BBK 11 ; ಗೋಸುಂಬೆ ಯುವರಾಣಿ, ರೋಗಿಷ್ಟ ಮಹಾರಾಜ : ಬಂಡಾಯ ಎದ್ದ ಪ್ರಜೆಗಳು..!
ಬಿಗ್ ಬಾಸ್ ಸೀಸನ್ 11ನೇ ಸೀಸನ್‌ನ 9ನೇ ವಾರ ನಡೆಯುತ್ತಿದೆ. ಬಿಗ್ ಬಾಸ್ ಮನೆಯನ್ನು ಸಾಮ್ರಾಜ್ಯವಾಗಿ ಬದಲಾಯಿಸಿದ್ದು, ಉಗ್ರಂ ಮಂಜು ಮಹಾರಾಜನ ಪಟ್ಟದಲ್ಲಿ ಮೆರೆಯುತ್ತಿದ್ದಾನೆ. ಆಟದಲ್ಲಿ ಟ್ವಿಸ್ಟ್ ತಂದ ಬಿಗ್ ಬಾಸ್ ಯುವರಾಣಿಯನ್ನಾಗಿ ಮೋಕ್ಷಿತಾಳನ್ನು ಮಾಡಿದ್ದು, ಅಣ್ಣ-ತಂಗಿ ನಡುವೆ ವೈರತ್ವವಿದೆ ಎಂದು ಹೇಳಿದ್ದಾರೆ. ಇದು ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಒಂದೇ ಎಂಬಂತಾಗಿದೆ. ಯಾಕೆಂದರೆ ಈಗಾಗಲೇ ಮೋಕ್ಷಿತಾ ಮತ್ತು ಮಂಜು ನಡುವೆ ಒಂದು ಸಣ್ಣ ಮುನಿಸು ಬೆಳೆಯಲು ಪ್ರಾರಂಭಿಸಿತ್ತು. ಆದರೆ, ಈಗ ಬಿಗ್ ಬಾಸ್ ಕೊಟ್ಟ ಟ್ವಿಸ್ಟ್ ಸುಟ್ಟ ಗಾಯಕ್ಕೆ ಉಪ್ಪು ಸುರಿದಂತಾಗಿದೆ.
ಮಂಜು-ಮೋಕ್ಷಿತಾ ನಡವೆ ಹೆಚ್ಚಾದ ದ್ವೇಷ
ಬಿಗ್ ಬಾಸ್ ಮೊದಲು ಮಂಜುಗೆ ಸೀಕ್ರೇಟ್ ಟಾಸ್ಕ್ ನೀಡಿದ್ದರು. ಅದರಲ್ಲಿ ಮಂಜು ಗೆದ್ದಿದ್ದರಿಂದ ಈ ವಾರದ ಕ್ಯಾಪ್ಟನ್ಸಿ ಓಟದಲ್ಲಿ ಸ್ಫರ್ಧಿಸಲು ಆಯ್ಕೆ ಆಗಿದ್ದಾರೆ. ಈ ಬಗ್ಗೆ ಸ್ವತಃ ಬಿಗ್ ಬಾಸ್ ಮನೆಯ ಸದಸ್ಯರಿಗೆ ತಿಳಿಸಿದ್ದಾರೆ. ಇನ್ನು ಮೋಕ್ಷಿತಾ ಮಂಜು ಸಹೋದರಿಯಾಗಿದ್ದು, ಈ ಮನೆಯ ಯುವರಾಣಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅದರಲ್ಲೂ ಮೋಕ್ಷಿತಾ ಕಡೆಯವರೆಲ್ಲಾ ಬಂಡಾಯ ಎದ್ದಿರುವ ಪ್ರಜೆಗಳು ಎಂದು ಹೇಳಿದ್ದಾರೆ. ಹೀಗಾಗಿ ಮನೆಯಲ್ಲಿನ ಆಟ ಬದಲಾಗಿದೆ. ಮೋಕ್ಷಿತಾ ಕಡೆಯ ಪ್ರಜೆಗಳು ಮಂಜುಗೆ ಮರ್ಯಾದೆ ಕೊಡುತ್ತಿಲ್ಲ. ಅಲ್ಲದೇ,ಯುವರಾಣಿಗೆ ಸಿಕ್ಕಿರುವ ಕೆಲ ಸೌಲಭ್ಯಗಳು ಮಂಜು ಮತ್ತು ಅವನ ಕಡೆಯವರಲ್ಲಿ ಅಸಮಾಧಾನವನ್ನು ತೋರ್ಪಡಿಸುವಂತೆ ಮಾಡಿದೆ.

ಕ್ಯಾಪ್ಟನ್ಸಿ ಓಟಕ್ಕೆ ಮಂಜು ಸ್ಟ್ರ್ಯಾಟಜಿ
ಹಾಗಾಗಿ ಮಂಜು ಈಗ ಕ್ಯಾಪ್ಟನ್ಸಿ ಓಟದಲ್ಲಿ ಮೋಕ್ಷಿತಾಳನ್ನು ದೂರ ಇಡುವ ಸಲುವಾಗಿ ತನ್ನದೇ ಕೆಲ ಸ್ಟ್ರಾಟಜಿಗಳನ್ನು ಮಾಡುತ್ತಿದ್ದಾನೆ. ತನ್ನ ಕಡೆ ಇರುವ ಪ್ರಜೆಗಳಾದ ಗೌತಮಿ, ಭವ್ಯ, ತ್ರಿವಿಕ್ರಮ್, ಧನರಾಜ್ ಎಲ್ಲರಿಗೂ ನಿಮ್ಮಲ್ಲಿ ಅಗಾಧವಾದ ಸಾಮರ್ಥ್ಯವಿದೆ. ಕ್ಯಾಪ್ಟನ್ ಆಗಲು ನೀವು ಅರ್ಹರಿದ್ದೀರಾ. ಈ ವಾರದ ಆಟವನ್ನು ಅದ್ಭುತವಾಗಿ ಆಡಿ. ಈ ವಾರದ ಕ್ಯಾಪ್ಟನ್ ಆಗಿ, ನಿಮಗೆ ನಾನು ಸಹಾಯ ಮಾಡುತ್ತೇನೆ ಎಂದು ತನ್ನದೇ ರೀತಿಯ ಸ್ಟ್ರಾಟಜಿಯನ್ನು ಬಳಸುತ್ತಿದ್ದಾನೆ. ಇನ್ನು ಮೋಕ್ಷಿತಾಳ ಮೇಲಿನ ಕೋಪವನ್ನು ಹಾಡಿನ ಮೂಲಕ ವ್ಯಂಗ್ಯವಾಡುತ್ತಿದ್ದಾನೆ, ಇದರಿಂದ ಮೋಕ್ಷಿತಾಳಿಗೆ ಬೇಸರವಾಗಿದ್ದು, ಕುಳಿತ ಜಾಗದಲ್ಲೇ ಬೈದುಕೊಳ್ಳುತ್ತಿದ್ದಾಳೆ.
ಮೋಕ್ಷಿತಾ ಗೋಸುಂಬೆ ಎಂದ ತ್ರಿವಿಕ್ರಮ್
ಇನ್ನು ಮೋಕ್ಷಿತಾ ಮತ್ತು ಮಂಜು ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮನೆಯ ಪ್ರಜೆಗಳು ಬಲಿಯಾಗುತ್ತಿದ್ದಾರೆ. ಹನುಮಂತು ಮತ್ತು ಧನರಾಜ್ ಅಣ್ಣ-ತಂಗಿ ಸರಿಯಿಲ್ಲ. ಇವರಿಬ್ಬರ ನಡುವಿನ ಜಗಳದಲ್ಲಿ ಪ್ರಜೆಗಳಿಗೆ ತೊಂದರೆಯಾಗುತ್ತಿದೆ. ಇವರ ನಡುವೆ ಹೊಂದಾಣಿಕೆ ಇಲ್ಲ ಎಂದು ಮಾತನಾಡಿಕೊಂಡಿದ್ದಾರೆ. ಬಿಗ್ ಬಾಸ್ ಭವ್ಯ ಮತ್ತು ಧನರಾಜ್ ಅನ್ನು ಮನೆಯ ಮಹಾರಾಜ ಮತ್ತು ಯುವರಾಣಿ ಎಂದು ಘೋಷಿಸಿದರೆ ಚೆನ್ನಾಗಿರುತ್ತದೆ ಎಂದು ರಾಜನ ಆಳ್ವಿಕೆಯ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಇನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಡಲು ಮೋಕ್ಷಿತಾ ತ್ರಿವಿಕ್ರಮ್ ಹೆಸರನ್ನು ಸೂಚಿಸಿದ್ದಾಳೆ. ಹೀಗಾಗಿ ತ್ರಿವಿಕ್ರಮ್ ಮೋಕ್ಷಿತಾಳನ್ನು ಗೋಸುಂಬೆ ಎಂದು ಹೇಳಿದ್ದಾನೆ.
ಮಂಜು ರೋಗಿಷ್ಟ ರಾಜ ಎಂದು ಅರಚಾಡಿದ ರಜತ್
ಅದಾಗಲೇ ಮೋಕ್ಷಿತಾ ಮತ್ತು ತ್ರಿವಿಕ್ರಮ್ ನಡುವೆ ಹಲವು ವಾರಗಳಿಂದ ಬೂದಿ ಮುಚ್ಚಿದ ಕೆಂಡದಂತೆ ಜಗಳ ನಡೆಯುತ್ತಿತ್ತು. ಅದು ಈಗ ದೊಡ್ಡದಾಗಿದ್ದು, ತ್ರಿವಿಕ್ರಮ್ ಮೋಕ್ಷಿತಾಳ ಬಗ್ಗೆ ಮಾತನಾಡಲು ಶುರು ಮಾಡಿದ್ದಾನೆ. ಇನ್ನು ರಜತ್ ಕ್ಯಾಪ್ಟನ್ಸಿ ಓಟದಲ್ಲಿ ಇರುವುದು ಬೇಡ ಎಂದು ಮಂಜು ಹೇಳಿದ್ದು, ಈ ಮಾತಿಗೆ ರಜತ್ ಕೂಡ ಕೂಗಾಡಿದ್ದಾನೆ. ಮಂಜು ಒಬ್ಬ ರೋಗಿಷ್ಟ ರಾಜ ಎಂದು ಹೇಳಿದ್ದಾನೆ. ಮನೆಯಲ್ಲಿ ಈಗ ಅಸಮಾಧಾನದ ಹೊಗೆ ಎದ್ದಿದೆ. ಪ್ರಜೆಗಳು ಬಂಡಾಯ ಏಳುತ್ತಿದ್ದು, ಇಂದಿನ ಎಪಿಸೋಡ್ ಇಂಟರೆಸ್ಟಿಂಗ್ ಆಗಿದೆ.


Click it and Unblock the Notifications











