BBK 11 ; ಮಾತನಾಡಿ ಕೆಲಸ ಕೆಡಿಸಿಕೊಂಡರಾ ಮಂಜು..? ಎಷ್ಟು ದಿನಸಿ ಸಿಗಬಹುದು..?

By ಪ್ರಿಯಾ ದೊರೆ

ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಸಿಂದೋಗಿ ಹೊರ ನಡೆದಿದ್ದಾಗಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆ ಮಗಳಿಗೆ ವಿದಾಯ ಹೇಳಿದ್ದಾರೆ.ಪ್ರತಿ ವಾರವೂ ಎಲಿಮಿನೇಷನ್ ನಡೆಯುವಾಗ ಕಿಚ್ಚ ಸುದೀಪ್ ಅವರು ಮಾತನಾಡಿಸಿ ಕಳಿಸುತ್ತಿದ್ದರು. ಆದರೆ, ಮೊದಲ ಬಾರಿಗೆ ಬಿಗ್ ಬಾಸ್ ಭಾವುಕ ಮಾತುಗಳನ್ನು ಆಡಿ ಐಶ್ವರ್ಯ ಅವರಿಗೆ ಸದಾ ನಾವಿದ್ದೇವೆ ಎಂಬ ಭರವಸೆಯನ್ನು ನೀಡಿದೆ.ಬಿಗ್ ಬಾಸ್ ಮಾತುಗಳಿಗೆ ಸೋತ ಐಶ್ವರ್ಯ ಅವರು ಇದೇ ನನ್ನ ಮನೆ ಎಂದು ಹೇಳಿ, ಖುಷಿಯಿಂದ ಹೊಸ ಸಂಬಂಧಗಳೊಂದಿಗೆ ಹೊರ ನಡೆದಿದ್ದಾರೆ.

ಉಳಿದಿರೋದು 9 ಕಂಟೆಸ್ಟೆಂಟ್ ಗಳು

ಬಿಗ್ ಬಾಸ್ ಮನೆಯಲ್ಲಿ ಈಗ ಕೇವಲ 9 ಜನ ಕಂಟೆಸ್ಟೆಂಟ್ ಗಳು ಮಾತ್ರವೇ ಉಳಿದಿದ್ದಾರೆ. ಭವ್ಯ ಗೌಡ, ರಜತ್ ಕಿಶನ್, ತ್ರಿವಿಕ್ರಮ್, ಮೋಕ್ಷಿತಾ ಪೈ, ಉಗ್ರಂ ಮಂಜು, ಗೌತಮಿ ಜಾಧವ್, ಧನರಾಜ್, ಹನುಮಂತು, ಚೈತ್ರಾ ಕುಂದಾಪುರ 14ನೇ ವಾರದ ಆಟ ಆಡಲು ಸಜ್ಜಾಗಿದ್ದಾರೆ. ಈ ವಾರ ಯಾರೆಲ್ಲಾ ನಾಮಿನೇಟ್ ಆಗುತ್ತಾರೆ ಎಂಬ ಕುತೂಹಲ ಮೂಡಿದೆ. ಕಂಟೆಸ್ಟೆಂಟ್ ಗಳಲ್ಲಿ ಈಗ ದಿನ ದಿನಕ್ಕೂ ಆತಂಕ ಹೆಚ್ಚಾಗುತ್ತಿದೆ. ಮಂಜು ಆಟ ಕಡಿಮೆ ಮಾಡಿದ್ದು, ತ್ರಿವಿಕ್ರಮ್ ಕಳೆದು ಹೋದಂತೆ ಕಾಣುತ್ತಿದ್ದಾರೆ. ರಜತ್ ಆಟ ಎಲ್ಲರಿಗೂ ಇಷ್ಟವಾಗಿದ್ದು, ಚೈತ್ರಾ ಯಾವಾಗ ಮನೆಗೆ ಹೋಗುತ್ತಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.

Written Update on Bigboss season 11 on today s promo

ಕಷಾಯ ಕುಡಿದ ಸ್ಫರ್ಧಿಗಳು

ಬಿಗ್ ಬಾಸ್ ಕಷಾಯ ಮಳಿಗೆಯನ್ನು ತೆರೆದಿದ್ದು, ಪ್ರತಿ ಸ್ಫರ್ಧಿಗಳಿಗೆ ಕಷಾಯ ಕುಡಿಸುವಂತೆ ಹೇಳಿದ್ದಾರೆ. ರಜತ್ ಅವರು ನೇರವಾಗಿ ತಮ್ಮ ಗುರುಗಳಾದ ಚೈತ್ರಾ ಕುಂದಾಪುರ ಅವರಿಗೆ ಕುತಂತ್ರಿ ಎಂದು ಹೇಳಿ ಕಷಾಯವನ್ನು ಕುಡಿಸಿದ್ದಾರೆ. ಇನ್ನು ರಜತ್ ಕೂಡ ಕಷಾಯ ಕುಡಿದಿದ್ದು, ಭವ್ಯ ಗೌಡ ಅವರು ಮಂಜುಗೆ ದುರಹಂಕಾರ ಎಂದು ಕಷಾಯವನ್ನು ಕೊಟ್ಟಿದ್ದು, ಮಂಜು ವಾದ ಮಾಡಿದ್ದಾರೆ. ಭವ್ಯಳಿಗೂ ಅಹಂಕಾರವಿದೆ ಎಂದು ವಾದವನ್ನು ಮಾಡಿದ್ದು, ಉಳಿದಂತೆ ಯಾರು ಯಾರಿಗೆ ಕಷಾಯ ಕುಡಿಸಿದ್ದಾರೆ. ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ ಎಂಬುದನ್ನು ಎಪಿಸೋಡ್ ನೋಡಿಯೇ ತಿಳಿಯಬೇಕಿದೆ.


ಮಾತನಾಡಿ ಕೆಲಸ ಕೆಡಿಸಿಕೊಂಡರಾ ಮಂಜು..?

ಅಷ್ಟೇ ಅಲ್ಲದೇ, ಬಿಗ್ ಬಾಸ್ ಮನೆಯ ದಿನಸಿ ಸಾಮಾಗ್ರಿಗಳಿಗಾಗಿ ಸ್ಫರ್ಧಿಗಳಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ಆಡಲು ತಲಾ ಇಬ್ಬರಂತೆ ಮೂರು ಜೋಡಿಗಳು ಬೇಕಾಗಿದ್ದಾರೆ. ಇರುವ 9 ಜನರಲ್ಲಿ ಆರು ಮಂದಿಗೆ ಆಡುವ ಅವಕಾಶವಿದೆ. ಮಂಜು ಯಾವುದೇ ಟಾಸ್ಕ್ ಬಂದರೂ ಆಡುತ್ತೇನೆ ಎಂದಿದ್ದು, ಚೈತ್ರಾ ಅವರು ಆಡುತ್ತೇನೆ ಎಂದಿದ್ದಾರೆ. ಈ ಮಾತಿಗೆ ಮಂಜು ಅವರು ಆಟ ಸೋತರೆ ಸರಿ ಇರುವುದಿಲ್ಲ ಎಂಬಂತೆ ಮಾತನಾಡಿದ್ದಾರೆ. ಅಲ್ಲದೇ, ಧನರಾಜ್ ಅವರಿಗೆ ಕಾನ್ಪಿಡೆನ್ಸ್ ಇಲ್ಲ ಎಂದರೆ ಆಡಬೇಡಿ ಎಂದು ಹೇಳಿದ್ದಾನೆ. ಹೀಗೆ ಮಾತನಾಡಿದ ಮಂಜು, ಚೈತ್ರಾ ಜೊತೆಗೆ ಜೋಡಿಯಾಗಿ ಆಡಲು ಮುಂದಾಗಿದ್ದಾರೆ.

ಹೊಸ ಆಟದಲ್ಲಿ ಗೆಲ್ಲುವವರು ಯಾರು..?

ಆಡುವ ಮುನ್ನವೇ ಮಂಜು ಮಾತನಾಡಿ ಆಟದಲ್ಲಿ ಸೋಲುವಂತೆ ಆಟವಾಡಿದ್ದಾರೆ. ಪ್ರೊಮೋದಲ್ಲಿ ತೋರಿದಂತೆ ಮಂಜು ಸೋಲಬಹುದು ಎನಿಸಿದೆ. ಇನ್ನು ಮೋಕ್ಷಿತಾ ಮತ್ತು ಧನರಾಜ್ ಹಾಗೂ ಗೌತಮಿ ಮತ್ತು ಹನುಮಂತು ಆಟವಾಡಿದ್ದಾರೆ ಎಂದು ಗೆಸ್ ಮಾಡಲಾಗಿದ್ದು, ರಜತ್ ಆಟದ ಉಸ್ತುವಾರಿ ವಹಿಸಿಕೊಂಡಿರಬಹುದು ಎನ್ನಲಾಗಿದೆ. ಭವ್ಯ ಗೌಡ ಕ್ಯಾಪ್ಟನ್ಸಿಯನ್ನು ಮುಂದುವರೆಸಿದ್ದು, ಈ ಆಟದಲ್ಲಿ ಮನೆಯವರೆಲ್ಲಾ ಸೇರಿ ಎಷ್ಟು ದಿನಸಿ ಸಾಮಾಗ್ರಿಗಳನ್ನು ಪಡೆದಿದ್ದಾರೆ ಎಂಬುದನ್ನು ಇಂದು ರಾತ್ರಿ 9:30ರ ವರೆಗೂ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X