ಚೈತ್ರಾ,ಮಾನಸಾ,ಹಂಸಾ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರುವವರು ಯಾರು ? ಉಗ್ರಂ ಮಂಜು ಅಲ್ಲ ತಾನೇ..?

By ಪ್ರಿಯಾ ದೊರೆ

ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಿ ಈಗಾಗಲೇ ನಾಲ್ಕು ವಾರಗಳು ಕಳೆಯುತ್ತಿದೆ. ಅಷ್ಟರಲ್ಲಿ ಸಾಕಷ್ಟು ಮಂದಿಗೆ ಸಾಕಪ್ಪ ಈ ಸೀಸನ್ ಎಂಬಂತಾಗಿದೆ. ಬಿಗ್ ಬಾಸ್ ಎಷ್ಟೇ ತಲೆ ಓಡಿಸಿ ಯಾವುದೇ ಟಾಸ್ಕ್ ಕೊಟ್ಟರೂ, ಏನೇ ಪ್ಲಾನ್ ಮಾಡಿದರೂ ಕೂಡ ಸ್ಫರ್ಧಿಗಳು ಮಾತ್ರ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದೇವೆ ಎಂಬ ಪರಿವೆಯೇ ಇಲ್ಲದವರಂತೆ, ತಾವೊಂದು ರಿಯಾಲಿಟಿ ಶೋನ ಸ್ಪರ್ಧಿಗಳು ಎಂಬುದನ್ನು ಮರೆತು ನಡೆದುಕೊಳ್ಳುತ್ತಿದ್ದಾರೆ.


ಈ ವಾರ 9 ಮಂದಿ ನಾಮಿನೇಟ್

ಕಳೆದ ವಾರದ ಕತೆ ಕಿಚ್ಚನ ಜೊತೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಫರ್ಧಿಗಳಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರೂ ಪ್ರಯೋಜನವಾಗಿಲ್ಲ. ಸೂಪರ್ ಸಂಡೆ ವಿತ್ ಸುದೀಪ್ ನಡೆಯದೆ ಹನುಮಂತನನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಕಳಿಸಲಾಯ್ತು. ನಾಮಿನೇಷನ್ ಬಗ್ಗೆ ಮಾತನಾಡಬಾರದು ಎಂಬ ರೂಲ್ಸ್ ಇದ್ದರೂ ಕೂಡ ಮನೆಯವರೆಲ್ಲಾ ಪ್ರತಿಬಾರಿ ನಾಮಿನೇಷನ್ ಪ್ರಕ್ರಿಯೆ ನಡೆದಾಗ ವಾದ ಮಾಡುವುದನ್ನು ನಿಲ್ಲಿಸುವುದೇ ಇಲ್ಲ. ಇನ್ನು ಟಾಸ್ಕ್ ಗಳನ್ನು ನೀಡಿದರೆ, ಆಟದ ಆರಂಭದಲ್ಲೇ ಉಗ್ರವಾಗಿ ಆಡುತ್ತಾರೆ. ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಟಾಸ್ಕ್ ಅನ್ನು ರದ್ದು ಮಾಡುವಂತೆ ಮಾಡುತ್ತಾರೆ. ಈ ವಾರ ಡಬಲ್ ಕ್ಯಾಪ್ಟೆನ್ಸಿ ಇದ್ದು, ಐಶ್ವರ್ಯ ಹಾಗೂ ತ್ರಿವಿಕ್ರಮ್ ಕ್ಯಾಪ್ಟೆನ್ ಆಗಿದ್ದಾರೆ. ಇವರಿಬ್ಬರೂ ನೇರವಾಗಿ ಉಗ್ರಂ ಮಂಜು ಮತ್ತು ಮಾನಸಾರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಉಳಿದಂತೆ ಮೋಕ್ಷಿತಾ ಪೈ, ಗೌತಮಿ ಜಾಧವ್, ಭವ್ಯ ಗೌಡ, ಹಂಸಾ, ಗೋಲ್ಡ್ ಸುರೇಶ್, ಶಿಶಿರ್ ಶಾಸ್ತ್ರಿ, ಚೈತ್ರಾ ಕುಂದಾಪುರ ಅವರು ನಾಮಿನೇಟ್ ಆಗಿದ್ದಾರೆ.

Written Update on Bigboss season 11 nomination


ಅತೀ ಹೆಚ್ಚು ವೋಟಿಂಗ್ ಪಡೆದವರು ಯಾರು

ಒಟ್ಟು ಒಂಭತ್ತು ಮಂದಿ ನಾಮಿನೇಟ್ ಆಗಿದ್ದು, ಇದರಲ್ಲಿ ಇಬ್ಬರು ನೇರವಾಗಿ ನಾಮಿನೇಟ್ ಆಗಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಯವರೆಗೂ ತಮ್ಮ ನೆಚ್ಚಿನ ಸ್ಫರ್ಧಿಗಳನ್ನು ಉಳಿಸಿಕೊಳ್ಳಲು ವೀಕ್ಷಕರು ವೋಟ್ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಈಗ ಅತೀ ಹೆಚ್ಚು ವೋಟ್ ಗಳನ್ನು ಪಡೆದು ನಾಲ್ವರು ಟಾಪ್ ಲಿಸ್ಟ್ ನಲ್ಲಿ ಸೇವ್ ಆಗಿದ್ದಾರೆ. ಮೊದಲನೇಯದಾಗಿ ಶಿಶಿರ್ ಶಾಸ್ತ್ರಿ ಅಧಿಕ ವೋಟ್ ಗಳನ್ನು ಪಡೆದು ಸೇಫ್ ಆಗಿದ್ದಾರೆ. ಇನ್ನು ಎರಡನೇಯದಾಗಿ ಗೌತಮಿ ಜಾಧವ್, ಮೂರನೇಯವರಾಗಿ ಭವ್ಯ ಗೌಡ ಹಾಗೂ ಕೊನೆಯದಾಗಿ ಮೋಕ್ಷಿತಾ ಪೈ ಉತ್ತಮವಾದ ವೋಟ್ ಗಳನ್ನು ಪಡೆದು ಸೇವ್ ಆಗಿದ್ದಾರೆ. ಇವರನ್ನು ಹೊರತು ಪಡಿಸಿ ಉಗ್ರಂ ಮಂಜು ಹಾಗೂ ಗೋಲ್ಡ್ ಸುರೇಶ್ ಕೂಡ ಸೇವ್ ಆಗಿದ್ದಾರೆ.

ಮೂವರಲ್ಲಿ ಟಫ್ ಪೈಪೋಟಿ

ಇನ್ನುಳಿದಂತೆ ಮೂವರಲ್ಲಿ ಟಫ್ ಫೈಟ್ ಇದೆ. ಚೈತ್ರಾ ಕುಂದಾಪುರ, ತುಕಾಲಿ ಮಾನಸಾ ಹಾಗೂ ಹಂಸ ಅವರ ನಡುವೆ ಪೈಪೋಟಿ ಇದ್ದು, ಈ ಮೂವರು ಕಡಿಮೆ ವೋಟ್ ಗಳನ್ನು ಪಡೆದು ಡೇಂಜರ್ ಜೋನ್ ನಲ್ಲಿ ಇದ್ದಾರೆ. ಈ ಮೂವರಲ್ಲಿ ಚೈತ್ರಾ ಕುಂದಾಪುರ ಅವರು ಕೊಂಚ ಜಾಸ್ತಿ ವೋಟಿಂಗ್ ಪಡೆದು ಸೇವ್ ಆಗಿದ್ದರೆ, ಮಾನಸಾ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಮೊದಲ ವಾರದಿಂದಲೂ ಕೂಗು ಕೇಳಿಬಂದಿತ್ತು. ಅಷ್ಟೇ ಅಲ್ಲದೇ, ಮಾನಸಾ ಅವರ ಆಟವನ್ನು ಕೂಡ ಯಾರು ಇಷ್ಟಪಡುತ್ತಿಲ್ಲ. ಹಂಸಾ ಅವರು ಕೂಡ ಎಲಿಮಿನೇಟ್ ಆದರೆ ಚೆನ್ನಾಗಿರುತ್ತೆ ಎಂದು ವೀಕ್ಷಕರು ಬಯಸಿದ್ದಾರೆ. ಆದರೆ, ಈ ವಾರ ಯಾರು ಮನೆಯಲ್ಲಿ ಉಳಿಯುತ್ತಾರೆ, ಯಾರು ಹೊರ ನಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ವಾರದ ಕತೆ ಕಿಚ್ಚನ ಜೊತೆ ಇರುತ್ತಾ..?

ಇನ್ನು ಕಳೆದ ವಾರ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದು, ಈ ವಾರವೂ ಅವರು ವಾರದ ಕತೆ ಕಿಚ್ಚನ ಜೊತೆ ನಡೆಸಿಕೊಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗೊಂದು ವೇಳೆ, ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡದಿದ್ದರೆ, ಈ ವೀಕೆಂಡ್ ನಲ್ಲಿ ಸ್ಫರ್ಧಿಗಳನ್ನು ಬಿಗ್ ಬಾಸ್ ಯಾವ ರೀತಿಯಲ್ಲಿ ಎಂಗೇಜ್ ಆಗಿ ಇಡುತ್ತಾರೆ..? ಯಾವ ಟಾಸ್ಕ್ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X