BBK 11;ಅಮ್ಮನ ಅಗಲಿಕೆಯ ನೋವಲ್ಲೂ ಕರ್ತವ್ಯಕ್ಕೆ ಬಂದ ಬಾದ್ ಶಾ:ಮೋಕ್ಷಿತಾ ಮತ್ತು ಮಂಜುಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ !

By ಪ್ರಿಯಾ ದೊರೆ

ಬಿಗ್ ಬಾಸ್ ಸೀಸನ್ 11 ಎಂದರೆ ನಾಟ್ ಸೋ ಫೇವರಿಟ್ ಎಂದಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಅವರು ತಮ್ಮ ತಾಯಿಯ ಅಗಲಿಕೆಯ ನೋವಿನಲ್ಲಿದ್ದಾರೆ. ವಾರದ ಕತೆ ಕಿಚ್ಚನ ಜೊತೆ ವೀಕೆಂಡ್ ಪಂಚಾಯ್ತಿಗೆ ಸುದೀಪ್ ಅವರು ತಪ್ಪಿಸಿಕೊಂಡಿದ್ದೇ ಇಲ್ಲ. ಕಳೆದ ಹನ್ನೊಂದು ವರ್ಷಗಳಲ್ಲಿ ಒಂದೆರಡು ಬಾರಿ ಮಾತ್ರವೇ ಗೈರಾಗಿದ್ದರು.ಹಾಗೆ ಗೈರಾಗಲು ಕೂಡ ಇದ್ದ ಕಾರಣಗಳು ಬಹಳ ಗಂಭೀರವಾದದ್ದು. ಕೋವಿಡ್ ಸಂದರ್ಭದಲ್ಲೂ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದರು.

ನೋವಿನಲ್ಲೇ ಮರಳಿದ ನಟ

ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಸುದೀಪ್ ಬಳಲಿದಾಗ ಅನಿವಾರ್ಯವಾಗಿ ವೀಕೆಂಡ್ ಪ್ರೊಗ್ರಾಂಗೆ ಗೈರಾಗಿದ್ದರು. ಅದು ಬಿಟ್ಟರೆ, ಈಗಲೇ ತಮ್ಮ ತಾಯಿಯನ್ನು ಕಳೆದುಕೊಂಡ ನೋವಿನಿಂದ ಬರಲಿಲ್ಲ. ಅದರಲ್ಲೂ ಕಳೆದ ಹದಿನೈದು ದಿನಗಳ ಹಿಂದೆ ಅವರ ತಾಯಿ ಸರೋಜಾ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಾಯಿ ಐಸಿಯುನಲ್ಲಿ ಇದ್ದರೂ ಕೂಡ ಬಿಗ್ ಬಾಸ್ ಸ್ಫರ್ಧಿಗಳಿಗೆ ಈ ಪರೀಸ್ಥಿತಿ ಗೊತ್ತಿಲ್ಲ ಎಂದು ಹೇಳಿ ತಮ್ಮ ಪಂಚಾಯ್ತಿಯನ್ನು ಕಂಪ್ಲೀಟ್ ಆಗಿ ಮುಗಿಸಿಯೇ ಶೂಟಿಂಗ್ ಸ್ಪಾಟ್ ನಿಂದ ಹೊರಟಿದ್ದರು. ಆದರೆ, ಅವರು ಮನೆಗೆ ತೆರಳುತ್ತಿದ್ದಂತೆಯೇ ತಮ್ಮ ತಾಯಿಯನ್ನು ಕಳೆದುಕೊಂಡ ದುಃಖ ಅವರನ್ನು ಅಪ್ಪಿತ್ತು. ಈ ವಿಚಾರದಿಂದ ಇಡೀ ಕರುನಾಡೇ ಮರುಗಿದ್ದು ಕೂಡ ನಿಜ. ಹೀಗಾಗಿ ಕಳೆದ ವಾರ ಸುದೀಪ್ ಅವರು ವೀಕೆಂಡ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.

Written Update on Bigboss season 11 on kiccha sudeep

ಕಿಚ್ಚನ ಕರ್ತವ್ಯ ನಿಷ್ಠೆ

ತಾಯಿಯನ್ನು ಕಳೆದುಕೊಂಡ ನೋವು ಅಷ್ಟು ಸುಲಭವಾಗಿ ದೂರವಾಗುವಂತದ್ದಲ್ಲ. ಹಾಗಿದ್ದರೂ ಕೂಡ ಕಿಚ್ಚ ಸುದೀಪ್ ಅವರು ಮತ್ತೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಒಂದೇ ವಾರ ಬ್ರೇಕ್ ತೆಗೆದುಕೊಂಎಉ ಈಗ ಮರಳಿ ಬಿಗ್ ಬಾಸ್ ವೀಕೆಂಡ್ ಶೋ ಅನ್ನು ನಡೆಸಿಕೊಟ್ಟಿದ್ದಾರೆ. ಪ್ರೊಮೋದಲ್ಲಿ ಮತ್ತೆ ನೆಚ್ಚಿನ ಕಿಚ್ಚನನ್ನು ನೋಡಿದ ಅಭಿಮಾನಿಗಳ ಕಣ್ಣು ಅರಳಿದೆ. ಜೊತೆಗೆ ಅವರ ತಾಯಿನ್ನು ನೆನೆದು ಮತ್ತೆ ಎಲ್ಲರ ಕಣ್ಣಾಲಿಗಳು ಒದ್ದೆಯಾಗಿವೆ ಎಂಬುದು ಖಂಡಿತ ಸುಳ್ಳಲ್ಲ. ಇನ್ನು ಇದರಿಂದ ಕಿಚ್ಚ ಸುದೀಪ್ ಅವರು ಕರ್ತವ್ಯವನ್ನು ಎಷ್ಟು ನಿಷ್ಠೆಯಿಂದ ನಡೆಸಿಕೊಡುತ್ತಾರೆ ಎಂಬುದನ್ನು ಗಮನಿಸಿ ಮನದಲ್ಲೇ ಅವರ ಮೇಲಿದ್ದ ಗೌರವವನ್ನು ಹೆಚ್ಚಿಸಿಕೊಂಡಿದ್ದಾರೆ.

ನಿಲ್ಲದ ಸ್ಫರ್ಧಿಗಳ ಆಟ

ಇನ್ನು ಕಿಚ್ಚ ಸುದೀಪ್ ಅವರು ಕಳೆದ ವಾರ ಬಾರದೇ ಇದ್ದಿದ್ದಕ್ಕೆ ಸ್ವಲ್ಪವೂ ಯೋಚಿಸದ ಸ್ಫರ್ಧಿಗಳು ತಮ್ಮ ಆಟವನ್ನು ತಮಗೆ ಬೇಕಾದಂತೆ ಆಡಿದ್ದರು. ಕಳೆದ ಬಾರಿ ವೀಕೆಂಡ್ ಅನ್ನು ನಿರ್ದೇಶಕ ಯೋಗರಾಜ್ ಭಟ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮ ಮುಗಿಯುವ ವೇಳೆಗೆ ತಮ್ಮ ಗೆಳೆಯ ಅವರ ತಾಯಿಯನ್ನು ಕಳೆದುಕೊಂಡ ವಿಚಾರವನ್ನು ಹೇಳಿ ದುಃಖಿಸಿದ್ದರು. ಸ್ಫರ್ಧಿಗಳು ಕೂಡ ಆ ಕ್ಷಣಕ್ಕೆ ಮಾತ್ರವೇ ಮರುಗಿದವರು ಮರುಕ್ಷಣವೇ ತಮ್ಮದೇ ಆಟದಲ್ಲಿ ಮುಳುಗಿ ಹೋಗಿದ್ದರು. ನಿಜಕ್ಕೂ ಸ್ಫರ್ಧಿಗಳಿಗೆ ಕಳೆದ ಮೂರು ವಾರಗಳಲ್ಲಿ ಕಿಚ್ಚ ಸುದೀಪ್ ಅವರು ಆಡಿದ ಯಾವ ಮಾತೂಗಳೂ ತಲೆ ಹೋಗಿಲ್ಲ ಎಂಬುದು ವೀಕ್ಷಕರಿಗಂತೂ ಸ್ಪಷ್ಟವಾಗಿದೆ.


ಮೋಕ್ಷಿತಾ, ಮಂಜುಗೆ ಸುದೀಪ್ ಕ್ಲಾಸ್

ಇನ್ನು ಈ ವಾರ ಮೋಕ್ಷಿತಾ ತಮ್ಮ ಆಟದ ದಿಕ್ಕನ್ನೇ ಬದಲಿಸಿದ್ದಾರೆ. ಇದ್ದಕ್ಕಿದ್ದ ಹಾಗೆಯೇ ತ್ರಿವಿಕ್ರಮ್ ವಿರುದ್ಧ ತಿರುಗಿ ಬಿದ್ದಿದ್ದು, ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಮಂಜು ಕೂಡ ಈ ವಾರದ ಆಟದಲ್ಲಿ ಮನೆಯವರಿಗೆಲ್ಲಾ ಬೇಸರವನ್ನುಂಟು ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಮೋಕ್ಷಿತಾ ಮತ್ತು ಮಂಜು ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೋಕ್ಷಿತಾ ಅವರ ಬದಲಾವಣೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X