ಇವತ್ತು ಬಿಗ್ ಬಾಸ್ ಮನೆಯಲ್ಲಿ ಸ್ಫರ್ಧಿಗಳ ಕಿವಿ ಹಿಂಡುತ್ತಾರಾ ಕಿಚ್ಚ? ಪ್ರೇಕ್ಷಕರು ಸುದೀಪ್‌ಗೆ ನೀಡಿದ ಸಲಹೆ ಏನು..?

By ಪ್ರಿಯಾ ದೊರೆ

ಬಿಗ್ ಬಾಸ್ ಸೀಸನ್ 11 ಹೊಸ ಅಧ್ಯಾಯ, ಹೊಸ ಕಥೆಯೊಂದಿಗೆ ಪ್ರಾರಂಭವಾಯ್ತು. ಈ ಬಾರಿಯ ಶೋ ಬಹಳ ಡಿಫರೆಂಟ್ ಆಗಿರಲಿದೆ. ಅದ್ಭುತವಾಗಿ ಮೂಡಿ ಬರಲಿದೆ ಎಂದು ಎಲ್ಲರೂ ಕುತೂಹಲದಿಂದ ಇದ್ದರು. ಆದರೆ, ಬಿಗ್ ಬಾಸ್ ಪ್ರಾರಂಭವಾದ ಮೊದಲ ದಿನವೇ ಕೊನೆಯ ಹಂತ ತಲುಪಿದ ರೀತಿಯಲ್ಲಿ ಫೈಟಿಂಗ್ ಇತ್ತು. ನರಕ ನಿವಾಸಿಗಳು ಹಾಗೂ ಸ್ವರ್ಗ ನಿವಾಸಿಗಳ ನಡುವೆ ಬಿಗ್ ಫೈಟ್ ಇತ್ತು. ಬಿಗ್ ಬಾಸ್ ನಿಯಮಗಳ ಉಲ್ಲಂಘನೆ ಮೊದಲ ದಿನವೇ ಮುರಿಯಲಾಗಿತ್ತು. ಆದರೂ ಬಿಗ್ ಬಾಸ್ ಏನೂ ಮಾತನಾಡದೇ ಸುಮ್ಮನಿದ್ದರು. ಸ್ಫರ್ಧಿಗಳು ಟಫ್ ಫೈಟ್ ಕೊಡುತ್ತಾರೆ ಎಂದು ಭಾವಿಸಲಾಗಿತ್ತು.

ವೀಕ್ಷಕರಲ್ಲಿ ಗೊಂದಲ ಸೃಷ್ಟಿ

ಆದರೆ, ಮೂರೇ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ, ವೈಮನಸ್ಸುಗಳು ಪ್ರಾರಂಭವಾಗಿದ್ದವು. ಜಗದೀಶ್ ಒಬ್ಬರೇ ಮನೆಯಲ್ಲಿ ಆಕ್ಟಿವ್ ಆಗಿದ್ದಾರೆ ಎನ್ನಿಸಲು ಶುರುವಾಯ್ತು. ಅಲ್ಲದೇ, ಅವರ ಮಾತುಗಳು ಅತಿರೇಕ ಅನಿಸಿದರೂ ಮನರಂಜನೆ ಅವರಿಂದಲೇ ಎಂಬಂತಾಗಿತ್ತು. ಬಿಗ್ ಬಾಸ್ ನಿಯಮಗಳ ಬಗ್ಗೆ ಕೇರ್ ಮಾಡದ ಕಂಟೆಸ್ಟೆಂಟ್ ಗಳು ಲೀಲಾ ಜಾಲವಾಗಿ ತಮಗಿಷ್ಟ ಬಂದಂತೆ ನಡೆದುಕೊಳ್ಳಲು ಪ್ರಾರಂಭಿಸಿದರೂ. ಬಿಗ್ ಬಾಸ್ ಕೂಡ ಕಂಟೆಸ್ಟೆಂಟ್ ಗಳಿಗೆ ನೀವು ನನ್ನ ಮನೆಯಲ್ಲಿದ್ದೀರಾ ಎಂಬುದನ್ನು ಪದೇ ಪದೇ ನೆನಪಿಸುವಂತಾಯ್ತು. ಇದರ ನಡುವೆ ಅತಿರೇಕದ ಮಾತುಗಳು, ಒಳಗೊಳಗೇ ನಡೆಯುತ್ತಿದ್ದ ಸಂಚುಗಳು ವೀಕ್ಷಕರಲ್ಲಿ ಗೊಂದಲವನ್ನು ಸೃಷ್ಟಿ ಮಾಡಿತ್ತು.

Written Update on Bigboss season 11

ಕಿಚ್ಚನ ಮಾತಿಗಿಲ್ಲ ಕಿಮ್ಮತ್ತು

ಕಳೆದ ಎರಡೂ ವಾರ ನಡೆದ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ನಯವಾಗಿಯೇ ಜಗದೀಶ್ ಹಾಗು ಮನೆಯವರಿಗೆ ಬುದ್ಧಿ ಹೇಳಿದರು. ಅವರವರ ತಪ್ಪುಗಳನ್ನು ತಿದ್ದಿಕೊಳ್ಳಲು ದಾರಿ ಮಾಡಿಕೊಟ್ಟರು. ಆದರೆ, ಯಾರಿಗೂ ಯಾವ ಮಾತೂ ಲೆಕ್ಕಕ್ಕೆ ಇಲ್ಲ ಎಂಬಂತೆ ನಡೆದುಕೊಂಡಿದ್ದಾರೆ. ಜಗದೀಶ್ ಅವರ ವರ್ತನೆಯನ್ನೇ ಪ್ಲಸ್ ಪಾಯಿಂಟ್ ಆಗಿ ಪಡೆದು ಇಡೀ ಮನೆಯಲ್ಲಿ ವಿನಾಃಕಾರಣ ಜಗಳ, ಹೊಡೆದಾಟಕ್ಕೆ ಅವಕಾಶ ಮಾಡಿದ್ದಾರೆ. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಎಂದೂ ಧ್ವನಿ ಎತ್ತರಿಸಿ ಮಾತನಾಡದ ಬಿಗ್ ಬಾಸ್ ಕೂಡ ತಾಳ್ಮೆ ಕಳೆದುಕೊಳ್ಳುವಂತೆ ಆಗಿದೆ.

ಕಂಟೆಸ್ಟೆಂಟ್ ಗಳು ಆಡಿದ್ದೇ ಆಟ

ಇದರಿಂದ ಈಗಾಗಲೇ ಈ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಯಾವೆಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡಬೇಕು ಎಂಬ ಬಗ್ಗೆ ಕುತೂಹಲಗಳು ಮೂಡಿವೆ. ಅಲ್ಲದೇ, ವೀಕ್ಷಕರು ಕೂಡ ಕಿಚ್ಚ ಸುದೀಪ್ ಅವರಿಗೆ ಒಂದಷ್ಟು ವಿಚಾರಗಳ ಬಗ್ಗೆ ಸಲಹೆಯನ್ನೂ ಕೊಟ್ಟಿದ್ದಾರೆ. ವೀಕ್ಷಕರ ಪ್ರಕಾರ ಕಿಚ್ಚ ಸುದೀಪ್ ಅವರು ಮಾತನಾಡಬೇಕಿರುವ ವಿಷಯಗಳ ಬಗ್ಗೆ ಕಮೆಂಟ್ಸ್ ಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಬಹುಮುಖ್ಯವಾಗಿ ಹತ್ತು ಪಾಯಿಂಟ್ಸ್ ಗಳನ್ನು ತಿಳಿಸಿಕೊಡಲಾಗಿದೆ.

ಕಿಚ್ಚನಿಗೆ ಸಲಹೆ ಕೊಟ್ಟ ವೀಕ್ಷಕರು..!

ಮೊದಲ 3 ದಿನ ಮನೆ ಮಂದಿ ಜಗದೀಶ್ ಅವರೊಂದಿಗೆ ನಡೆದುಕೊಂಡ ರೀತಿ, ಮಂಜಣ್ಣ ಅವರ ಅಸಯ್ಯ ವರ್ತನೆ, ಶಿಶಿರ್ ಅವರ ಕಳಪೆ ಕ್ಯಾಪ್ಟೆನ್ಸಿ, ಗುಂಪುಗಾರಿಕೆ, ಭವ್ಯ ಅವರ ಅತೀರೇಖದ ಮಾತುಗಳು, ಮಾನಸ ಅವರ ಭಾಷೆ ಮತ್ತು ವರ್ತನೆ, ವುಮೆನ್ ಕಾರ್ಡ್ ಬಳಸಿ ಗಂಡು ಮಕ್ಕಳಿಗೆ ನಿಂದಿಸಿದ್ದು, ಜಗದೀಶ್ ಅವರಿಗೆ ಅನ್ಯಾಯ, ರಂಜಿತ್ ಅವರ ವರ್ತನೆ (ಹಿಂದೆ ಬಂದು ತಳ್ಳುವುದು), ಜಗದೀಶ್ ಅವರ ಅವಾಚ್ಯ ಶಬ್ಧ, ಮಂಜಣ್ಣ ಚಪ್ಪಲಿ ಬಿಸಾಡಿದ್ದು ತಪ್ಪು, ಹೆಣ್ಣಿಗೆ ಅಷ್ಟೇ ಅಲ್ಲದೇ ಗಂಡಿಗೂ ಅವಮಾನವಾಗಿದೆ. ಇದೆಲ್ಲಾ ವಿಚಾರಗಳ ಬಗ್ಗೆ ಪ್ರಶ್ನಿಸಬೇಕು ಕಿಚ್ಚ ಸುದೀಪ್ ಅವರು ಮಾತನಾಡಬೇಕು ಎಂದು ವೀಕ್ಷಕರು ಬಯಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X