BBK 11 ; ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ..? ಪಂಚಾಯ್ತಿಯಲ್ಲಿ ಈ ವಿಚಾರಗಳು ಚರ್ಚೆಯಾಗುತ್ತಾವಾ ?
ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಈಗಾಗಲೇ 100 ದಿನಗಳು ಕಳೆದಿವೆ. ಬಿಗ್ ಬಾಸ್ ಮನೆಯಲ್ಲಿ ಒಂಭತ್ತು ಜನ ಕಂಟೆಸ್ಟೆಂಟ್ ಗಳು ಇದ್ದಾರೆ.ಈ ವಾರ ಪೂರ್ತಿ ಮನೆಯ ಕ್ಯಾಪ್ಟನ್ ಆಗಿರುವ ರಜತ್ ಗೆ ಉಸ್ತುವಾರಿ ಜವಾಬ್ದಾರಿಯನ್ನು ನೀಡಿದ್ದಾರೆ. ಒಂದೂ ಆಟವಾಡದೆಯೇ ರಜತ್ ನೇರವಾಗಿ ಟಿಕೆಟ್ ಟು ಫೀನಾಲೆ ರೌಂಡ್ ತಲುಪಿದ್ದಾರೆ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಉಳಿದಂತೆ ಹನುಮಂತು, ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಟಿಕೆಟ್ ಟು ಫಿನಾಲೆ ರೌಂಡ್ ತಲುಪಿದ್ದಾರೆ. ಯಾರ ಪಾಲಿಗೆ ಟಿಕೆಟ್ ದಕ್ಕಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ.
ಕಿಚ್ಚನ ಚಪ್ಪಾಳೆ ಯಾರ ಪಾಲಾಗಬಹುದು..?
ಈ ವಾರದ ಆಟ ಎಲ್ಲರಿಗೂ ಮಜಾ ಕೊಟ್ಟಿದ್ದು, ಕ್ಷಣ ಕ್ಷಣವೂ ರೋಚಕ ತಿರುವು ಪಡೆಯುತ್ತಿತ್ತು. ಸದ್ಯ ನಾಲ್ವರು ಮಾತ್ರವೇ ಟಿಕೆಟ್ ಟು ಫಿನಾಲೆ ಆಟಕ್ಕೆ ಆಯ್ಕೆ ಆಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ನಟ ಶರಣ್ ಮತ್ತು ನಟಿ ಶೃತಿ ಇಬ್ಬರೂ ಬಿಗ್ ಬಾಸ್ ಮನೆಗೆ ಆಗಮಿಸಿ, ಆಟದಲ್ಲಿ ಗೆದ್ದವರಿಗೆ ಫಿನಾಲೆ ಟಿಕೆಟ್ ಅನ್ನು ನೀಡಿದ್ದಾರೆ. ಆದರೆ, ಅದು ಯಾರು ಎಂಬುದು ಗೊತ್ತಿಲ್ಲ. ಇನ್ನು ಈ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಯಾರಿಗೆ ಕಿಚ್ಚನ ಚಪ್ಪಾಳೆ ಕೊಡಬಹುದು ಎಂಬ ಕುತೂಹಲ ಮೂಡಿದೆ. ಆದರೆ, ನೆಟ್ಟಿಗರು ಕಿಚ್ಚನಿಗೆ ಸಲಹೆ ನೀಡಿದ್ದು ಕೆಲವರು ಮೋಕ್ಷಿತಾಳಿಗೆ ಕಿಚ್ಚನ ಚಪ್ಪಾಳೆಯನ್ನು ನೀಡಬೇಕು ಎಂದಿದ್ದರೆ, ಇನ್ನು ಕೆಲವರು ಭವ್ಯಳಿಗೆ ಸಿಗಬೇಕು ಎಂದು ಹೇಳಿದ್ದಾರೆ.

ಬೇಸರ ತಂದ ರಜತ್ ಉಸ್ತುವಾರಿ
ಇನ್ನು ರಜತ್ ಉಸ್ತುವಾರಿ ಬಗ್ಗೆ ಎಲ್ಲರಿಗೂ ಬೇಸರವಿದೆ. ಇಡೀ ವಾರ ರಜತ್ ಉಸ್ತುವಾರಿಯನ್ನು ಫೇವರೆಬಲ್ ಆಗಿ ಮಾಡಿದ್ದಾರೆ. ತ್ರಿವಿಕ್ರಮ್, ಭವ್ಯ ಗೆಲ್ಲಬೇಕು ಎಂಬ ಮನಸ್ಥಿತಿಯಲ್ಲೇ ಉಸ್ತುವಾರಿ ಮಾಡಿರುವುದು ಬಹಳ ಸ್ಪಷ್ಟವಾಗಿ ಕಂಡು ಬಂದಿದೆ. ಇದರಿಂದ ಎಲ್ಲರೂ ಬೇಸರ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸುದೀಪ್ ಅವರು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ರಜತ್ ನನ್ನು ಪ್ರಶ್ನೆ ಮಾಡಬೇಕು. ಫಿನಾಲೆ ತಲುಪುತ್ತಿರುವ ಹೊತ್ತಿನಲ್ಲೂ ಈ ರೀತಿಯ ಫೇವರಿಸಂ ಅಗತ್ಯವಿದೆಯಾ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಚರ್ಚಿಸಲು ಪಾಯಿಂಟ್ಸ್ ಕೊಟ್ಟ ವೀಕ್ಷಕರು
ನೆಟ್ಟಿಗರು ಕಿಚ್ಚ ಸುದೀಪ್ ಅವರಿಗೆ ಚರ್ಚೆ ಮಾಡಬೇಕಾದ ವಿಷಯಗಳು ಎಂದು ಪಾಯಿಂಟ್ಸ್ ನೀಡಿದ್ದಾರೆ. 1) Ticket to home ಫಲಕ ಮನೆಯ ಎಲ್ಲ ಹೆಣ್ಮಕ್ಕಳಿಗೆ ರಜತ್ ನೀಡಿದ್ದು ಎಷ್ಟು ಸರಿ? 2) TTF task ಅಲ್ಲಿ ಬರೀ ಮಂಜಣ್ಣನನ್ನು ಟಾರ್ಗೆಟ್ ಮಾಡಿ ಕೆಳಗಿಳಿಸಿದ್ದು. 3)ಟಾಸ್ಕ್ ಅಲ್ಲಿ ಕೆಲವರು ಮಾನವೀಯತೆ ಮರೆತು ಅತಿರೇಕದ ವರ್ತನೆ ಮಾಡಿದ್ದು. 4) ಧನರಾಜ್ ಗೌತಮಿಗಿಂತ ಉತ್ತಮವಾಗಿದ್ದರೂ, ಅವರನ್ನು ಆಟದಿಂದ ಹೊರಗಿಟ್ಟಿದ್ದು. 5) ಮುಗಿಯದ ಗೆಳೆಯ ಗೆಳತಿ ಆಟಗಳು ಎಂಬುದನ್ನು ತಿಳಿಸಿದ್ದಾರೆ. ಇನ್ನೂ ಕೆಲವರು ಗೌತಮಿ ಹಾಗೂ ಮಂಜು ಹೊರಗಡೆ ಇಟ್ಟಾಗ ಮನೆ ಮಂದಿ ನಡೆದು ಕೊಂಡ ರೀತಿ ಇವರು ಆ ಸ್ಥಾನದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದರು. ಹನುಮಂತ ನ ಮೇಲೆ ಕೈ ಮಾಡಿದ್ದು. ರಜತ್ ನ ಪಕ್ಷಪಾತಿ ಉಸ್ತುವಾರಿ. ಧನರಾಜ್ ನಾಮಿನೇಷನ್ ಮಾಡಿದಾಗ ಸುಮ್ಮನಿದ್ದು ಟಾಸ್ಕ್ ನಿಂದಾ ಹೊರಗಡೆ ಬಂದ ಮೇಲೆ ಸಿಂಪಥಿ ಕ್ರಿಯೇಟ್ ಮಾಡೋ ರೀತಿ ನಡೆದುಕೊಂಡಿದ್ದು. ಮೋಕ್ಷಿತಾ ವಾಟರ್ ಟ್ಯಾಂಕ್ ಒಳಗೆ ರೂಲ್ಸ್ ಬ್ರೇಕ್ ಮಾಡಿದ್ದು, ರಜತ್ ಕ್ಯಾಪ್ಟನ್ ಅನ್ನೋದನ್ನು ಮರೆತು ಪರ್ಸನಲ್ ಟಾರ್ಗೆಟ್ ಮಾಡಿದ್ದು, ಚೈತ್ರ ಇಷ್ಟು ದಿನ ಒಂದೂ ಆಟ ಆಡದೇ ನಿನ್ನೆ ಅವಕಾಶ ಕೊಡ್ಲಿಲ್ಲ ಅಂತ ಕಂಪ್ಲೇಟ್ ಮಾಡಿದ್ದು, ಗುಂಪು ಕಟ್ಟಿ ಕೊಂಡು ಒಬ್ಬರನ್ನೇ ಟಾರ್ಗೆಟ್ ಮಾಡಿ ಅವಮಾನ ಮಾಡಿದ್ದು, ರಜತ್ ಉಸ್ತುವಾರಿ ಮಾಡುವಾಗ ಬೇಕಂತಲೇ ಹನುಮಂತನಿಗೆ ಮಾತ್ರ ಭಾರದ ಚೀಲ ಇಟ್ಟಿದ್ದು ಎಂದು ಕೇಳಿದ್ದಾರೆ.
ಹುಡುಗಿಯರನ್ನು TTF ನಿಂದ ಹೊರಗಿಟ್ಟ ರಜತ್
ಇದೆಲ್ಲದರ ಜೊತೆಗೆ ರಜತ್ ವಾರದ ಆರಂಭದಲ್ಲೇ ಟಿಕೆಟ್ ಟು ಹೋಮ್ ಎಂಬ ಬೋರ್ಡ್ ಅನ್ನು ಮನೆಯಲ್ಲಿದ್ದ ಎಲ್ಲಾ ಹುಡುಗಿಯರಿಗೂ ಕೊಟ್ಟರು. ಇದರ ಅರ್ಥ ಹೆಣ್ಣು ಮಕ್ಕಳು ಫಿನಾಲೆಗೆ ಅರ್ಹರಲ್ಲ ಎಂಬುದನ್ನು ರಜತ್ ಹೇಗೆ ಡಿಸೈಡ್ ಮಾಡಿದರು. ಇದೆಲ್ಲಾ ಎಷ್ಟು ಸರಿ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.


Click it and Unblock the Notifications











