BBK 11 ; ಮನೆಯನ್ನು ನಗೆಗಡಲಲ್ಲಿ ತೇಲಾಡಿಸಿದ ನಾಮಿನೇಷನ್ ಪ್ರಕ್ರಿಯೆ : ಹೊಟ್ಟೆ ಹುಣ್ಣಾಗುವಂತೆ ನಕ್ಕ ಸ್ಫರ್ಧಿಗಳು

By ಪ್ರಿಯಾ ದೊರೆ

ಬಿಗ್ ಬಾಸ್ ಮನೆಯಲ್ಲಿ ಮಂಜು ಆರ್ಭಟ ಜೋರಾಗಿದೆ. ರಾಜನಾಗಿ ಮೆರೆಯುತ್ತಿರುವ ಮಂಜು ತನಗೆ ಬೇಕಾದಂತೆ ಮನೆಯವರನ್ನು ಆಡಿಸುತ್ತಿದ್ದಾನೆ.ಮನೆಯ ಸದಸ್ಯರೆಲ್ಲರೂ ಮಂಜು ಮಾತಿಗೆ ಬೆಲೆ ಕೊಡುತ್ತಾ, ತಲೆ ಬಾಗುತ್ತಾ ನಡೆಯುತ್ತಿದ್ದಾರೆ. ಮನೆಯ ಸದಸ್ಯರೂ ಕೂಡ ಮಂಜು ಮಾತಿಗೆ ಬೇಸತ್ತಿದ್ದಾರೆ.
ಸುರೇಶ್, ತ್ರಿವಿಕ್ರಮ್, ರಜತ್ ರಾಜಾಧಿರಾಜ ಮಂಜು ಮಾತಿಗೆ ತಲೆ ದೂಗುತ್ತಾ, ಪ್ರಜೆಗಳು ಮಾಡುವ ಸಣ್ಣ-ಪುಟ್ಟ ತಪ್ಪುಗಳಿಗೂ ದಂಡಿಸುತ್ತಿದ್ದಾರೆ.

ಮನೆಯಲ್ಲಿ ನಾಮಿನೇಷನ್ ಆಟ ಶುರು

ಬಿಗ್ ಬಾಸ್ ಮಂಜುಗೆ ಕೊಟ್ಟಿರುವ ಸೀಕ್ರೇಟ್ ಟಾಸ್ಕ್ ಮತ್ತು ರಾಜನ ಅಧಿಕಾರ ಎಲ್ಲವೂ ಕೂಡ ಸೂಪರ್ ಆಗಿ ಬಳಸಿಕೊಳ್ಳುತ್ತಿದ್ದಾನೆ. ಪ್ರಜೆಗಳು ಮಂಜು ಆಜ್ಞೆಯನ್ನು ಕಂಡು ನಗುತ್ತಿದ್ದಾರೆ. ಚೈತ್ರಾ ಕೈಯಲ್ಲಿ ನಗು ತಡೆಯಲಾರದೇ, ಹೊಟ್ಟೆ ಹಿಡಿದು ನಕ್ಕಿದ್ದಾಳೆ. ಆಗ ಮಂಜುಗೆ ಕೋಪ ಬಂದಿದ್ದು, ಚೈತ್ರಾಳ ಮುಖದ ಮೇಕಪ್ ಅನ್ನು ತೆಗೆಸಿದ್ದಾನೆ. ಆಗಲೂ ನಗು ನಿಲ್ಲಿಸದ ಕಾರಣ ಮಂಜು ಚೈತ್ರಾ ಬಾಯಿಗೆ ಹಸಿ ಆಲೂಗಡ್ಡೆಯನ್ನು ಇರಿಸಿದ್ದು, ಕಚ್ಚಬಾರದು ಎಂದು ಆಜ್ಞೆ ನೀಡಿದ್ದಾರೆ. ಕೆಲ ಹೊತ್ತಿನ ನಂತರ ತೆಗೆಸಿದ್ದಾನೆ. ಇನ್ನು ಮನೆಯಲ್ಲಿ ಈ ವಾರದ ನಾಮಿನೇಷನ್ ಆಟ ಶುರುವಾಗಿದೆ. ಚೈತ್ರಾ ಸುದೀಪ್ ಬಳಿ ಈ ವಾರ ಮನೆಯ ಎಲ್ಲಾ ಸದಸ್ಯರ ಮುಖ ಕಳಚುವುದಾಗಿ ಹೇಳಿದ್ದಾಳೆ. ನಾಮಿನೇಷನ್ ಟಾರ್ಗೆಟ್ ಯಾರು ಎಂಬುದು ಕುತೂಹಲ ಮೂಡಿದೆ.

Written Update on Bigboss season 11 on chaithra kundapura

ಅರ್ಥವಾಗದ ಚೈತ್ರಾ ಮಾತುಗಳು

ರಾಜಾಧಿರಾಜ ಮಂಜು ಎದುರು ಮನೆಯ ಸದಸ್ಯೆರೆಲ್ಲರೂ ಈ ವಾರದ ನಾಮಿನೇಷನ್ ಪ್ರಾರಂಭಿಸಿದ್ದಾರೆ. ಇಷ್ಟು ದಿನದ ಆಟಕ್ಕೂ, ಈ ವಾರದ ಆಟಕ್ಕೂ ಬಹಳ ವ್ಯತ್ಯಾಸವಿದೆ. ಎಲ್ಲರ ಮನದಲ್ಲೂ ತಮ್ಮ ಗೆಲುವಿನ ಪ್ರಶ್ನೆ ಎದ್ದಿದೆ. ಸ್ನೇಹ, ಪ್ರೀತಿ, ಸಂಬಂಧಗಳಿಗಿಂತಲೂ ಬಿಗ್ ಬಾಸ್ ಮನೆಯಲ್ಲಿ ಗೆಲ್ಲುವುದು ಮುಖ್ಯ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಈಗಾಗಲೇ ಮೋಕ್ಷಿತಾ ಎಲ್ಲರಿಂದ ದೂರಾಗಿದ್ದು, ಗೌತಮಿಗೂ ಮಂಜು ಸ್ನೇಹಕ್ಕೂ ಮುಗಿಲು ಗೆಲ್ಲುವುದು ಎಂಬುದು ಗೊತ್ತಾಗಿದೆ. ಇನ್ನು ಚೈತ್ರಾ ಅಂತೂ ಶಕ್ತಿಗಿಂತಲೂ ಯುಕ್ತಿ ಮುಖ್ಯ ಎಂದು ನಂಬಿದ್ದು, ಸುರೇಶ್ ನನ್ನು ನಾಮಿನೇಟ್ ಮಾಡಲು ಮುಂದಾಗಿದ್ದಾರೆ. ಆದರೆ, ಮಾತನಾಡುವ ಭರದಲ್ಲಿ ಕೊಟ್ಟ ಕಾರಣಗಳು ನಗು ತರಿಸಿದೆ.


ರಜತ್ ಗೆ ಚೈತ್ರಾ ಮೇಲೆ ಕಣ್ಣು

ಬಿಡ್ಡಿಂಗ್ ನಲ್ಲಿ ಚೈತ್ರಾ ಅವರನ್ನು ಯಾರೂ ಖರೀದಿಸಲು ಮುಂದಾಗಲಿಲ್ಲ ಎಂಬ ಕಾರಣ ಕೊಟ್ಟು ಪಾಪದ ಗೋಲ್ಡ್ ಸುರೇಶ್ ಮೇಲೆ ಗೂಬೆ ಕೂರಿಸಿದ್ದಾರೆ. ಇನ್ನು ರಜತ್ ನನ್ನೂ ನಾಮಿನೇಷನ್ ಮಾಡಲು ಮುಂದಾಗಿದ್ದು, ರಜತ್ ಪ್ರತೀ ಬಾರಿ ತಮ್ಮನ್ನು ಬಾಸ್ ಎಂದು ಕರೆಯುತ್ತಾರೆ. ಅದು ವ್ಯಂಗ್ಯವಾಗಿರುತ್ತದೆ ಎಂದು ಹೇಳಿದ್ದಾರೆ. ರಜತ್ ಮನೆಗೆ ಬಂದ ದಿನದಿಂದಲೇ ಚೈತ್ರಾ ಅವರು ಬಹಳ ಕ್ಯೂಟ್, ಅವರು ನನ್ನ ಬಾಸ್. ಅವರಿಂದಲೇ ನಾನು ಮಾತನಾಡುವುದು ಕಲಿತಿದ್ದು, ಅವರ ಮಾತುಗಳು ಸೂಪರ್ ಎಂದೆಲ್ಲಾ ಹೊಗಳುತ್ತಿರುತ್ತಾರೆ. ಇದರಿಂದ ಚೈತ್ರಾ ಇರಿಟೇಟ್ ಆಗಿದ್ದಾರೆ.


ಮನೆಯವರ ಮೇಲೆ ಚೈತ್ರಾಳಿಗೆ ಸಿಟ್ಟು

ಇನ್ನು ರಜತ್ ಅವರು ಚೈತ್ರಾ ಮಾತಿಗೆ ಇನ್ನಷ್ಟು ಖುಷಿಪಟ್ಟಿದ್ದು, ನೀವೇನೇ ಅನ್ನಿ ಬಾಸ್ ನೀವೇ ನನ್ನ ಬಾಸ್ ಎಂದು ಬಾಸ್ ಸ್ಟೋರಿಯನ್ನು ಸಿಂಪಲ್ ಆಗಿ ನಡೆಸಿಕೊಟ್ಟಿದ್ದಾರೆ. ರೊಚ್ಚಿಗೆದ್ದು ಮಾತನಾಡುವ ಚೈತ್ರಾ ಮಾತಿಗಳಿಗೂ, ಕಾಮಿಡಿಯಾಗಿ ನಗುತ್ತಾ ಪ್ರತಿಯುತ್ತರ ಕೊಡುವ ರಜತ್ ಮಾತುಗಳು ಮನೆಯ ಸದಸ್ಯರಲ್ಲಿ ಹೊಟ್ಟೆ ಹಿಡಿದು ನಗಿಷುವಂತೆ ಮಾಡಿದೆ. ಇನ್ನು ನಗುತ್ತಲೇ ರಜತ್ ಅವರು ನನ್ ಬಾಸ್ ಅವರನ್ನು ಈ ಮನೆಯಿಂದ ಹೊರಗೆ ಕಳಿಸಿಯೇ ನಾನು ಹೊರಗೆ ಹೋಗುವುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಂದಿನ ನಾಮಿನೇಷನ್ ಪ್ರಕ್ರಿಯೆ ಮನೆಯನ್ನು ನಗೆಗಡಲಲ್ಲಿ ತೇಲಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X