BBK 11 ; ಚಿಕಿತ್ಸೆ ಪಡೆದು ಬಂದ ಚೈತ್ರಾ, ಹೊರಗಿನ ಸುದ್ದಿಗಳನ್ನು ಒಳಗೆ ತಂದು ತಪ್ಪು ಮಾಡಿದ್ರಾ..?
ಬಿಗ್ ಬಾಸ್ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ನಡೆದುಕೊಳ್ಳುತ್ತಿದ್ದಾರೆ. ಭವ್ಯ ಮತ್ತು ತ್ರಿವಿಕ್ರಮ್ ಸ್ನೇಹಿತರು ಎಂದುಕೊಂಡೇ ಒಳಗೊಳಗೇ ಪ್ರೀತಿ ಮಾಡುತ್ತಿದ್ದಾರೆ ಎಂದು ಮನೆಯವರೆಲ್ಲಾ ಗೆಸ್ ಮಾಡಿದ್ದಾರೆ. ಇತ್ತ ವೀಕ್ಷಕರು ಕೂಡ ಭವ್ಯ ಹಾಗೂ ತ್ರಿವಿಕ್ರಮ್ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಇಬ್ಬರೂ ಪ್ರೇಮಿಗಳಾಗುವುದರಲ್ಲಿ ಅನುಮಾನವಿಲ್ಲ ಎಂದು ಗೆಸ್ ಮಾಡಿದ್ದಾರೆ.ಅಲ್ಲದೇ, ಈ ಜೋಡಿಗಳು ಒಂದಾಗಲು ಕಲರ್ಸ್ ಕನ್ನಡ ವಾಹಿನಿಯೇ ಸಹಕಾರ ನೀಡುತ್ತಿದೆ. ಬಿಗ್ ಬಾಸ್ ಇಬ್ಬರನ್ನು ಒಂದು ಮಾಡುತ್ತಿದೆ ಎಂದು ಚರ್ಚೆ ಮಾಡುತ್ತಿದ್ದಾರೆ.
ಸುರೇಶ್ ಉತ್ತಮ, ಧನರಾಜ್ ಕಳಪೆ
ಈ ವಾರದ ಆಟದಲ್ಲಿ ಆಡಿ ಭವ್ಯ ಕ್ಯಾಪ್ಟನ್ ಆಗಿದ್ದಾರೆ. ತ್ರಿವಿಕ್ರಮ್ ಸಹಾಯದಿಂದ ಆಟವನ್ನು ಗೆದ್ದ ಭವ್ಯ ಕ್ಯಾಪ್ಟನ್ ರೂಮ್ ಅನ್ನು ಅಲಂಕರಿಸಿದ್ದಾರೆ. ಇನ್ನು ಕಳೆದ ವಾರ ಕಳಪೆ ಎಂದು ಪಡೆದು ಜೈಲು ಸೇರಿದ್ದ ಸುರೇಶ್ ಈ ವಾರ ಉತ್ತಮವಾಗಿ ಆಡಿ ಎಲ್ಲರಿಂದ ಉತ್ತಮ ಎನಿಸಿಕೊಂಡು ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ವಾರವೂ ಕಳಪೆ ಎನಿಸಿಕೊಂಡಿದ್ದ ಧನರಾಜ್ ಈ ವಾರವೂ ಜೈಲು ಪಾಲಾಗಿದ್ದಾರೆ. ಮೋಕ್ಷಿತಾ ಆಡಿದ ಮಾತುಗಳಿಂದ ನೊಂದುಕೊಂಡ ಧನರಾಜ್ ಜೈಲಿನಲ್ಲಿ ಕಣ್ಣೀರು ಹಾಕಿದ್ದಾರೆ. ಅಲ್ಲದೇ, ಮೊದಲಿನಂತೆ ಸುಮ್ಮನಿರದೇ ಮೋಕ್ಷಿತಾ ಅವರ ಮಾತುಗಳಿಗೆ ಎದುರಾಡಿ ಕೂಗಾಡಿದ್ದಾರೆ. ಹನುಮಂತು ಸಲಹೆಗಳನ್ನು ಪಾಲಿಸುತ್ತಿರುವ ಧನರಾಜ್ ಈಗ ಮಾತನಾಡಲು ಕಲಿತಿದ್ದಾರೆ.

ಸ್ಫರ್ಧಿಗಳಲ್ಲಿ ತಮ್ಮ ಮೇಲೆ ಇಲ್ಲದ ನಂಬಿಕೆ
ಮನೆಯಲ್ಲಿರುವ ಸ್ಫರ್ಧಿಗಳಿಗೆ ತಮ್ಮ ಮೇಲೆ ತಮಗೆ ಸಾಕಷ್ಟು ಅನುಮಾನಗಳಿವೆ. ತಮ್ಮನ್ನು ತಾವು ನಂಬುವುದರಲ್ಲಿ ಸೋಲುತ್ತಿದ್ದಾರೆ. ಗೌತಮಿ ತನಗೆ ಬೇಕಾದಂತೆ ಈ ವಾರ ಆಟವಾಡಿದ್ದು, ಕ್ಯಾಟೆನ್ಸಿ ಆಟಕ್ಕೂ ಆಯ್ಕೆಯಾದರು. ಆದರೆ ಈಗ ಮಂಜು ಎದುರು ಕಣ್ಣೀರು ಹಾಕುತ್ತಾ, ತಾನು ಮಾಡಿದ ಕೆಲಸಗಳು, ತನ್ನ ನಿರ್ಧಾರ, ಅಭಿಪ್ರಾಯಗಳೆಲ್ಲವೂ ತಪ್ಪು. ತನಗೆ ಗಿಲ್ಟ್ ಕಾಡುತ್ತಿದೆ ಎಂದು ಬೇಸರ ಮಾಡಿಕೊಂಡಿದ್ದಾರೆ. ಇತ್ತ ಮೋಕ್ಷಿತಾ ಕೂಡ ಧನರಾಜ್ ಮೇಲೆ ದೂರ ಹೇಳಿ ಈಗ ತಮಗೆ ಅಹಂಕಾರ ಇದೆಯಾ ಎಂದು ಇತರರನ್ನು ಪ್ರಶ್ನಿಸುತ್ತಿದ್ದಾರೆ. ಶೀಶಿರ್ ಚೈತ್ರಾಳನ್ನು ನಂಬಿ ಮೋಸ ಹೋದೆ ಎಂದು ಬೇಸರಗೊಂಡಿದ್ದಾರೆ.
ಹೊರಗಿನ ವಿಚಾರವನ್ನು ಬಿಚ್ಚಿಟ್ಟ ಚೈತ್ರಾ
ಇನ್ನು ಚೈತ್ರಾ ಅವರು ಮನೆಯ ಬಾತ್ ರೂಮ್ ನಲ್ಲಿ ಇದ್ದಕ್ಕಿದ್ದ ಹಾಗೆಯೇ ತಲೆ ತಿರುಗಿ ಬಿದ್ದಿದ್ದಾರೆ. ಪ್ರಜ್ಞೆ ಇರದ ಚೈತ್ರಾಳನ್ನು ಬಿಗ್ ಬಾಸ್ ಆಸ್ಪತ್ರೆಗೆ ಸೇರಿಸಿದ್ದು, ಒಂದು ದಿನದ ಬಳಿಕ ವಾಪಸ್ ಮನೆಗೆ ಕಳಿಸಿದ್ದಾರೆ. ಹುಷಾರಾಗಿ ಮನೆಗೆ ಬಂದ ಚೈತ್ರಾ ತಮ್ಮ ಆಟವನ್ನು ತಾವು ಆಡುವುದು ಬಿಟ್ಟು ಮನೆಯವರಿಗೆಲ್ಲಾ ಸಲಹೆ ಕೊಡಲು ಮುಂದಾಗಿದ್ದಾರೆ. ಹೊರಗಡೆ ಯಾರು ಯಾರ ಬಗ್ಗೆ ಯಾವ ಯಾವ ಅಭಿಪ್ರಾಯಗಳಿವೆ ಎಂದು ಹೇಳಲು ಹೋಗಿ ಬಿಗ್ ಬಾಸ್ ಬಳಿ ಸಿಕ್ಕಿ ಬಿದ್ದಿದ್ದಾರೆ. ಮನೆಯೊಳಗೆ ಇರುವಾಗಲೇ ಅಲ್ಲಿಂದ ಇಲ್ಲಿಗೆ , ಇಲ್ಲಿಂದ ಅಲ್ಲಿಗೆ ಸುದ್ದಿ ಮುಟ್ಟಿಸಿ ಆಡುತ್ತಿದ್ದ ಚೈತ್ರಾ ಈಗ ಹೊರಗಿನ ಸುದ್ದಿಯನ್ನು ಮನೆಯೊಳಗೆ ತಂದಿದ್ದಾರೆ.
ಚೈತ್ರಾ ಆಟಕ್ಕೆ ಬೀಳುತ್ತಾ ಬ್ರೇಕ್
ಪಿಸು ಧನಿಯಲ್ಲಿ ಮಂಜು ಮತ್ತು ಧನರಾಜ್ ಗೆ ಹೊರಗಿನ ಸುದ್ದಿಯನ್ನು ಹೇಳುತ್ತಿರುವುದನ್ನು ಕೇಳಿದ ಬಿಗ್ ಬಾಸ್ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ವಿಚಾರವನ್ನು ಕಿಚ್ಚ ಸುದೀಪ್ ಅವರು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಪ್ರಶ್ನಿಸಿದ್ದು, ಚೈತ್ರಾಳ ತಪ್ಪನ್ನು ಎತ್ತಿ ತೋರಿಸಿದ್ದಾರೆ. ಚೈತ್ರಾಳಿಗೆ ಮುಜುಗರವಾಗಿದ್ದು, ಮನೆಯಲ್ಲಿ ಇರಲು ಉಸಿರುಗಟ್ಟಿದಂತಾಗುತ್ತಿದೆ. ನನ್ನನ್ನು ಹೊರಗೆ ಕಳಿಸಿ ಎಂದು ಬಿಗೆ ಭಾಸ್ ಬಳಿ ಚೈತ್ರಾ ಹೇಳಿಕೊಂಡಿದ್ದು, ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











