BBK 11; ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಎರಡು ಟಿವಿ : ಸುದ್ದಿ ಓದಿ ಐಶ್ವರ್ಯ ಆದಳು ವಾಚಕಿ..!
ಬಿಗ್ ಬಾಸ್ ಮನೆಯಲ್ಲಿ ಸೂಪರ್ ಸಂಡೇ ಸಖತ್ ಕಾಮಿಡಿಯಾಗಿತ್ತು. ರಾಣಿಯನ್ನು ಕರೆಸಿದಾಗ ಮಂಜು, ಶಿಶಿರ್, ಧನರಾಜ್ ಎಲ್ಲರೂ ಸೇರಿ ರಾಣಿ ಗೊಂಬೆ ಜೊತೆಗೆ ರೊಮ್ಯಾಂಟಿಕ್ ಆಗಿ ಕುಣಿದು ಎಲ್ಲರನ್ನೂ ನಗಿಸಿದರು. ಇನ್ನು ಮೋಕ್ಷಿತಾ ಮತ್ತು ಮಂಜು ಸುದೀಪ್ ಅವರ ಎದುರಿಗೇ ವಾದ ಮಾಡಿ ಎಲ್ಲರಿಗೂ ಬೇಸರವನ್ನುಂಟು ಮಾಡಿದ್ದಾರೆ. ಸುದೀಪ್ ಅವರು ಕೂಡ ಇಬ್ಬರ ವಾದ ಕೇಳಿ ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳ ಅಗತ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಈ ವಾರ ಶಿಶಿರ್ ಅಥವಾ ಐಶ್ವರ್ಯ ಎಲಿಮಿನೇಟ್ ಆಗಬೇಕಿತ್ತು. ಆದರೆ, ಕಹಾನಿ ಪೇ ಟ್ವಿಸ್ಟ್ ಎಂಬಂತೆ ಸೇವ್ ಆಗಿರುವ ಶೋಭಾ ಶೆಟ್ಟಿ ಮನೆಯಿಂದ ಹೊರ ಹೋಗಲು ತಯಾರಾಗಿದ್ದಾರೆ.
ಮನೆಯಿಂದ ಕಣ್ಣೀರು ಹಾಕುತ್ತಾ ಹೊರಟ ಶೋಭಾ
ಅಭಿಮಾನಿಗಳು ವೋಟ್ ಮಾಡಿ ಶೋಭಾ ಅವರನ್ನು ಉಳಿಸಿಕೊಂಡರೂ ಕೂಡ ಶೋಭಾ ಅವರು ಬಿಗ್ ಬಾಸ್ ಮನೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಶೋಭಾ ಅವರ ನಿರ್ಧಾರ ಕೇಳಿ ಶಾಕ್ ಆದ ಸುದೀಪ್ ಅವರು, ನಿಮ್ಮ ನಿರ್ಧಾರ ತಪ್ಪು ಎಂದು ಹೇಳಿ, ಮನೆಯಿಂದ ಹೊರ ಹೋಗಿ ಎಂದು ಹೇಳಿ ಹೊರಟಿದ್ದಾರೆ. ಶೋಭಾ ಅವರ ನಿರ್ಧಾರಕ್ಕೆ ಕಿಚ್ಚ ಸುದೀಪ್ ಅವರು ವೀಕ್ಷಕರ ಬಳಿ ಕ್ಷಮೆ ಕೇಳಿದ್ದಾರೆ. ಇನ್ನು ಬಿಗ್ ಬಾಸ್ ಶೋಭಾ ಅವರಿಗೆ ಮುಖ್ಯದ್ವಾರವನ್ನು ತೆರೆದಿದ್ದು, ಹೊರ ನಡೆಯಲು ಸೂಚಿಸಿದ್ದಾರೆ. ಶೋಭಾ ಅವರು ಕನ್ಫ್ಯೂಸ್ ಆಗಿಯೇ ಮನೆಯಿಂದ ಕಣ್ಣೀರು ಹಾಕುತ್ತಾ ಹೊರ ನಡೆದಿದ್ದಾರೆ.

ಮನೆಯಲ್ಲಿ ಎರಡು ಸುದ್ದಿ ವಾಹಿನಿಗಳ ಹಾವಳಿ
ಇಂದು ಸೋಮವಾರ ಬಿಗ್ ಬಾಸ್ ಸ್ಫರ್ಧಿಗಳಿಗೆ ಹೊಸ ಟಾಸ್ಕ್ ಅನ್ನು ನೀಡಿದ್ದಾರೆ. ಅದರ ಪ್ರಕಾರ ಮನೆಯ ಸದಸ್ಯರನ್ನು ಎರಡು ತಂಡಗಳನ್ನಾಗಿ ವಿಂಗಡಿಸಿದ್ದಾರೆ. ಮನೆಯನ್ನು ಎರಡು ಸುದ್ದಿ ವಾಹಿನಿಗಳನ್ನಾಗಿ ಬಿಗ್ ಬಾಸ್ ಪರಿವರ್ತಿಸಿದ್ದಾರೆ. ಈ ಸುದ್ದಿ ವಾಹಿನಿಗಳೀಗೆ ಎರಡೂ ತಂಡಗಳೀಂದ ಒಬ್ಬೊಬ್ಬರು ಸುದ್ದಿ ವಾಚಕರನ್ನು ನೇಮಿಸಲಾಗಿದೆ. ಐಶ್ವರ್ಯ ಮತ್ತು ಚೈತ್ರಾ ಎರಡು ಸುದ್ದಿ ವಾಹಿನಿಗಳಿಗೆ ಪ್ರತ್ಯೇಕವಾಗಿ ವಾಚಕರಾಗಿದ್ದಾರೆ. ಎರಡೂ ತಂಡಗಳು ಸೇರಿ ಸುದ್ದಿ ವಾಹಿಯನ್ನು ನಡೆಸಿದೆ. ಸದಸ್ಯರ ಬಗ್ಗೆ ಮುಖ್ಯಾಂಶಗಳನ್ನು ಓದಿದ್ದಾರೆ.
ಸುದ್ದಿ ವಾಚಕರಾದ ಚೈತ್ರಾ ಮತ್ತು ಐಶ್ವರ್ಯ
ವಾಹಿನಿ ಪ್ರಸಾರ ಮಾಡಿರುವ ಪ್ರೊಮೋದಲ್ಲಿ ಐಶ್ವರ್ಯ ಅವರು, ಹನುಮಂತು, ರಜತ್, ಚೈತ್ರಾ ಕುಂದಾಪುರ ಬಗ್ಗೆ ಸುದ್ದಿಯನ್ನು ಓದಿದ್ದಾರೆ. ಪಿನ್ನಷ್ಟು ಉದ್ದ ಇಲ್ಲ. ಯಾರಿಗೆ ಪಿನ್ ಚುಚ್ಚಿದ್ರು ಅಂತಾನೇ ಗೊತ್ತಾಗೋದಿಲ್ಲ. ಇವರು ಯಾರಿಗೆ ಹಾಲು ಕೊಡ್ತಾರೋ, ಯಾರಿಗೆ ಹಾಲಾಹಲವನ್ನು ಕೊಡ್ತಾರೋ ಗೊತ್ತೇ ಆಗುವುದಿಲ್ಲ. ಇವರು ಯಾರ ಜೊತೆಗೆ ನಾಲ್ಕು ದಿನ ಚೆನ್ನಾಗಿ ಮಾತನಾಡುತ್ತಾರೋ, ಅವರಿಗೆ ಬಿಗ್ ಬಾಸ್ ಮನೆಯ ಗೇಟ್ ಓಪನ್ ಆಗೋದಂತೂ ಗ್ಯಾರಂಟಿ. ಇವರು ನಕಲಿ ಮಂಡೋದರಿ.. ಸಿಕ್ಕವರಿಗೆಲ್ಲಾ ಅಣ್ಣ ಅಂತ ಕರೀತಾರೆ. ತಾವು ಉಳಿದುಕೊಳ್ಳ್ಳಳುವ ಸಲುವಾಗಿ ಯಾರನ್ನು ಬೇಕಾದರೂ ಮುಳುಗಿಸುತ್ತಾರೆ. ಇನ್ನು ರಜತ್ ಅವರು ಕಲಿಯುಗದ ನಕಲಿ ಭೀಮ.. ಸೋಂಬೇರಿ ಸಿದ್ಧ, ಗೊರಕೆ ಹೊಡ್ಕೊಂಡು ಬಿದ್ದ. ಮನೆ ಕೆಲಸ ಅಂದ್ರೆ ಇನ್ನೊಬ್ಬರಿಗೆ ವಹಿಸೋದು ಅಂದುಕೊಂಡಿದ್ದಾರೆ. ಹಾಲು ಕೂಡ ಬಿಸಿಕೊಂಡು ಕುಡಿಯೋದಕ್ಕೆ ಬರಲ್ಲ. ಕಸ ಗುಡಿಸಿ ಎಂದರೆ ಪೊರಕೆ ಹಿಡಿಯಲೂ ಬರಲ್ಲ ಎಂದಿದ್ದಾರೆ. ಗೂಸು ಹನುಮಾ ಬರೀ ಹಾಡನ್ನು ಹಾಡಿಕೊಂಡು ಎಲ್ಲರನ್ನೂ ಗೆದ್ದೆ ಎಂದುಕೊಂಡಿದ್ದಾರೆ. ಅವರಿಗೆ ಗೊತ್ತಿಲ್ಲ. ಅವರ ವೀಕ್ನೆಸ್ ಈಗಾಗಲೇ ಮನೆಯವರಿಗೆಲ್ಲಾ ಗೊತ್ತಾಗಿದೆ ಅಂತ ಐಶ್ವರ್ಯ ಅವರು ಸುದ್ದಿ ಓದಿದ್ದಾರೆ.
ಮತಚಲಾಯಿಸಲು ವೀಕ್ಷಕರಿಗೆ ಸಿಕ್ತು ಅವಕಾಶ
ಇತ್ತ ಚೈತ್ರಾ ಕುಂದಾಪುರ ಅವರು ಕೂಡ ಸುದ್ದಿ ಓದಿದ್ದಾರೆ. ಯುವರಾಣಿ ಮೇಲಿನ ಅಸೂಯೆಗೆ ಕಳಚಿತು ಪಾಸಿಟಿವಿಟಿ ಮುಖವಾಡ ಎಂದು ಮೋಕ್ಷಿತಾ ಹಾಗೂ ಗೌತಮಿ ಬಗ್ಗೆ ಮುಖ್ಯಂಶಗಳನ್ನು ಓದಿದ್ದಾರೆ. ಇನ್ನು ಬಿಗ್ ಬಾಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅತಿ ಹೆಚ್ಚು ಮನರಂಜನೆ ಕೊಟ್ಟು ಗೆಲ್ಲುವ ವಾಹಿನಿ ಯಾವುದು ಎಂದು ಜಿಯೋ ಸಿನಿಮಾ ಆಪ್ ಮೂಲಕ ವೀಕ್ಷಕರು ಮತಚಲಾಯಿಸಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದು, ಈ ವಾರದ ಆಟ ಇನ್ನಷ್ಟು ರೋಚಕವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಎಂಎಂ ಟಿವಿ ಹಾಗೂ ಡಿಡಿ ಟಿವಿ ವಾಹಿನಿಯ ಪೈಕಿ ಯಾವ ಸುದ್ದಿ ವಾಹಿನಿ ಹೆಚ್ಚು ಸೌಂಡ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











