BBK 11 ; ಬಿಗ್ ಬಾಸ್ ಮನೆಗೆ ಬಂದ ಸೀಸನ್ 10ರ ಸ್ಫರ್ಧಿಗಳು : ನಿಲ್ಲದ ನಾಮಿನೇಷನ್ ಕಚ್ಚಾಟ..!
ಬಿಗ್ ಬಾಸ್ ಮನೆಯಲ್ಲಿ ಈ ವಾರ ಯಾರೂ ನಾಮಿನೇಟ್ ಆಗಿಲ್ಲ. ಎಲ್ಲರೂ ಮನೆಯಲ್ಲಿ ಉಳಿದಿದ್ದು, ಸ್ಫರ್ಧಿಗಳನ್ನು ಬೂಸ್ಟ್ ಮಾಡಲು ಬಿಗ್ ಬಾಸ್ ಹೊಸ ಆಟ ಆಡಿಸಿದ್ದಾರೆ. ಬಿಗ್ ಬಾಸ್ ಈ ಸೀಸನ್ ನ ಸ್ಫರ್ಧಿಗಳಿಗೆ ಯಾವ ಆಟ ಕೊಟ್ಟರೂ ಅದರಲ್ಲೊಂದು ಕೊಂಕಾಡುವ ಸ್ಫರ್ಧಿಗಳು ಜಗಳ ಆಡುವುದರಲ್ಲಿ ಎತ್ತಿದ ಕೈ ಎಂಬುದನ್ನು ತೋರಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರು ಮಕ್ಕಳಿಗೆ ಹೇಳಿದಂತೆ ಬುದ್ಧಿ ಹೇಳಿದರೂ ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಸ್ಫರ್ಧಿಗಳು ಜಗಳ ಮಾಡುತ್ತಲೇ ಇರುತ್ತಾರೆ.
ಮನೆಗೆ ಬಂದ ಸೀಸನ್ 10ರ ಸ್ಫರ್ಧಿಗಳು
ಬಿಗ್ ಬಾಸ್ ಇಂದು ಸ್ಫರ್ಧಿಗಳನ್ನು ಬೂಸ್ಟ್ ಮಾಡುವ ಸಲುವಾಗಿ ಸೀಸನ್ 10ರಲ್ಲಿ ಆಡಿದ ಸ್ಫರ್ಧಿಗಳನ್ನು ಮನೆಗೆ ಕರೆಸಿದ್ದಾರೆ. ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್, ತುಕಾಲಿ ಸಂತು ಮತ್ತು ವರ್ತೂರ್ ಸಂತು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಫರ್ಧಿಗಳ ಆಟವನ್ನು ಬೂಸ್ಟ್ ಮಾಡುವ ಸಲುವಾಗಿ ಹೀಗೆ ಮಾಡಲಾಗಿದೆ. ಹಳೆ ಸ್ಫರ್ಧಿಗಳಬನ್ನು ಮನೆಯಲ್ಲಿ ನೋಡಿ ಸದಸ್ಯರೆಲ್ಲಾ ಖುಷಿ ಪಟ್ಟಿದ್ದಾರೆ. ಇನ್ನು ಪ್ರತಾಪ್ ಅವರು ತಮಗೆ ಹೊಸ ಬದುಕನ್ನು ಕಲ್ಪಸಿಕೊಟ್ಟ ಬಿಗ್ ಬಾಸ್ ಮನೆಯ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ನಾಲ್ವರೂ ಗೆಸ್ಟ್ ಗಳು ಸ್ಫರ್ಧಿಗಳೊಂದಿಗೆ ಮಾತನಾಡಿ ಕೊಂಚ ಎಂಟರ್ ಟೈನ್ ಮೆಂಟ್ ಕೂಡ ನೀಡಿದ್ದಾರೆ.

ನಾಮಿನೇಷನ್ ಪಾಸ್ ಆಟವಾಡಿಸಿದ ಪ್ರತಾಪ್
ಇನ್ನು ಪ್ರತಾಪ್ ಅವರು ತಮ್ಮ ಸೀಸನ್ ನಲ್ಲಿ ಬಿಗ್ ಬಾಸ್ ನಾಮಿನೇಷನ್ ನಿಂದ ಸೇವ್ ಆಗಲು ಕೊಟ್ಟಿದ್ದ ಟಾಸ್ಕ್ ಅನ್ನು ಈಗ ಮತ್ತೆ ಆಡಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಪ್ರತಾಪ್ ಅವರು ಮನೆಯಲ್ಲಿ ಮೂವರು ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ತ್ರಿವಿಕ್ರಮ್, ಶಿಶಿರ್ ಮತ್ತು ರಜತ್ ಅನ್ನು ಆಯ್ಕೆ ಮಾಡಿದ್ದಾರೆ. ಮನೆಯ ಲಿವೀಂಗ್ ಏರಿಯಾದಲ್ಲಿ ಬಲೂನ್ ಗಳನ್ನು ಇಟ್ಟಿದ್ದು, ಇದರಲ್ಲಿ ಎರಡು ನಾಮಿನೇಷನ್ ಪಾಸ್ ಗಳು ಇವೆ. ಇದನ್ನು ಪಡೆದವರಿಗೆ ಸೂಪರ್ ಪವರ್ ಸಿಗುವುದಾಗಿ ಹೇಳುತ್ತಾರೆ. ಇಂದಿನ ಸಂಚಿಕೆಯಲ್ಲಿ ಯಾರಿಗೆ ಪಾಸ್ ಸಿಗುತ್ತದೆ ಎಂಬ ಕುತೂಹಲ ಮೂಡಿದೆ.
ತನಿಷಾ ಜೊತೆಗೆ ಚುಟು ಚುಟು ಎಂದ ಹನುಮಂತು
ಇನ್ನು ಹನುಮಂತು ತನಿಷಾ ಕುಪ್ಪಂಡ ಜೊತೆಗೆ ಸ್ಟೆಪ್ ಹಾಕಿದ್ದಾರೆ. ಚುಟು ಚುಟು ಅಂತೈತಿ ಹಾಡಿಗೆ ಹೆಜ್ಜೆ ಹಾಕಿರುವ ಹನುಮಂತು ಮನೆಯವರನ್ನು ನಗುವಂತೆ ಮಾಡಿದ್ದಾರೆ. ಇನ್ನು ಪ್ರತಾಪ್ ಅವರನ್ನು ಚೈತ್ರಾ ಅವರು ಅಣ್ಣ ಎಂದು ಕರೆದಿದ್ದಕ್ಕೆ ಕೈ ಮುಗಿದಿದ್ದಾರೆ. ನನ್ನನ್ನು ಅಣ್ಣ ಎಂದು ಕರೆಯಬೇಡಿ ಎಂದು ಹೇಳಿದ್ದಾರೆ. ಈ ಮಾತಿಗೆ ಮನೆಯವರೆಲ್ಲಾ ನಗೆಗಡಲಲ್ಲಿ ತೇಲಿದ್ದಾರೆ. ಇನ್ನು ತುಕಾಲಿ ಸಂತು ಮನೆಗೆ ಎಂಟ್ರಿ ಕೊಟ್ಟ ಸ್ವಲ್ಪ ಹೊತ್ತಿನ ಬಳಿಕ ಸಂತು ಜೊತೆಗೆ ಪಂತು ಇಲ್ಲಾ ಎಂದರೆ ಚೆನ್ನಾಗಿರೋದಿಲ್ಲ ಎಂದು ಬಿಗ್ ಬಾಸ್ ಹೇಳಿದ್ದಾರೆ. ವರ್ತೂರ್ ಸಂತು ಬೀನ್ ಬ್ಯಾಗ್ ಜೊತೆಗೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ನಾಮಿನೇಷನ್ ನಲ್ಲಿ ಕಚ್ಚಾಟ ನಿಲ್ಲಿಸದ ಸ್ಫರ್ಧಿಗಳು
ಇನ್ನು ನಾಮಿನೇಷನ್ ಮಾಡಲು ಹೇಳಿದ್ದು ಈ ವೇಳೆ ಸ್ಫರ್ಧಿಗಳು ಕಿತ್ತಾಡಿದ್ದಾರೆ. ಯಾರು ಏನೇ ಕಾರಣ ಕೊಟ್ಟರೂ ಒಪ್ಪದ ಸ್ಫರ್ಧಿಗಳು ವಾದ ಮಾಡಿದ್ದಾರೆ. ಮನೆಗೆ ಗೆಸ್ಟ್ ಬಂದಿದ್ದಾರೆ ಎಂಬುದನ್ನೂ ಲೆಕ್ಕಿಸದೇ ಸ್ಫರ್ಧಿಗಳು ಕಚ್ಚಾಡಿದ್ದಾರೆ. ಪ್ರತಾಪ್ ನಮ್ಮ ಎದುರೇ ಹೀಗೆ ಕಿತ್ತಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇಂದಿನ ಸಂಚಿಕೆ ಕುತೂಹಲ ಮೂಡಿಸಿದೆ.


Click it and Unblock the Notifications











