BBK 11 Grand Finale ; ಗ್ರೇ ಏರಿಯಾ ಕಿಂಗ್ ಮೇಲೆ ಸುದೀಪ್ ಪ್ರೀತಿ, ದಾನ-ಧರ್ಮ ಮತ್ತು ಮಾತು !
ಉಗ್ರಂ ಮಂಜು ಬಿಗ್ ಬಾಸ್ ಮನೆಯಿಂದ ಹೊರಗೆ ನಡೆದು ಬಂದಿದ್ದಾಗಿದೆ. ಇನ್ನೇನಿದ್ದರೂ ಕಂಪ್ಲೀಟ್ ಆಗಿ ಎಂಟರ್ ಟೈನ್ ಮೆಂಟ್ ಕೊಡುವುದೇ ನನ್ನ ಕೆಲಸ ಎಂದು ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ 11 ವಿಶೇಷವಾಗಿದ್ದಂತೂ ಸುಳ್ಳಲ್ಲ. ಈ ಬಾರಿ 120 ದಿನಗಳ ಕಾಲ ಮನೆಯಲ್ಲಿ ಕಂಟೆಸ್ಟೆಂಟ್ ಗಳು ಇದ್ದರು. ಇಂದು ಬಿಗ್ ಬಾಸ್ ಮನೆಗೆ ಬೀಗ ಬೀಳಲಿದ್ದು, ಯಾವಾಗ ಮತ್ತೆ ತೆರೆಯುತ್ತದೆ ಎಂಬುದನ್ನು ಎದುರು ನೋಡುವ ಸಮಯ ಹತ್ತಿರ ಬಂದಿದ್ದಾಗಿದೆ. ಇನ್ನು ಉಗ್ರಂ ಮಂಜು ಬಿಗ್ ಬಾಸ್ ವೇದಿಕೆಯನ್ನು ಹತ್ತಿದ ಕ್ಷಣದಿಂದಲೂ ಇಂದಿನವರೆಗೂ ಕಿಚ್ಚ ಸುದೀಪ್ ತಮಾಷೆ ಮಾಡಿ ಕಾಲು ಎಳೆದಿದ್ದೇ ಹೆಚ್ಚು.
ಮಂಜು ಮತ್ತು ಸುದೀಪ್ ನಡುವೆ ವಿಶೇಷ ಬಂಧ
ಮಂಜು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮುನ್ನ ಸುದೀಪ್ ಅವರು ತಮಾಷೆ ಮಾಡಿದ್ದರು. ಮಂಜುಗೆ ಸಂಜೆಯಾದ ಮೇಲೆ ಹೊಸ ಲೋಕವೊಂದು ತೆರೆದುಕೊಳ್ಳುತ್ತದೆ. ಗುಂಡು ಇಲ್ಲದೇ ಮಂಜು ಇಲ್ಲದ ದಿನವೇ ಇಲ್ಲ. ಹಾಗಿರುವಾಗ 90 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಎಣ್ಣೆ ಇಲ್ಲದೇ ಹೇಗೆ ಇರುತ್ತೀರಾ ಎಂದು ಕೂಡ ಪ್ರಶ್ನೆ ಮಾಡಿದ್ದರು. ಮಂಜು ಸಾಧ್ಯವಿದೆ. ಪ್ರಯತ್ನ ಅಂತೂ ಪಡುತ್ತೇನೆ ಎಂದು ಕೊಂಚ ಕಾನ್ಫಿಡೆನ್ಸ್ ನಲ್ಲೇ ಮಾತನಾಡಿದ್ದರು. ಇನ್ನು ಸುದೀಪ್ ಅವರು ಮಂಜುನನ್ನು ತಮಾಷೆಯಾಗಿಯೇ ರೇಗಿಸುತ್ತಲೇ ಮಾತನಾಡಿಸುತ್ತಿದ್ದರು. ಮಂಜುಗೆ ವಯಸ್ಸಾಯ್ತು, ಮಗುವೆ ಯಾವಾಗ ಆಗುತ್ತೀರಾ ಎಂದು ಕೂಡ ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು.

ಮಂಜು ನನ್ನು ರೇಗಿಸುವ ಸುದೀಪ್
ಇನ್ನು ವೀಕೆಂಡ್ ನಲ್ಲೂ ಮಂಜುನ ರೇಗಿಸುತ್ತಲೇ ಮಜಾ ತೆಗೆದುಕೊಳ್ಳುತ್ತಿದ್ದರು. ಒಮ್ಮೊಮ್ಮೆ ಅತಿರೇಖಾ ಎನಿಸಿದರೂ ಮಂಜು ಮತ್ತು ಸುದೀಪ್ ಬಹಳ ಕ್ಲೋಸ್ ಆಗಿದ್ದಾರೆ ಎಂಬುದಂತೂ ಎಲ್ಲರಿಗೂ ಸ್ಪಷ್ಟವಾಗಿತ್ತು. ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಜೊತೆಗೆ ಮಂಜು ನಟಿಸಿದ್ದರು. ಹೀಗಾಗಿ ಕೆಲ ತಿಂಗಳ ಕಾಲ ಮಂಜು ಜೊತೆಗೆ ಕೆಲಸ ಮಾಡಿದ ಸುದೀಪ್ ಅವರು ಮಂಜು ಮನಸ್ಥಿತಿಯನ್ನು ಹಾಗೂ ಅವರ ಬದುಕಿನ ಬಗ್ಗೆ ಸಾಕಷ್ಟು ಅರ್ತ ಮಾಡಿಕೊಂಡಿದ್ದರು. ತಮಾಷೆ ಮಾಡುತ್ತಲೇ ಮಂಜುವಿನಲ್ಲಿದ್ದ ತಪ್ಪುಗಳನ್ನು ಸರಿ ಮಾಡುವ ಪ್ರಯತ್ನ ಮಾಡಿದ್ದರು. ಸುದೀಪ್ ಅವರ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಮಂಜು ಅವರು ಬಿಗ್ ಬಾಸ್ ಕಪ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಬಹುಮಾನವನ್ನು ದಾನ ಮಾಡಿದ ಮಂಜು
ಟಾಪ್ ಐದನೇ ಕಂಟೆಸ್ಟೆಂಟ್ ಆಗಿ ಕೊನೆಗೆ ಮನೆಯಿಂದ ಹೊರ ನಡೆದ ಮಂಜು ಅವರು ವೇದಿಕೆ ಮೇಲೆ ಸುದೀಪ್ ಜೊತೆಗೆ ಮಾತನಾಡಿದರು. ಈ ವೇಳೆ ಗಿಫ್ಟ್ ಹ್ಯಾಂಪರ್ ಗಳನ್ನು ಪಡೆದ ಮಂಜು ಅವರಿಗೆ ವಾಕ್ ಮೇಟ್ ವತಿಯಿಂದ ಎರಡು ಲಕ್ಷ ಕ್ಯಾಶ್ ಪ್ರೈಸ್, ಎಕೋ ಪ್ಲಾನೇಟ್ ಅವರ ಕಡೆಯಿಂದ ಒಂದು ಲಕ್ಷ ಕ್ಯಾಶ್ ಪ್ರೈಸ್ ಮತ್ತು ಸಂಗೀತಾ ಮೊಬೈಲ್ಸ್ ವತಿಯಿಂದ ಐವತ್ತು ಸಾವಿರ ಮೌಲ್ಯದವೋಚರ್ ನೀಡಲಾಯ್ತು. ಆದರೆ, ಮಂಜು ಅವರು ವಾಕ್ ಮೇಟ್ ನೀಡಿದ ಎರಡು ಲಕ್ಷ ಬಹುಮಾನದ ಮೊತ್ತವನ್ನು ವಯಸ್ಸಾದವರಿಗೆ ನೀಡಿ ಎಂದು ಹೇಳಿದರು. ಬಳಿಕ ಎಕೋ ಪ್ಲಾನೆಟ್ ನೀಡಿದ ಒಂದು ಲಕ್ಷ ಮೊತ್ತವನ್ನು ಕೂಡ ಊರಿನಲ್ಲಿರುವ ರೈತರಿಗೆ ನೀಡಿ ಎಂದು ಮಂಜು ತಮ್ಮ ತಂದೆಗೆ ವೇದಿಕೆ ಮೇಲೆ ಹೇಳಿದರು. ಆಗ ಸಣ್ಣದಾಗಿ ಕೋಪ ಮಾಡಿಕೊಂಡ ಸುದೀಪ್ ಅವರು ಮಂಜುಗೆ ಬುದ್ಧಿ ಹೇಳಿದ್ದಾರೆ.
ಮಂಜು ಮೇಲೆ ಸುದೀಪ್ ಸೈಲೆಂಟ್ ಪ್ರೀತಿ
ಸಾಕು ಮಂಜು, ಸರ್ ನೀವೇ ರೈತರು ನೀವೇ ಇಟ್ಟುಕೊಳ್ಳಿ ಎಂದು ಸುದೀಪ್ ಅವರು ಮಂಜು ತಂದೆಗೆ ಹೇಳಿದರು. ಮೊದಲು ಎರಡು ಲಕ್ಷವನ್ನು ವಯಸ್ಸಾದವರಿಗೆ ಅಂತ ಕೊಟ್ಟಿದ್ದಾಗಿದೆ. ದಾನ ಮಾಡಬೇಕು. ಹಾಗಂತ ಇರುವುದನ್ನೆಲ್ಲಾ ಕೊಡುವುದಲ್ಲ. ಇದು ನಿನಗಿರಲಿ ಎಂದು ಮಂಜು ಮಾತನ್ನು ತಡೆದರು. ಎಲ್ಲವನ್ನು ಕೊಡುವುದು ಬೇಡ ಎಂದ ಸುದೀಪ್ ಅವರು ಮರುಕ್ಷಣವೇ ಮಂಜು ಈ ಮೊದಲು ಹೇಳಿದ ಎರಡು ಲಕ್ಷ ಹಣವೇನಿದೆ ಅದನ್ನು ನಾನು ಕೊಡುತ್ತೇನೆ. ನಿನಗೆ ಬಂದಿದ್ದು ನಿನಗೇ ಇರಲಿ ಎಂದು ಮಂಜು ಮೇಲೆ ಸೈಲೆಂಟ್ ಆಗಿಯೇ ಪ್ರೀತಿಯನ್ನು ತೋರಿಸಿದ್ದಾರೆ. ಮಂಜು ಮೇಲೆ ಮೊದಲಿನಿಂದಲೂ ವಿಶೇಷವಾದ ಪ್ರೀತಿಯನ್ನು ಸುದೀಪ್ ಅವರು ಇಟ್ಟುಕೊಂಡಿರುವುದು ಈಗ ಬಯಲಾಗಿದೆ.


Click it and Unblock the Notifications











