BBK 11 ; ಕ್ಯಾಪ್ಟನ್ ಗೌತಮಿಯ ಆಟಕ್ಕೆ ಕಕ್ಕಾಬಿಕ್ಕಿಯಾದ ಉಗ್ರಂ ಮಂಜು..!
ಬಿಗ್ ಬಾಸ್ ಮನೆಯಲ್ಲಿ ಹೊಸ ಆಟ ಶುರುವಾಗಿದೆ. ಕಾರ್ತಿಕ್ ಮಹೇಶ್ ಮನೆಗೆ ಬಂದು ನಿಮ್ಮ ನಿಮ್ಮ ಗೇಮ್ ಚೇಂಜ್ ಬಗ್ಗೆ ಹೇಳಿ ಎಂದಿದ್ದಕ್ಕೆ, ಪ್ರತಿಯೊಬ್ಬರೂ ಒಂದೊಂದು ಕಾರಣವನ್ನು ಕೊಟ್ಟರು. ಗೌತಮಿ ಕೊಟ್ಟ ಕಾರಣ ಆಶ್ಚರ್ಯ ಎನಿಸಿತು. ಕ್ಯಾಪ್ಟನ್ ಆಗಿದ್ದೀನಿ, ಇಲ್ಲಿಂದಲೇ ನನ್ನ ಗೇಮ್ ಜೇಂಜ್ ಅನ್ನು ನೋಡಬಹುದು ಎಂದು ಹೇಳುತ್ತಾಳೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಮನೆಯಲ್ಲಿ ಐಶ್ವರ್ಯ ಮೈಕ್ ಧರಿಸದೇ ಇದ್ದಾಗ ಬೇರೆಯವರಂತೆ ಶಿಕ್ಷೆ ನೀಡದೇ, ಮನೆಯವರೆಲ್ಲರೂ ಚೈತ್ರಾ ಭಾಷಣವನ್ನು ಕೇಳುವಂತೆ ಮಾಡಿದಳು.
ಬಿಗ್ ಬಾಸ್ ಮನೆಯಲ್ಲಿ ಗೌತಮಿ ಕ್ಯಾಪ್ಟನ್ಸಿ
ಆಟದಲ್ಲಿ ಕೊಂಚ ಡಿಫರೆಂಟ್ ಆಗಿ ಆಡುತ್ತಿರುವ ಗೌತಮಿ. ಮನೆಯ ಕೆಲಸವನ್ನು ಹಂಚುವಾಗಲೂ ಅಚ್ಚುಕಟ್ಟಾಗಿ ಹಂಚಿ, ನಿಮ್ಮ ಜಗಳಕ್ಕೆ ನೀವೇ ಹೊನೆ ಎಂಬಂತೆ ಬಿಟ್ಟಳು. ಧನರಾಜ್ ಮತ್ತು ರಜತ್ ನಡುವೆ ಜಗಳ ಶುರುವಾದಾಗ ಇಬ್ಬರನ್ನೂ ಸಮಾಧಾನಪಡಿಸಿದ ಗೌತಮಿ, ಬೇರೆ ಕ್ಯಾಪ್ಟನ್ಸಿಗಿಂತಲೂ ಕೊಂಚ ಡಿಫರೆಂಟ್ ಅನಿಸಿದ್ದು ಸುಳ್ಳಲ್ಲ. ಇನ್ನು ಇದನ್ನು ಹೊರತುಪಡಿಸಿ ನೇರ ನಾಮಿನೇಷನಲ್ಲಿ ಗೌತಮಿ ಮೋಕ್ಷಿತಾಳನ್ನೇ ಆರಿಸಿಕೊಂಡು, ಕ್ಯಾಪ್ಟನ್ಸಿ ಆಟವನ್ನು ಬಿಟ್ಟು ಕೊಟ್ಟಿದ್ದು ತಪ್ಪು ಎಂದು ಕಾರಣ ಕೊಟ್ಟಳು.

ಮೋಕ್ಷಿತಾಳನ್ನು ಆಟಕ್ಕೆ ಆಯ್ಕೆ
ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯವರನ್ನು ಎರಡು ತಂಡಗಳನ್ನಾಗಿ ಮಾಡಿದೆ. ಎರಡೂ ತಂಡದವರು ಬಿಗ್ ಬಾಸ್ ಕೊಟ್ಟ ಪಾಯಿಂಟ್ಸ್ ಪ್ರಕಾರವೇ ಆಟಗಾರರನ್ನು ಆರಿಸಿಕೊಳ್ಳಬೇಕಿತ್ತು. ಇದರಲ್ಲಿ ಗೌತಮಿ ಮೋಕ್ಷಿತಾಳನ್ನು ಆರಿಸಿಕೊಂಡಳು. ಆದರೆ, ಮೋಕ್ಷಿತಾ ಬಿಟ್ಟು ಬಂದ ಸ್ನೇಹದ ಗುಂಪನ್ನು ಯಾವುದೇ ಕಾರಣಕ್ಕೂ ಸೇರುವುದಿಲ್ಲ. ಆಟಕ್ಕಿಂತಲೂ ತನ್ನ ಸ್ವಾಭಿಮಾನವೇ ಹೆಚ್ಚು ಎಂದು ಹೇಳಿ ಹೊರಗುಳಿದರು. ಮೋಕ್ಷಿತಾ ಖಡಾಖಂಡಿತವಾಗಿ ಸ್ನೇಹಿತರಿಬ್ಬರನ್ನೂ ದೂರ ತಳ್ಳಿದ್ದು, ಇನ್ಯಾವತ್ತು ಇಬ್ಬರೊಂದಿಗೆ ಬೆರೆಯುವುದಿಲ್ಲ ಎಂಬುದನ್ನು ಕಳೆದ ಒಂದು ವಾರದಿಂದ ಹೇಳುತ್ತಲೇ ಬಂದಿದ್ದಾಳೆ.
ಗೆಳಯನನ್ನು ಆಟದಿಂದ ಹೊರಗಿಟ್ಟ ಗೌತಮಿ
ಇನ್ನು ಆಟದ ಬಗ್ಗೆ ಮಾತನಾಡುವಾಗ ಗೌತಮಿಯ ಮಾತುಗಳಿಗೆ ಮಂಜು ಪದೇ ಪದೇ ಅಡ್ಡ ಬರುತ್ತಿದ್ದರು. ಇದನ್ನು ಗಮನಿಸಿದ ಗೌತಮಿ ನೇರವಾಗಿ ಮುಲಾಜಿಲ್ಲದೇ ಗೆಳೆಯ ಮಂಜು ಅವರನ್ನು ಆಟದಿಂದ ಹೊರಗಿಟ್ಟರು. ಇದು ಮಂಜುಗೆ ಹರ್ಟ್ ಆಗಿದ್ದು, ಮನೆಯ ಇತರ ಸದಸ್ಯರಿಗೆ ಆಶ್ಚರ್ಯವೂ ಆಗಿದೆ. ಮಂಜು ಈ ಬಗ್ಗೆ ಸ್ಪಷ್ಟನೆ ಕೇಳಿದಾಗ, ನನ್ನ ಧ್ವನಿಗಿಂತಲೂ ನಿಮ್ಮ ಧ್ವನಿ ಜೋರಾಗಿದೆ. ನನ್ನ ಆಟವನ್ನು ಆಡಲು ಬಿಡಿ, ಪದೇ ಪದೇ ನಾನು ನಾನು ಎಂದು ಮುಂದೆ ಬರುತ್ತಿದ್ದೀರಾ ಎಂದು ಹೇಳುತ್ತಾಳೆ.
ತನ್ನ ಆಟದ ಹೊಸ ವರಸೆ ಶುರು
ಕ್ಯಾಪ್ಟನ್ ಆಗಿ ಹೊಸ ಆಟವನ್ನು ಶುರು ಮಾಡಿರುವ ಗೌತಮಿ ಅವರು, ಬಿಗ್ ಬಾಸ್ ಮನೆಯಲ್ಲಿ ಗೆಲ್ಲುವುದು ಮುಖ್ಯ. ಸ್ನೇಹ ಏನಿದ್ದರೂ ಮನೆಯಿಂದ ಹೊರಗೆ ಇದ್ದೇ ಇರುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ನನ್ನ ಕ್ಯಾಪ್ಟನ್ಸಿ ನಲ್ಲಿ ನೀವು ನನ್ನನ್ನು ಲೀಡ್ ಮಾಡುವ ಅಗತ್ಯವಿಲ್ಲ. ನಾನು ಈಗಾಗಲೇ ಟೇಕ್ ಆಫ್ ಆಗಿದ್ದಾಗಿದೆ. ಮತ್ತೆ ನಿಲ್ಲುವುದಿಲ್ಲ ಎಂದು ಗೌತಮಿ ಹೇಳಿದ್ದಾಳೆ, ಯಾರು ಏನೇ ಮಾತನಾಡಿದರೂ ನಾನು ಉತ್ತರ ಕೊಡಲು ಬಿಡದೇ ನೀವೇ ಮಾತನಾಡುತ್ತೀರಾ. ಅದು ನನಗೆ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾಳೆ. ಇನ್ನು ಇಬ್ಬರು ಸದಸ್ಯರು ಡ್ರಮ್ ಮೂಲಕ ಉರುಳಿ ಚೀಲಗಳನ್ನು ತೆಗೆದು ತಕ್ಕಡಿಯಲ್ಲಿ ಇಡಬೇಕಿದೆ. ಈ ಆಟವನ್ನು ರಜತ್ ಉಸ್ತುವಾರಿಐಲ್ಲಿ ನಡೆಯುತ್ತಿದೆ. ಹೀಗಾಗಿ ಇಂದಿನ ಸಂಚಿಕೆ ಕೊಂಚ ಇಂಟರೆಸ್ಟಿಂಗ್ ಆಗಿರುವುದಂತೂ ನಿಜ. ಅದರಲ್ಲೂ ಗೌತಮಿಯ ನಿರ್ಧಾರಗಳು ಎಲ್ಲರನ್ನು ನಿಬ್ಬೆರಗಾಗಿಸಲಿದೆ.


Click it and Unblock the Notifications











