BBK 11 ; ವಾರದ ಪಂಚಾಯ್ತಿಗೆ ಪಾಯಿಂಟ್ಸ್ ಕೊಟ್ಟ ನೆಟ್ಟಿಗರು : ಕಿಚ್ಚನ ಚಪ್ಪಾಳೆ ಧನರಾಜ್ ಗೆ ಇರಲಿ ಎಂದ ಅಭಿಮಾನಿಗಳು ..!

By ಪ್ರಿಯಾ ದೊರೆ

ಬಿಗ್ ಬಾಸ್ ಮನೆಯಲ್ಲಿ ಈ ವಾರ ಕೊಟ್ಟ ಕಾನ್ಸೆಪ್ಟ್ ಒಂದು, ಆದರೆ, ಸ್ಫರ್ಧಿಗಳು ನಿಭಾಯಿಸಿದ ರೀತಿಯೇ ಬೇರೆಯಾಗಿದೆ. ಬಿಗ್ ಬಾಸ್ ಸಾಮ್ರಾಜ್ಯವನ್ನು ಸೃಷ್ಟಿಸಿ, ಮಹಾರಾಜ, ಯುವರಾಣಿ ಕಾನ್ಸೆಪ್ಟ್ ಅನ್ನು ನೀಡಿತ್ತು. ಆಟದಲ್ಲಿ ತೋರಬೇಕಿದ್ದ ಸಾಮರ್ಥ್ಯವನ್ನು ಸ್ಫರ್ಧಿಗಳು ವ್ಯೆಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಬಹಳ ಯೋಚಿಸಿ, ಲೆಕ್ಕಾಚಾರ ಮಾಡಿ ಕಾನ್ಸೆಪ್ಟ್ ಅನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ 11 ಹನ್ನೊಂದು ದಿಕ್ಕುಗಳಲ್ಲಿ ಸಾಗಿದ್ದು, ಬಿಗ್ ಬಾಸ್ ಮತ್ತು ಕಿಚ್ಚ ಸುದೀಪ್ ಅವರು ಸರಿ ಮಾಡಲು ಎಷ್ಟೇ ಪ್ರಯತ್ನಿಸಿದರೂ ವ್ಯರ್ಥವಾಗಿದೆ.

ಗೋರ್ಕಲ್ಲ ಮೇಲೆ ಮಳೆ ಸುರಿದಂತೆ

ಗೋರ್ಕಲ್ಲ ಮೇಲೆ ಮಳೆ ಸುರಿದಂತೆ -ಸರ್ವಜ್ಞ ಎಂಬ ಮಾತು ಇಲ್ಲಿ ನೂರಕ್ಕೆ ಸಾವಿರದಷ್ಟು ಸತ್ಯ ಎನಿಸಿಕೊಂಡಿದೆ. ಕಳಪೆ ನೀಡುವಾಗ, ನಾಮಿನೇಟ್ ಮಾಡುವಾಗ ಕೊಡುವ ಕಾರಣಗಳು ನೈಜವಾಗಿರಲಿ, ಅರ್ಥ ಪೂರ್ಣದಿಂದ ತುಂಬಿರಲಿ ಎಂದು ಪ್ರತೀ ವಾರ ಕಿಚ್ಚ ಸುದೀಪ್ ಅವರು ಗಿಳಿಗೆ ಹೇಳಿದಂತೆ ಹೇಳುತ್ತಿರುತ್ತಾರೆ. ಆದರೆ, ಸ್ಫರ್ಧಿಗಳು ಮಾತ್ರ ತಾವು ಮಾಡಿದ್ದೇ ಸರಿ. ತಮ್ಮ ಆಲೋಚನೆಗಳೇ ಸರ್ವಶ್ರೇಷ್ಠ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಕಳೆದ ಎರಡು ಮೂರು ವಾರಗಳಿಂದ ಬಿಗ್ ಬಾಸ್ ಮನೆ ಶಾಂತವಾಗಿದೆ ಎನ್ನುತ್ತಿರುವಾಗಲೇ ನಾಯಿ ಬಾಲ ಡೊಂಕು ಎಂಬಂತೆ ಮತ್ತದೇ ಆಟವನ್ನು ಆಡುತ್ತಿದ್ದಾರೆ.

Written Update on Bigboss season 11 on weekend program


ಬಿಗ್ ಬಾಸ್ ಸಾಮ್ರಾಜ್ಯವನ್ನು ಹಾಳುಗೆಡವಿದ ಮನಸ್ಸುಗಳು

ಬಿಗ್ ಬಾಸ್ ಮಂಜು ಈ ವಾರದ ಕ್ಯಾಪ್ಟನ್ ಆಗಿರುವ ಕಾರಣ, ಆತನಿಗೆ ಮಹಾರಾಜನ ಪಟ್ಟ ಕೊಟ್ಟು ಮೋಕ್ಷಿತಾಳಿಗೆ ಯುವರಾಣಿ ಸ್ಥಾನವನ್ನು ನೀಡಿದರು. ಪ್ರಜೆಗಳು ಮತ್ತು ಬಂಡಾಯಕೋರರು ಎಂದು ಎರಡು ಗುಂಪು ಮಾಡಿ ನಯವಾಗಿ ಆಡಲು ಸೂಚಿಸಿದರು. ಆದರೆ, ಮಂಜು ಮತ್ತು ಮೋಕ್ಷಿತಾ ಇಬ್ಬರ ಮನದಲ್ಲಿದ್ದ ಈಗೋಗಳನ ನು ಪಕ್ಕಕ್ಕಿಟ್ಟು ಆಡುವ ಬದಲು ಇಡೀ ಮನೆಯ ಮನಸ್ಥಿತಿಗಳನ್ನೇ ಬದಲಿಸಿದ್ದಾರೆ. ಮಂಜು ಜೊತೆಗೆ ಗೌತಮಿ ಜೊತೆಯಾಗಿದ್ದು, ಈ ವಾರದ ಕಂಪ್ಲೀಟ್ ಆಟಗಳೇ ರದ್ದಾಗುವಂತೆ ಮಾಡಿದ್ದಾರೆ. ಕೊಟ್ಟ ಟಾಸ್ಕ್ ಗಳನ್ನು ಸರಿಯಾಗಿ ಆಡದೇ, ಬಿಗ್ ಬಾಸ್ ಮೊದಲ ಬಾರಿ ನೊಂದುಕೊಳ್ಳುವಂತೆ ಮಾಡಿದ್ದಾರೆ.


ಮೋಕ್ಷಿತಾ, ಮಂಜು, ಗೌತಮಿ ಆಟ ಕಳಪೆ

ಇಷ್ಟಾದರೂ ಸ್ವಲ್ಪವೂ ಮನಸಾಕ್ಷಿ ಇಲ್ಲದವರಂತೆ ನಡೆದುಕೊಂಡಿದ್ದು, ಈ ವಾರ ಪೂರ್ತಿ ಕ್ಯಾಪ್ಟನ್ ರೂಮಿನಲ್ಲಿ ಗೌತಮಿ ಕಾಲ ಕಳೆದಿದ್ದಾರೆ. ಮಹಾರಾಜ ಮಂಜು ಸೀಕ್ರೇಟ್ ಸಲಹೆಗಾರ್ತಿಯಾಗಿದ್ದು, ಕೆಲವೆಡೆ ಆಟ ಹಾಳಾಗುವಂತೆ ಮಾಡಿದ್ದಾರೆ. ಮಂಜು ತಾವು ಗೆಲ್ಲಬೇಕು ಎಂಬ ಕಾರಣಕ್ಕೆ ಉಸ್ತುವಾರಿಯನ್ನೂ ಸರಿಯಾಗಿ ನಿಭಾಯಿಸಲಿಲ್ಲ. ಕ್ಯಾಪ್ಟನ್ಸಿ ಆಟದಲ್ಲಿ ಪ್ರಜೆಗಳು ಮತ್ತು ಬಂಡಾಯಕೋರರಿಗೆ ಅನ್ಯಾಯವಾಗುವಂತೆ ಮಾಡಿದ್ದಾರೆ. ಮೋಕ್ಷಿತಾ ಹಾಡಿದ ಹಾಡನ್ನು ಮಂಜು ಮತ್ತೆ ವ್ಯಂಗ್ಯವಾಗಿ ಹಾಡಿದ್ದು, ಮನೆಯ ವಾತಾವರಣವನ್ನೇ ಬದಲಾಯಿಸಿದ್ದಾರೆ.


ಧನರಾಜ್ ಗೆ ಸಿಗಲಿ ಕಿಚ್ಚನ ಚಪ್ಪಾಳೆ

ವಾರದ ಪಂಚಾಯ್ತಿಯನ್ನು ನಾಳೆ ಕಿಚ್ಚ ಸುದೀಪ್ ಅವರು ನಡೆಸಿಕೊಡಲಿದ್ದಾರೆ. ಹಾಗಾಗಿ ನೆಟ್ಟಿಗರು ಒಂದಷ್ಟು ಪಾಯಿಂಟ್ಸ್ ಗಳು ಚರ್ಚೆಯಾಗಲಿ ಎಂದು ಬಯಸಿದ್ದಾರೆ. ಇನ್ನು ವಾರದ ಕಳಪೆಯನ್ನು ಶೋಭಾಳಿಗೆ ನೀಡಿದ್ದು, ಈ ವಾರ ಕಳಪೆ ಆಟವಾಡಿದ್ದು ಗೌತಮಿ ಎಂದು ನೆಟ್ಟಿಗರು ಕೂಗಿ ಕೂಗಿ ಹೇಳುತ್ತಿದ್ದಾರೆ. ಮೋಕ್ಷಿತಾರನ್ನು ಮಂಜು ಸುಖಾಸುಮ್ಮನೆ ಕೆಣಕುತ್ತಿದ್ದಾರೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ತ್ರಿವಿಕ್ರಮ್ ಮತ್ತು ಮೋಕ್ಷಿತಾ ನಡುವೆ ಇರುವ ವೈಮನಸ್ಸನ್ನು ಸರಿ ಮಾಡಿ ಎಂದು ಅಭಿಮಾನಿಗಳು ಕಿಚ್ಚ ಸುದೀಪ್ ಅವರಿಗೆ ಸಲಹೆ ನೀಡಿದ್ದಾರೆ. ಆಟಗಳು ರದ್ದಾಗುವಂತೆ ಮಾಡುತ್ತಿರುವ ಬಗ್ಗೆ ಮಾತನಾಡಬೇಕು ಎಂದು ಕೇಳಿದ್ದಾರೆ. ಇನ್ನು ಧನರಾಜ್ ಅವರು ಈ ವಾರ ಅದ್ಭುತವಾಗಿ ಆಡಿದ್ದು, ಧನರಾಜ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಗಲಿ ಎಂದು ಬಯಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X