BBK 11 Grand Finale ; ನಾನು ಅದೊಂದು ಕಾರಣಕ್ಕಾಗಿ 50ನೇ ದಿನ ಮನೆಗೆ ಬಂದೆ - ರಜತ್..!
ಹಲವಾರು ರಿಯಾಲಿಟಿ ಶೋಗಳ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪರಿಚಯವಾದ ರಜತ್ ಕಿಶನ್ ಇಂದು ಬಿಗ್ ಬಾಸ್ ಸೀಸನ್ 11 ಫೈನಲಿಸ್ಟ್ ಆಗಿದ್ದಾರೆ. 2013ರಲ್ಲಿ ರಜತ್ ಕಿಶನ್ ಅವರು ರಿಯಾಲಿಟಿ ಶೋ ಒಂದರ ಮೂಲಕ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಕಂಡಿದ್ದರು. ಇದುವರೆಗೂ ಐದಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ರಜತ್ ಇಂದು ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಟಾಪ್ 3 ಫೈನಲಿಸ್ಟ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ 50ನೇ ದಿನ ಕಾಲಿಟ್ಟ ರಜತ್, ಶುರುವಿನಿಂದಲೂ ಮಾತಿಗೆ ಮಾತು ಕೊಡುತ್ತಾ ಮನೆಯ ಇತರೆ ಸ್ಫರ್ಧಿಗಳೊಂದಿಗೆ ಪೈಪೋಟಿಗೆ ಇಳಿದವರು.
ಆಂಕರ್ ಆಗುವ ಕನಸು ಹೊತ್ತ ರಜತ್
ರಜತ್ ಕಿಶನ್ ಅಲಿಯಾಸ್ ಬುಜ್ಜಿ ಸದಾ ಲೈವ್ಲಿ ಆಗಿರುತ್ತಾರೆ. ರಜತ್ ಅವರು ಪ್ಯಾಟೆ ಹುಡುಗೀರ್ ಹಳ್ಳಿಗ್ ಲೈಫು, ಸಿಕ್ಸತ್ ಸೆನ್ಸ್, ಸೂಪರ್ ಜೋಡಿ, ರಾಜಾ-ರಾಣಿ 2, ಸೂಪರ್ ಕಬಡ್ಡಿ, ಡ್ಯಾನ್ಸ್ ಡ್ಯಾನ್ಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ, ಸ್ಟಾರ್ ಸುವರ್ಣ ಪರಿವಾರ ಅವಾರ್ಡ್, ಪೀಪಲ್ ಫೇವರಿಟ್ ಕಂಟೆಸ್ಟೆಂಟ್ ಅವಾರ್ಡ್ ವಿನ್ನರ್ ಮತ್ತು ರಾಜಾ-ರಾಣಿ ಸೀಸನ್ 2ರ ರನ್ನರ್ ಅಪ್ ಆಗಿದ್ದಾರೆ. ಆಂಕರ್ ಆಗಬೇಕು ಎಂದು ಕನಸು ಕಂಡಿರುವ ರಜತ್ ಅವರು ಸದ್ಯ ಬಿಗ್ ಬಾಸ್ ಮನೆ ಸ್ಪರ್ಧಿಯಾಗಿದ್ದಾರೆ. ಕಾಮಿಡಿಯಾಗಿ ಮಾತನಾಡುತ್ತಲೇ ಎದುರಾಳಿಗಳನ್ನು ಬಗ್ಗು ಬಡಿಯುವ ರಜತ್ ಇಂದು ಫೈನಲಿಸ್ಟ್ ಆಗಿದ್ದಾರೆ.

ಮುಂದಿನ ಸೀಸನ್ ನಲ್ಲಿ ಭಾಗವಹಿಸಲು ತೀರ್ಮಾನ
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಅಖಾಡಕ್ಕೆ ಇಳಿದ ರಜತ್ ಅವರು ಅತೀ ಹೆಚ್ಚು ಸೌಂಡ್ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ 11 ಆರಂಭವಾಗಿ 50 ದಿನ ಕಳೆದ ಬಳಿಕ ಮನೆಯೊಳಗೆ ಬಂದು ಎಲ್ಲರ ಮೇಲೆ ಮಾತಿನ ಬಾಣ ಬಿಡುತ್ತಲೇ ಮುಂದೆ ಬಂದರು. ಕೌಂಟರ್ ಮಾತುಗಳಿಂದಲೇ ಅಪಾದನೆಗಳನ್ನು ಕೇಳುತ್ತಾ ಕಿಚ್ಚನ ಮಾತುಗಳಿಗೆ ತಲೆದೂಗುತ್ತಾ, ಲೈವ್ಲಿ ಚಾರ್ಮ್ನಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮನೆಗೆ ಬಂದ ದಿನದಿಂದಲೂ ಒಂದೇ ಸಮನಾದ ಎನರ್ಜಿಯನ್ನು ಕಾಪಾಡಿಕೊಂಡು ಬಂದಿರುವ ರಜತ್, ಈ ಸೀಸನ್ ಗೆ ಆಫರ್ ಕೊಟ್ಟಾಗ ಬರುವುದಿಲ್ಲ ಎಂದು ತೀರ್ಮಾನಿಸಿದ್ದರಂತೆ.
ಗೆಳೆಯರ ಮಾತನ್ನು ಕೇಳಿ ರಜತ್ ಶಾಕ್
ನಾನು ಬಿಗ್ ಬಾಸ್ ಮನೆಗೆ ಬಂದರೆ ಮೊದಲ ದಿನದಿಂದಲೇ ಭಾಗವಹಿಸಬೇಕು ಎಂದು ಕೈಬಿಟ್ಟದರಂತೆ ರಜತ್ ಅವರು. ಆದರೆ, ಈ ವಿಚಾರದ ಬಗ್ಗೆ ಗೆಳೆಯರೊಂದಿಗೆ ಮಾತನಾಡಿದಾಗ, ಸ್ನೇಹಿತರು ಕಿಚ್ಚ ಸುದೀಪ್ ಅವರು ಇದೊಂಧೇ ಸೀಸನ್ ನಡೆಸಿಕೊಡುವುದು. ಮುಂದಿನ ಸೀಸನ್ ನಿಂದ ಸುದೀಪ್ ಅವರು ಇರೋದಿಲ್ಲ ಎಂದು ಹೇಳಿದರಂತೆ. ಈ ಮಾತನ್ನು ಕೇಳಿದ ರಜತ್ ಅವರು ಶಾಕ್ ಆಗಿದ್ದಾರೆ. ಸುದೀಪ್ ಅವರು ಇರುವಾಗಲೇ ಬಿಗ್ ಬಾಸ್ ಮನೆಗೆ ಹೋಗಬೇಕು ಎಂದು ರಜತ್ ಅವರು ಬಯಸಿದ್ದರಂತೆ.
ಸುದೀಪ್ ಗಾಗಿ ಮನೆಗೆ ಬಂದ ರಜತ್
ಹಾಗಾಗಿ ರಜತ್ ಅವರು ಹಿಂದೆ ಮುಂದೆ ಯೋಚಿಸದೆಯೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಬರಲು ತೀರ್ಮಾನ ಮಾಡಿದರಂತೆ. ಸುದೀಪ್ ಅವರು ಹೇಲುವ ಮಾತುಗಳನ್ನು ಕೇಳಬೇಕು ಎಂದು ಸಿಕ್ಕ ಅವಕಾಶವನ್ನು ಬಿಟ್ಟುಕೊಡಲಿಲ್ಲ ಎಂದು ಹೇಳಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ರಜತ್ ಅವರು ಹನುಮಂತು ಮತ್ತು ತ್ರಿವಿಕ್ರಮ್ ಅವರ ಜೊತೆಗೆ 50 ಲಕ್ಷ ಹಾಗೂ ರೆಕ್ಕೆಗಳಿರುವ ಕಪ್ ಗೆಲ್ಲುವ ರೇಸ್ ನಲ್ಲಿ ಇದ್ದಾರೆ. ಯಾರು ಬಿಗ್ ಬಾಸ್ 11ರ ಅರಸನಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ.


Click it and Unblock the Notifications











