BBK 11 ; ನನಗೆ ಆಡೋಕೆ ಕೊಡ್ತಿಲ್ಲ, ಗಳಗಳ ಅತ್ತ ಚೈತ್ರಾ ಕುಂದಾಪುರ..!

By ಪ್ರಿಯಾ ದೊರೆ

ಬಿಗ್ ಬಾಸ್ ಮನೆಯಲ್ಲಿ ಗೌತಮಿ ಕ್ಯಾಪ್ಟನ್ಸಿ ಆಟವನ್ನು ಅದ್ಭುತವಾಗಿ ಆಡುತ್ತಿದ್ದಾರೆ. ಮಂಜು ಮಾಡಿದ ತಪ್ಪನ್ನು ತಾನು ಮಾಡಬಾರದು ಎಂದು ತೀರ್ಮಾನಿಸಿದ್ದಾರೆ.ಹೀಗಾಗಿ ತನ್ನ ಮೇಲೆ ಗೆಳಯನ ನೆರಳು ಕೊಂಚವೂ ಬೀಳದಂತೆ ನೋಡಿಕೊಂಡಿದ್ದಾರೆ. ಗೆಳಯನಿಂದ ಸ್ನೇಹಕ್ಕೆ ಬ್ರೇಕ್ ಹಾಕಿದ್ದು, ಇನ್ನು ಮುಂದೆ ನನ್ನ ಆಟ ನನ್ನದು, ನಿಮ್ಮ ಆಟ ನಿಮ್ಮದು ಎಂದು ಸ್ಪಷ್ಟಪಡಿಸಿದ್ದಾಳೆ. ಇನ್ನು ಆಟವಾಡುವಾಗ ಮಂಜು ಗೌತಮಿ ತಂಡವನ್ನೇ ಆಯ್ಕೆ ಮಾಡಿಕೊಂಡರೂ ಕೂಡ. ಗೌತಮಿ ಸಿಕ್ಕ ಅವಕಾಶವನ್ನು ಬಿಡದೇ ಕ್ಯಾಪ್ಟನ್ಸಿ ಆಟದಿಂದ ಮಂಜುನನ್ನು ಹೊರಗಿಟ್ಟಿದ್ದಾರೆ.

ಚೈತ್ರಾ ಕಣ್ಣೀರು ಹಾಕಲು ಕಾರಣವೇನು..?

ಚೈತ್ರಾ ಈ ಬಾರಿ ಗೌತಮಿ ತಂಡದಲ್ಲಿ ಆಟವಾಡುತ್ತಿದ್ದಾರೆ. ಇಂದಿನ ಸಂಚಿಕೆಯ ಆಟದಲ್ಲಿ ಗೌತಮಿ ಚೈತ್ರಾ ಅವರನ್ನು ಉಸ್ತುವಾರಿಯನ್ನು ವಹಿಸಿಕೊಳ್ಳಿ ಎಂದು ಕೇಳಿದ್ದಾಳೆ. ಈ ಮಾತು ಕೇಳುತ್ತಿದ್ದಂತೆಯೇ ಚೈತ್ರಾ ಕಣ್ಣಿರು ಹಾಕಿದ್ದಾರೆ. ಎಲ್ಲರ ಎದುರು ಗೌತಮಿ ನಿರ್ಧಾರವನ್ನು ಖಂಡಿಸಿದ್ದಾಳೆ. ಉಸ್ತುವಾರಿ ಉಸ್ತುವಾರಿ ಎಂದು ನನ್ನನ್ನು ಆಟವಾಡಲು ಬಿಡುವುದೇ ಇಲ್ಲ ಎಂದು ಗೋಳಾಡಿದ್ದಾಳೆ. ನನ್ನನ್ನು ಉಸ್ತುವಾರಿ ಮಾಡಲು ಬಿಡುವುದು. ವಾರದ ಕೊನೆಯಲ್ಲಿ ಆಟವಾಡಲು ಲಾಯಕ್ಕಿಲ್ಲ ಎನ್ನುವುದು ಎಂದು ಚೈತ್ರಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೋಕ್ಷಿತಾ, ಶಿಶಿರ್ ಎಲ್ಲರ ಎದುರೂ ಚೈತ್ರಾ ದೊಡ್ಡ ವಿಷಯವನ್ನಾಗಿ ಮಾಡಿ ಜಗಳ ಮಾಡಿದ್ದಾರೆ.

Written Update on Bigboss season 11 on gauthami team fails

ಮಂಜುಗೆ ಗೌತಮಿ ವಾರ್ನಿಂಗ್

ನಿನ್ನೆ ಆಡಿದ ಆಟದಲ್ಲಿ ಗೌತಮಿ ತಂಡ ಸೋತಿದೆ. ಹೀಗಾಗಿ ಗೌತಮಿ ಮಂಜು ಅವರನ್ನು ಕ್ಯಾಪ್ಟನ್ಸಿ ಆಟದಿಂದ ಹೊರಗಿಟ್ಟಿದ್ದಾರೆ. ಇದರಿಂದ ಮಂಜುಗೆ ಬಹಳ ಬೇಸರವಾಗುತ್ತದೆ. ಆದರೆ, ಗೌತಮಿ ಮಾತನ್ನು ಯಾವತ್ತೂ ತೆಗೆದು ಹಾಕದ ಮಂಜು ಅನಿವಾರ್ಯವಾಗಿ ಗೌತಮಿ ನಿರ್ಧಾರಗಳನ್ನು ಒಪ್ಪಿಕೊಳ್ಳುತ್ತಿದ್ದಾನೆ. ಗೌತಮಿ ಕೂಡ ಮಂಜುಗೆ ನೀವು ಬೇರೆಯವರನನು ಲೀಡ್ ಮಾಡುವುದು ತಪ್ಪು. ಅವರವರ ನಿರ್ಧಾರವನ್ನು ಅವರವರು ತೆಗೆದುಕೊಳ್ಳಲು ಬಿಡಿ. ಈಗ ನಾನು ಕ್ಯಾಪ್ಟನ್ ಆಗಿದ್ದೀನಿ. ಹಾಗಾಗಿ ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಡಿ ಎಂದು ಹೇಳಿದ್ದಾಳೆ. ಇನ್ನು ಇಂದಿನ ಆಟದಲ್ಲಿ ಗೌತಮಿ ಮಂಜುಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾಳೆ. ನಾನು ಆಟವಾಡುವಾಗ ನೀವು ಮಧ್ಯದಲ್ಲಿ ಬರುವ ಅಗತ್ಯವಿಲ್ಲ. ನನ್ನ ಆಟವನ್ನು ಆಡಲು ಬಿಡಿ ಎಂದು ಹೇಳಿದ್ದಾಳೆ. ಇದೇ ಕಾರಣಕ್ಕೋ ಏನೂ ಈ ಬಾರಿ ಗೌತಮಿ ತಂಡ ಸಂಪೂರ್ಣವಾಗಿ ಸೋಲುತ್ತಿದೆ.


ಗೌತಮಿ ಬಗ್ಗೆ ಮೋಕ್ಷಿತಾ ಅಭಿಪ್ರಾಯ ಬದಲಾಯ್ತಾ..?

ಗೌತಮಿ ಮೊನ್ನೆ ಮೋಕ್ಷಿತಾಳನ್ನು ನಾಮಿನೇಟ್ ಮಾಡಿದಳು. ಕ್ಯಾಪ್ಟನ್ಸಿ ಆಟವನ್ನು ಬಿಟ್ಟುಕೊಟ್ಟಿದ್ದು ತಪ್ಪು, ಯುವರಾಣಿ ಆಟವನ್ನು ಸರಿಯಾಗಿ ಆಡಲಿಲ್ಲ ಎಂದು ಕಾರಣ ನೀಡಿದ್ದಳು. ನಿನ್ನೆ ಮೋಕ್ಷಿತಾಳನ್ನು ಮಾನಸಿಕವಾಗಿ ಗಟ್ಟಿಯಾಗಿರುವ ವ್ಯಕ್ತಿ ಎಂದು ಗೌತಮಿ ಹೇಳಿದ್ದಾಳೆ. ಹೀಗಾಗಿ ಮೋಕ್ಷಿತಾ ಗೌತಮಿ ಗುಂಪನ್ನು ಸೇರಿದ್ದಾಳೆ. ಅಲ್ಲದೇ, ಐಶ್ವರ್ಯ ಮತ್ತು ಶಿಶಿರ್ ಬಳಿ ಮಾತನಾಡುವಾಗ ಮೋಕ್ಷಿತಾ ಗೌತಮಿ ಬೈಯಾಸ್ಡ್ ಆಗಿ ಇಲ್ಲ. ಗೌತಮಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸರಿಯಾಗಿದೆ ಎಂದು ಮಾತನಾಡಿದ್ದಾಳೆ. ಮೋಕಿತಾಳಳಲ್ಲಿ ನಿಧಾನವಾಗಿ ಗೌತಮಿ ಬಗ್ಗೆ ಇರುವ ಅಭಿಪ್ರಾಯ ಬದಲಾಗುತ್ತಿದೆ.


ತ್ರಿವಿಕ್ರಮ್- ಭವ್ಯ ಜೋಡಿ ಬಗ್ಗೆ ಅಸಮಾಧಾನ

ಇನ್ನು ಧನರಾಜ್ ಮನೆಯಲ್ಲಿ ಇರುವವರಲ್ಲಿ ಯಾರು ಯಾರು ಹೊರಹೋಗಲು ವೀಕ್ ಆಗಿದ್ದಾರೆ ಎಂದು ಮಾತನಾಡಿದ್ದು, ತಾನು, ಚೈತ್ರಾ ಎಂದು ಲಿಸ್ಟ್ ಹಾಕಿದ್ದಾನೆ. ಅಲ್ಲದೇ, ತ್ರಿವಿಕ್ರಮ್ ಮತ್ತು ಭವ್ಯ ಬಗ್ಗೆ ಮಾತನಾಡಿದ್ದು, ಭವ್ಯ ಅತೀಯಾಗಿ ತ್ರಿವಿಕ್ರಮ್ ಜೊತೆಗೆ ಇದ್ದಾಳೆ. ಸ್ನೇಹ ಇರಲಿ ಆದರೆ, ಇಷ್ಟು ಕ್ಲೋಸ್ ಅನಗತ್ಯ ಎಂಬಂತೆ ತನ್ನ ಅಭಿಪ್ರಾಯವನ್ನು ಹನುಮಂತನ ಜೊತೆಗೆ ಹಂಚಿಕೊಂಡಿದ್ದಾನೆ. ಮನೆಯಲ್ಲಿ ನಿಧಾನವಾಗಿ ಅಭಿಪ್ರಾಯಗಳು ಬದಲಾಗುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X