BBK 11 ;ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ರಾಜ,ಅರಸ ಆಡಳಿತಕ್ಕೆ ಬೇಸತ್ತ ದೋಸ್ತ್..!

By ಪ್ರಿಯಾ ದೊರೆ

ಬಿಗ್ ಬಾಸ್ ವೀಕೆಂಡ್ ಕಾರ್ಯಕ್ರಮ ಮುಗಿದಿದ್ದು, ಈ ವಾರ ಧರ್ಮ ಕೀರ್ತಿರಾಜ್ ಅವರು ಎಲಿಮಿನೇಟ್ ಆಗಿದ್ದಾರೆ. ಮನೆಯವರೆಲ್ಲಾ ಧರ್ಮ ಮನೆಯಲ್ಲಿ ಉಳಿಯಲು ಬಯಸಿದ್ದರು.ಚೈತ್ರಾ ಕುಂದಾಪುರ ಮನೆಯಿಂದ ಹೊರ ಹೋಗಲಿ ಎಂದು ಬಯಸಿದರೂ ಕೂಡ ಅದು ನಡೆಯಲಿಲ್ಲ. ಇದರಿಂದ ರೊಚ್ಚಿಗೆದ್ದಂತೆ ಚೈತ್ರ ಸಾಲುಗಟ್ಟಲೆ ಭಾಷಣವನ್ನೂ ಮಾಡಿದರು.ಇನ್ಮೇಲೆ ನನ್ನ ಅಸಲಿ ಆಟವನ್ನು ಪ್ರಾರಂಭಿಸುತ್ತೇನೆ. ಈ ಮನೆಯಲ್ಲಿ ಪ್ರತಿಯೊಬ್ಬರ ಮುಖವಾಡವನ್ನೂ ಕಳಚುತ್ತೇನೆ ಎಂದು ಕಣ್ಣೀರು ಹಾಕಿ ಉಳಿದುಕೊಂಡಿದ್ದಕ್ಕೆ ಭಾವುಕರಾದರು.

ಕ್ಯಾಪ್ಟನ್ ಪಟ್ಟ ಆಟದ ವಸ್ತುವಾಯ್ತಾ..?

ಮಂಜು ಮತ್ತು ತ್ರಿವಿಕ್ರಮ್ ಇಷ್ಟು ದಿನ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂಬಂತೆ ಕಾಣುತ್ತಿದ್ದರು. ಆದರೆ, ಈಗ ಅವರಿಬ್ಬರೂ ಸೈಲೆಂಟ್ ಆಗಿ ಒಂದಾಗಿದ್ದು, ಅವರಿಬ್ಬರಿಗೆ ಮನೆಯ ಕ್ಯಾಪ್ಟನ್ ಹಾಗೂ ಆಟ ಪ್ರತಿಯೊಂದನ್ನು ನಿರ್ಧಾರ ಮಾಡುವ ಶಕ್ತಿ ಇದೆ. ಅವರಿಬ್ಬರು ಮನಸ್ಸು ಮಾಡಿದರೆ ತಮಗೆ ಬೇಕಾದವರನ್ನು ಗೆಲ್ಲಿಸಬಹುದು ಎಂದು ಮಾತನಾಡಿಕೊಂಡಿದ್ದಾರೆ. ಈಗ ಇವರಿಬ್ಬರಿಗೆ ಗೌತಮಿ ಮತ್ತು ಭವ್ಯ ಕೂಡ ಜೊತೆಯಾಗಿದ್ದು, ಮುಂದಿನ ವಾರ ಯಾರು ಕ್ಯಾಪ್ಟನ್ ಆಗಬೇಕು ಎಂದು ಮಾತನಾಡಿಕೊಂಡಿದ್ದಾರೆ. ಇದನ್ನು ನೋಡಿದ ವೀಕ್ಷಕರು ಬಿಗ್ ಬಾಸ್ ನಿರ್ಧಾರವನ್ನು ಬದಲಿಸಲು ಮಂಜು ಮತ್ತು ತ್ರಿವಿಕ್ರಮ್ ಕೈಯಲ್ಲಿ ಸಾಧ್ಯವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ವಾರದ ಕ್ಯಾಪ್ಟನ್ಸಿ ಆಟವನ್ನು ಬಿಗ್ ಬಾಸ್ ಹೇಗೆ ಆಡಿಸುತ್ತಾರೆ ಎಂಬುದು ಕುತೂಹಲ ಮೂಡಿದೆ.

Written Update on Bigboss season 11 on King ugram manju

ಬಿಗ್ ಬಾಸ್ ಮನೆ ಈಗ ಸಾಮ್ರಾಜ್ಯ

ಬಿಗ್ ಬಾಸ್ ಈ ವಾರ ಹೊಸ ಆಟವನ್ನು ಆಡಿಸಿದ್ದಾರೆ. ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿರುತ್ತೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಯಾವೆಲ್ಲಾ ನಿಯಮಗಳಿವೆ. ಬಿಗ್ ಬಾಸ್ ಸಾಮ್ರಾಜ್ಯದ ಆಡಳಿತ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ಅಲ್ಲದೇ, ಮಂಜು ಕ್ಯಾಪ್ಟನ್ ಆಗಿರುವಾಗಲೇ ಈ ಟಾಸ್ಕ್ ಬಂದಿರುವುದು ಮತ್ತಷ್ಟು ಕುತಹಲಕ್ಕೆ ಎಡೆ ಮಾಡಿಕೊಟ್ಟಿದೆ. ರಜತ್ ಮಾತುಗಳು, ಚೈತ್ರಾ ಆಟ, ಮೋಕ್ಷಿತಾಳ ಬೇಸರ ಎಲ್ಲವೂ ಮಂಜು ಕ್ಯಾಪ್ಟನ್ಸಿಯಲ್ಲಿ ಸರಿ ಹೋಗುತ್ತದೆಯೋ ಇಲ್ಲ ಇನ್ನಷ್ಟು ಸಮಸ್ಯೆಗಳನ್ನು ಹುಟ್ಟು ಹಾಕುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಬಿಗ್ ಬಾಸ್ ಸಾಮ್ರಾಜ್ಯಕ್ಕೆ ಒಡೆಯನಾದ ಮಂಜು

ಉಗ್ರಂ ಮಂಜು ಬಿಗ್ ಬಾಸ್ ಸಾಮ್ರಾಜ್ಯದ ರಾಜನಾಗಿದ್ದಾನೆ. ರಾಜನಿಗೆ ಒಡವೆ, ಬಟ್ಟೆಗಳು, ಕಿರೀಟ ಎಲ್ಲವನ್ನೂ ಬಿಗ್ ಬಾಸ್ ನೀಡಿದ್ದಾರೆ. ಮನೆಯ ಪ್ರಜೆಗಳೆಲ್ಲರೂ ಮಂಜು ಅವರ ಮಾತನ್ನು ಪಾಲಿಸಬೇಕಾಗಿದೆ. ತಪ್ಪು ಮಾಡಿದವರಿಗೆ ಮಂಜು ಬಸ್ಕಿ ಹೊಡೆಸುತ್ತಿದ್ದಾರೆ. ತನ್ನ ಎಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಪ್ರಜೆಗಳೆಲ್ಲರೂ ರಾಜನ ಮಾತಿನಂತೆ ನಡೆದುಕೊಂಡಿದ್ದು, ರಾಜನ ಸೇವೆಯನ್ನು ಮಾಡುತ್ತಿದ್ದಾರೆ. ಇಲ್ಲದೇ ಹೋದರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದೆ. ಈ ಸಾಮ್ರಾಜ್ಯದಲ್ಲಿ ಬಿಗ್ ಬಾಸ್ ಯಾವ ರೀತಿಯ ಟಾಸ್ಕ್ ಗಳನ್ನು ನೀಡುತ್ತಾರೆ ಎಂಬುದು ಕೂಡ ಕುತೂಹಲಕರ ವಿಚಾರವೇ ಆಗಿದೆ.


ರಾಜನ ಆಡಳಿತಕ್ಕೆ ಬೇಸತ್ತ ದೋಸ್ತ

ಇನ್ನು ಮಂಜು ತನ್ನ ಆಡಳಿತದಲ್ಲಿ ಎಲ್ಲಾ ಪ್ರಜೆಗಳ ಮೇಲೆ ಹಿಡಿತ ಸಾಧಿಸುತ್ತಿದ್ದು, ಇದರಿಂದ ಧನರಾಜ್ ಮತ್ತು ಹನುಮಂತುಗೆ ಸಾಕು ಸಾಕು ಎಂಬಂತಾಗಿದೆ. ರಾಜನ ಮಾತು ಕೇಳದಿದ್ದರೆ ಶಿಕ್ಷೆ ಅನುಭವಿಸಬೇಕು. ಆದರೆ, ಮಂಜು ಮಾತುಗಳನ್ನು ಕೇಳಲು ಬಯಸದಿದ್ದರೂ ಈಗ ಧನರಾಜ್ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಬಿಗ್ ಬಾಸ್ ಮುಂದೆ ಹೋಗಿ ಮಂಜು ಮಾತು ಕೇಳಲು ಕಷ್ಟವಾಗುತ್ತಿದೆ ಎಂದು ದುಃಖವನ್ನು ತೋಡಿಕೊಂಡಿದ್ದಾರೆ. ಇಂದಿನ ಎಪಿಸೋಡ್ ಭಾರೀ ಕುತೂಹಲವನ್ನು ಮೂಡಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X