BBK 11 ; ತಂದೆ ತಾಯಿಯನ್ನು ಕಳೆದುಕೊಂಡಿರುವ ಐಶ್ವರ್ಯಗೆ ಪತ್ರ ಬರೆದ ಬಿಗ್ ಬಾಸ್..!

By ಪ್ರಿಯಾ ದೊರೆ

ಬಿಗ್ ಬಾಸ್ ಶುರುವಾಗಿ 30 ದಿನಗಳು ಕಳೆದಿದೆ. ಈ ಬಾರಿಯ ಕಂಟೆಸ್ಟೆಂಟ್ ಗಳು ಮೊದಲ ಬಾರಿಗೆ ಬಿಗ್ ಬಾಸ್ ಕೊಟ್ಟ ಟಾಸ್ಕ್‌ನ ಯಶಸ್ವಿಯಾಗಿ ಸರಿಯಾದ ರೀತಿಯಲ್ಲಿ ಪೂರ್ಣಗೊಳಿಸಿದ್ದಾರೆ. ಬಿಗ್ ಬಾಸ್ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದೆ. ಈ ಟಾಸ್ಕ್ ನಲ್ಲಿ ಗೌತಮಿ ಜಾಧವ್ ಟೀಂ ವಿನ್ ಆಗಿದ್ದು, ಭವ್ಯಾ ಗೌಡ ಅವರ ಟೀಮ್ ಸೋತಿದೆ. ಈ ವಿಚಾರಕ್ಕೆ ಎರಡೂ ಟೀಂ ನಡುವೆ ಜಗಳ ಕೂಡ ನಡೆಯಿತು. ಇನ್ನು ಗೆದ್ದ ಟೀಂಗೆ ಲಕ್ಷುರಿ ಬಜೆಟ್ ಅನ್ನು ಬಿಗ್ ಬಾಸ್ ನೀಡಿದೆ. ಹತ್ತು ಸಾವಿರ ಪಾಯಿಂಟ್ಸ್ ಗಳನ್ನು ನೀಡಿತ್ತು.

ಪ್ರೀತಿಯ ಸಂದೇಶಕ್ಕಾಗಿ ಟಾಸ್ಕ್

ಅದರಲ್ಲಿ ಗೌತಮಿ ಆಂಡ್ ಟೀಂ ನಾಲ್ಕು ಸಾವಿರ ಲಕ್ಷುರಿ ಪಾಯಿಂಟ್ಸ್ ಪಡೆದಿದ್ದು, ಮನೆಗೆ ಚಿಕನ್ ಮತ್ತು ಪನ್ನೀರ್ ದೊರೆತಿದೆ. ಗೌತಮಿ ಗುಂಪು ಮಾತ್ರವೇ ಈ ಆಹಾರವನ್ನು ಸವಿಯಬೇಕು ಎಂಬ ನಿಯಮ ಇದ್ದಿದ್ದರಿಂದ ತಮಗೆ ಬೇಕಾದ ಅಡುಗೆಯನ್ನು ಮಾಡಿಕೊಂಡು ತಿಂದಿದ್ದಾರೆ. ಬಳಿಕ ಬಿಗ್ ಬಾಸ್ ಮನೆಗೆ ಬಂದು ಬಹಳ ಕಾಲವಾಗಿರುವುದರಿಂದ ಹೊಸ ಟಾಸ್ಕ್ ನೀಡಲಾಗಿದೆ. ಅದರ ಪ್ರಕಾರ, ಪ್ರೀತಿ ಪಾತ್ರರಿಂದ ಸಂದೇಶ ಬೇಕೆಂದರೆ, ಮೊದಲ ಬಜರ್ ಆದಾಗಿನಿಂದ ಮನೆಯೊಳಗೆ ಅಪರಿಚಿತ ವ್ಯಕ್ತಿಗಳು ಆಗಮಿಸುತ್ತಾರೆ. ಅವರು ಏನೇ ಮಾಡಿದರೂ ಮನೆಯಲ್ಲಿರುವ ಸದಸ್ಯರು ರಿಯಾಕ್ಟ್ ಮಾಡಬಾರದು. ಅವರು ಕೊಡುವ ಯಾವುದೇ ವಸ್ತುವನ್ನು ತೆಗೆದುಕೊಳ್ಳಬಾರದು. ಹಾಗೆಯೇ ಅವರುಗಳಿಂದ ಯಾರೂ ತಪ್ಪಿಸಿಕೊಂಡು ಹೋಗಲು ಯತ್ನಿಸಬಾರದು. ಹಾಗೇನಾದರೂ ನಿಯಮವನ್ನು ಮುರಿದು ಮೂರು ಬಾರಿ ಫೌಲ್ ಮಾಡಿದರೆ, ಆ ವ್ಯಕ್ತಿಗೆ ಮನೆಯವರಿಂದ ಬಂದ ಪತ್ರ ಸಿಗುವುದಿಲ್ಲ ಎಂದು ಬಿಗ್ ಬಾಸ್ ಹೇಳಿದ್ದರು.

Written Update on Bigboss season 11 letter for aishwarya

ಐಶ್ವರ್ಯಾಗೆ ಬಾರದ ಪತ್ರ

ಅದರಂತೆಯೇ ಮೊದಲು ಅನುಷಾ ಅವರಿಗೆ ಪತ್ರ ಬರುತ್ತದೆ. ಎರಡನೇಯದಾಗಿ ಧನರಾಜ್, ಹೀಗೆ ಒಬ್ಬರಾದ ಬಳಿಕ ಒಬ್ಬರಿಗೆ ಮನೆಯವರಿಂದ ಪತ್ರಗಳು ಬರುತ್ತವೆ. ಪ್ರತಿ ಬಾರಿಯೂ ಐಶ್ವರ್ಯ ನನಗೆ ಹೀಗೆ ಪತ್ರ ಕಳಿಸಲು ನಮ್ಮ ಮನೆಯವರೆಂದು ನನಗೆ ಯಾರೂ ಇಲ್ಲ ಎಂದು ಅಳುತ್ತಾಳೆ. ಸದಸ್ಯರೆಲ್ಲಾ ಐಶ್ವರ್ಯಾಳಿಗೆ ಸಮಾಧಾನ ಮಾಡಲು ಯತ್ನಿಸುತ್ತಾರೆ. ಕೊನೆಯಲ್ಲಿ ಐಶ್ವರ್ಯ ಅವರಿಗೂ ಕೂಡ ಪತ್ರವೊಂದು ಬರುತ್ತದೆ. ಬಿಗ್ ಬಾಸ್ ಮೆಲುಧನಿಯಲ್ಲಿ ಮಾತನಾಡುತ್ತಾರೆ. ಐಶ್ವರ್ಯಾಗೆ ಈ ಮನೆಗೆ ಆಗಮಿಸಿದ ಕ್ಷಣದಿಂದ ನೀವು ನಮ್ಮವರು. ನಮ್ಮ ಕುಟುಂಬಕ್ಕೆ ಸೇರಿದ ಐಶ್ವರ್ಯ ಅವರಿಗೆ ನಾವಿದ್ದೇವೆ ಎಂದಿದ್ದಾರೆ.

ಬಿಗ್ ಬಾಸ್ ಐಶ್ವರ್ಯಾಗೆ ಹೇಳಿದ್ದೇನು..?

ಪ್ರೀತಿಯ ಐಶ್ವರ್ಯಾ ಅವರಿಗೆ ನನ್ನದೊಂದು ಪತ್ರ. ನನ್ನ ಮನೆಗೆ ಆಗಮಿಸಿದ ಕ್ಷಣದಿಂದ ನೀವು ನನ್ನ ಕುಟುಂಬದವರಾಗಿದ್ದೀರಿ. ನಾನಿರುವೆ ನಿಮ್ಮೊಂದಿಗೆ.. ಈ ಮನೆಯ ಮನೆಯ ಸದಸ್ಯರಿದ್ದಾರೆ ನಿಮ್ಮೊಂದಿಗೆ. ಇಂತಿ ನಿಮ್ಮ ಬಿಗ್ ಬಾಸ್ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ಎಲ್ಲರೂ ಖುಷಿ ಪಟ್ಟಿದ್ದು ಐಶ್ವರ್ಯ ಕೂಡ ಸಮಾಧಾನ ಮಾಡಿಕೊಂಡಿದ್ದಾರೆ.

ಪೋಷಕರನ್ನು ಕಳೆದುಕೊಂಡಿರುವ ಐಶ್ವರ್ಯ

ಇನ್ನು ನಟಿ ಐಶ್ವರ್ಯ ಅವರು ಕೆಲ ಕಾಲದಿಂದ ಕಿರುತೆರೆಯಲ್ಲಿದ್ದಾರೆ. ಆದರೆ, ಐಶ್ವರ್ಯ ಅವರಿಗೆ ತಂದೆ-ತಾಯಿ ಇಬ್ಬರೂ ಇಲ್ಲ. 2018ರಲ್ಲಿ ತಂದೆಯನ್ನು ಐಶ್ವರ್ಯಾ ಅವರು ಅಕಸ್ಮಾತ್ ಆಗಿ ಕಳೆದುಕೊಂಡರು. ಬಳಿಕ 2020ರಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಐಶ್ವರ್ಯ ಅವರ ತಾಯಿ ಕೂಡ ವಿಧಿವಶರಾದರು. ಅಂದಿನಿಂದ ಐಶ್ವರ್ಯ ಅವರು ಒಬ್ಬರೇ ಜೀವನ ನಡೆಸಿದ್ದು, ಕೆಲ ಸ್ನೇಹಿತರ ಸಹಾಯದಿಂದ ಕೆಲವೊಂದು ವಿಚಾರಗಳಲ್ಲಿ ಸಲಹೆ ಸೂಚನೆಗಳನ್ನು ಪಡೆದಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಐಶ್ವರ್ಯ ಅವರು ಒಬ್ಬರೇ ಜೀವಿಸುತ್ತಿದ್ದು, ಒಂಟಿಯಾಗಿರುವ ಐಶ್ವರ್ಯ ಅವರಿಗೆ ಈಗ ಬಿಗ್ ಬಾಸ್ ಸಮಾಧಾನ ಮಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X