BBK 11 ; ಮನೆಗೆ ಬಂದ ಮೊದಲ ವಾರವೇ ಕಳಪೆ ಪಟ್ಟ ಪಡೆದ ರಜತ್...!

By ಪ್ರಿಯಾ ದೊರೆ

ಈಗಾಗಲೇ ಬಿಗ್ ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾಗಿದೆ. ಮೊದಲು ಹನುಮಂತು ಮನೆಗೆ ಎಂಟ್ರಿ ಕೊಟ್ಟರು. ಆದರೆ, ಹನುಮಂತು ಅವರನ್ನು ಮನೆಯವರು ಸೀರಿಯಸ್ ಆಗಿ ಪರಿಗಣಿಸಲಿಲ್ಲ. ಹನುಮಂತು ಅವರು ಆಡಿದ ಆಟ ಮತ್ತು ಮೊದಲ ವಾರವೇ ಕ್ಯಾಪ್ಟನ್ ಮತ್ತು ಕಿಚ್ಚನ ಚಪ್ಪಾಳೆ ಪಡೆದು ಮನೆಯವರ ಹುಬ್ಬೇರಿಸುವಂತೆ ಮಾಡಿದ್ದರು. ತದನಂತರ ಎಲ್ಲರೂ ನಾವಂದುಕೊಂಡ ಹಾಗಲ್ಲ ಹನುಮಂತು. ನಮಗೆ ಸೀರಿಯಸ್ ಕಾಂಪಿಟೀಟರ್ ಆಗುತ್ತಾರೆ ಎಂದು ಭಾವಿಸಿ ಎಲ್ಲರೂ ಆಟವನ್ನು ನಿಧಾನವಾಗಿ ಶುರು ಮಾಡಿಕೊಂಡರು.

ವೈಲ್ಡ್ ಕಾರ್ಡ್ ಮೂಲಕ ಬಂದ ಶೋಭಾ, ರಜತ್

ಈ ವಾರ ಆರಂಭದಲ್ಲಿ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಶೋಭಾ ಶೆಟ್ಟ ಹಾಗೂ ರಜತ್ ಕಿಶನ್ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರನ್ನೂ ನೋಡಿ ಮನೆಯವರು ಶಾಕ್ ಕೂಡ ಆಗಿದ್ದಾರೆ. ಅದರಲ್ಲೂ ರಜತ್ ಮಾತುಗಳು ಮನೆಯವರನ್ನು ಕೆರಳಿಸಿದ್ದೂ ಇದೆ. ಮಂಜು, ತ್ರಿವಿಕ್ರಮ್ ಎಲ್ಲರೂ ಸೇರಿ ರಜತ್ ನನ್ನು ಮಟ್ಟ ಹಾಕಲೇಬೇಕು ಎಂದು ಮೊದಲ ದಿನವೇ ಮಾತನಾಡಿಕೊಂಡಿದ್ದರು. ಶೋಭಾ ಈಗಾಗಲೇ ಪರಭಾಷೆಯ ಬಿಗ್ ಬಾಸ್ ಶೋ ನಲ್ಲಿ ಆಡಿ ಬಂದಿರುವಾಕೆ. ಆಕೆಯ ಮನೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಎಲ್ಲರೂ ಶೋಭಾಳನ್ನು ಲೆಕ್ಕಕ್ಕಿಟ್ಟುಕೊಂಡಿದ್ದಾರೆ. ಬಿಗ್ ಬಾಸ್ ಕೊಟ್ಟ ಆಟದಲ್ಲಿ ಶೋಭಾರನ್ನು ಒಂದು ಟೀಂ ನ ಕ್ಯಾಪ್ಟನ್ ಆಗಿಯೂ ಆರಿಸಿಕೊಂಡಿದ್ದಾರೆ.

Written Update on Bigboss season 11 on rajath

ಅದ್ಭುತವಾಗಿ ಆಡಿದ ಎರಡೂ ಗುಂಪುಗಳು

ಶೋಭಾ ಶೆಟ್ಟಿ ಕೂಡ ಜೋಷ್ ನಲ್ಲಿಯೇ ಆಟವನ್ನು ಶುರು ಮಾಡಿದ್ದು, ಮೊದಲ ದಿನವೇ ಉಗ್ರಂ ಮಂಜು ಜೊತೆಗೆ ಗಂಟೆ ಗಟ್ಟಲೇ ವಾದಕ್ಕೆ ಇಳಿದಿದ್ದರು. ಅದೇ ದಿನವೇ ಮಂಜು ಅವರನ್ನು ಗೇಮ್ ಚೇಂಜರ್, ಒಳ್ಳೆಯ ಆಟಗಾರ ಎಂದು ಹೇಳಿ, ತನ್ನ ಗುಂಪಿಗೆ ಸೇರಿಸಿಕೊಂಡರು. ಭವ್ಯ ಗುಂಪಿನಲ್ಲಿ ಧರ್ಮಕಿರ್ತೀ, ಮೋಕ್ಷಿತಾ, ಗೋಲ್ಡ್ ಸುರೇಶ್, ಐಶ್ವರ್ಯ, ತ್ರಿವಿಕ್ರಮ್ ಮತ್ತು ಶಿಶಿರ್ ಆಟವಾಡಿದ್ದಾರೆ. ಶೋಭಾ ಅವರ ಗುಂಪಿನಲ್ಲಿ ಚೈತ್ರಾ, ಗೌತಮಿ, ಮಂಜು, ಹನುಮಂತು, ಧನರಾಜ್, ರಜತ್ ಆಟವಾಡಿದ್ದಾರೆ. ಹನುಮಂತು, ರಜತ್, ಮಂಜು, ತ್ರಿವಿಕ್ರಮ್, ಭವ್ಯ ಅದ್ಭುತವಾಗಿ ಆಟವನ್ನು ಆಡಿದ್ದಾರೆ.


ಎಲ್ಲರ ಕೆಂಗಣ್ಣಿಗೆ ಗುರಿಯಾದ ರಜತ್

ಇನ್ನು ರಜತ್ ಮನೆಗೆ ಬಂದ ದಿನದಿಂದಲೇ ಮಾತುಗಳಲ್ಲಿ ಹಿಡಿತವಿಲ್ಲದ ರೀತಿಯಲ್ಲಿ ಎಲ್ಲರ ಜೊತೆಗೆ ಮಾತನಾಡಿದ್ದಾನೆ. ಮನೆಯಲ್ಲಿರುವ ಪ್ರತಿಯೊಬ್ಬರನ್ನೂ ಏಕವಚನದಲ್ಲಿ ಮಾತನಾಡಿಸಿದ್ದಾನೆ. ನೀವೆಲ್ಲಾ ಸ್ಫರ್ಧಿಗಳಾ, ನಿಮ್ಮನ್ನೆಲ್ಲಾ ಒಂದೇ ಏಟಿಗೆ ಹೊಡೆದು ಉರುಳಿಸುತ್ತೇನೆ ಎಂಬಂತೆ ನಡೆದುಕೊಂಡಿದ್ದಾನೆ. ತಾನೇ ಭೀಮ, ತನಗಿಂತ ಬಲಶಾಲಿಗಳು ಈ ಮನೆಯಲ್ಲಿ ಯಾರೂ ಇಲ್ಲ ಎನ್ನುವಂತೆ ಮಾತನಾಡಿದ್ದಾನೆ. ರಜತ್ ಮಾತುಗಳು, ಮತ್ತು ನಡವಳಿಕೆ ಈಗಾಗಲೇ ಮನೆಯವರಲ್ಲಿ ಅಸಮಾಧಾನವನ್ನು ತೋರಿದ್ದಾರೆ.


ಕಳಪೆ ಪಟ್ಟ ಪಡೆದ ರಜತ್

ಇನ್ನು ಆಟವಾಡುವ ಭರದಲ್ಲಿ ರಜತ್ ಬಾಯಿಗೆ ಬಂದ ಪದಗಳನ್ನು ಬಳಿಸಿದ್ದಾನೆ. ಈ ವೇಳೆ ಗೋಲ್ಡ್ ಸುರೇಶ್ ಜೊತೆಗೆ ಜಗಳಕ್ಕೆ ಬಿದ್ದ ರಜತ್ ವಯಕ್ತಿಕವಾಗಿ ಮಾತನಾಡಿದ್ದು, ಬೀಪ್ ಸದ್ದು ಬರುವಂತೆ ಅವಾಚ್ಯ ಶಬ್ಧಗಳನ್ನು ಬಳಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಗೋಲ್ಡ್ ಸುರೇಶ್ ಕೂಡ ಗಳ ಮಾಡಿದ್ದರು. ನಾನು ಈ ಮನೆಯಲ್ಲಿ ಇರೊಲ್ಲ ಹೋಗುತ್ತೇನೆ ಎಂದು ಕದ ತಟ್ಟಿದ್ದರು. ಆದರೆ, ಬಿಗ್ ಬಾಸ್ ಈ ವಿಚಾರವಾಗಿ ಸದ್ದು ಮಾಡದೇ ಸುಮ್ಮನಿದ್ದಾರೆ. ವಾರದ ಕೊನೆಯಲ್ಲಿ ಈಗ ರಜತ್ ಕಳಪೆ ಪಟ್ಟವನ್ನು ಹೊರುವಂತಾಗಿದೆ. ಮನೆಯ ಎಲ್ಲಾ ಸದಸ್ಯರು ಕೂಡ ಒಮ್ಮತವಾಗಿ ಸೇರಿ ರಜತ್ ಬಳಸಿದ ಪದಗಳು ತಪ್ಪು. ಅದು ಈ ಮನೆಗೆ ಸೂಕ್ತವಲ್ಲ ಎಂದು ಆರೋಪಿಸಿ ರಜತ್ ನನ್ನು ಜೈಲಿಗೆ ಕಳಿಸಿದ್ದಾರೆ. ಆದರೆ, ರಜತ್ ತನ್ನ ತಪ್ಪನ್ನು ಒಪ್ಪಿಕೊಳ್ಳದೇ ನಾನಿರುವುದೇ ಹೀಗೆ, ಇನ್ನು ಮುಂದೆ ಇನ್ನೂ ಮಾತನಾಡುತ್ತೇನೆ ಎಂದಿರುವುದು ವೀಕ್ಷಕರಿಗೂ ಬೇಸರ ತಂದಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X