ಬಿಗ್ ಬಾಸ್ ಮನೆಗೆ ಸ್ಫರ್ಧಿಗಳು ಬರುತ್ತಲೇ ಲೆಕ್ಕಾಚಾರದಿಂದ ಬಂದಿದ್ದು ಎಡವಟ್ಟಾಯ್ತಾ..?
ಕಳೆದ ಹತ್ತು ಸೀಸನ್ ಗಳಲ್ಲಿ ಎಂದೂ ನಿರಾಸೆ ಮೂಡಿಸದ ಶೋ ಈಗ ವೀಕ್ಷಕರಿಗೆ ಎಷ್ಟೊತ್ತಿಗೆ ಮುಗಿಯುತ್ತಪ್ಪಾ ಈ ಕಾರ್ಯಕ್ರಮ ಎನ್ನುವಂತಾಗಿದೆ.ಪ್ರತಿ ನಿತ್ಯ ಕೇವಲ ಪ್ರೊಮೋಗಳನ್ನೇ ನೋಡಿ, ಇಂದಿನ ಸಂಚಿಕೆಯನ್ನು ನೋಡಬೇಕಾ ಬೇಡವೇ ಎಂದು ತೀರ್ಮಾನಿಸುವಂತಾಗಿದೆ. ಬಿಗ್ ಬಾಸ್ ಸೀಸನ್ 11. ವರ್ಷಕ್ಕೊಂದೇ ಸಲ ಪ್ರಸಾರವಾಗುವ ಶೋ, ಎರಡು ಸಲ ಇರ ಬಾರದೇ ಎಂದು ಬಯಸುತ್ತಿದ್ದ ವೀಕ್ಷಕರು ಈ ವರ್ಷದ ಶೋ ಆದಷ್ಟು ಬೇಗ ಮುಗಿಯಲಿ ಎನ್ನುತ್ತಿದ್ದಾರೆ. ಇದಕ್ಕೆ ಕಾರಣವೇ, ಈ ವರ್ಷದ ಕಂಟೆಸ್ಟೆಂಟ್ ಗಳು ಎಂದರೆ ತಪ್ಪಾಗುವುದಿಲ್ಲ.
ಎಲ್ಲರ ನೆಚ್ಚಿನ ಶೋ ಬಿಗ್ ಬಾಸ್
ಕಿರುತೆರೆ, ಸಿನಿಮಾ, ಸೋಶಿಯಲ್ ಮೀಡಿಯಾ ಸೆಲಬ್ರಿಟಿಗಳು ಒಟ್ಟಾಗಿ ಒಂದು ಮನೆಗೆ ಬಂದು ಎಲ್ಲರೂ ಒಂದೇ ಆಟ ಶುರು ಮಾಡಿ, ಕೊನೆಗೆ ತಾನೇ ಗೆಲ್ಲಬೇಕು ಎಂಬ ಹಠದಿಂದ ತಮ್ಮಲ್ಲಿರುವ ಎಲ್ಲಾ ಬುದ್ಧಿ ಮತ್ತು ಶಕ್ತಿಯನ್ನು ಬಳಸಿಕೊಂಡು ಟ್ರೋಫಿ ಗೆಲ್ಲುವ ಆಟವೇ ಬಿಗ್ ಬಾಸ್ ರಿಯಾಲಿಟಿ ಶೋ. ಸೀರಿಯಲ್ ಸೇರಿದಂತೆ ವಾಹಿನಿಗಳಲ್ಲಿ ಸಾಕಷ್ಟು ಬಗೆಯ ರಿಯಾಲಿಟಿ ಶೋಗಳು ಇವೆ. ಆದರೆ ಇದೆಲ್ಲದಕ್ಕಿಂತಲೂ ವಿಭಿನ್ನವಾಗಿ ನಿಲ್ಲುವುದೇ ಬಿಗ್ ಬಾಸ್. ಭಾರತದಲ್ಲಿ ಪ್ರಸಾರವಾಗುವ ಇತರೆ ಭಾಷೆಯ ಬಿಗ್ ಬಾಸ್ ಗಿಂತಲೂ ಕನ್ನಡದ ಶೋ ಬಹಳ ವಿಭಿನ್ನವಾಗಿದೆ. ಇದರಲ್ಲಿ ವಾರದ ಕತೆ ಕಿಚ್ಚನ ಜೊತೆ, ಕಿಚ್ಚನ ಚಪ್ಪಾಳೆ, ಸೂಪರ್ ಸಂಡೇ ವಿತ್ ಸುದೀಪ್ ಎಲ್ಲಾ ಪ್ರೊಮೋಗ್ರಾಂಗಳೂ ಸೂಪರ್. ಹೀಗಾಗಿ ಕನ್ನಡ ಮಾತ್ರವಲ್ಲದೇ, ಇತರೆ ಭಾಷೆಯವರು ಕೂಡ ಕನ್ನಡದ ಬಿಗ್ ಬಾಸ್ ಶೋ ಅನ್ನು ನೋಡುತ್ತಾರೆ. ಬಿಗ್ ಬಾಸ್ ಶೋ ಅನ್ನು ವೀಕ್ಷಕರು ಮಿಸ್ ಮಾಡದೇ ನೋಡಲು ಇಡೀ ವರ್ಷ ಕಾಯುತ್ತಾರೆ.

ಸ್ಫರ್ಧಿಗಳ ಲೆಕ್ಕಾಚಾರವೇ ಮುಳುವಾಯ್ತಾ
ವರ್ಷದಲ್ಲಿ 100 ದಿನಗಳ ಕಾಲ ಪ್ರಸಾರವಾಗುವ ಈ ಶೋಗೆ ಭಾರತದ ಹೊರಗೂ ಅಭಿಮಾನಿಗಳಿದ್ದಾರೆ. ವಯಸ್ಸಾದವರು, ಮಕ್ಕಳು, ಯುವಕರು ಪ್ರತಿಯೊಬ್ಬರೂ ಸ್ಫರ್ಧಿಗಳ ಆಟವನ್ನು ನೋಡುತ್ತಾ, ಅವರ ತಪ್ಪುಗಳನ್ನು ಬೈಯುತ್ತಾ, ವೀಕೆಂಡ್ ಕಾರ್ಯಕ್ರಮವನ್ನು ಎಂಜಾಯ್ ಮಾಡುತ್ತಾ ನೋಡುತ್ತಿರುತ್ತಾರೆ. ಹೀಗಿರುವಾಗ ಮೊದಲ ಬಾರಿಗೆ ಬಿಗ್ ಬಾಸ್ ಶೋ ವೀಕ್ಷಕರ ನಿರೀಕ್ಷೆಯನ್ನು ನಿರಾಸೆಗೊಳಿಸಿದೆ. ಇದಕ್ಕೆಲ್ಲಾ ಬಹು ಮುಖ್ಯವಾದ ಕಾರಣವೆಂದರೆ, ಭಾಗಶಃ ಮನೆಗೆ ಬಂದ ಸ್ಫರ್ಧಿಗಳು ಆಯ್ಕೆಯಾಗುತ್ತಿದ್ದಂತೆ ಲೆಕ್ಕಾಚಾರ ಹಾಕಿದ್ದು ಎನ್ನಲಾಗುತ್ತಿದೆ. ಮನೆಗೆ ಬಂದ ಪ್ರತಿಯೊಬ್ಬ ಸ್ಫರ್ಧಿಯೂ ಬಿಗ್ ಬಾಸ್ ಮನೆಯಲ್ಲಿ ಹೀಗಿದ್ದರೆ ಗೆಲ್ಲುತ್ತೇವೆ ಎಂಬ ಲೆಕ್ಕಾಚಾರದ ಆಲೋಚನೆಯಿಂದಲೇ ಮನೆಗೆ ಬಂದಿರುವ ಸಾಧ್ಯತೆ ಹೆಚ್ಚಿದೆ.
ನಿರಾಸೆ ಮೂಡಿಸಿದ ಸೀಸನ್ 11
ಹೀಗಾಗಿಯೇ ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಬೇಸರವನ್ನು ಉಂಟು ಮಾಡಿದೆ. ಈಗಾಗಲೇ ಬಿಗ್ ಬಾಸ್ ಸೀಸನ್ 11 ಶುರುವಾಗಿ 27 ದಿನಗಳು ಕಳೆದಿವೆ. ಆದರೆ, ಬೇಗ ಈ ಸೀಸನ್ ಮುಗಿಯಲಿ ಎಂಬಂತಾಗಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ನಾಟ್ ಸೋ ಫೇವರಿಟ್ ಸೀಸನ್ 11 ಎಂದು ಹೇಳಿದ್ದಾರೆ. ಎಷ್ಟೇ ಬುದ್ಧಿ ಹೇಳಿದರೂ ಕೇಳದ ಕಂಟೆಸ್ಟೆಂಟ್ ಗಲು ತಮ್ಮ ಲೆಕ್ಕಾಚಾರವನ್ನು ಮುಂದುವರೆಸಿದ್ದಾರೆ. ನಟಿ ಹಂಸಾ ಮೊದಲ ಎರಡು ವಾರ ಸೈಲೆಂಟ್ ಆಗಿದ್ದರು. ಇದೀಗ ಗುಂಪಿನಲ್ಲಿದ್ದುಕೊಂಡು, ಕ್ಯಾಮರಾ ಕಣ್ನೀಗೆ ಕಾಣಿಸುತ್ತಾ ನಾನು ಮನೆಯಲ್ಲಿ ಉಳಿಯಬೇಕು ಎಂದು ಮೊದಲು ಜಗದೀಶ್ ಅವರೊಂದಿಗೆ ರೊಮ್ಯಾನ್ಸ್ ಮಾಡಿದಂತೆ ನಟಿಸಿ, ಈಗ ತ್ರಿವಿಕ್ರಮ್ ಜೊತೆಗೆ ಐ ಲವ್ ಯೂ ಬೇಬಿ ಎಂದುಕೊಂಡು ಓಡಾಡುತ್ತಿದ್ದಾರೆ.
ಗುರಿ ತಲುಪುವ ಭರದಲ್ಲಿ ಆಟವನ್ನೇ ಮರೆತ ಸ್ಫರ್ಧಿಗಳು
ಇನ್ನು ನಟಿ ಮಾನಸ ಮಾತು ಮಾತಿಗೂ ವಾದ ಮಾಡುತ್ತಾ, ಕಣ್ಣಿರು ಹಾಕುತ್ತಾ, ಹೀಗೆ ಮಾಡುವುದರಿಂದ ನಾವು ಎಲ್ಲರ ಕಣ್ಣಿಗೆ ಕಾಣುತ್ತೇವೆ ಎಂದು ಭಾವಿಸಿದ್ದಾರೆ. ಯಾವುದೇ ವಿಚಾರವಿದ್ದರೂ ಪೂರ್ತಿ ಎದುರಾಳಿ ಮಾತು ಕೇಳದೆಯೇ ವಟವಟಾ ಎನ್ನುತ್ತಾ ನನ್ನ ಮಾತೇ ಈ ಮನೆಯಲ್ಲಿ ಬಂಡವಾಳ ಎಂದು ಚೈತ್ರಾ ಕುಮದಾಪುರ ಪದೇ ಪದೇ ಹೇಳುತ್ತಿದ್ದಾರೆ. ಪಾಸಿಟಿವಿಟಿಯಿಂದಲೇ ನಾನು ನನ್ನ ಗುರಿ ತಲುಪುತ್ತೇನೆ ಎಂದು ಗೌತಮಿ ಹೇಳಿದರೆ, ಕಂದಾ ಕಂದಾ ಎನ್ನುತ್ತಲೇ ಮಂಜು ತಮ್ಮ ಲೆಕ್ಕಾಚಾರದ ಆಟವಾಡಿದ್ದಾರೆ. ಹೀಗೆ ಭವ್ಯಾ ಗೌಡ, ಐಶ್ವರ್ಯ ಎಲ್ಲರೂ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮುನ್ನವೇ ತಮ್ಮ ನಡವಳಿಕೆ ಹಾಗೂ ಇತರೆ ವಿಚಾರಗಳ ಬಗ್ಗೆ ಒಂದಷ್ಟು ಲೆಕ್ಕಾಚಾರ ಹಾಕಿಕೊಮಡು, ತಮ್ಮದೇ ಬೌಂಡರಿಯಲ್ಲಿದ್ದಾರೆ. ಹಾಗಾಗಿಯೇ ಈ ಸಲದ ಶೋ ಎಲ್ಲೋ ವೀಕ್ಷಕರ ಭರವಸೆಯನ್ನು ಸುಳ್ಳು ಮಾಡುತ್ತಿದೆ ಎಂದೆನಿಸುತ್ತದೆ. ಒಟ್ನಲ್ಲಿ ಈ ಬಾರಿಯ ಬಿಗ್ ಬಾಸ್ ಶೋನ ಸ್ಫರ್ಧಿಗಳು ಸ್ವತಃ ಬಿಗ್ ಬಾಸ್ ನ ಲೆಕ್ಕಾಚಾರವನ್ನು ತಪ್ಪಿಸಿರುವುದಂತೂ ಸತ್ಯ.


Click it and Unblock the Notifications











