು ನಾಮಿನೇಟ್ ಮಾಡಲು ಗೊಂದಲಕ್ಕೊಳಗಾಗುತ್ತಿದ್ದ ಹನುಮಂತು ಸ್ಪಷ್ಟ ಹಾಗೂ ನೇರ ಕಾರಣವನ್ನು ಕೊಟ್ಟು ಮನೆ ಸದಸ್ಯರ ತಪ್ಪುಗಳನ್ನು ಹೇಳಲು ಪ್ರಾರಂಭಿಸಿದ. ಕ್ಯಾಪ್ಟನ್ಸಿ ಆಟದಲ್ಲಿ ನಾನು ನಿನ್ನನ್ನು ನೀನು ನನ್ನನ್ನು ಸೇವ್ ಮಾಡು ಎಂದು ಮಾತನಾಡುತ್ತಾ ಧನರಾಜ್ ಮತ್ತು ಹನುಮಂತು ಆಟವಾಡಿದರು. ಆಟದ ಕೊನೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಹನುಮಂತು ವಿನ್ ಆಗಿ ಕ್ಯಾಪ್ಟನ್ ಆಗಿದ್ದಾರೆ.

ಕ್ಯಾಪ್ಟನ್ ಆದ ಹಳ್ಳಿಹೈದ ಹನುಮಂತು

ಹನುಮಂತು ಕ್ಯಾಪ್ಟನ್ ಆದ ಕೂಡಲೇ ನ್ಯಾಯಕ್ಕೆ ಬೆಲೆ ಸಿಕ್ಕಿದೆ ಎಂದು ಕೆಲವರು ಹೇಳಿದ್ದು, ಖುಷಿ ಕೂಡ ಪಟ್ಟಿದ್ದಾರೆ. ಕ್ಯಾಪ್ಟನ್ ಆಗುತ್ತಿದ್ದಂತೆ ಹನುಮಂತು ದೇವಿಯ ಮುಂದೆ ನಿಂತು ಈ ವಾರ ಮನೆಯಲ್ಲಿ ಗಲಾಟೆ ಆಗದಿರಲಿ, ಯಾವುದೇ ಸಮಸ್ಯೆಗಳು ಬಾರದಿರಲಿ. ನನ್ನ ಕ್ಯಾಪ್ಟನ್ಸಿಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ಮಾಡು ಎಂದು ಕ್ಯೂಟ್ ಆಗಿ ಕೇಳಿಕೊಂಡಿದ್ದಾನೆ. ಇನ್ನು ಧನರಾಜ್ ಮತ್ತು ಹನುಮಂತು ಸ್ನೇಹವನ್ನು ವೀಕ್ಷಕರು ಹಾಡಿ ಹೊಗಳಿದ್ದಾರೆ. ಹನುಮಂತು ತನ್ನ ಆಟವನ್ನು ಈಗ ಶುರು ಮಾಡಿದ್ದಾನೆ. ಇದನ್ನು ಕೆಲವರ ಕೈಯಲ್ಲಿ ಸಹಿಸಲಾಗುತ್ತಿಲ್ಲ.

ಮನೆಯವರ ವಿರೋಧಿಯಾದ ಹನುಮಂತು

ಇನ್ನು ಇಂದಿನ ಎಪಿಸೋಡ್ ನಲ್ಲಿ ಹನುಮಂತುಗೆ ನಾಮಿನೇಶನ್ ಟಾಸ್ಕ್ ನೀಡಿದ್ದು, ಇದರಲ್ಲಿ ಹನುಮಂತು ಮೂವರನ್ನು ನಾಮಿನೇಟ್ ಮಾಡಿದ್ದಾನೆ. ಗೋಲ್ಡ್ ಸುರೇಶ್ ಎಲ್ಲೆಂದರಲ್ಲಿ ಕೋಳಿಯಂತೆ ಮಲಗುತ್ತಾರೆ ಎಂದು ಹೇಳಿದ್ದು, ಭವ್ಯ ಆಕ್ಟೀವ್ ಆಗಿಲ್ಲ ಎಂದಿದ್ದಾರೆ. ಮಾನಸಾ ಬಾಂಬ್ ಇದ್ದಂತೆ ಎಂದು ಹೇಳಿ ಮೂವರನ್ನು ನಾಮಿನೇಟ್ ಮಾಡಿದ್ದಾನೆ. ಇದರಿಂದ ಮೂವರು ಬೇಸರ ಮಾಡಿಕೊಂಡಿದ್ದು, ಭವ್ಯ ನೀವು ಕೊಟ್ಟ ಕಾರಣವನ್ನು ಒಪ್ಪಲ್ಲ ಎಂದಿದ್ದಾಳೆ. ಮಾನಸಾ ಸಕತ್ ಪ್ಲಾನರ್ ಹನುಮಂತು ಎಂದು ಹೇಳಿದ್ದು, ಗಳಿಗೆ ಸಿದ್ದ ಒಳಗೊಳಗೆ ಮೆದ್ದ ಎಂದು ಚೈತ್ರಾ ಕಮೆಂಟ್ ಪಾಸ್ ಮಾಡಿದ್ದಾರೆ. ಹನುಮಂತು ಕ್ಯಾಪ್ಟನ್ ಆಗುತ್ತಿದ್ದಂತೆ ಖುಷಿಪಟ್ಟವರೆಲ್ಲಾ ಈಗ ಅವನನ್ನು ವಿರೋಧಿಸಲು ಶುರು ಮಾಡಿದ್ದಾರೆ. ಸದ್ಯ ಹನುಮಂತು ಕ್ಯಾಪ್ಟನ್ ಆಗಿ ಮನೆಯವರ ವಿರೋಧ ಕಟ್ಟಿಕೊಂಡಂತಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X