BBK 11; 8 ವಾರದ ಬಳಿಕ ಕಿಚ್ಚನ ಚಪ್ಪಾಳೆ ಪಡೆಯುತ್ತಾರಾ ಉಗ್ರಂ ಮಂಜು..?

By ಪ್ರಿಯಾ ದೊರೆ

ಬಿಗ್ ಬಾಸ್ ಸೀಸನ್ 11ಈಗ ಆರಂಭವಾದಂತಿದೆ. 8 ವಾರಗಳ ಬಳಿಕ ಇದೀಗ ಬಿಗ್ ಬಾಸ್ ಮನೆ ಶಾಮತವಾಗಿದ್ದು, ಆಟವಾಡುತ್ತಾ, ಬಿಗ್ ಬಾಸ್ ನಿಯಮದಂತೆ ಮನೆ ವಾರ ಪೂರ್ತಿ ನಡೆದಿದೆ. ಯಾವುದಾದರೂ ಒಂದು ವಿಚಾರಕ್ಕೆ ಗಲಾಟೆ ಆಗುತ್ತಿತ್ತು. ಮೊದಲ ಮೂರು ವಾರಗಳ ಕಾಲ ಜಗದೀಶ್ ಒಬ್ಬರೇ ಮನೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದರು. ಜಗದೀಶ್ ಮನೆಯಿಂದ ಹೊರಗೆ ಹೋದ ಬಳಿಕ ಗುಂಪುಗಾರಿಕೆ, ಅನವಶ್ಯಕ ಮಾತುಗಳಿಂದ ಮನೆಯ ವಾತಾವರಣವೇ ಹಾಳಾಗಿತ್ತು. ಬಿಗ್ ಬಾಸ್ ನೋಡುವುದೇ ಬೋರ್ ಎನ್ನುವಂತಾಗಿತ್ತು.

ಶಾಂತವಾಗಿ ನಡೆಯುತ್ತಿರುವ ಬಿಗ್ ಬಾಸ್ ಮನೆ

ಆದರೆ ಈ ವಾರ ಕಂಪ್ಲೀಟ್ ಆಗಿದ್ದು, ಬಿಗ್ ಬಾಸ್ ಮನೆ ಸುಂದರವಾಗಿ ಕಾನಿಸುತ್ತಿದೆ. ಕಳೆದ ಎರಡು ಮೂರು ವಾರಗಳಿಂದ ಕಿಚ್ಚನ ಚಪ್ಪಾಳೆ, ಉತ್ತಮ, ಕಳಪೆ ಆಟಗಳು ಶುರುವಾಗಿವೆ. ಈಗಾಗಲೇ ಗೋಲ್ಡ್ ಸುರೇಶ್ ಒಂದು ಬಾರಿ, ಧನರಾಜ್ ಎರಡು ಬಾರಿ ಹಾಗೂ ಚೈತ್ರಾ ಒಂದು ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ. ಭವ್ಯ ಮತ್ತು ಗೋಲ್ಡ್ ಸುರೇಶ್ ಉತ್ತಮ ಪದಕವನ್ನು ಪಡೆದು ಸಂಭ್ರಮಿಸಿದ್ದಾರೆ. ಇನ್ನು ಹನುಮಂತು ಅವರು ನಾಲ್ಕನೇ ವಾರ ಕಿಚ್ಚನ ಚಪ್ಪಾಳೆಯನ್ನು ಪಡೆದಿದ್ದರು. ಕಳೆದ ವಾರ ಗೋಲ್ಡ್ ಸುರೇಶ್ ಕಿಚ್ಚನ ಚಪ್ಪಾಳೆಯನ್ನು ತಮ್ಮದಾಗಿಸಿಕೊಂಡಿದ್ದರು. ಕಳೆದ ವಾರ ಗೋಲ್ಡ್ ಸುರೇಶದ ಅವರು ಉತ್ತಮ ಹಾಗೂ ಕಿಚ್ಚನ ಚಪ್ಪಾಳೆ ಎರಡನ್ನೂ ಪಡೆದಿದ್ದರು.

Written Update on Bigboss season 11 on ugram manju


ಸೀಸನ್ 11ರ ಕಿಚ್ಚನ ಚಪ್ಪಾಳೆ

ಪ್ರತಿ ಸೀಸನ್ ನಲ್ಲೂ ಎಲ್ಲಾ ವಾರದಲ್ಲೂ ಒಬ್ಬರಲ್ಲ ಒಬ್ಬರು ಕಿಚ್ಚನ ಚಪ್ಪಾಳೆಗೆ ಪಾತ್ರರಾಗುತ್ತಿದ್ದರು. ಆದರೆ ಈ ಸೀಸನ್ ನಲ್ಲಿ ಮೊದಲ ಮೂರು ವಾರಗಳ ಕಾಲ ಯಾರಿಗೂ ಕಿಚ್ಚನ ಚಪ್ಪಾಳೆ ದೊರೆತಿರಲಿಲ್ಲ. ಹೀಗಾಗಿ ಈ ಬಾರಿ ಕಿಚ್ಚನ ಚಪ್ಪಾಳೆಯನ್ನು ಮನೆಯ ಯಾವ ಸ್ಫರ್ಧಿಯೂ ಪಡೆಯುವುದಿಲ್ಲ ಎಂದು ಭಾವಿಸಿದ್ದರು. ಕಿಚ್ಚ ಸುದೀಪ್ ಅವರಿಗೆ ಈ ವಿಚಾರ ಶಾಕಿಂಗ್ ಆಗಿತ್ತು. ಬಿಗ್ ಬಾಸ್ ಸ್ಫರ್ಧಿಗಳ ಆಟ ಅರ್ಥವಾಗದ ರೀತಿ ತಲೆ ಕೆಳಗಾಗಿದ್ದನ್ನು ಕಂಡು ತಮಗೆ ತಾವೇ ಚಪ್ಪಾಳೆ ಕೊಟ್ಟುಕೊಳ್ಳುತ್ತೇವೆ ಎಂದಿದ್ದರು. ಹನುಮಂತು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟು ಮೊದಲ ಬಾರಿಗೆ ಕಿಚ್ಚನ ಚಪ್ಪಾಳೆಯನ್ನು ತಮ್ಮದಾಗಿಸಿಕೊಂಡರು.

ಕ್ಯಾಪ್ಟನ್ಸಿ ಓಟದಲ್ಲಿ ಸ್ಫರ್ಧಿಗಳು

ಇನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳನ್ನು ಮಾಡಿ, ಬಿಬಿ ಪಾಯಿಂಟ್ಸ್ ಅನ್ನು ನೀಡಿದ್ದಾರೆ. ವಾರದ ಕೊನೆಯಲ್ಲಿ ಯಾರ ಬಳಿ ಅತೀ ಹೆಚ್ಚು ಬಿಬಿ ಪಾಯಿಂಟ್ ಗಳು ಇರುತ್ತವೆಯೋ ಅವರು ಕ್ಯಾಪ್ಟನ್ಸಿ ಓಟಕ್ಕೆ ಅರ್ಹರಾಗಿರುತ್ತಾರೆ ಎಂದಿದ್ದಾರೆ. ಹೀಗಾಗಿ ಬಿಬಿ ಪಾಯಿಂಟ್ಸ್ ಗಳಿಗಾಗಿ ಒದ್ದಾಡುತ್ತಿದ್ದಾರೆ. ಅಲ್ಲದೇ, ಉಗ್ರಂ ಮಂಜು, ಗೌತಮಿ ಜಾಧವ್, ಗೋಲ್ಡ್ ಸುರೇಶ್ ಗೆ ಈ ವಾರ ತಾವೇ ಕ್ಯಾಪ್ಟನ್ ಆಗಬೇಕು ಎಂದು ಬಯಸುತ್ತಿದ್ದಾರೆ. ಇದರೊಂದಿಗೆ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಬಂದ ಶೋಭಾ ಶೆಟ್ಟಿ, ಮತ್ತು ರಜತ್ ಕಿಶನ್ ಕೂಡ ಕ್ಯಾಪ್ಟನ್ಸಿ ಓಟದಲ್ಲಿರಲು ಬಯಸಿದ್ದಾರೆ.


ಉಗ್ರಂ ಮಂಜುಗೆ ಸಿಗಲಿ ಕಿಚ್ಚನ ಚಪ್ಪಾಳೆ

ಆದರೆ, ತ್ರಿವಿಕ್ರಮ್ ಈಗಾಗಲೇ ಧರ್ಮ ಕೀರ್ತಿ ರಾಜ್ ಹಾಗೂ ಉಗ್ರಂ ಮಂಜು ತಲೆಯಲ್ಲಿ ಹುಳ ಬಿಟ್ಟಿದ್ದಾರೆ. ಈ ವಾರ ನೀವೇ ಕ್ಯಾಪ್ಟನ್ ಆಗಿ ಎಂದು ತನ್ನದೇ ಲೆಕ್ಕಾಚಾರದಲ್ಲಿ ಮಾತನಾಡಿದ್ದಾನೆ. ಮಂಜುಗೂ ಕ್ಯಾಪ್ಟನ್ ಆಗಲೇಬೇಕೆಂಬ ಛಲವಿದೆ. ಸದ್ಯ ಧನರಾಜ್ ಬಿಬಿ ಪಾಯಿಂಟ್ಸ್ ಗಳನ್ನು ಕೂಡ ತನ್ನದಾಗಿಸಿಕೊಂಡಿದ್ದು, ಈ ವಾರ ಉಗ್ರಂ ಮಂಜು ಕ್ಯಾಪ್ಟನ್ ಆಗುತ್ತಾರಾ ಎಂಬ ಕುತೂಹಲ ಮೂಡಿದೆ. ಅದರ ಜೊತೆಗೆ ಮಂಜುಗೆ ಈ ವಾರ ಕಿಚ್ಚನ ಚಪ್ಪಾಳೆ ಸಿಗಬೇಕು. ಬಹಳ ಅದ್ಭುತವಾಗಿ ಮಂಜು ಆಟ ಆಡಿದ್ದಾರೆ. ಹೀಗಾಗಿ ಅವರಿಗೆ ಕಿಚ್ಚನ ಚಪ್ಪಾಳೆ ಬೇಕೇ ಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ, ಕಿಚ್ಚ ಅವರು ಯಾರಿಗೆ ಚಪ್ಪಾಳೆ ತಟ್ಟುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X